ಹೇರ್ ಕಲ್ಲರಿಂಗ್ ಮಾಡಿಸಲು ಬ್ಯೂಟಿ ಪಾರ್ಲರ್ಗೆ ಏಕೆ ಹೋಗುತ್ತೀರಾ? ಮನೆಯಲ್ಲೇ ಟ್ರೈ ಮಾಡಿ
ಕೂದಲಿನ ಬಣ್ಣವನ್ನು ಬದಲಿಸಲು ಕ್ರೀಂಗಳನ್ನ ಹಚ್ಚಲಾಗುತ್ತದೆ. ಆ ಕ್ರೀಂಗಳಲ್ಲಿ ಕೆಮಿಕಲ್ ಇರುತ್ತದೆ. ಕೂದಲಿಗೆ ಕೆಮಿಕಲ್ ಬಿದ್ದಾಗ ಕೂದಲಿನ ಸಾಮರ್ಥ್ಯ ಕಡಿಮೆಯಾಗುತ್ತದೆ.
ಹುಡುಗಿಯರು ಕಪ್ಪು ಬಣ್ಣದ ದಪ್ಪ ಕೂದಲು ಬೇಕು ಅಂತ ಬಯಸುತ್ತಿದ್ದರು. ಆದರೆ ಇವಾಗ ಟ್ರೆಂಡ್ (Trend) ಬದಲಾಗಿದೆ. ಬಣ್ಣ ಬಣ್ಣದ ಕೂದಲಿನತ್ತ (Hair Coloring) ಹುಡುಗಿಯರ ಗಮನ ಸೆಳೆದಿದೆ. ಕೆಂಪು, ಹಸಿರು ಸೇರಿದಂತೆ ಬೇರೆ ಬೇರೆ ಬಣ್ಣದ ಕೂದಲು ಬೇಕು ಅಂತ ಬ್ಯೂಟಿ ಪಾರ್ಲರ್ಗೆ ಹೋಗುತ್ತಾರೆ. ಅಲ್ಲಿ ತಮಗೆ ಇಷ್ಟವಾದ ಬಣ್ಣವನ್ನ ಕೂದಲಿಗೆ ಹಚ್ಚಿಸುತ್ತಾರೆ. ಹಾಗಂತ ಇದು ತಪ್ಪಲ್ಲ. ಆದರೆ ಕೂದಲಿನ ಆರೋಗ್ಯದ ಬಗ್ಗೆ ಕಾಳಜಿ ಇರಬೇಕು. ಕೂದಲಿನ ಬಣ್ಣವನ್ನು ಬದಲಿಸಲು ಕ್ರೀಂಗಳನ್ನ ಹಚ್ಚಲಾಗುತ್ತದೆ. ಆ ಕ್ರೀಂಗಳಲ್ಲಿ ಕೆಮಿಕಲ್ ಇರುತ್ತದೆ. ಕೂದಲಿಗೆ ಕೆಮಿಕಲ್ ಬಿದ್ದಾಗ ಕೂದಲಿನ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೆಲವರ ಕೂದಲು ಸುಟ್ಟಂತಾಗುವುದು. ಹೀಗೆ ಕೂದಲಿಗೆ ಸಾಕಷ್ಟು ಹಾನಿ ಉಂಟುಮಾಡುವ ಕೆಮಿಕಲ್ ಕ್ರೀಂಗಳನ್ನು ಬಳಸುವ ಬದಲಿಗೆ ನೈಸರ್ಗಿಕ ವಸ್ತುಗಳಲ್ಲಿ ಮನೆಯಲ್ಲೇ ತಯಾರಿಸಿದ ಪೇಸ್ಟ್ನ ಬಳಸಬಹುದು.
* ಮೆಹಂದಿ ಮತ್ತು ಕಾಫಿ ಪುಡಿ ಕೆಂಚು ಅಥವಾ ಕೆಂಪು ಬಣ್ಣದ ಕೂದಲು ಬೇಕೆನ್ನುವವರು ಅರ್ಧ ಚಮಚ ಕಾಫಿ ಪುಡಿಯನ್ನು ಮೆಹಂದಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಮೆಹಂದಿಯನ್ನು ಅರಿಯುವಾಗ ಅದಕ್ಕೆ ಅರ್ಧ ಚಮಚ ಕಾಫಿ ಪುಡಿ ಹಾಕಿ. ಎರಡು ಗಂಟೆಗಳ ನಂತರ ಕೂದಲಿಗೆ ಹಚ್ಚಿ.
* ಬೀಟ್ರೂಟ್ ಮತ್ತು ಮೆಹಂದಿ ಬೀಟ್ರೂಟ್ ರಸವನ್ನು ಮೆಹಂದಿಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿದರೆ ಕೂದಲಿನ ಬಣ್ಣ ಬದಲಾಗುತ್ತದೆ. ಇದು ಕೂದಲಿಗೆ ಹೇರ್ ಕಂಡಿಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ.
* ಎಣ್ಣೆ ಮತ್ತು ಮೆಹಂದಿ ಕಬ್ಬಿಣದ ಪಾತ್ರೆಯಲ್ಲಿ ಕರ್ಪೂರ ಎಣ್ಣೆಯನ್ನು ಚೆನ್ನಾಗಿ ಬಿಸಿ ಮಾಡಿ. ಅದಕ್ಕೆ ಮೆಹಂದಿ ಮಿಶ್ರಣ ಮಾಡಿ. ಈ ಎಣ್ಣೆಯನ್ನು ಬಾಣಲೆಯಲ್ಲಿ ಎರಡು ದಿನಗಳ ಕಾಲ ಬಿಡಿ. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಬೆಚ್ಚಗಿನ ನೀರನ್ನು ಹಾಕಿ ಕೂದಲಿಗೆ ಹಚ್ಚಿ. ಇದು ಕೂದಲಿನ ಬಣ್ಣ ಕಪ್ಪಾಗಿಸುತ್ತದೆ. ಹಾಗೇ, ಕೂದಲು ಬಲಗೊಳ್ಳುತ್ತದೆ.
* ಚೆಂಡು ಹೂ ಮತ್ತು ದಾಸವಾಳ ಹೂ ಚೆಂಡು ಹೂ ಮತ್ತು ದಾಸವಾಳ ಹೂಗಳಿಂದ ಕೂಡ ನೈಸರ್ಗಿಕ ಬಣ್ಣವನ್ನು ತಯಾರಿಸಬಹುದು. ಬಾಣಲೆಯಲ್ಲಿ ಎರಡು ಲೋಟ ನೀರು ಹಾಕಿ ಕುದಿಸಿ. ಚೆಂಡು ಹೂವು ಮತ್ತು ದಾಸವಾಳ ದಳಗಳನ್ನು ಈ ನೀರಿನಲ್ಲಿ ಹಾಕಿ ಕುದಿಸಿ. ಕಡಿಮೆ ಉರಿಯಲ್ಲಿ ಕನಿಷ್ಠ 30 ನಿಮಿಷಗಳ ಕಾಲ ಕುದಿಯಲು ಬಿಡಿ. ನೀರಿನ ಬಣ್ಣ ಬದಲಾದಾಗ ಆಫ್ ಮಾಡಿ.
ಮಿಶ್ರಣ ತಣ್ಣಗಾದ ನಂತರ, ಸೋಸಿ ಅದನ್ನು ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಫ್ರಿಜ್ನಲ್ಲಿಡಿ. ಕೂದಲಿಗೆ ಬಣ್ಣ ಹಚ್ಚಲು ಬಯಸಿದಾಗಲೆಲ್ಲ, ಮೊದಲು ಕೂದಲನ್ನು ಚೆನ್ನಾಗಿ ಶಾಂಪೂ ಬಳಸಿ ತೊಳೆಯಿರಿ. ನಂತರ ಸ್ವಲ್ಪ ಒದ್ದೆಯಾದ ಕೂದಲಿಗೆ ಹೂವಿನ ರಸವನ್ನು ನೀರನ್ನು ಸಿಂಪಡಿಸಿ. ಸಿಂಪಡಿಸಿದ ಕೂದಲನ್ನು ಒಂದು ಗಂಟೆ ಹಾಗೆ ಬಿಡಿ. ನಂತರ ಕೂದಲನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.
ಇದನ್ನೂ ಓದಿ
Health Tips: ಮೂಳೆಗಳು ಸದಾ ಗಟ್ಟಿಯಾಗಿರಲು ಈ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ
(Best home remedies for hair Coloring)