AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sleeping Tips: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಅಭ್ಯಾಸಗಳನ್ನು ಅನುಸರಿಸಿ

Health Tips: ದೀರ್ಘಕಾಲದ ನಿದ್ರಾಹೀನತೆಯು ಮಧುಮೇಹ ಮೆಲ್ಲಿಟಸ್, ಪಾರ್ಶ್ವವಾಯು, ಸ್ಥೂಲಕಾಯತೆ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.

Sleeping Tips: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಅಭ್ಯಾಸಗಳನ್ನು ಅನುಸರಿಸಿ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Aug 12, 2021 | 7:49 AM

Share

ಪ್ರತಿಯೊಬ್ಬರಿಗೂ ನಿದ್ರೆ ಬಹಳ ಮುಖ್ಯ. ಇಲ್ಲವಾದಲ್ಲಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧುನಿಕ ಜೀವನಶೈಲಿಯಲ್ಲಿ(Lifestyle) ಹೆಚ್ಚಿನ ಜನರು ಸಮಯಪಾಲನೆಯನ್ನು ಅನುಸರಿಸುವುದಿಲ್ಲ. ಹೀಗಾಗಿ ಊಟ ಮಾಡುವಾಗ ನಿದ್ರಿಸುವುದು (Sleeping) ಮತ್ತು ಮಲಗುವಾಗ ತಿನ್ನುವ ಅಭ್ಯಾಸ ಮಾಡಿಕೊಳ್ಳುತ್ತಾರೆ. ಪರಿಣಾಮವಾಗಿ, ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ.

ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ನಿದ್ರೆ ಅತ್ಯಗತ್ಯ. ಉದಾಹರಣೆಗೆ, ಮಗು 18-20 ಗಂಟೆಗಳ ಕಾಲ ಮಲಗಬೇಕು. 80 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಕೆಲವು ಗಂಟೆಗಳ ನಿದ್ರೆ ಮಾತ್ರ ಬೇಕಾಗುತ್ತದೆ. ಯುವಕರು ಮತ್ತು ವಯಸ್ಕರಿಗೆ 6 ರಿಂದ 8 ಗಂಟೆಗಳ ನಿದ್ರೆ ಬೇಕು. ದೀರ್ಘಕಾಲದ ನಿದ್ರಾಹೀನತೆಯು ಮಧುಮೇಹ ಮೆಲ್ಲಿಟಸ್, ಪಾರ್ಶ್ವವಾಯು, ಸ್ಥೂಲಕಾಯತೆ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.

ನಿದ್ರಾಹೀನತೆಯ ಕಾರಣಗಳು ದೈಹಿಕ ಅಥವಾ ಮಾನಸಿಕ ಸಮಸ್ಯೆಗಳು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗೆಯೇ ತಾಪಮಾನ, ಜೋರಾದ ಶಬ್ದಗಳು, ಸರಿಯಾದ ಬೆಳಕಿನ ಕೊರತೆಯು ನಿದ್ರೆಯ ತೊಂದರೆಗೆ ಕಾರಣವಾಗಬಹುದು. ಅತಿಯಾದ ಕೆಫೀನ್, ಉತ್ತೇಜಕ ಔಷಧಗಳು, ಧೂಮಪಾನ ಮತ್ತು ಮದ್ಯ ಸೇವನೆಯು ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ಆತಂಕ, ಅಸ್ವಸ್ಥತೆ, ಖಿನ್ನತೆ, ಮಾನಸಿಕ ಆರೋಗ್ಯ ಪರಿಸ್ಥಿತಿಗಳು, ನಿದ್ರಾಹೀನತೆಗೆ ಕಾರಣವಾಗಬಹುದು. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯಾ (ಓಎಸ್ಎ) ಎಂಬ ಅಸ್ವಸ್ಥತೆಯು ನಿದ್ರೆಗೆ ಅಡ್ಡಿಯಾಗಬಹುದು. ಇದು ಮುಖ್ಯವಾಗಿ ಸ್ಥೂಲಕಾಯದ ಜನರಲ್ಲಿ ಕಂಡುಬರುವ ಸಾಮಾನ್ಯ ಸ್ಥಿತಿಯಾಗಿದೆ. ಜೋರಾಗಿ ಗೊರಕೆ ಹೊಡೆಯುವುದು ಮತ್ತು ಉಸಿರಾಡಲು ಇದರಿಂದ ಕಷ್ಟವಾಗುತ್ತದೆ.

ಸರಿಯಾದ ನಿದ್ರೆಗಾಗಿ ಕೆಲವು ಅಭ್ಯಾಸಗಳನ್ನು ಅನುಸರಿಸಿ 1. ಹಗಲಿನ ನಿದ್ರೆಯನ್ನು ತಪ್ಪಿಸಬೇಕು. 2. ಸಂಜೆ 4 ಗಂಟೆಯ ನಂತರ ಕೆಫೀನ್ ತೆಗೆದುಕೊಳ್ಳಬೇಡಿ. 3. ಒಂದೇ ಸಮಯದಲ್ಲಿ ನಿದ್ರಿಸುವುದು ಮತ್ತು ಎಚ್ಚರಗೊಳ್ಳುವುದನ್ನು ಅಭ್ಯಾಸ ಮಾಡಿ. 4. ಮಲಗುವ ಕೋಣೆ ಪರಿಸರವು ನಿದ್ರೆಗೆ ಅನುಕೂಲಕರವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. 5. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ನಿಮ್ಮ ಜೀವನಶೈಲಿ ಬಗ್ಗೆ ಗಮನಹರಿಸಿ. 6. ಮಲಗುವ ಒಂದು ಗಂಟೆ ಮೊದಲು ಓದುವುದನ್ನು, ಧ್ಯಾನ ಮಾಡುವುದನ್ನು, ಸಂಗೀತ ಕೇಳುವುದನ್ನು ನಿಲ್ಲಿಸಿ. 7. ಮಲಗುವ ಸಮಯಕ್ಕೆ ಊಟ ಮಾಡುವುದನ್ನು ತಪ್ಪಿಸಿ. 8. ಮಲಗುವ ಸಮಯಕ್ಕೆ ಕನಿಷ್ಠ 2 ಗಂಟೆಗಳ ಮೊದಲು ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ತಪ್ಪಿಸಿ. 9. ನಿಯಮಿತವಾಗಿ ವ್ಯಾಯಾಮ ಮಾಡಿ. ಮಲಗುವ ಸಮಯಕ್ಕೆ 3 ಗಂಟೆಗಳ ಮೊದಲು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡಿ.

ಇದನ್ನೂ ಓದಿ: Types of Walking: ವಾಕಿಂಗ್​ನಲ್ಲಿ ಹಲವು ವಿಧಗಳಿವೆ; ನಿಮ್ಮ ಆರೋಗ್ಯಕ್ಕೆ ಯಾವ ನಡಿಗೆ ಸೂಕ್ತ ತಿಳಿಯಿರಿ

Left Side Sleeping: ಎಡಭಾಗಕ್ಕೆ ತಿರುಗಿ ಮಲಗುವುದು ನಮ್ಮ ಆರೋಗ್ಯಕ್ಕೆ ಎಷ್ಟು ಮುಖ್ಯ?

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ