Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು

ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸುಲಭ ವಿಧಾನಗಳನ್ನು ಬಳಸುವ ಮೂಲಕ ಬೊಜ್ಜು ನಿವಾರಣೆ ಮಾಡಿಕೊಳ್ಳಿ.

Women Health: ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​; ಹೊಟ್ಟೆಯ ಬೊಜ್ಜು ಕರಗಿಸಲು ಇಲ್ಲಿದೆ ಸುಲಭ ವಿಧಾನಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: Skanda

Updated on: Aug 22, 2021 | 7:02 PM

ಸೊಂಟದ ಸುತ್ತ ಕೊಬ್ಬು ಸಂಗ್ರಹವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಅದರಲ್ಲಿಯೂ ಮುಖ್ಯವಾಗಿ ಈಗಿನ ಯುವತಿಯರಲ್ಲಿ ಹೊಟ್ಟೆ ಸುತ್ತ ಬೊಜ್ಜು ಕಾಣಿಸಿಕೊಳ್ಳುತ್ತಿದೆ. ಒಳ್ಳೊಳ್ಳೆ ಉಡುಪು ತೊಟ್ಟಾಗ ಸುಂದರವಾಗಿ ಕಾಣುವಂತೆ ರೆಡಿಯಾಗಲು ಸಾಧ್ಯವಾಗುತ್ತಿಲ್ಲ ಎನ್ನುತ್ತಿದ್ದಾರೆ ಯುವತಿಯರು. ಹೀಗಿರುವಾಗ ಕೊಬ್ಬನ್ನು ಕರಗಿಸುವುದು ಹೇಗೆ? ಯುವತಿಯರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​ಗಳು ಈ ಕೆಳಗಿನಂತಿವೆ.

ಅನಾರೋಗ್ಯಕರ ಕೊಬ್ಬನ್ನು ವೈದ್ಯಕೀಯ ಭಾಷೆಯಲ್ಲಿ ದೇಹದ ಒಳಾಂಗಗಳ ಕೊಬ್ಬು ಎಂದು ಕರೆಯಲಾಗುತ್ತದೆ. ಅಧಿಕ ಕೊಬ್ಬು ಟೈಪ್ 2 ಮಧುಮೇಹ, ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ. ಕೆಲವು ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಸುಲಭ ವಿಧಾನಗಳನ್ನು ಬಳಸುವ ಮೂಲಕ ಬೊಜ್ಜು ನಿವಾರಣೆ ಮಾಡಿಕೊಳ್ಳಿ.

ಕ್ಯಾಲೋರಿ ನಿರ್ವಹಣೆ ತೂಕ ಇಳಿಸಿಕೊಳ್ಳುವ ಸಲುವಾಗಿ ಅಥವಾ ಕೊಬ್ಬು ಕರಗಿಸಲು ನೀವು ಹಸಿವಿನಿಂದ ಇರಬೇಕಾಗಿಲ್ಲ. ನೀವು ಸೇವಿಸುವ 500 ಕ್ಯಾಲೋರಿಗಳನ್ನು ಖರ್ಚು ಮಾಡಿ. ವ್ಯಾಯಾಮದಿಂದ, ದೈನಂದಿನ ಮನೆ ಕೆಲಸದಿಂದ ಕೆಲವು ಜೀವನ ಶೈಲಿಯ ಬದಲಾವಣೆಗಳಿಂದ ಕ್ಯಾಲೋರಿ ಇಳಿಸಿಕೊಳ್ಳಬಹುದು.

50 ನಿಮಿಷಗಳ ಕಾಲ ನಡಿಗೆ ಪ್ರತಿನಿತ್ಯವೂ ನಡಿಗೆಯ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಇದರಿಂದ ದೇಹದ ತೂಕ ಇಳಿಸಿಕೊಳ್ಳಬಹುದು. ಮುಖ್ಯವಾಗಿ ಮಹಿಳೆಯರು ಮತ್ತು ಯುವತಿಯರಲ್ಲಿ ಮಾನಸಿಕ ಸ್ಥಿತಿಯ ಸುಧಾರಣೆ ಮತ್ತು ದೇಹದಲ್ಲಿನ ಹೆಚ್ಚುವರಿ ಕೊಬ್ಬು ಕರಗಿಸಲು ಸಹಾಯವಾಗುತ್ತದೆ.

ಸಂಪೂರ್ಣ ನಿದ್ರೆ ಕಡಿಮೆ ನಿದ್ರೆಯಿಂದ ನಿದ್ರಾಹೀನತೆ ಸಮಸ್ಯೆ ಕಾಡುತ್ತದೆ. ನಿದ್ರೆಯ ಕೊರತೆಯಿಂದಾಗಿ ದೇಹಕ್ಕೆ ಆಯಾಸ ಜತೆಗೆ ಇದು ಹಸಿವಿನ ಮೇಲೆ ಪರಿಣಾಮ ಬೀರುತ್ತದೆ. ಹಾಗೆಯೇ ದೇಹದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಪರಿಣಾಮ ಬೀರುತ್ತದೆ.

ವರ್ಕೌಟ್ ಜಂಪಿಂಗ್​ಜಾಕ್ಸ್​, ನಡಿಗೆ, ಸೂರ್ಯ ನಮಸ್ಕಾರ ಈ ರೀತಿಯ ವ್ಯಾಯಾಮವನ್ನು ಪ್ರನಿತ್ಯವೂ ಮಾಡಬೇಕು. ಪ್ರತಿನಿತ್ಯವೂ ಸೂರ್ಯ ನಮಸ್ಕಾರ ಮಾಡುವ ಮೂಲಕ ಹೆಚ್ಚುವರಿ ಕೊಬ್ಬನ್ನು ಕರಗಿಸಿಕೊಳ್ಳಬಹುದಾಗಿದೆ. ತೀಮದ ಆಹಾರ ಸರಿಯಾಗಿ ಜೀರ್ಣವಾಗಲೂ ವ್ಯಾಯಾಮ ಅತ್ಯವಶ್ಯಕ. ಜತೆಗೆ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡುತ್ತದೆ.

ನಿಮ್ಮ ಆರೋಗ್ಯದ ಕುರಿತಾಗಿ ಹೆಚ್ಚಿನ ಕಾಳಜಿ ಇರಲಿ. ಯಾವುದೇ ಕಾರಣಕ್ಕೂ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಜೀವನ ಶೈಲಿಯ ಕೆಲವು ಬದಲಾವಣೆಗಳ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಇವುಗಳನ್ನು ನಿಮ್ಮ ಪ್ರತಿನಿತ್ಯ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಿ.

ಇದನ್ನೂ ಓದಿ:

Women Health: ಗರ್ಭಿಣಿಯರು ಹಾಲು ಕುಡಿಯುವುದರಿಂದ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ; ಈ ಕೆಲವು ವಿಷಯಗಳನ್ನು ನೆನಪಿನಲ್ಲಿಡಿ

Women Health: ಮಹಿಳೆಯರೇ ಎಚ್ಚರ! ಈ ಕೆಲವು ಕಾರಣಗಳಿಂದ ನಿಮ್ಮ ಆರೋಗ್ಯ ಕೆಡುತ್ತದೆ

(Women Health Belly Fat Can Control With These steps check in kannada)

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ