Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ

ನಮ್ಮ ಸಮಾಜದಲ್ಲಿ ಹಸಿ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬ ನಂಬಿಕೆಯೂ ಇದೆ. ಆದರೆ ಹೊಸ ಸಂಶೋಧನೆಯಲ್ಲಿ ಹಸಿ ಹಾಲಿನ ಸೇವನೆಯು ದೇಹದಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬ ಎಚ್ಚರಿಕೆ ನೀಡಿದೆ.

Health Tips: ನೀವು ಹಸಿ ಹಾಲು ಕುಡಿತೀರಾ? ಹಾಗಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: preethi shettigar

Updated on: Aug 06, 2021 | 7:51 AM

ಹಾಲು ನಮ್ಮ ಆರೋಗ್ಯಕ್ಕೆ ಅತ್ಯಗತ್ಯ. ಪ್ರತಿದಿನ ಒಂದು ಲೋಟ ಹಾಲು ಕುಡಿಯುವುದರಿಂದ ನಮ್ಮ ದೇಹಕ್ಕೆ ಬೇಕಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂಗಳನ್ನು ಪಡೆಯಬಹುದು. ಹಾಗೆಯೇ ಪ್ರತಿನಿತ್ಯ ಹಾಲು ಕುಡಿಯುವುದರಿಂದ ನಮ್ಮ ಮೂಳೆಗಳನ್ನು ಬಲಪಡಿಸಬಹುದು. ಇನ್ನು ಹಾಲಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಿಣ್ವಗಳಿದ್ದು ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದರೆ ಯಾವ ಹಾಲು ಕುಡಿಯಬೇಕು ಎಂಬುದು ಸಾಮಾನ್ಯ ಪ್ರಶ್ನೆ. ಏಕೆಂದರೆ ಕೆಲವರು ಹಸಿ ಹಾಲು ಅಥವಾ ಕಚ್ಚಾ ಹಾಲು ಕುಡಿಯುವುದು ಇಷ್ಟಪಟ್ಟರೆ, ಮತ್ತೆ ಕೆಲವರು ಬಿಸಿ ಹಾಲನ್ನೇ ಕುಡಿಯುತ್ತಾರೆ. ನಮ್ಮ ಸಮಾಜದಲ್ಲಿ ಹಸಿ ಹಾಲು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂಬ ನಂಬಿಕೆಯೂ ಇದೆ. ಆದರೆ ಹೊಸ ಸಂಶೋಧನೆಯಲ್ಲಿ ಹಸಿ ಹಾಲಿನ ಸೇವನೆಯು ದೇಹದಲ್ಲಿ ಹಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂಬ ಎಚ್ಚರಿಕೆ ನೀಡಿದೆ.

ಆರೋಗ್ಯ ವರದಿ ಪ್ರಕಾರ, ಸಾಲ್ಮೊನೆಲ್ಲಾ, ಇ ಕೋಲಿ, ಲಿಸ್ಟೇರಿಯಾದಂತಹ ಹಾನಿಕಾರಕ ಬ್ಯಾಕ್ಟೀರಿಯಾಗಳು ಎಲ್ಲಾ ಪ್ರಾಣಿಗಳ ಹಾಲಿನಲ್ಲಿ ಇರುತ್ತವೆ. ಇದನ್ನು ಕುದಿಸದೆ ಕುಡಿದರೆ ಫುಡ್​ ಪಾಯಿಸನ್​ಗೆ ಕಾರಣವಾಗಬಹುದು. ಇದರಿಂದ ಇನ್ನಿತರ ಅನಾರೋಗ್ಯದ ಸಮಸ್ಯೆಗಳು ಕೂಡ ತಲೆದೂರಬಹುದು. ಹಾಗಾದರೆ ಹಸಿ ಹಾಲನ್ನು ಕುಡಿಯುವುದರಿಂದ ಆಗುವ ಅನಾನುಕೂಲಗಳೇನು ಎಂದು ನೋಡೋಣ.

– ಕಚ್ಚಾ ಅಥವಾ ಹಸಿ ಹಾಲಿನಲ್ಲಿ ಅನೇಕ ರೀತಿಯ ಹಾನಿಕಾರಕ ಬ್ಯಾಕ್ಟೀರಿಯಾಗಳಿರುತ್ತವೆ. ಅದು ನಮ್ಮ ದೇಹವನ್ನು ಸೇರಿ ಅತಿಸಾರ, ನಿರ್ಜಲೀಕರಣ, ಗುಯಿಲಿನ್-ಬಾರ್ ಸಿಂಡ್ರೋಮ್ ಮತ್ತು ಹೆಮೋಲಿಟಿಕ್ ಯುರೆಮಿಕ್ ಸಿಂಡ್ರೋಮ್‌, ಸಂಧಿವಾತದಂತಹ ಗಂಭೀರ ಸಮಸ್ಯೆಗಳನ್ನು ಉಂಟುಮಾಡಬಹುದು.

– ಕಚ್ಚಾ ಹಾಲು ಕುಡಿಯುವುದರಿಂದ ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರಲ್ಲಿ ಹೆಚ್ಚಿನ ಅನಾರೋಗ್ಯದ ಸಮಸ್ಯೆ ಕಾಣಿಸುತ್ತವೆ. ಮುಖ್ಯವಾಗಿ ಮಕ್ಕಳಲ್ಲಿ ಹಾಗೂ ಹಿರಿಯರಲ್ಲಿ ಇಂತಹ ಸಮಸ್ಯೆಗಳು ಬೇಗನೆ ತಲೆದೂರಬಹುದು.

– ಹಸಿ ಹಾಲು ಸೇವನೆಯಿಂದಾಗಿ, ವಾಕರಿಕೆ, ವಾಂತಿ ಅಥವಾ ಭೇದಿ ಇತ್ಯಾದಿಗಳ ಸಾಧ್ಯತೆ ತುಂಬಾ ಹೆಚ್ಚು.

– ಕಚ್ಚಾ ಹಾಲಿನಲ್ಲಿರುವಂತಹ ಬ್ಯಾಕ್ಟೀರಿಯಾಗಳು ನಿಮಗೆ ಟಿಬಿ ಸಮಸ್ಯೆ ಹಾಗೂ ಇನ್ನಿತರ ಅನೇಕ ಮಾರಕ ರೋಗಗಳಿಗೆ ಕಾರಣವಾಗಬಹುದು.

– ದೇಹದ ಆಸಿಡ್ ಮಟ್ಟವು ನಿಯಂತ್ರಣದಲ್ಲಿರುವುದು ಅವಶ್ಯಕ. ಆದರೆ ಹಸಿ ಹಾಲನ್ನು ಸೇವಿಸಿದಾಗ ಅದು ನಿಯಂತ್ರಣದಲ್ಲಿರುವುದಿಲ್ಲ ಮತ್ತು ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚಾಗುತ್ತದೆ.

– ಕಚ್ಚಾ ಹಾಲು ಗಾಳಿಯ ಸಂಪರ್ಕಕ್ಕೆ ಬಂದ ತಕ್ಷಣ ಅದರಲ್ಲಿನ ಬ್ಯಾಕ್ಟೀರಿಯಾಗಳು ಬೆಳೆಯಲು ಪ್ರಾರಂಭಿಸುತ್ತವೆ. ಹೀಗಾಗಿಯೇ ಕಚ್ಚಾ ಹಾಲು ಬೇಗನೆ ಹಾಳಾಗುವುದು. ಅಂದರೆ ಇದರಲ್ಲಿರುವ ಬ್ಯಾಕ್ಟೀರಿಯಾಗಳು ಹಾಲನ್ನೇ ಹಾಳು ಮಾಡುವುದಾದರೆ, ಅದು ದೇಹ ಸೇರಿದರೆ ಇನ್ನು ಹಲವು ಅನಾರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಬಹುದು. ಈ ಎಲ್ಲಾ ಕಾರಣಗಳಿಂದ ಹಸಿ ಹಾಲಿನ ಸೇವನೆಯಿಂದ ದೂರವಿರಿ. ಅಷ್ಟೇ ಅಲ್ಲದೆ ಕಚ್ಚಾ ಹಾಲನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳಿವೆ ಎಂಬುದು ಕೂಡ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ