Women Health: ಗರ್ಭಿಣಿ ಮಹಿಳೆಯರಿಗೆ ತಲೆತಿರುಗುವುದೇಕೆ? ಕಾರಣ ತಿಳಿಯಿರಿ

ಸಾಮಾನ್ಯವಾಗಿ ಗರ್ಭಧಾರಣೆಯ ಆರು ವಾರಗಳವರೆಗೂ ತಲೆತಿರುಗುವ ಸಮಸ್ಯೆ ಕಂಡು ಬರುತ್ತದೆ. ಹಾಗಿದ್ದರೆ ಗರ್ಭಧಾರಣೆಯ ಸಮಯದಲ್ಲಿ ತಲೆತಿರುಗುವಿಕೆ ಏಕೆ ಕಂಡು ಬರುತ್ತದೆ ಮತ್ತು ಇದಕ್ಕೆ ಕಾರಣಗಳೇನು ಎಂದು ತಿಳಿಯಿರಿ.

Women Health: ಗರ್ಭಿಣಿ ಮಹಿಳೆಯರಿಗೆ ತಲೆತಿರುಗುವುದೇಕೆ? ಕಾರಣ ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
| Updated By: Skanda

Updated on: Aug 12, 2021 | 6:38 AM

ಹೆಣ್ಣಿಗೆ ಗರ್ಭಧಾರಣೆ ಒಂದು ಸುಂದರ ಅನುಭವ.  ಹೀಗಿರುವಾಗ ಹೆಚ್ಚಿನ ಆರೈಕೆ ಜತೆಗೆ ಆರೋಗ್ಯದಲ್ಲಿ ಕಾಳಜಿ ಮಾಡುವುದು ಅತ್ಯಗತ್ಯ. ಗರ್ಭಿಣಿಯರು ಜತೆಗೆ ಅನೇಕ ಸಮಸ್ಯೆಗಳನ್ನೂ ಸಹ ಎದುರಿಸಬೇಕಾಗುತ್ತದೆ. ಇದರಲ್ಲಿ ಹೆಚ್ಚಿನವು ಹಾರ್ಮೋನುಗಳ ಏರಿಳಿತದಿಂದ ಸಂಭವಿಸುತ್ತದೆ. ಇದರಲ್ಲಿ ತಲೆತಿರುಗುವಿಕೆ ಸಮಸ್ಯೆ ಕೂಡಾ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ.

ಸಾಮಾನ್ಯವಾಗಿ ಗರ್ಭಧಾರಣೆಯ ಆರು ವಾರಗಳವರೆಗೂ ತಲೆತಿರುಗುವ ಸಮಸ್ಯೆ ಕಂಡು ಬರುತ್ತದೆ. ಹಾಗಿದ್ದರೆ ಗರ್ಭಧಾರಣೆಯ ಸಮಯದಲ್ಲಿ ತಲೆತಿರುಗುವಿಕೆ ಏಕೆ ಕಂಡು ಬರುತ್ತದೆ ಮತ್ತು ಇದಕ್ಕೆ ಕಾರಣಗಳೇನು ಎಂದು ತಿಳಿಯಿರಿ. ಜತೆಗೆ ಸಮಸ್ಯೆಗೆ ಪರಿಹಾರ ಕ್ರಮಗಳೇನು ಎಂಬುದನ್ನು ತಿಳಿಯಲೇಬೇಕು.

ತಲೆತಿರುಗುವಿಕೆಗೆ ಕಾರಣಗಳು ಗರ್ಭಿಣಿಯಾಗಿದ್ದಾಗ ಮಹಿಳೆಗೆ ಹೆಚ್ಚು ಆಯಾಸ ಉಂಟಾಗುವುದು ಸಹಜ. ಅನೇಕ ಬಾರಿ ಬೆಳಗ್ಗೆ ಮಹಿಳೆಯು ಆಹಾರ ಸೇವಿಸುವುದನ್ನು ನಿರಾಕರಿಸುತ್ತಾಳೆ. ಹಾಗಾಗಿ ನಿಶ್ಶಕ್ತತೆ ಕಾಡಬಹುದು. ಹಾರ್ಮೋನುಗಳ ಬದಲಾವಣೆಗಳಿಂದ ರಕ್ತನಾಳಗಳು ಹಿಗ್ಗುತ್ತವೆ. ಈ ಕಾರಣದಿಂದ ಬಿಪಿ ಸಮಸ್ಯೆ ಕಾಡಬಹುದು. ಜತೆಗೆ ತಲೆತಿರುಗುವ ಸಮಸ್ಯೆಗೂ ಕಾರಣವಾಗಬಹುದು.

ಗರ್ಭ ಬೆಳವಣಿಗೆ ಹೊಂದುತ್ತಿದ್ದಂತೆಯೇ ಗರ್ಭಿಣಿಗೆ ದೇಹದಲ್ಲಿ ಶೇ. 30 ರಷ್ಟು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ಇಂಥಹ ಪರಿಸ್ಥಿತಿಯಲ್ಲಿ ಅನೇಕ ಮಹಿಳೆಯರು ರಕ್ತದೊತ್ತಡ ಸಮಸ್ಯೆಯನ್ನು ಎದುರಿಸುತ್ತಾರೆ. ಇದರಿಂದ ತಲೆಸುತ್ತು ಉಂಟಾಗಬಹುದು. ಇದರ ಹೊರತಾಗಿ ರಕ್ತ ಹೀನತೆ, ದೇಹದಲ್ಲಿ ನೀರಿನ ಕೊರತೆ ಅಥವಾ ಬೇರೆ ಕಾರಣಗಳಿಂದ ತಲೆತಿರುಗುವ ಸಮಸ್ಯೆ ಕಾಡಬಹುದು.

ತಲೆತಿರುಗುವಾಗ ಏನು ಮಾಡಬೇಕು? ಗರ್ಭಿಣಿಯರು ಯಾವಾಗಲೂ ಆರಾಮದಾಯಕವಾದ ಸ್ಥಳದಲ್ಲಿ ಕುಳಿತುಕೊಳ್ಳಬೇಕು. ತಲೆತಿರುಗುವ ಸಂದರ್ಭದಲ್ಲಿ ಕಿಟಕಿಯ ಬಾಗಿಲು ತೆರೆದಿರಲಿ ಜತೆಗೆ ಒಳ್ಳೆಯ ಉಸಿರಾಟಕ್ಕೆ ಉತ್ತವಾದ ಗಾಳಿ ತೆಗೆದುಕೊಳ್ಳಿ.

ತಲೆತಿರುಗುವಾಗ ಎಡ ಭಾಗದಲ್ಲಿ ಮಲಗುವುದು ಒಳ್ಳೆಯದು. ಇದರಿಂದ ಗರ್ಭಿಣಿಯರಿಗೆ ಆರಾಮ ಅನಿಸುತ್ತದೆ. ಜತೆಗೆ ತಲೆ ತಿರುಗುವಿಕೆ ಕೊಂಚ ಕಡಿಮೆ ಆದ ಬಳಿಕ ಹಣ್ಣಿನ ರಸ ಅಥವಾ ಆಹಾರವನ್ನು ಸೇವಿಸುವುದು ಉತ್ತಮ.

ಬಿಪಿಯನ್ನು ಪರೀಕ್ಷಿಸಿಕೊಳ್ಳಿ. ರಕ್ತದೊತ್ತಡದ ಸಮಸ್ಯೆಯಾಗಿದ್ದರೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸ, ನೀರು ಸೇರಿಸಿ ಕುಡಿಯಿರಿ. ಬಿಪಿ ಅಧಿಕವಾಗಿದ್ದರೆ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳುವುದು ಉತ್ತಮ.

ಗರ್ಭಾವಸ್ಥೆಯಲ್ಲಿ ಸಾಕಷ್ಟು ನೀರು ಕುಡಯಿರಿ. ಎಳನೀರು, ಮಜ್ಜಿಗೆ, ಪಾನಕ, ಹಣ್ಣಿನ ರಸ ಈ ರೀತಿಯ ಪದಾರ್ಥಗಳನ್ನೂ ಸಹ ಸೇವಿಸಬಹುದು.

(Know the reason about dizziness comes in pregnancy)

ಇದನ್ನೂ ಓದಿ:

Women Health: ಗರ್ಭಿಣಿಯರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು

Women Health: ಹಾಲುಣಿಸುವ ತಾಯಂದಿರು ಗಮನಿಸಬೇಕಾದ ಆಹಾರ ಕ್ರಮ

‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
‘ಸುದೀಪ್ ತಾಯಿ ನಿಧನದಿಂದ ನಮಗೆಲ್ಲ ದುಃಖವಾಗಿದೆ’: ಒಡನಾಟ ನೆನೆದ ಬೊಮ್ಮಾಯಿ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಡಿಕೆ ಶಿವಕುಮಾರ್​​ರನ್ನು ಸಿಎಂ ಮಾಡಿ ತೋರಿಸುತ್ತೇವೆ: ಸ್ವಾಮೀಜಿ ಶಪಥ
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ಸುದೀಪ್ ತಾಯಿ ಬಗ್ಗೆ ರಾಘಣ್ಣ ಮಾತು, ಹಳೆಯ ನೆನಪುಗಳ ಮೆಲುಕು
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್