Health Tips: ದೇಹ ತೂಕ ಕಡಿಮೆ ಮಾಡಲು ರಾತ್ರಿ ಈ ಆಹಾರಗಳನ್ನು ಸೇವಿಸಿ

Health Tips In Kannada: ಮೊಳಕೆಯೊಡೆದ ಧಾನ್ಯಗಳು ಹೆಚ್ಚಾಗಿ ಬೆಳಿಗ್ಗೆ ತಿನ್ನುತ್ತಾರೆ. ಆದರೆ ನೀವು ಬಯಸಿದರೆ, ಅದನ್ನು ರಾತ್ರಿಯಲ್ಲೂ ತಿನ್ನಬಹುದು.

Health Tips: ದೇಹ ತೂಕ ಕಡಿಮೆ ಮಾಡಲು ರಾತ್ರಿ ಈ ಆಹಾರಗಳನ್ನು ಸೇವಿಸಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಝಾಹಿರ್ ಯೂಸುಫ್

Updated on: Aug 15, 2021 | 5:42 PM

ದೇಹ ತೂಕವನ್ನು ಕಡಿಮೆ ಮಾಡಲು ಹಲವು ರೀತಿಯಲ್ಲಿ ಕಸರಸ್ತು ನಡೆಸುವವರನ್ನು ನೀವು ನೋಡಿರುತ್ತೀರಿ. ಆದರೂ ತೂಕದಲ್ಲಿ ಅಂತಹದ್ದೇನು ವ್ಯತ್ಯಾಸ ಕಂಡು ಬರುವುದಿಲ್ಲ. ಇದಕ್ಕೆ ಒಂದು ಕಾರಣ ಆಹಾರ ಪದ್ದತಿ ಎಂದರೆ ತಪ್ಪಾಗಲಾರದು. ಏಕೆಂದರೆ ದೇಹ ತೂಕವನ್ನು ಕಡಿಮೆ ಮಾಡಲು ಮಾಡುವ ಕಸರತ್ತಿನ ಜೊತೆಗೆ ಸೇವಿಸುವ ಆಹಾರದ ಬಗ್ಗೆ ಕೂಡ ಕಾಳಜಿವಹಿಸಬೇಕಾಗುತ್ತದೆ. ಅದರಲ್ಲೂ ರಾತ್ರಿ ವೇಳೆ ಸಾಧ್ಯವಾದಷ್ಟು ಕಡಿಮೆ ಆಹಾರ ಸೇವಿಸುವುದು ಉತ್ತಮ. ಆದರೆ ಕೆಲವರಿಗೆ ರಾತ್ರಿ ವೇಳೆ ವಿಪರೀತ ಹಸಿವಿರುತ್ತೆ. ಇದನ್ನು ತಡೆಯೋದು ಕೂಡ ಕಷ್ಟಸಾಧ್ಯ ಎಂಬ ಮನಸ್ಥಿತಿಯಲ್ಲಿರುತ್ತಾರೆ. ಇಂತಹ ಸಮಯದಲ್ಲಿ ನೀವು ಕೆಲವೊಂದು ಸೈಡ್ ಸ್ನ್ಯಾಕ್ಸ್​ಗಳನ್ನು ಸೇವಿಸಿ ದೇಹ ತೂಕವನ್ನು ನಿಯಂತ್ರಣದಲ್ಲಿಡಬಹುದು. ಅಥವಾ ರಾತ್ರಿಯ ಆಹಾರವನ್ನು ಸಂಪೂರ್ಣ ಕಡಿಮೆ ಮಾಡಿ, ಕೆಲ ಆರೋಗ್ಯಕರ ತಿನಿಸುಗಳನ್ನು ತಿಂದು ದೇಹ ತೂಕವನ್ನು ಕಡಿಮೆ ಮಾಡಬಹುದು. ಅಂತಹ ಕೆಲವೊಂದು ಆರೋಗ್ಯಕರ ತಿನಿಸುಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

ನೆಟ್ಸ್​: ಕಡಲೆಕಾಯಿ, ಬಾದಾಮಿ, ಗೋಡಂಬಿ, ವಾಲ್​ನಟ್ಸ್​ ನಂತಹ ಬೀಜಗಳಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತವೆ. ಸಾಮಾನ್ಯವಾಗಿ ನೀವು ರಾತ್ರಿಯಲ್ಲಿ ಚಲನಚಿತ್ರ ಅಥವಾ ವೆಬ್ ಸಿರೀಸ್ ನೋಡುವಾಗ ಅಥವಾ ತಡರಾತ್ರಿ ಪುಸ್ತಕ ಓದುವಾಗ ಇಂತಹ ಬೀಜಗಳನ್ನು ಸೇವಿಸುವುದು ಉತ್ತಮ. ಇದರಿಂದ ನಿಮ್ಮ ಹಸಿವು ನೀಗುತ್ತದೆ. ಆದರೆ ತೂಕ ಹೆಚ್ಚಾಗುವುದಿಲ್ಲ. ಆದರೆ ಅಗತ್ಯಕ್ಕಿಂತ ಹೆಚ್ಚು ಕಡಲೆ ಬೀಜಗಳನ್ನು ತಿನ್ನುವುದು ಆರೋಗ್ಯಕ್ಕೂ ಹಾನಿಯುಂಟು ಮಾಡುತ್ತದೆ ಎಂಬುದು ನೆನಪಿರಲಿ.

ಮೊಳಕೆಯೊಡೆದ ಧಾನ್ಯಗಳು: ಮೊಳಕೆಯೊಡೆದ ಧಾನ್ಯಗಳು ಹೆಚ್ಚಾಗಿ ಬೆಳಿಗ್ಗೆ ತಿನ್ನುತ್ತಾರೆ. ಆದರೆ ನೀವು ಬಯಸಿದರೆ, ಅದನ್ನು ರಾತ್ರಿಯಲ್ಲೂ ತಿನ್ನಬಹುದು. ಏಕೆಂದರೆ ಮೊಳಕೆಯೊಡೆದ ಧಾನ್ಯಗಳು ಬೇಗನೆ ಜೀರ್ಣವಾಗುತ್ತದೆ. ಅಲ್ಲದೆ ಇದು ಹೊಟ್ಟೆಯ ಸಮಸ್ಯೆಗಳನ್ನು ದೂರವಿರಿಸುತ್ತದೆ. ಇನ್ನು ಇದರಲ್ಲಿ ಹೆಚ್ಚಿನ ಪೌಷ್ಟಿಕಾಂಶ ಇರುವುದರಿಂದ ಆರೋಗ್ಯಕ್ಕೂ ಉತ್ತಮ.

ಪನೀರ್: ಪನೀರ್ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಸಾಮಾನ್ಯವಾಗಿ ಪನೀರ್ ಅನ್ನು ಭೋಜನಕ್ಕಾಗಿ ಬಳಸಲಾಗುತ್ತದೆ. ಆದರೆ ಈ ಡೈರಿ ಉತ್ಪನ್ನವನ್ನು ಯಾವುದೇ ಸಮಯದಲ್ಲಿ ಲಘು ಆಹಾರವಾಗಿ ಬಳಸಬಹುದು. ಇದರಲ್ಲಿ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಇದನ್ನು ಎಣ್ಣೆ, ತುಪ್ಪ ಅಥವಾ ಬೆಣ್ಣೆಯಲ್ಲಿ ಫ್ರೈ ಮಾಡದೇ, ಬೇಯಿಸಿ ಸೇವಿಸಿ.

ಮೂಂಗ್ ದಾಲ್/ಹೆಸರುಬೇಳೆ: ಮೂಂಗ್ ದಾಲ್ ಅಥವಾ ಹೆಸರುಬೇಳೆಯನ್ನು ನೆನಸಿಟ್ಟು ಮೊಳಕೆಹೊಡೆದ ಮೇಲೆ ತಿನ್ನುವುದು ಉತ್ತಮ. ಆದರೆ ಅನೇಕರಿಗೆ ಹೀಗೆ ತಿನ್ನಲು ಸಾಧ್ಯವಾಗುವುದಿಲ್ಲ. ಹೀಗಾಗಿ ಇದನ್ನು ಎಣ್ಣೆ ಸೇರಿಸದೇ ಕೆಲ ತಿನಿಸುಗಳ ರೂಪದಲ್ಲಿ ತಯಾರಿಸಿ ಸೇವಿಡಸುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅದರಲ್ಲೂ ತಡ ರಾತ್ರಿ ಹೆಸರುಕಾಳು ಇಡ್ಲಿಯನ್ನು ಸೇವಿಸುವುದು ಇನ್ನೂ ಒಳ್ಳೆಯದು.

ಇದನ್ನೂ ಓದಿ: India vs England 2nd Test: ಅಂದು ದಾದಾ, ಇಂದು ಕೊಹ್ಲಿ: ಲಾರ್ಡ್ಸ್​ ಬಾಲ್ಕನಿಯಲ್ಲಿ ಕ್ಯಾಪ್ಟನ್ ಡ್ಯಾನ್ಸ್​

ಇದನ್ನೂ ಓದಿ: Health Tips: ಹಲವು ಅನಾರೋಗ್ಯ ಸಮಸ್ಯೆಗಳಿಗೆ ಪಪ್ಪಾಯಿ ಎಲೆಗಳೇ ಔಷಧಿ

ಇದನ್ನೂ ಓದಿ: ಇವರ ಬ್ಯಾಟಿಂಗ್ ಮುಂದೆ, ಗೇಲ್-ಎಬಿಡಿ-ಸೆಹ್ವಾಗ್ ಏನೂ ಅಲ್ಲ: ವಿಶ್ವದ ಅತೀ ವೇಗದ ಶತಕದ ಸರದಾರ

ಇದನ್ನೂ ಓದಿ: Kl Rahul: ಪೂಜಾರ, ರಹಾನೆ ಕಳಪೆ ಫಾರ್ಮ್​ ಬಗ್ಗೆ ಕೆಎಲ್ ರಾಹುಲ್ ಹೇಳಿದ್ದೇನು?

(What are some of the best healthy late night snacks for weight loss?)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ