Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ

ಕಣ್ಣಿನ ಮೇಲಿನ ಬಿಳಿ ಕಲೆ ನಿಮ್ಮ ದೇಹದಲ್ಲಿ ಎಲ್ಡಿಎಲ್ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಂಕೇತವಾಗಿದೆ. ಎಲ್ಡಿಎಲ್ ದೇಹಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ.

Health Tips: ಕಣ್ಣಿನ ಮೇಲೆ ಬಿಳಿ ಕಲೆ ಇದೆಯೇ? ಇದು ಈ ಕಾಯಿಲೆಯ ಮುನ್ಸೂಚನೆ ಎಚ್ಚರ ಇರಲಿ
ಸಾಂಕೇತಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 16, 2021 | 7:37 AM

ಇತ್ತೀಚೆಗೆ ಕಣ್ಣುಗಳ ಮೇಲೆ ಮತ್ತು ಸುತ್ತಲೂ ಬಿಳಿ ಬಣ್ಣದ ಗುರುತು ಅಥವಾ ಕಲೆ ಕಾಣುವುದು ಸಾಮಾನ್ಯವಾಗಿದೆ. ಆದರೆ ಇದು ಯಾವುದೋ ಕಾರಣಕ್ಕೆ ಬಂದಿರಬೇಕು. ಸ್ವಲ್ಪ ಸಮಯದ ನಂತರ ಅದಾಗಿಯೇ ಹೋಗುತ್ತದೆ ಎಂಬ ಭ್ರಮೆಯಲ್ಲಿದ್ದರೆ ಇಂದೇ ಬಿಟ್ಟುಬಿಡಿ. ಈ ಗುರುತುಗಳು ನಿಮ್ಮ ದೇಹದಲ್ಲಿ ಎಲ್​ಡಿಎಲ್​ ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಸಂಕೇತವಾಗಿದೆ. ಎಲ್​ಡಿಎಲ್  ಅನ್ನು ದೇಹಕ್ಕೆ ತುಂಬಾ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಈ ಸಮಸ್ಯೆಯನ್ನು ಡಿಸ್ಲಿಪಿಡೆಮಿಯಾ ಎಂದು ಕರೆಯಲಾಗುತ್ತದೆ. ಹೀಗಾಗಿ ಇದರಿಂದ ಮುಕ್ತವಾಗಲು ಏನು ಮಾಡಬೇಕು ಎಂದು ತಿಳಿದುಕೊಳ್ಳುವುದು ಸೂಕ್ತ.

ಬೆಳ್ಳುಳ್ಳಿ ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸಿ ಮತ್ತು ಬೆಳ್ಳುಳ್ಳಿಯನ್ನು ಕಣ್ಣಿನ ಸುತ್ತ ಇರುವ ಬಿಳಿ ಕಲೆಗಳಿಗೆ ಹಚ್ಚಿ. ಸುಮಾರು 15 ನಿಮಿಷಗಳ ಕಾಲ ಅದನ್ನು ಹಾಗೆ ಬಿಡಿ. ಬಳಿಕ ಮುಖ ತೊಳೆಯಿರಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡುವುದರಿಂದ ಕಣ್ಣಿನ ಸುತ್ತಲಿನ ಈ ಸಮಸ್ಯೆ ದೂರವಾಗುತ್ತದೆ.

ಮೆಂತೆ ಮೆಂತೆ ಬೀಜಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಉಪಯುಕ್ತವೆಂದು ಪರಿಗಣಿಸಲಾಗಿದೆ. ಪ್ರತಿ ರಾತ್ರಿ ಮೆಂತೆ ಬೀಜಗಳನ್ನು ನೀರಿನಲ್ಲಿ ನೆನೆಸಿ, ಬೆಳಿಗ್ಗೆ ಎದ್ದ ನಂತರ ಈ ನೀರನ್ನು ಕುಡಿಯಿರಿ ಮತ್ತು ಮೆಂತೆ ಬೀಜಗಳನ್ನು ಅಗಿದು ನುಂಗಿ. ಇಲ್ಲವಾದಲ್ಲಿ ಮೆಂತೆಯನ್ನು ರುಬ್ಬಿ ಪೇಸ್ಟ್ ಮಾದರಿಯಲ್ಲಿ ಮಾಡಿ ಪೀಡಿತ ಪ್ರದೇಶಗಳಿಗೆ ಹಚ್ಚಬಹುದು.

ಹಾಲು ಹಾಲು ಕೂಡ ಚರ್ಮಕ್ಕೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಪ್ರತಿದಿನ ಬಿಳಿ ಕಲೆಯ ಮೇಲೆ ಹಾಲನ್ನು ಹಚ್ಚಿದರೆ ಸಾಕಷ್ಟು ಬೇಗ ಈ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ರಾತ್ರಿ ಮಲಗುವಾಗ ಹತ್ತಿಯ ಸಹಾಯದಿಂದ ಹಾಲನ್ನು ಹಚ್ಚಿ. ಬೆಳಿಗ್ಗೆ ತೊಳೆಯಿರಿ. ಇದನ್ನು ಪ್ರತಿದಿನ ಮಾಡುವುದರಿಂದ ಸಮಸ್ಯೆ ದೂರವಾಗುತ್ತದೆ.

ಮೊಸರು ಮೊಸರಿನಲ್ಲಿ ಲ್ಯಾಕ್ಟಿಡ್ ಆಸಿಡ್ ಮತ್ತು ಬ್ಲೀಚಿಂಗ್ ಅಂಶ ಇರುತ್ತದೆ. ಮೊಸರಿಗೆ ಸ್ವಲ್ಪ ನಿಂಬೆ ರಸವನ್ನು ಸೇರಿಸಿ ಬಾಧಿತ ಪ್ರದೇಶಕ್ಕೆ ಹಚ್ಚಿದರೆ, ಕಣ್ಣುಗಳ ಸುತ್ತ ಇರುವ ಬಿಳಿ ಕಲೆ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ.

ಆ್ಯಪಲ್ ಸೈಡರ್ ವಿನೆಗರ್ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತೆಗೆದುಹಾಕಲು ಆ್ಯಪಲ್ ಸೈಡರ್ ವಿನೆಗರ್ ಕೂಡ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಪ್ರತಿನಿತ್ಯ ನೀರಿನಲ್ಲಿ ಸ್ವಲ್ಪ ಆ್ಯಪಲ್ ಸೈಡರ್ ವಿನೆಗರ್ ಬೆರೆಸಿ ಹತ್ತಿಯ ಸಹಾಯದಿಂದ ಪ್ರತಿದಿನ ಕಣ್ಣಿಗೆ ಹಚ್ಚಿ. ಇದರಿಂದ ಬಿಳಿ ಕಲೆ ದೂರವಾಗುತ್ತದೆ. ಆದರೆ ಕಣ್ಣಿನ ಒಳ ಭಾಗಕ್ಕೆ ಹೋಗದಂತೆ ಎಚ್ಚರ ವಹಿಸಿ.

ಇದನ್ನೂ ಓದಿ: Hairy Ears: ಕಿವಿಯಲ್ಲಿ ಬೆಳೆಯುವ ಕೂದಲು ಆರೋಗ್ಯಕ್ಕೆ ಹಾನಿಕಾರಕವೇ?

Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ