Women Health: ಗರ್ಭಿಣಿಯರು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಇಲ್ಲಿದೆ ಕೆಲವು ಸಲಹೆಗಳು
ಅಗತ್ಯವಾದ ಪೋಷಕಾಂಶಗಳು ದೊರೆಯದ ಕಾರಣ ಗರ್ಭಿಣಿಯರ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಇದು ಬೆಳವಣಿಗೆ ಹೊಂದುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಆರೋಗ್ಯ ಸುಧಾರಣೆಯ ಕುರಿತಾಗಿ ಗರ್ಭಿಣಿಯರು ಹೆಚ್ಚು ಗಮನವಹಿಸಬೇಕು.
ಗರ್ಭಾವಸ್ಥೆಯಲ್ಲಿ ತಾಯಿ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜತೆಗೆ ಮಗುವಿನ ಆರೋಗ್ಯದ ಕುರಿತಾಗಿಯೂ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಹಾಗಿರುವಾಗ ಗರ್ಭಿಣಿ ತಾನು ಸೇವಿಸುವ ಆಹಾರದ ಕುರಿತಾಗಿ ಹೆಚ್ಚು ಗಮನವಹಿಸಬೇಕಾಗುವುದು ಅತ್ಯಗತ್ಯ. ಅಗತ್ಯವಾದ ಪೋಷಕಾಂಶಗಳು ದೊರೆಯದ ಕಾರಣ ಗರ್ಭಿಣಿಯರ ಆರೋಗ್ಯ ಸ್ಥಿತಿ ಹದಗೆಡುತ್ತದೆ. ಇದು ಬೆಳವಣಿಗೆ ಹೊಂದುತ್ತಿರುವ ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ಆರೋಗ್ಯ ಸುಧಾರಣೆಯ ಕುರಿತಾಗಿ ಗರ್ಭಿಣಿಯರು ಹೆಚ್ಚು ಗಮನವಹಿಸಬೇಕು.
*ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ದಿನಕ್ಕೆ 80 ರಿಂದ 85 ಗ್ರಾಂ ವಿಟಮಿನ್ ಸಿ ಅಂಶ ಬೇಕು. ಆದ್ದರಿಂದ ಪ್ರತಿನಿತ್ಯ ವಿಟಮಿನ್ ಸಿ ಸೇವಿಸುವುದು ಅತ್ಯಗತ್ಯ. ವಿಟಮಿನ್ ಸಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
*ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚು ಪ್ರೋಟೀನ್, ಕ್ಯಾಲ್ಸಿಯಂ ಅಗತ್ಯವಿರುತ್ತದೆ. ಹಾಗಾಗಿ ದ್ವಿದಳ ದಾನ್ಯಗಳು, ಮೊಸರು ಮತ್ತು ಡೈರಿ ಉತ್ಪನ್ನಗಳನ್ನು ಆಹಾರದಲ್ಲಿ ಸೇವಿಸುವ ಅಭ್ಯಾಸ ಒಳ್ಳೆಯದು. ಇದರಿಂದ ಪ್ರೋಟೀನ್ ಮತ್ತು ಕ್ಯಾಲ್ಸಿಯಂ ಪೋಷಕಾಂಶಗಳನ್ನು ಪಡೆಯಬಹುದಾಗಿದೆ.
*ಗರ್ಭಾವಸ್ಥೆಯಲ್ಲಿ ಕೋಪ, ಸಿಟ್ಟು, ಬೇಸರವನ್ನು ಬದಿಗಿಟ್ಟು ಖುಷಿಯಿಂದ ಇರುವುದು ಮುಖ್ಯ. ಇದು ನಿಮ್ಮ ಆರೋಗ್ಯ ಸ್ಥಿತಿಯ ಜತೆಗೆ ಮಗುವಿನ ಸ್ಥಿತಿಯನ್ನು ಸುಧಾರಿಸುತ್ತದೆ. ಮಹಿಳೆಯರು ಮಾನಸಿಕ ಆರೋಗ್ಯ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ನಗು ಅತ್ಯವಶ್ಯಕ.
*ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಬೇಕು. ಮಾನಸಿಕ ಆರೋಗ್ಯದ ಜತೆಗೆ ದೈಹಿಕ ಆರೋಗ್ಯ ಸುಧಾರಿಸಿಕೊಳ್ಳಲು ವಿಶ್ರಾಂತಿ ಪಡೆಯುವುದು ಅಗತ್ಯ.
*ಸಮತೋಲಿತ ಆಹಾರ ಸೇವಿಸಿ. ಪೌಷ್ಟಿಕ ಆಹಾರವಾದ ತರಕಾರಿಗಳು ಮತ್ತು ಹಣ್ಣುಗಳು ನಿಮ್ಮ ಆಹಾರದಲ್ಲಿರಲಿ.
*ಗರ್ಭಾವಸ್ಥೆಯಲ್ಲಿ ಹೆಚ್ಚು ಯೋಚಿಸದಿರಿ. ಮಾನಸಿಕ ಚಿಂತೆ ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತದೆ. ನಿಯಮಿತ ವ್ಯಾಯಾಮ ಮತ್ತು ಧ್ಯಾನದ ಮೂಲಕ ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಬಹುದು.
ಇದನ್ನೂ ಓದಿ:
Women Health: ಮಹಿಳೆಯರಲ್ಲಿ ಈ ಸಮಸ್ಯೆಗಳಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ