Women Health: ಮಹಿಳೆಯರೇ ಎಚ್ಚರ! ಈ ಕೆಲವು ಕಾರಣಗಳಿಂದ ನಿಮ್ಮ ಆರೋಗ್ಯ ಕೆಡುತ್ತದೆ

ಮನೆಯೊಳಗೂ ಕೆಲಸ ಜತೆಗೆ ಹೊರಗೂ ಕೆಲಸ. ಇವುಗಳ ಮಧ್ಯೆ ತಮ್ಮ ಆರೋಗ್ಯ ಸುರಕ್ಷತೆಯನ್ನೇ ಮರೆಯುತ್ತಿದ್ದಾರೆ ಮಹಿಳೆಯರು. ಈ ಕೆಳಗಿನ ಕೆಲವು ಕಾರಣಗಳಿಂದ ಮಹಿಳೆಯರ ಆರೋಗ್ಯ ಕೆಡುತ್ತಿದೆ. ಈ ಕುರಿತಾಗಿ ಹೆಚ್ಚು ಲಕ್ಷ್ಯವಹಿಸಿ.

Women Health: ಮಹಿಳೆಯರೇ ಎಚ್ಚರ! ಈ ಕೆಲವು ಕಾರಣಗಳಿಂದ ನಿಮ್ಮ ಆರೋಗ್ಯ ಕೆಡುತ್ತದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: guruganesh bhat

Updated on: Aug 19, 2021 | 9:47 PM

ಬೆಳಗ್ಗಿನಿಂದ ಸಂಜೆಯವರೆಗೆ ದುಡಿದು ದೇಹಕ್ಕೆ ಸುಸ್ತು ಅನ್ನುತ್ತಿದ್ದಾರೆ ಮಹಿಳೆಯರು. ಜೀವನದ ಪ್ರತೀ ಹಂತದಲ್ಲಿ ಕುಟುಂಬದವರ ಆರೋಗ್ಯ ಮಕ್ಕಳ ಆರೋಗ್ಯದ ಮಧ್ಯೆ ತಮ್ಮ ಆರೋಗ್ಯದ ಕುರಿತಾಗಿ ಮರೆತೇ ಬಿಟ್ಟಿದ್ದಾರೆ. ಈಗಿನ ಮಹಿಳೆಯರು ಹೆಚ್ಚು ಮಾನಸಿಕ ಒತ್ತಡಕ್ಕೆ ಸಿಲುಕುತ್ತಿರುವುದು ಕಂಡು ಬರುತ್ತದೆ. ಮನೆಯೊಳಗೂ ಕೆಲಸ ಜತೆಗೆ ಹೊರಗೂ ಕೆಲಸ. ಇವುಗಳ ಮಧ್ಯೆ ತಮ್ಮ ಆರೋಗ್ಯ ಸುರಕ್ಷತೆಯನ್ನೇ ಮರೆಯುತ್ತಿದ್ದಾರೆ ಮಹಿಳೆಯರು. ಈ ಕೆಳಗಿನ ಕೆಲವು ಕಾರಣಗಳಿಂದ ಮಹಿಳೆಯರ ಆರೋಗ್ಯ ಕೆಡುತ್ತಿದೆ. ಈ ಕುರಿತಾಗಿ ಹೆಚ್ಚು ಲಕ್ಷ್ಯವಹಿಸಿ.

ಕೆಲಸದ ಒತ್ತಡ ಹೆಚ್ಚು ಒತ್ತಡದ ಕೆಲಸ ಮಹಿಳೆಯರ ಆರೋಗ್ಯ ಸ್ಥಿತಿಯನ್ನು ಬದಲಾಯಿಸುತ್ತಿದೆ. ಪ್ರತಿನಿತ್ಯ ಚಿಂತೆ, ಕೆಲಸದ ಒತ್ತಡ ಈ ನಡುವೆ ದೇಹಕ್ಕೆ ಹೆಚ್ಚು ಆಯಾಸವಾಗುತ್ತಿದೆ. ಮೊದಲೆಲ್ಲಾ ಹೆಚ್ಚು ಗೃಹಿಣಿಯರೇ ಆಗಿರುತ್ತಿದ್ದರು. ಇದೀಗ ಗೃಹಿಣಿಯ ಜತೆಗೆ ಹೊರಗಡೆ ಉದ್ಯೋಗಕ್ಕೂ ಹೋಗುತ್ತಿದ್ದಾರೆ. ಎರಡೂ ಕೆಲಸವನ್ನು ನಿಭಾಯಿಸುವ ಕೌಶಲ್ಯದ ಜತೆಗೆ ಹೆಚ್ಚು ಮಾನಸಿಕ ಒತ್ತಡಕ್ಕೂ ಸಿಲುಕುತ್ತಿದ್ದಾರೆ.

ಪೌಷ್ಟಿಕ ಆಹಾರದ ಕೊರತೆ ಪ್ರತಿನಿತ್ಯ ಪ್ರಯಾಣ, ಹವಾಮಾನ, ಧೂಳು, ಇದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತಿದೆ. ಕೆಲಸದ ಒತ್ತಡದಲ್ಲಿ ಮಧ್ಯಾಹ್ನದ ಊಟ, ಬೆಳಿಗ್ಗೆಯ ತಿಂಡಿಯನ್ನು ಸರಿಯಾಗಿ ಸೇವಿಸದ ಮಹಿಳೆಯರಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.

ವ್ಯಾಯಾಮವಿಲ್ಲ ಹೆಚ್ಚು ಕೆಲಸದಿಂದ ವ್ಯಾಯಾಮಕ್ಕೆ ಸಮಯವೇ ಇಲ್ಲದಂತಾಗಿದೆ. ದೇಹಕ್ಕೆ ಸರಿಯಾದ ವ್ಯಾಯಾಮವಿಲ್ಲದಿದ್ದರೆ ದೇಹ ಸದೃಢವಾಗುವುದಿಲ್ಲ. ಅದರಲ್ಲಿಯೂ ಮಹಿಳೆಯರು ಹೆಚ್ಚು ಸೂಕ್ಷ್ಮವಾಗಿರುವುದರಿಂದ ಬಹುಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಿರುವಾಗ ಪ್ರತಿನಿತ್ಯ ಯೋಗಾಭ್ಯಾಸ ಬೇಕೆ ಬೇಕು. ವ್ಯಾಯಾಮದ ಕೊರತೆಯಿಂದಾಗಿ ಮಹಿಳೆಯರು ಹೆಚ್ಚಿನ ಅನಾರೋಗ್ಯವನ್ನು ಅನುಭವಿಸುತ್ತಿದ್ದಾರೆ.

ಹೊರಗಿನ ತಿಂಡಿ ಸೇವನೆ ಕೆಲಸದ ಒತ್ತಡದಲ್ಲಿ ಮಹಿಳೆಯರು ಮನೆಯಲ್ಲಿ ಅಡುಗೆ ತಯಾರಿಸಲು ಹಿಂದೇಟು ಹಾಕುವ ಪ್ರಸಂಗಗಳು ಎದುರಾಗುತ್ತವೆ. ಸಮಯವಿಲ್ಲದ ಕಾರಣ ಫುಡ್ ಆರ್ಡ್​ರ್​ ಅಥವಾ ಜಂಕ್​ಫುಡ್​ಗಳನ್ನು ಹೆಚ್ಚು ಸೇವಿಸುತ್ತಾರೆ. ಇದರಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಇದನ್ನೂ ಓದಿ:

Women Health: ತುಂಬಾ ತೆಳ್ಳಗಿದ್ದೇನೆ ಎಂಬ ಚಿಂತೆಯೇ? ದಪ್ಪಗಾಗಲು ಯುವತಿಯರಿಗಾಗಿ ಒಂದಿಷ್ಟು ಟಿಪ್ಸ್​

Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ