Health Tips: ಮೂಳೆಗಳು ಸದಾ ಗಟ್ಟಿಯಾಗಿರಲು ಈ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ಮಾಡಿಕೊಳ್ಳಿ
ಆರೋಗ್ಯಕರ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯು ಮೂಳೆಗಳನ್ನು ಬಲವಾಗಿಡಲು ಬಹಳ ಮುಖ್ಯ. ಇದಲ್ಲದೇ, ಕೆಲವು ಆಹಾರ ಪದ್ಧತಿ ಕೂಡ ನಮ್ಮ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ.
ದೇಹವನ್ನು ಆರೋಗ್ಯವಾಗಿಡಲು ಮೂಳೆಗಳನ್ನು ಬಲವಾಗಿಡುವುದು ಬಹಳ ಮುಖ್ಯ. ದುರ್ಬಲ ಮೂಳೆಗಳಿಗೆ ಕಾರಣ ಆಸ್ಟಿಯೊಪೊರೋಸಿಸ್, ರಿಕೆಟ್ಸ್, ಮೂಳೆ ಕ್ಯಾನ್ಸರ್, ಮೂಳೆ ಸೋಂಕುಗಳು ಸೇರಿದಂತೆ ಅನೇಕ ರೋಗಗಳಾಗಿರಬಹುದು. ವೃದ್ಧಾಪ್ಯದಲ್ಲಿ ಮೂಳೆಗಳು ದುರ್ಬಲವಾಗುವುದು ಸಾಮಾನ್ಯ, ಆದರೆ ಕೆಲವೊಮ್ಮೆ ಪೋಷಕಾಂಶಗಳ ಕೊರತೆಯಿಂದಾಗಿ ನಿಮ್ಮ ಮೂಳೆಗಳು ದುರ್ಬಲವಾಗುತ್ತವೆ. ಇದರಿಂದಾಗಿ ದೇಹದ ಬೆಳವಣಿಗೆಗೆ ಕೂಡ ನಿಲ್ಲುತ್ತದೆ. ಆರೋಗ್ಯಕರ ಆಹಾರ, ಆರೋಗ್ಯಕರ ಜೀವನಶೈಲಿ ಮತ್ತು ದೈಹಿಕ ಚಟುವಟಿಕೆಯು ಮೂಳೆಗಳನ್ನು ಬಲವಾಗಿಡಲು ಬಹಳ ಮುಖ್ಯ. ಇದಲ್ಲದೇ, ಕೆಲವು ಆಹಾರ ಪದ್ಧತಿ ಕೂಡ ನಮ್ಮ ಮೂಳೆಗಳನ್ನು ಗಟ್ಟಿಯಾಗಿಸುತ್ತದೆ. ಹೀಗಾಗಿ ಪೋಷಕಾಂಶಯುಕ್ತ ಈ ಆಹಾರಗಳನ್ನು ಸೇವಿಸುವುದು ಮುಖ್ಯ.
ನಟ್ಸ್ ನಟ್ಸ್ ಸೇವಿಸುವುದರಿಂದ ಮೂಳೆಗಳ ಜತೆಗೆ ಆರೋಗ್ಯಕ್ಕೂ ಪ್ರಯೋಜನಕಾರಿ. ವಾಲ್ನಟ್ಸ್, ಬಾದಾಮಿ ಮತ್ತು ಬ್ರೈಜಲ್ ನಟ್ಸ್ ಸೇರಿದಂತೆ ಹಲವು ಡ್ರೈ ಫ್ರೂಟ್ಸ್ ಸೇವಿಸುವುದು ಮೂಳೆಯ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ನಟ್ಸ್ನಲ್ಲಿ ಕ್ಯಾಲ್ಸಿಯಂ, ಉತ್ಕರ್ಷಣ ನಿರೋಧಕಗಳು, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ರಂಜಕದಂತಹ ಪೋಷಕಾಂಶಗಳಿವೆ.
ಸಾಲ್ಮನ್ ಮೀನು ಸಾಲ್ಮನ್ ಮೀನುಗಳು ಆರೋಗ್ಯಕರ ಒಮೆಗಾ -3 ಕೊಬ್ಬಿನಾಮ್ಲಗಳಿಂದ ಸಮೃದ್ಧವಾಗಿವೆ. ಇದು ದೇಹಕ್ಕೆ ಅಗತ್ಯವಿರುವ ವಿಟಮಿನ್ ಡಿ ಪೂರೈಸಲು ಸಹಾಯ ಮಾಡುತ್ತದೆ. ಒಮೆಗಾ -3 ಮತ್ತು ವಿಟಮಿನ್ ಡಿ ಎರಡೂ ಮೂಳೆಗಳ ಆರೋಗ್ಯ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವಲ್ಲಿ ಸಹಾಯ ಮಾಡುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಸಾಲ್ಮನ್ ಮೀನು ಸೇರಿಸುವುದು ಉತ್ತಮ.
ಹಾಲು ಹಾಲು ಒಂದು ಸೂಪರ್ ಆಹಾರ. ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ. ನೀವು ಬೆಳಗಿನ ಉಪಹಾರದಲ್ಲಿ ಹಾಲನ್ನು ಸೇವಿಸಬಹುದು. ಇದಲ್ಲದೇ, ಹಾಲಿಗೆ ಓಟ್ಸ್ ಬೆರೆಸಿ ಸೇವಿಸಬಹುದು.
ಮೊಟ್ಟೆ ಮೊಟ್ಟೆಗಳು ಅಗ್ಗವಾಗಿದ್ದು, ಸುಲಭವಾಗಿ ಸಿಗುತ್ತವೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಮೊಟ್ಟೆಯಲ್ಲಿ ಪ್ರೋಟೀನ್ ಇರುತ್ತದೆ. ದೇಹದಲ್ಲಿನ ಪ್ರೋಟೀನ್ ಕೊರತೆಯು ಮೂಳೆಗಳ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಮೊಟ್ಟೆಯನ್ನು ಆಮ್ಲೆಟ್ ರೂಪದಲ್ಲಿ ಕೂಡ ತಿನ್ನಬಹುದು.
ಸೊಪ್ಪು ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಕೆ ಸಮೃದ್ಧವಾಗಿದ್ದು, ಇದು ಮೂಳೆಗಳನ್ನು ಆರೋಗ್ಯವಾಗಿಡಲು ಅಗತ್ಯವಾಗಿದೆ. ಹಸಿರು ತರಕಾರಿಗಳು ಮೂಳೆಗಳಿಗೆ ಮಾತ್ರವಲ್ಲ ಆರೋಗ್ಯಕ್ಕೂ ಅಗತ್ಯ. ಆರೋಗ್ಯವಾಗಿರಲು ಹಸಿರು ತರಕಾರಿಗಳು ಇತ್ಯಾದಿಗಳನ್ನು ಆಹಾರದಲ್ಲಿ ಸೇರಿಸುವುದು ಸೂಕ್ತ.
ಇದನ್ನೂ ಓದಿ: Carom Seeds: ಓಂ ಕಾಳು ರುಚಿಯ ಜತೆಗೆ ಹಲವು ಆರೋಗ್ಯಕರ ಗುಣಗಳನ್ನು ಹೊಂದಿದೆ