AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Skin Peeling: ಅಂಗೈಯ ಚರ್ಮ ಸುಲಿದಂತೆ ಭಾಸವಾಗುತ್ತಿದೆ? ಇಲ್ಲಿದೆ ಅದಕ್ಕೆ ಪರಿಹಾರ

ಅತಿಯಾಗಿ ನೀರು ಮುಟ್ಟುವುದರಿಂದ ಚರ್ಮದ ಸಿಪ್ಪೆ ಸುಲಿದಂತಾಗುತ್ತದೆ. ಕೆಲವೊಮ್ಮೆ ಚರ್ಮಕ್ಕೆ ಅಂಟಿದ ಸೋಂಕಿನಿಂದಲೂ ಚರ್ಮ ಕಿತ್ತು ಹೋಗುತ್ತದೆ.

Skin Peeling: ಅಂಗೈಯ ಚರ್ಮ ಸುಲಿದಂತೆ ಭಾಸವಾಗುತ್ತಿದೆ? ಇಲ್ಲಿದೆ ಅದಕ್ಕೆ ಪರಿಹಾರ
ಸಾಂದರ್ಭಿಕ ಚಿತ್ರ
TV9 Web
| Updated By: preethi shettigar|

Updated on: Aug 16, 2021 | 7:58 AM

Share

ಕೆಲವರಿಗೆ ಅಂಗೈ ಮತ್ತು ಪಾದದದಲ್ಲಿನ ಚರ್ಮವು ಸಿಪ್ಪೆ ಸುಲಿದಂತೆ ಆಗುತ್ತದೆ. ತುರಿಕೆಯ ಕಾರಣಕ್ಕೆ ಕೆಲವೊಮ್ಮೆ ಹೀಗೆ ಚರ್ಮ ಕಿತ್ತು ಹೋಗುತ್ತದೆ. ಇನ್ನು ಕೆಲವೊಮ್ಮೆ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾದರೆ ಈ ರೀತಿಯ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಅದರಲ್ಲೂ ಅಂಗೈಯ ಚರ್ಮ ಸುಲಿದಂತೆ ಆಗುವುದರ ಹಿಂದೆ ಒಂದು ಕಾರಣ ಇದೆ. ಆ ಕಾರಣ ಯಾವುದು? ಈ ಸಮಸ್ಯೆ ತಡೆಯುವುದು ಹೇಗೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಕ್ಕಳ ಚರ್ಮವು ಸಾಮಾನ್ಯವಾಗಿ ಮೃದು ಮತ್ತು ಸೂಕ್ಷ್ಮವಾಗಿರುತ್ತದೆ. ಹೀಗಾಗಿ ಅಂಗೈ ಚರ್ಮ ಸುಲಿದಂತೆ ಆಗುತ್ತದೆ. ಆದಾಗ್ಯೂ, ಚರ್ಮದ ಸಿಪ್ಪೆ ಸುಲಿಯುವಿಕೆಗೆ ಕಾರಣವಾಗುವ ಇತರ ಹಲವು ಅಂಶಗಳಿವೆ. ಈ ಸಮಸ್ಯೆ ಅತಿಯಾಗಿ ನೀರು ಮುಟ್ಟುವುದರಿಂದ ಉಂಟಾಗುತ್ತದೆ. ಕೆಲವೊಮ್ಮೆ ಚರ್ಮಕ್ಕೆ ಅಂಟಿದ ಸೋಂಕಿನಿಂದಲೂ ಚರ್ಮ ಕಿತ್ತು ಹೋಗುತ್ತದೆ.

ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ನೀವು ಈ ಸಮಸ್ಯೆಯನ್ನು ನಿಭಾಯಿಸಬಹುದು

ಸ್ನಾನದ ಸಮಯವನ್ನು ಹತ್ತು ನಿಮಿಷದಿಂದ ಐದು ನಿಮಿಷಕ್ಕೆ ಬದಲಾಯಿಸಿ ದೀರ್ಘಕಾಲ ಸ್ನಾನ ಮಾಡುವುದರಿಂದ ಚರ್ಮವು ಉಬ್ಬುತ್ತದೆ. ಹೀಗಾಗಿ ಚರ್ಮದ ಮೇಲ್ಪದರ ಉದುರಿಹೋಗುತ್ತದೆ. ಇದಲ್ಲದೇ, ದೀರ್ಘಕಾಲ ನೀರಿನಲ್ಲಿ ಇರುವುದರಿಂದ ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಅಂಶ ದೂರವಾಗುತ್ತದೆ. ಹೀಗಾಗಿ ಹೆಚ್ಚು ಹೊತ್ತು ಸ್ನಾನ ಮಾಡಬೇಡಿ. ಸ್ನಾನ ಮಾಡಿದ ನಂತರ ಮಾಯಿಶ್ಚರೈಸರ್ ಹಚ್ಚಿ ಏಕೆಂದರೆ ಇದು ಚರ್ಮದಲ್ಲಿ ತೇವಾಂಶವನ್ನು ಉಳಿಸಿಕೊಳ್ಳುತ್ತದೆ.

ಕೈಕಾಲು ಚೆನ್ನಾಗಿ ತೊಳೆಯಿರಿ ಮಕ್ಕಳು ಹೊರಗೆ ಆಡುವಾಗ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಗೆ ಒಡ್ಡಿಕೊಳ್ಳುತ್ತಾರೆ. ಇದರಿಂದ ಅವರು ಚರ್ಮದ ಅಲರ್ಜಿಗಳಿಗೆ ಒಳಗಾಗುತ್ತಾರೆ. ಇಂತಹ ಸನ್ನಿವೇಶದಲ್ಲಿ, ಮಕ್ಕಳು ಆಟವಾಡಲು ಹೋಗಿ ಬಂದ ನಂತರ ನೀರಿನಿಂದ ಕೈಕಾಲುಗಳನ್ನು ಚೆನ್ನಾಗಿ ತೊಳೆಯಿರಿ.

ಅಲೋವೆರಾ ಬಳಸಿ ಕೈ ಮತ್ತು ಪಾದಕ್ಕೆ ಅಲೋವೇರಾ ಬಳಸಿ. ಇದು ಚರ್ಮವನ್ನು ಹೆಚ್ಚು ಕಾಂತಿಯುತವಾಗಿ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲೋವೆರಾ ದೇಹದಲ್ಲಿನ ತೇವಾಂಶವನ್ನು ಹೆಚ್ಚಿಸುತ್ತದೆ. ಆ ಮೂಲಕ ಚರ್ಮದಲ್ಲಿ ಶುಷ್ಕತೆಯನ್ನು ತಡೆಯಬಹುದು. ಶುಷ್ಕತೆ ಇನ್ನೂ ಮುಂದುವರಿದರೆ ಅಥವಾ ಅಂಗೈ ಮತ್ತು ಅಡಿಭಾಗದ ಚರ್ಮದ ಪದರಗಳು ಉದುರುತ್ತಿದ್ದರೆ, ತಕ್ಷಣ ಚರ್ಮರೋಗ ತಜ್ಞರನ್ನು ಸಂಪರ್ಕಿಸಿ.

ಇದನ್ನೂ ಓದಿ: Hairy Ears: ಕಿವಿಯಲ್ಲಿ ಬೆಳೆಯುವ ಕೂದಲು ಆರೋಗ್ಯಕ್ಕೆ ಹಾನಿಕಾರಕವೇ?

Lady Finger: ಆಹಾರದಲ್ಲಿ ಬೆಂಡೆಕಾಯಿಯನ್ನು ಹೆಚ್ಚು ಸೇವಿಸಿ, ಇದು ಮಧುಮೇಹದಿಂದ ಮುಕ್ತಿ ನೀಡುತ್ತದೆ

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್