Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು

ತೂಕ ಕಳೆದುಕೊಳ್ಳಬೇಕು ಎನ್ನುವ ಕುರಿತಾಗಿ ಯೋಚಿಸುತ್ತಿದ್ದರೆ ಆಹಾರವನ್ನು ಮೊದಲು ತ್ಯಜಿಸುತ್ತೀರಿ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಆಹಾರ ಸಹಾಯಕ ಮತ್ತು ಅವಶ್ಯಕ.

Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ganapathi bhat

Updated on:Aug 16, 2021 | 9:48 PM

ಇತ್ತೀಚಿಗೆ ರಸ್ತೆ ಬದಿಯ ತಿಂಡಿಗಳನ್ನು ತಿಂದು ದೇಹ ಊದಿಕೊಂಡು ಬಿಟ್ಟಿದೆ ಎನ್ನುವವರೇ ಹೆಚ್ಚು. ಆರೋಗ್ಯದ ದೃಷ್ಟಿಯಿಂದ ಗಮನಿಸಿದರೆ ಹೆಚ್ಚು ತೂಕ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನೋಡಲು ಸುಂದರವಾಗಿ ಕಾಣಿಸಬೇಕು ಎಂದೂ ಸಹ ತೂಕ ಇಳಿಸಿಕೊಂಡು ಫಿಟ್​ನೆಸ್​ ಕಾಪಾಡಿಕೊಂಡು ಹೋಗುವತ್ತ ಯೋಚಿಸಿರಬಹುದು. ಹಾಗಿದ್ದಲ್ಲಿ ಮಹಿಳೆಯರು ತೂಕ ಇಳಿಸಿಕೊಳ್ಳಲು ಕೆಲವೊಂದಿಷ್ಟು ಟಿಪ್ಸ್​ಗಳು ಈ ಕೆಳಗಿನಂತಿದೆ. ಇವುಗಳನ್ನು ಪಾಲಿಸುವ ಮೂಲಕ ತೂಕ ಇಳಿಸಿಕೊಳ್ಳಲು ಸಾಧ್ಯ.

ತೂಕ ಕಳೆದುಕೊಳ್ಳಬೇಕು ಎನ್ನುವ ಕುರಿತಾಗಿ ಯೋಚಿಸುತ್ತಿದ್ದರೆ ಆಹಾರವನ್ನು ಮೊದಲು ತ್ಯಜಿಸುತ್ತೀರಿ. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಆಹಾರ ಸಹಾಯಕ ಮತ್ತು ಅವಶ್ಯಕ. ಆಹಾರ ತ್ಯಜಿಸುವ ಬದಲಿಗೆ ಅಂದರೆ ಯಾವುದೇ ಡಯಟ್​ ಮಾಡದೇ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ. ರುಚಿಕರವಾದ ತಿಂಡಿಗಳನ್ನು ಸವಿಯುತ್ತಲೇ ದೇಹದ ತೂಕವನ್ನು ನಿಯಂತ್ರಿಸಬಹುದಾಗಿದೆ. ಯಾವುದೇ ರೀತಿಯ ಡಯಟ್ ಮಾಡದೇ ತೂಕವನ್ನು ಹೇಗೆ ಇಳಿಸಿಕೊಳ್ಳಬಹುದು ಎಂಬುದರ ಕುರಿತಾಗಿ ಕೆಲವೊಂದಿಷ್ಟು ಸಲಹೆಗಳು ಈ ಕೆಳಗಿನಂತಿದೆ.

ವ್ಯಾಯಾಮ ಮುಖ್ಯ ತಿಂದ ಆಹಾರ ಜೀರ್ಣವಾಗಲು ಮತ್ತು ನಮ್ಮ ದೇಹಕ್ಕೆ ಸರಿಯಾಗಿ ಹಿಡಿಯಲು ವ್ಯಾಯಾಮ ಅತ್ಯವಶ್ಯಕ. ದೇಹದಲ್ಲಿನ ಹೆಚ್ಚಿನ ಕ್ಯಾಲೋರಿಗಳನ್ನು ಕರಗಿಸಲು ಇದು ಸಹಾಯ ಮಾಡುತ್ತದೆ. ನಿಯಮಿತವಾದ ವ್ಯಾಯಾಮ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಕಡಿಮೆ ತಿನ್ನುವುದು, ಊಟ ತ್ಯಜಿಸುವುದು ಇಂತಹ ಕ್ರಮಗಳು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವಲ್ಲ. ಅದರಲ್ಲಿಯೂ ಮಹಿಳೆಯರಲ್ಲಿ ಹೆಚ್ಚು ಸುಸ್ತು, ಆಯಾಸ ಕಂಡು ಬರುವುದು ಹೆಚ್ಚುತ್ತದೆ.

ಎಚ್ಚರಿಕೆಯಿಂದ ಆಹಾರ ಸೇವಿಸುವ ಅಭ್ಯಾಸ ನಿಮ್ಮ ನೆಚ್ಚಿನ ಆಹಾರ ಪದಾರ್ಥಗಳನ್ನು ನೀವು ತ್ಯಜಿಸಬೇಕಾಗಿಲ್ಲ. ಆದರೆ ಆಹಾರ ಸೇವಿಸುವುದು ನಿಮ್ಮ ನಿಯಂತ್ರಣದಲ್ಲಿರಲಿ. ಬಾರಿಗೆ ರುಚಿಯೆಂದು ಅತಿಯಾಗಿ ಸೇವಿಸುವುದು ಅನಾರೋಗ್ಯವನ್ನು ಉಂಟು ಮಾಡುತ್ತದೆ. ಜತೆಗೆ ತೂಕವು ಇನ್ನಷ್ಟು ಹೆಚ್ಚಾಗುತ್ತದೆ.

ಆಹಾರವನ್ನು ಸರಿಯಾಗಿ ಅಗಿಯಿರಿ ಆಹಾರವನ್ನು ಸರಿಯಾಗಿ ಅಗಿಯುವುದು ಉತ್ತಮ. ಇದರಿಂದ ನಿಮ್ಮ ಜೀರ್ಣಕ್ರಿಯೆ ಸರಿಯಾದ ಕ್ರಮದಲ್ಲಿ ಸಾಗುತ್ತದೆ. ಇದು ಅತಿಯಾಗಿ ತಿನ್ನುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಆಹಾರ ಸರಿಯಾದ ಕ್ರಮದಲ್ಲಿ ಪರಿಣಾಮಕಾರಿಯಾಗಿ ಪ್ರಕ್ರಿಯೆಗೊಳಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಕ್ಯಾಲೋರಿ ದೇಹಕ್ಕೆ ಸೇರದಂತೆ ನೋಡಿಕೊಳ್ಳುತ್ತದೆ.

ಸಾಕಷ್ಟು ನೀರು ಕುಡಿಯಿರಿ ಅತಿಯಾಗಿ ತಿನ್ನುವುದು ನಿಮ್ಮ ಆರೋಗ್ಯವನ್ನು ಹಾಳು ಮಾಡುತ್ತದೆ. ಇದನ್ನು ತಪ್ಪಿಸಲು ನಿಮ್ಮ ಊಟದಲ್ಲಿ ನೀರಿನಾಂಶ ಇರುವುದು ಅವಶ್ಯಕ. ಜೀರ್ಣಕ್ರಿಯೆ ಸರಿಯಾಗಿ ಕಾರ್ಯನಿರ್ವಹಿಸಲು ನೀರು ಅತ್ಯವಶ್ಯಕ. ಹಾಗಾಗಿ ಸರಿಯಾಗಿ ನೀರು ಕುಡಿಯುವ ಅಭ್ಯಾಸ ರೂಢಿಯಲ್ಲಿರಲಿ.

ಇದನ್ನೂ ಓದಿ:

Women Health: ಗರ್ಭಾವಸ್ಥೆಯಲ್ಲಿ ಒಣ ಕೆಮ್ಮಿನ ಸಮಸ್ಯೆ ತೊಂದರೆಗಳನ್ನು ಹೆಚ್ಚಿಸಬಹುದು; ಪರಿಹಾರ ಕ್ರಮಗಳನ್ನು ತಿಳಿಯಿರಿ

Women Health: ಗರ್ಭಿಣಿ ಮಹಿಳೆಯರಿಗೆ ತಲೆತಿರುಗುವುದೇಕೆ? ಕಾರಣ ತಿಳಿಯಿರಿ

Published On - 9:47 pm, Mon, 16 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ