AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಈ ಹಣ್ಣುಗಳನ್ನು ಸೇವಿಸಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ

Health Tips In Kannada: ಕಿತ್ತಳೆಯಲ್ಲಿ ವಿಟಮಿನ್-ಸಿ ಜೊತೆಗೆ ಫೈಬರ್, ಥಯಾಮಿನ್ ಮತ್ತು ಪೊಟ್ಯಾಸಿಯಮ್ ಅಂಶಗಳು ಸಮೃದ್ಧವಾಗಿರುತ್ತದೆ.

Health Tips: ಈ ಹಣ್ಣುಗಳನ್ನು ಸೇವಿಸಿ, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಿ
Vitamin c
Follow us
TV9 Web
| Updated By: preethi shettigar

Updated on: Aug 06, 2021 | 8:01 AM

ಕೊರೋನಾ ವೈರಸ್​ನ ಮೂರನೇ ಅಲೆಯ ಆತಂಕ ಎದುರಾಗಿದೆ. ಈಗಾಗಲೇ ಕೇರಳ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಸೋಂಕಿತರ ಸಂಖ್ಯೆ ಕೂಡ ದಿಢೀರಣೆ ಹೆಚ್ಚಾಗಿದೆ. ಹೀಗಾಗಿ ಪ್ರತಿಯೊಬ್ಬರು ಹೆಚ್ಚಿನ ಸುರಕ್ಷತೆವಹಿಸುವುದು ಬಹಳ ಮುಖ್ಯ. ಅದರ ಜೊತೆಗೆ ರೋಗ ಬಾಧಿಸದಂತೆ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ವೈರಸ್​ ರೋಗಗಳಿಂದ ಪಾರಾಗಲು ಮುಖ್ಯವಾಗಿ ಮಾಡಬೇಕಿರುವುದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು. ಅದಕ್ಕಾಗಿ ಪ್ರತಿದಿನ ವ್ಯಾಯಾಮ ಮಾಡುವುದರ ಜೊತೆಗೆ ಆರೋಗ್ಯಕರ ಆಹಾರವನ್ನು ಸೇವಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ವಿಟಮಿನ್-ಸಿ ಸಮೃದ್ಧವಾಗಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುವುದು ಅತ್ಯಗತ್ಯ. ಇದರಿಂದ ಜನರು ಕಾಲೋಚಿತ ಸೋಂಕು ಮತ್ತು ವೈರಸ್ ದಾಳಿಯಿಂದ ತಪ್ಪಿಸಿಕೊಳ್ಳಬಹುದು. ಹಾಗಿದ್ರೆ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳಾವುವು ನೋಡೋಣ.

ಕಿತ್ತಳೆ: ಕಿತ್ತಳೆಯಲ್ಲಿ ವಿಟಮಿನ್-ಸಿ ಜೊತೆಗೆ ಫೈಬರ್, ಥಯಾಮಿನ್ ಮತ್ತು ಪೊಟ್ಯಾಸಿಯಮ್ ಅಂಶಗಳು ಸಮೃದ್ಧವಾಗಿರುತ್ತದೆ. ಅಲ್ಲದೆ, ಇದರ ಗ್ಲೈಸೆಮಿಕ್ ಸೂಚ್ಯಂಕ ಕೂಡ ಕಡಿಮೆ ಇರುತ್ತದೆ. ಅಂದರೆ ಮಧುಮೇಹ ಮತ್ತು ಬೊಜ್ಜು ಇರುವ ಜನರಿಗೆ ಇದು ತುಂಬಾ ಪ್ರಯೋಜನಕಾರಿ ಎಂದು ಹೇಳಬಹುದು.

ನಿಂಬೆ: ನಿಂಬೆಯಲ್ಲಿ ವಿಟಮಿನ್-ಸಿ ಮತ್ತು ಸಿಟ್ರಿಕ್ ಆಮ್ಲ ಸಮೃದ್ಧವಾಗಿರುತ್ತದೆ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದರಲ್ಲಿರುವ ಸಿಟ್ರಿಕ್ ಆಮ್ಲವು ದೇಹದ ಕೊಬ್ಬನ್ನು ಕಡಿಮೆ ಮಾಡುವಂತಹ ಕೆಲಸ ಮಾಡುತ್ತದೆ. ನಿಂಬೆ ರಸವನ್ನು ಸೇವಿಸುವುದರಿಂದ ದೇಹ ತೂಕವನ್ನು ಸಹ ಕಡಿಮೆ ಮಾಡಬಹುದು. ಹಾಗೆಯೇ ದೇಹವನ್ನು ಆರೋಗ್ಯವಾಗಿಡಲು, ಬೆಚ್ಚಗಿನ ನೀರಿನಲ್ಲಿ ನಿಂಬೆ ರಸ ಮತ್ತು ಜೇನುತುಪ್ಪವನ್ನು ಬೆರಸಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ನೆಲ್ಲಿಕಾಯಿ: ನೆಲ್ಲಿಕಾಯಿಯಲ್ಲಿ ವಿಟಮಿನ್-ಸಿ ಜೊತೆಗೆ ಉತ್ತಮ ಪ್ರಮಾಣದ ಐರನ್, ಫೋಲೇಟ್ ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ಆಯುರ್ವೇದದ ಪ್ರಕಾರ, ಇದು ವಾತ, ಪಿತ್ತ ಮತ್ತು ಕಫ ಎಂಬ ಮೂರು ವಿಧದ ಸಮಸ್ಯೆಗಳನ್ನು ದೂರ ಮಾಡುತ್ತವೆ.

ಪಪ್ಪಾಯಿ: ಪಪ್ಪಾಯಿ ಜೀರ್ಣ ಶಕ್ತಿಯನ್ನು ಬಲಪಡಿಸುತ್ತದೆ. ಇದರೊಂದಿಗೆ, ಪಪ್ಪಾಯಿಯನ್ನು ವಿಟಮಿನ್-ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಪಪ್ಪಾಯಿಯಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೇ, ಪಪ್ಪಾಯಿ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ರೋಗಗಳು ದೂರವಾಗುತ್ತವೆ.

ಪೇರಲೆ ಅಥವಾ ಸೀಬೆಕಾಯಿ: ಸೀಬೆಕಾಯಿಯಲ್ಲೂ ವಿಟಮಿನ್-ಸಿ ಯಿಂದ ಸಮೃದ್ಧವಾಗಿರುತ್ತವೆ. ಇದರ ಜೊತೆಗೆ ಫೈಬರ್ ಮತ್ತು ಪೊಟ್ಯಾಸಿಯಮ್ ನಂತಹ ಖನಿಜಾಂಶಗಳು ಈ ಹಣ್ಣಿನಲ್ಲಿದೆ. ಈ ಹಣ್ಣು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದಲ್ಲದೆ, ಅನೇಕ ರೋಗಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಜೊತೆಗೆ ದೇಹದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ.

ಕ್ಯಾಪ್ಸಿಕಂ: ಕ್ಯಾಪ್ಸಿಕಂ ಮೆಣಸಿನಲ್ಲೂ ವಿಟಮಿನ್ ಸಿ, ಇ ಮತ್ತು ಎ, ಫೈಬರ್ ಮತ್ತು ಫೋಲೇಟ್ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು ಕಂಡು ಬರುತ್ತವೆ. ಇದು ದೇಹದಲ್ಲಿನ ಫೋಲೇಟ್ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಾಗೆಯೇ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ. ಅದೇ ರೀತಿ ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದರಿಂದ ಅನೇಕ ರೋಗಳಿಂದ ಪಾರಾಗಬಹುದು.

ಇದನ್ನೂ ಓದಿ:-

Tokyo Olympics: ಒಲಿಂಪಿಕ್ಸ್​ನಲ್ಲಿ ವಿಶ್ವ ದಾಖಲೆ ಬರೆದ ಭಾರತ..!

Tokyo Olympics: ಪದಕ ಗೆಲ್ಲುತ್ತಿದ್ದಂತೆ ಟೀಮ್ ಇಂಡಿಯಾಗೆ ಕಾದಿತ್ತು ಸರ್​ಪ್ರೈಸ್..!