AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weight Loss Tips: ತೂಕ ಇಳಿಕೆಗೆ ಕಲ್ಲಂಗಡಿ ಬೀಜದಿಂದ ತಯಾರಿಸಿದ ಲಡ್ಡು ಸೇವಿಸಿ

ಚೀನಿಕಾಯಿ, ಕಲ್ಲಂಗಡಿ ಮತ್ತು ಅಗಸೆ ಬೀಜಗಳು ಇವುಗಳಲ್ಲಿ ಮುಖ್ಯವಾದವು. ಈ ಬೀಜಗಳಲ್ಲಿ ಹೆಚ್ಚಿನ ಫೈಬರ್ ಇರುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.

Weight Loss Tips: ತೂಕ ಇಳಿಕೆಗೆ ಕಲ್ಲಂಗಡಿ ಬೀಜದಿಂದ ತಯಾರಿಸಿದ ಲಡ್ಡು ಸೇವಿಸಿ
ಲಡ್ಡು
Follow us
TV9 Web
| Updated By: preethi shettigar

Updated on: Aug 09, 2021 | 8:53 AM

ಆಧುನಿಕ ಜಗತ್ತಿನಲ್ಲಿ ಅನೇಕ ಜನರು ಬೊಜ್ಜು ಮತ್ತು ಅತಿಯಾದ ದೇಹದ ತೂಕದಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಆಹಾರ ಪದ್ಧತಿ, ದೈಹಿಕ ಚಟುವಟಿಕೆಯ ಕೊರತೆ, ಜೀವನಶೈಲಿಯಲ್ಲಿನ ಬದಲಾವಣೆ ಇದಕ್ಕೆ ಕಾರಣವಾಗಬಹುದು. ತೂಕ ಹೆಚ್ಚಳದಿಂದ ಅನೇಕ ಸಮಸ್ಯೆಗಳು ಎದುರಾಗುತ್ತದೆ. ಹೀಗಾಗಿ ತೂಕ ಇಳಿಕೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಮತ್ತು ಪ್ರೋಟೀನ್, ಫೈಬರ್, ಕಾರ್ಬೋಹೈಡ್ರೇಟ್, ಖನಿಜಗಳು ಮತ್ತು ಇತರ ಪೋಷಕಾಂಶಗಳು ಅಧಿಕವಾಗಿರುವ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಾರೆ. ಅದಾಗ್ಯೂ ತ್ವರಿತ ತೂಕ ನಷ್ಟಕ್ಕೆ ತಜ್ಞರು ವಿವಿಧ ಬೀಜಗಳನ್ನು ಆಹಾರದಲ್ಲಿ ಸೇರಿಸಲು ಸೂಚಿಸುತ್ತಾರೆ. ಚೀನಿಕಾಯಿ, ಕಲ್ಲಂಗಡಿ ಮತ್ತು ಅಗಸೆ ಬೀಜಗಳು ಇವುಗಳಲ್ಲಿ ಮುಖ್ಯವಾದವು. ಈ ಬೀಜಗಳಲ್ಲಿ ಹೆಚ್ಚಿನ ಫೈಬರ್ ಇರುತ್ತದೆ. ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡುತ್ತದೆ.

ತೂಕ ಇಳಿಸಿಕೊಳ್ಳಲು ಬಯಸುವವರು ಈ ಬೀಜಗಳನ್ನು ಸ್ವಲ್ಪ ಬೆಲ್ಲದೊಂದಿಗೆ ಬೆರೆಸಿ ಲಡ್ಡು ರೀತಿಯಾಗಿ ಮಾಡಿ ತಿನ್ನಬೇಕು. ಈ ಲಡ್ಡು ತಿನ್ನುವುದರಿಂದ ನಿಮಗೆ ಹಸಿವಾಗುವುದಿಲ್ಲ. ತಜ್ಞರು ಹೇಳುವಂತೆ ಇವುಗಳಲ್ಲಿ ಕ್ಯಾಲೋರಿ ಅಂಶ ತುಂಬಾ ಕಡಿಮೆ ಮತ್ತು ಪ್ರಯೋಜನಗಳು ಅಧಿಕ. ಹಾಗಿದ್ದರೆ ಈ ಲಡ್ಡು ಹೇಗೆ ತಯಾರಿಸುವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು * ಚಿಯಾ ಬೀಜ 1 ಕಪ್ * ಚೀನಿಕಾಯಿ ಬೀಜ 1 ಕಪ್ * ಕಲ್ಲಂಗಡಿ ಬೀಜ 1 ಕಪ್ * ಅಗಸೆ ಬೀಜಗಳು 1 ಕಪ್ * ತುಪ್ಪ 1/2 ಕಪ್ * ಓಟ್ಸ್ 2 ಕಪ್ * ಬೆಲ್ಲ * ಡ್ರೈ ಫ್ರೂಟ್ಸ್

ಲಡ್ಡು ಹೇಗೆ ಮಾಡುವುದು ? ಮೊದಲು ಒಂದು ಪ್ಯಾನ್ ತೆಗೆದುಕೊಂಡು ಬಿಸಿ ಮಾಡಿ ನಂತರ ಚಿಯಾ, ಚೀನಿಕಾಯಿ, ಕಲ್ಲಂಗಡಿ, ಅಗಸೆ ಬೀಜಗಳನ್ನು ಹಾಕಿ ಹುರಿದಿಟ್ಟುಕೊಳ್ಳಿ. ಬಳಿಕ ಒಂದು ಪಾತ್ರೆಗೆ ತುಪ್ಪು ಹಾಕಿ ಅದು ಕಾದ ಮೇಲೆ ಓಟ್ಸ್ ಹಾಕಿ ಹುರಿಯಿರಿ. ಓಟ್ಸ್ ಚೆನ್ನಾಗಿ ಹುರಿದ ನಂತರ ಗೋಡಂಬಿ, ಒಣದ್ರಾಕ್ಷಿ ಮತ್ತು ಬೆಲ್ಲದ ಪುಡಿ ಸೇರಿಸಿ. ಬಳಿಕ ಹುರಿದ ಬೀಜಗಳನ್ನು ಹಾಕಿ, ನಂತರ ಮಿಶ್ರಣವನ್ನು ತಣ್ಣಗಾಗಲು ಬಿಡಿ. ಬಳಿಕ ಉಂಡೆ ಆಕಾರಕ್ಕೆ ಮಾಡಿಕೊಳ್ಳಿ.

ಹೀಗೆ ಸಿದ್ಧಪಡಿಸಿದ ಲಡ್ಡುವನ್ನು ಮುಂಜಾನೆ ಎರಡು ಮತ್ತು ಸಂಜೆ ಎರಡು ಸೇವಿಸಿ. ಆ ಮೂಲಕ ನೀವು ಸುಲಭವಾಗಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಈ ಲಡ್ಡುವಿನಲ್ಲಿ ಅಧಿಕ ಪ್ರೊಟೀನ್ ಮತ್ತು ಫೈಬರ್ ಇರುತ್ತದೆ.

ಇದನ್ನೂ ಓದಿ: Health Tips: ಮುಂಜಾನೆಯ ವಾಕಿಂಗ್ ತೂಕ ಇಳಿಕೆಗಷ್ಟೇ ಎಂಬ ಭ್ರಮೆಯಿಂದ ಹೊರ ಬನ್ನಿ; ನೀವು ಹಾಕುವ ಪ್ರತಿ ಹೆಜ್ಜೆ ಹಲವು ಆರೋಗ್ಯಕರ ಬದಲಾವಣೆಗೆ ಕಾರಣವಾಗುತ್ತದೆ

Weight Reduce Yoga: ತೂಕ ಇಳಿಸಲು ಈ ಐದು ಯೋಗಾಸನ ಮಾಡಿ