ಮಗುವಿಗೆ ತಾಯಿ ಹಾಲು ಅತಿ ಮುಖ್ಯವಾದ ಆಹಾರ. ಮಗುವಿಗೆ ಬೇಕಾದ ಎಲ್ಲಾ ಪೌಷ್ಟಿಕಾಂಶಗಳು ಕೂಡಾ ತಾಯಿಯ ಹಾಲಿನಿಂದಲೇ ಸಿಗುತ್ತದೆ. ತಾಯಿಯ ಹಾಲು, ಮಗುವಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗಿರುವಾಗ ಹಾಕುಣಿಸುವ ತಾಯಂದಿರು ತಮ್ಮ ಆಹಾರ ಕ್ರಮದ ಕುರಿತಾಗಿ ಹೆಚ್ಚು ಗಮನದಲ್ಲಿರಬೇಕು. ಸೇವಿಸುವ ಆಹಾರ ನಿಮ್ಮ ಮಗುವಿನ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ.
ಹಾಲುಣಿಸುವ ಮಹಿಳೆಯರು ಆಹಾರ ಕ್ರಮದಲ್ಲಿ ಹೆಚ್ಚು ಕಾಳಜಿಯಿಂದಿರುವುದು ಬಹಳ ಮುಖ್ಯ. ಸಾಮಾನ್ಯವಾಗಿ ತಜ್ಞರು ಮಹಿಳೆಯರಿಗೆ, ತಾಜಾ ತರಕಾರಿಗಳನ್ನು ಸೇವಿಸಲು ಸೂಚನೆ ನೀಡುತ್ತಾರೆ. ದ್ವಿದಳ ಧಾನ್ಯಗಳು, ಮೊಳಕೆಯೊಡೆದ ಕಾಳುಗಳು, ಸೋರೆಕಾಯಿ ಈ ರೀತಿ ಆಹಾರ ಕ್ರಮ ಮಹಿಳೆಯರಿಗೆ ಒಳ್ಳೆಯದು. ಕ್ಯಾಲೋಚಿತ ಹಣ್ಣಗಳನ್ನು ಸೇವಿಸುವುದರಿಂದ ಮಹಿಳೆ ಹಾಗೂ ಮಗುವಿನ ಆರೋಗ್ಯ ಸುಧಾರಿಸುತ್ತದೆ.
ಈ ಕೆಲವು ಆಹಾರ ಪದಾರ್ಥಗಳನ್ನು ಆದಷ್ಟು ತ್ಯಜಿಸಿ ಮಸಾಲೆಯುಕ್ತ ಆಹಾರ ಹಾಲುಣಿಸುವ ಮಹಿಳೆಯರು ಮಸಾಲೆಯುಕ್ತ ಆಹಾರವನ್ನು ಸೇವಿಸದಿರುವುದು ಉತ್ತಮ. ಇದರಿಂದ ಆಸಿಡಿಟಿ ಸಮಸ್ಯೆ ಎದುರಾಗಬಹುದು. ಇದು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರುತ್ತದೆ.
ಹುಳಿ ಪದಾರ್ಥಗಳು ನಿಂಬೆ, ಆಮ್ಲಾ, ಕಿತ್ತಳೆಯಂತಹ ಹುಳಿ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸಿ. ಅತಿಯಾದ ಸೇವನೆಯಿಂದ ಮಗುವಿನ ಜೀರ್ಣ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಹೆಚ್ಚು ಮಾವಿನ ಹಣ್ಣು ಸೇವಿಸುತ್ತಿದ್ದರೆ ಅದನ್ನು ಆದಷ್ಟು ತಪ್ಪಿಸಿ. ಇದು ಹೆಚ್ಚು ಆಮ್ಲೀಯತೆಯನ್ನು ಉಂಟು ಮಾಡುತ್ತದೆ.
ಕೆಫೀನ್ಯುಕ್ತ ಆಹಾರ ಕಾಫಿ, ಚಹ, ಚಾಕಲೇಟ್ ಈ ರೀತಿಯ ಕೆಫೀನ್ಯುಕ್ತ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಡಿ. ಅತಿಯಾದ ಸೇವನೆಯಿಂದ ಖಿನ್ನತೆ ಉಂಟಾಗುತ್ತದೆ. ಇದರಿಂದ ಮಗು ಸರಿಯಾಗಿ ನಿದ್ರಿಸಲು ಸಾಧ್ಯವಾಗುವುದಿಲ್ಲ.
ಬೆಳ್ಳುಳ್ಳಿ ಬೆಳ್ಳುಳ್ಳಿ ತುಂಬಾ ಪ್ರಯೋಜನಕಾರಿಯಾಗಿದ್ದರೂ ಹಾಲುಣಿಸುವ ತಾಯಿ ಸೇವಿಸದಿರುವುದು ಉತ್ತಮ. ಬೆಳ್ಳಿಳ್ಳು ವಾಸನೆ ಹಾಲಿನಲ್ಲಿಯೂ ಕಂಡುಬರುವ ಸಾದ್ಯತೆಗಳಿರುತ್ತದೆ. ಇದರಿಂದ ಮಗು ಕಿರಿಕಿರಿ ಅನುಭವಿಸಬೇಕಾಗುತ್ತದೆ.
ಮೂಲಂಗಿ ಮತ್ತು ಎಲೆಕೋಸು ಮೂಲಂಗಿ, ಎಲೆಕೋಸುಗಳಂಥಹ ಗ್ಯಾಸ್ (ವಾಯು) ಉಂಟು ಮಾಡುವ ಪದಾರ್ಥಗಳನ್ನು ಹೆಚ್ಚು ಸೇವಿಸದಿರುವುದು ಉತ್ತಮ. ತಾಯಿಗೆ ಗ್ಯಾಸ್ ಸಮಸ್ಯೆ ಹೆಚ್ಚು ಕಾಡತೊಡಗಿದರೆ, ಇದು ಮಗುವಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ.
ಗರ್ಭಾವಸ್ಥೆಯಲ್ಲಿ ಹೆಚ್ಚು ಕಾಳಜಿವಹಿಸಿ ಆರೋಗ್ಯವನ್ನು ನೋಡಿಕೊಂಡಂತೆ ಗರ್ಭಧಾರಣೆಯ ಬಳಿಕವೂ ಸಹ ತಾಯಿ ಹೆಚ್ಚು ಆರೋಗ್ಯದ ಕಡೆಗೆ ಗಮನವಹಿಸಬೇಕು. ಆಹಾರದಲ್ಲಿನ ಏರುಪೇರು ತಾಯಿ ಮತ್ತು ಮಗುವಿನ ಮೇಲೆ ಪರಿಣಾಮ ಬೀರಬಹುದು. ಹಾಗಾಗಿ ನೀವು ಸೇವಿಸುವ ಆಹಾರ ಕ್ರಮದ ಕುರಿತಾಗಿ ವೈದ್ಯರಲ್ಲಿ ಚರ್ಚಿಸಿ ಬಳಿಕ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದು ಉತ್ತಮ.
ಇದನ್ನೂ ಓದಿ:
Women Health: ಮಹಿಳೆಯರೇ ಗಮನಿಸಿ! ಋತುಚಕ್ರದಲ್ಲಿ ಈ ಆಹಾರಗಳು ನಿಮ್ಮ ಹೊಟ್ಟೆ ನೋವನ್ನು ಹೆಚ್ಚಿಸುತ್ತದೆ
Women Health: ಗರ್ಭಿಣಿಯರು ಈ ಕೆಲಸಗಳನ್ನು ಮಾಡಲೇಬಾರದು; ಆರೋಗ್ಯ ಕಾಪಾಡಿಕೊಳ್ಳಿ