Teeth: ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬೇಕೆ? ಈ ಕೆಲವು ಟಿಪ್ಸ್​ಗಳು ನಿಮಗಾಗಿ

ಬಿಳಿ ಹಲ್ಲುಗಳು ಇರಲಿ ಎಂಬುದು ಎಲ್ಲರ ಆಸೆ. ದಿನ ಕಳೆಯುತ್ತಿದ್ದಂತೆಯೇ ಬಿಳುಪನ್ನು ಕಳೆದುಕೊಳ್ಳುತ್ತಿದೆ ಎಂಬ ಚಿಂತೆಯಿದ್ದರೆ ನಿಮಗಾಗಿಯೇ ಕೆಲವೊಂದಿಷ್ಟು ಟಿಪ್ಸ್​ಗಳಿವೆ. ಇವುಗಳನ್ನು ಪಾಲಿಸುವ ಮೂಲಕ ಹಲ್ಲು ಬಿಳುಪು ಪಡೆಯುತ್ತದೆ.

Teeth: ನಿಮ್ಮ ಹಲ್ಲುಗಳನ್ನು ಬಿಳಿಯಾಗಿಸಬೇಕೆ? ಈ ಕೆಲವು ಟಿಪ್ಸ್​ಗಳು ನಿಮಗಾಗಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 17, 2021 | 6:47 AM

ನಗುವಾಗ ಹಲ್ಲು ಸುಂದರವಾಗಿದ್ದರೆ ನಗುವೂ ಸುಂದರವಾಗಿರುತ್ತದೆ. ಹಾಗಿರುವಾಗ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಉತ್ತಮ. ಪ್ರತಿನಿತ್ಯವೂ ಕೂಡಾ ಹಲ್ಲುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ. ಸುಂದರ ಬಿಳಿ ಹಲ್ಲುಗಳು ನಿಮ್ಮ ನಗುವನ್ನು ಸುಂದರಗೊಳಿಸುತ್ತದೆ. ನಿಮ್ಮ ನಗು ನೋಡುಗರಿಗೆ ಇಷ್ಟವಾಗುವಂತಿರುತ್ತದೆ. ಬಿಳಿ ಹಲ್ಲುಗಳು ಇರಲಿ ಎಂಬುದು ಎಲ್ಲರ ಆಸೆ. ದಿನ ಕಳೆಯುತ್ತಿದ್ದಂತೆಯೇ ಬಿಳುಪನ್ನು ಕಳೆದುಕೊಳ್ಳುತ್ತಿದೆ ಎಂಬ ಚಿಂತೆಯಿದ್ದರೆ ನಿಮಗಾಗಿಯೇ ಕೆಲವೊಂದಿಷ್ಟು ಟಿಪ್ಸ್​ಗಳಿವೆ. ಇವುಗಳನ್ನು ಪಾಲಿಸುವ ಮೂಲಕ ಹಲ್ಲು ಬಿಳುಪು ಪಡೆಯುತ್ತದೆ.

ಕಾಫಿ, ಚಹ ಮತ್ತು ವೈನ್ಅನ್ನು ಸೇವಿಸುವುದು ನಿಮ್ಮ ಹಲ್ಲುಗಳಿಗೆ ಹಾನಿ ಉಂಟು ಮಾಡಬಹುದು. ಹಾಗಿರುವಾಗ ಇವುಗಳನ್ನು ಸೇವಿಸಿದ ತಕ್ಷಣ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಅದರಲ್ಲಿಯೂ ಆಮ್ಲೀಯ ಆಹಾರವು ಹಲ್ಲುಗಳನ್ನು ಹಳದಿಗಟ್ಟಿಸುತ್ತವೆ. ಸಕ್ಕರೆಯುಕ್ತ ಪದಾರ್ಥಗಳನ್ನು ಆದಷ್ಟು ಕಡಿಮೆ ಸೇವಿಸಿ. ಇದರ ಬದಲಿಗೆ ಬಾದಾಮಿ, ಅಣಬೆ, ಮೊಟ್ಟೆ, ಸಿಹಿ ಹೆಣಸು ಮತ್ತು ಕ್ಯಾರೆಟ್ಅನ್ನು ಸೇವಿಸಿ.

ಹಲ್ಲನ್ನು ಸುರಕ್ಷಿತವಾಗಿರಿಸಲು ಯೋಚಿಸಿ ಧೂಮಪಾನವು ಹಲ್ಲುಗಳನ್ನು ಹಾಳು ಮಾಡುತ್ತವೆ. ತಂಬಾಕು ಸೇವನೆಯಲ್ಲಿ ಹಲ್ಲುಗಳು ಕಪ್ಪು ಬಣ್ಣವನ್ನು ಪಡೆಯುತ್ತವೆ. ಹಲ್ಲುಗಳಲ್ಲಿ ಒಟ್ಟೆ (ತೂತು) ಬೀಳುವುದು, ಹಲ್ಲು ಸೆಳೆತದಂತಹ ಸಮಸ್ಯೆಗಳು ಕಾಡತೊಡಗುತ್ತದೆ.

ಅಡಿಗೆ ಸೋಡಾ ಅಡಿಗೆ ಸೋಡಾದಲ್ಲಿ ಹಲ್ಲುಗಳನ್ನು ಬಿಳುಪು ಮಾಡುವ ಗುಣಗಳಿವೆ. ವಾರಕ್ಕೊಮ್ಮೆ ಒಂದು ಚಿಟಿಕೆ ಸೋಡಾ ತೆಗೆದುಕೊಂಡು ಹಲ್ಲು ತಿಕ್ಕುವ (ಉಜ್ಜುವ) ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಹಲ್ಲುಗಳನ್ನು ಬಿಳುಪಾಗಿಸಬಹುದಾಗಿದೆ.

ಪ್ರತಿನಿತ್ಯವೂ ಹಲ್ಲಿನ ಕುರಿತಾಗಿ ಕಾಳಜಿಯಿರಲಿ ಬಿಳಿ ಹಲ್ಲುಗಳನ್ನು ಕಾಪಾಡಿಕೊಂಡು ಹೋಗಲು ಪ್ರತಿನಿತ್ಯ ಹಲ್ಲುಜ್ಜುವ ಅಭ್ಯಾಸ ರೂಢಿಯಲ್ಲಿಟ್ಟುಕೊಳ್ಳಿ. ಅದರಲ್ಲಿಯೂ ಮುಖ್ಯವಾಗಿ ಹಲ್ಲುಗಳನ್ನು ಉಜ್ಜುವ ರೀತಿ ಸರಿಯಾಗಿರಲಿ. ಆಹಾರ ತಿಂದ ಬಳಿಕ ಬಾಯಿ ತೊಳೆಯುವ ಅಭ್ಯಾಸ ರೂಢಿಯಲ್ಲಿರಲಿ. ಹಲ್ಲಿನ ಮಧ್ಯೆ ಸಿಲುಕಿಕೊಂಡಿರುವ ಆಹಾರದಿಂದ ಹಲ್ಲು ಹಾಳಾಗುತ್ತವೆ. ಪ್ರತಿನಿತ್ಯ ಬಾಯಿ ಮುಕ್ಕಳಿಸುವ ಮೂಲಕ ಸಿಲುಕಿಕೊಂಡಿರುವ ಆಹಾರ ಹೊರಬರುತ್ತದೆ. ಇದರಿಂದ ಹಲ್ಲಿನ ಆರೋಗ್ಯ ಸುರಕ್ಷಿತವಾಗಿರುತ್ತದೆ.

ಇದನ್ನೂ ಓದಿ:

ಹಲ್ಲುಗಳ ನಡುವೆ ಅಂತರವಿದೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಈ ಸುದ್ದಿ ಓದಿ

Health Tips: ಹಲ್ಲುಜ್ಜುವಾಗ ನೀವು ಮಾಡುವ ಈ ತಪ್ಪುಗಳು ನಿಮ್ಮನ್ನು ಅಪಾಯಕ್ಕೆ ಸಿಲುಕುವಂತೆ ಮಾಡುತ್ತದೆ; ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ