AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ

Health Tips: ಕೆಲವೊಮ್ಮೆ ಒಟ್ಟಿಗೆ ಸೇವಿಸಿದ ಆಹಾರ ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಆಹಾರ ಸೇವನೆಯ ವಿಷಯದಲ್ಲಿ ಸುಮಾರು 99 ಪ್ರತಿಶತ ಜನರು ಇಂತಹ ಸಣ್ಣ ತಪ್ಪುಗಳನ್ನು ಮಾಡುತ್ತಾರೆ.

Dangerous Food: ಒಂದೇ ಬಾರಿ ಎರಡು ಪದಾರ್ಥಗಳನ್ನು ಸೇವಿಸುವ ಮುನ್ನ ನಿಮ್ಮ ಗಮನ ಆರೋಗ್ಯದ ಹಿತದೃಷ್ಟಿ ಮೇಲೆ ಇರಲಿ
ಸಾಂಕೇತಿಕ ಚಿತ್ರ
TV9 Web
| Updated By: preethi shettigar|

Updated on: Aug 15, 2021 | 8:01 AM

Share

ಯಾವುದೇ ಮನುಷ್ಯ ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಆದರೆ, ನಾವು ತಿನ್ನುವ ಆಹಾರ ನಮ್ಮನ್ನು ಜೀವಂತವಾಗಿರಿಸಬೇಕು ಎನ್ನುವುದು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆರೋಗ್ಯ ಕಾಪಾಡಿಕೊಳ್ಳುವುದು. ಇಷ್ಟ ಎಂದು ಎಲ್ಲಾ ಆಹಾರ ಒಟ್ಟಿಗೆ ಸೇವಿಸುವವರು ಹೆಚ್ಚು ಗಮನಹರಿಸುವುದು ಸೂಕ್ತ. ಏಕೆಂದರೆ ಕೆಲವೊಮ್ಮೆ ಒಟ್ಟಿಗೆ ಸೇವಿಸಿದ ಆಹಾರ (Food) ದೇಹಕ್ಕೆ ಹಾನಿಯುಂಟು ಮಾಡುತ್ತದೆ. ಆಹಾರ ಸೇವನೆಯ ವಿಷಯದಲ್ಲಿ ಸುಮಾರು 99 ಪ್ರತಿಶತ ಜನರು ಇಂತಹ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಈ ರೀತಿಯ ತಪ್ಪುಗಳನ್ನು ಮಾಡುವ ಜನರು, ತಮ್ಮ ಅಭ್ಯಾಸಗಳನ್ನು ಬದಲಿಸುವುದು ಉತ್ತಮ. ಹಾಗಿದ್ದರೆ ಯಾವೆಲ್ಲಾ ಆಹಾರವನ್ನು ಒಟ್ಟಿಗೆ ಸೇವಿಸಬಾರದು ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

1. ಬದನೆಕಾಯಿ ಮತ್ತು ಬೆಂಡೆಕಾಯಿ ಬದನೆಕಾಯಿ ಮತ್ತು ಬೆಂಡೆಕಾಯಿಯನ್ನು ಒಟ್ಟಿಗೆ ಸೇವಿಸಬಾರದು. ಕೆಲವರಿಗೆ ಈ ಎರಡು ತರಕಾರಿಗಳು ಇಷ್ಟ. ಆದಾಗ್ಯೂ ಬೆಂಡೆಕಾಯಿ ಮತ್ತು ಬದನೆಕಾಯಿಯನ್ನು ಎಂದಿಗೂ ಒಟ್ಟಿಗೆ ತಿನ್ನಬಾರದು. ಈ ಎರಡನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಜೀವಾಣು ಉತ್ಪತ್ತಿಯಾಗುತ್ತದೆ. ಇದು ಮಾರಣಾಂತಿಕ ಸ್ಥಿತಿಗೆ ಕಾರಣವಾಗಬಹುದು.

2. ಈರುಳ್ಳಿ ಮತ್ತು ಮೊಸರು ಈರುಳ್ಳಿಯನ್ನು ಮೊಸರಿನೊಂದಿಗೆ ಬೆರೆಸುವುದು ಸೂಕ್ತವಲ್ಲ. ಇವುಗಳನ್ನು ಒಟ್ಟಿಗೆ ತಿನ್ನುವ ಅಭ್ಯಾಸ ಬಿಡಿ. ಇಲ್ಲದಿದ್ದರೆ ರಿಂಗ್ವರ್ಮ್, ತುರಿಕೆ, ಎಸ್ಜಿಮಾ, ಸೋರಿಯಾಸಿಸ್, ಚರ್ಮ ಮತ್ತು ಹೊಟ್ಟೆಯ ಸಮಸ್ಯೆಗಳು ಸಂಭವಿಸಬಹುದು.

3. ಮೂಲಂಗಿ ಮತ್ತು ಹಾಲು ಮೂಲಂಗಿ ತಿನ್ನುತ್ತಿದ್ದರೆ ಅದರ ಜತೆ ಎಂದಿಗೂ ಹಾಲು ಕುಡಿಯಬೇಡಿ. ಹಾಗೆಯೇ ಮೊಟ್ಟೆ, ಮಾಂಸ ತಿಂದ ನಂತರವೂ ಹಾಲು ಕುಡಿಯಬೇಡಿ. ಹೀಗೆ ಮಾಡುವುದರಿಂದ ಜೀರ್ಣಾಂಗ ವ್ಯವಸ್ಥೆ ಹಾಳಾಗುತ್ತದೆ. ಈ ಪದಾರ್ಥಗಳನ್ನು ತಿಂದ ಸ್ವಲ್ಪ ಸಮಯದ ನಂತರ ಹಾಲು ಕುಡಿಯುವುದು ಉತ್ತಮ.

4. ಮೂಲಂಗಿ ಮತ್ತು ಕೊತ್ತಂಬರಿ ಸೊಪ್ಪು ಅನೇಕ ಜನರು ತಮ್ಮ ಆಹಾರದಲ್ಲಿ ಕೊತ್ತಂಬರಿ ಸೊಪ್ಪು ತಿನ್ನಲು ಇಷ್ಟಪಡುತ್ತಾರೆ. ಆದರೆ ಮೂಲಂಗಿ ಮತ್ತು ಕೊತ್ತಂಬರಿ ಸೊಪ್ಪನ್ನು ಒಟ್ಟಿಗೆ ತಿನ್ನುವುದರಿಂದ ಚರ್ಮದ ಸಮಸ್ಯೆಗಳು ಉಂಟಾಗಬಹುದು. ಇದು ಮುಖದ ಮೇಲೆ ಕಲೆಗಳು ಮತ್ತು ಇತರ ಚರ್ಮದ ಸಮಸ್ಯೆಗಳಿಗೆ ಕಾರಣವಾಗಬಹುದು. ಅಲ್ಲದೆ ಮೂಲಂಗಿ ಮತ್ತು ಬೆಂಡೆಕಾಯಿಯನ್ನು ಸಾಧ್ಯವಾದಷ್ಟು ಒಟ್ಟಿಗೆ ತಿನ್ನಬೇಡಿ.

5. ಹಣ್ಣು ಮತ್ತು ಹಾಲು ಹಣ್ಣುಗಳನ್ನು ಹಾಲಿನೊಂದಿಗೆ ತಿನ್ನಬಾರದು ಎಂದು ತಜ್ಞರು ತಿಳಿಸಿದ್ದಾರೆ. ಹಾಲಿನೊಂದಿಗೆ ಬೆರೆಸಿದ ಹಣ್ಣುಗಳನ್ನು ತಿನ್ನುವುದರಿಂದ, ಹಾಲಿನಲ್ಲಿರುವ ಕ್ಯಾಲ್ಸಿಯಂ, ಹಣ್ಣಿನ ಕಿಣ್ವಗಳನ್ನು ಹೀರಿಕೊಳ್ಳುತ್ತದೆ. ಇದರಿಂದಾಗಿ ಹಣ್ಣುಗಳಿಂದ ದೇಹಕ್ಕೆ ಯಾವುದೇ ಪ್ರಯೋಜನವಾಗುವುದಿಲ್ಲ. ಅಲ್ಲದೆ ಜೀಣಾಂಗದ ಸಮಸ್ಯೆ ಇದರಿಂದ ಉಂಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Lady Finger: ಆಹಾರದಲ್ಲಿ ಬೆಂಡೆಕಾಯಿಯನ್ನು ಹೆಚ್ಚು ಸೇವಿಸಿ, ಇದು ಮಧುಮೇಹದಿಂದ ಮುಕ್ತಿ ನೀಡುತ್ತದೆ

Cashew Benefits: ಗೋಡಂಬಿಯಲ್ಲಿನ ಆರೋಗ್ಯಕರ ಗುಣಗಳ ಬಗ್ಗೆ ನೀವು ತಿಳಿದರೆ ಒಂದು ಗೋಡಂಬಿಯನ್ನು ಕೂಡ ಬಿಡುವುದಿಲ್ಲ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ