ರಾಕೇಶ್ ಪೂಜಾರಿ ತಂಗಿ ವಿಚಾರದಲ್ಲಿ ದೊಡ್ಡ ನಿರ್ಧಾರ ತೆಗೆದುಕೊಂಡ ‘ಕಾಮಿಡಿ ಕಿಲಾಡಿಗಳು’ ಟೀಂ
‘ಕಾಮಿಡಿ ಕಿಲಾಡಿಗಳು ಸೀಸನ್ 3’ ಶೋನ ವಿನ್ನರ್ ಆಗಿದ್ದರು ರಾಕೇಶ್ ಪೂಜಾರಿ ಅವರು ನಿಧನ ಹೊಂದಿರೋದು ನಿಜಕ್ಕೂ ಶಾಕಿಂಗ್ ವಿಚಾರ. ಈ ತಂಡದ ಅನೇಕರಿಗೆ ಈ ವಿಚಾರ ನಿಜಕ್ಕೂ ಶಾಕ್ ತಂದಿದೆ. ಈಗ ಅವರು ಒಂದು ವಿಚಾರದ ಬಗ್ಗೆ ಮಾತನಾಡಿದ್ದಾರೆ .
ರಾಕೇಶ್ ಪೂಜಾರಿ (Rakesh Poojary) ನಿಧನ ಹೊಂದಿದ್ದಾರೆ. ತಂಗಿ ಮದುವೆ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಈ ಕನಸನ್ನು ನನಸು ಮಾಡಲು ‘ಕಾಮಿಡಿ ಕಿಲಾಡಿಗಳು’ ಟೀಂ ರೆಡಿ ಆಗಿದೆ. ಈ ಬಗ್ಗೆ ಮಾಸ್ಟರ್ ಆನಂದ್ ಮಾತನಾಡಿದ್ದಾರೆ. ‘ರಾಕೇಶ್ ಟೆಡ್ಡಿಬೇರ್ ತರಹ ಇದ್ದ. ಎಲ್ಲರಿಗೂ ಇಷ್ಟ ಆಗ್ತಿದ್ದ. ನಿನ್ನೆ ಎಲ್ಲೋ ಖುಷಿಯಾಗಿ ಇದ್ದೆವು. ಆದರೆ, ಈಗ ಈಗ ದುಃಖದಲ್ಲಿ ನಿಂತಿದ್ದೇವೆ. ಒಳ್ಳೊಳ್ಳೆಯ ಆಫರ್ ಬರುತ್ತಾ ಇತ್ತು. ಒಳ್ಳೊಳ್ಳೆಯ ಸಿನಿಮಾ ಮಾಡ್ತಾ ಇದ್ದ. ತಂಗಿ ಮದುವೆ ಮಾಡಬೇಕು ಎಂಬುದು ಕನಸಾಗಿತ್ತು. ಅದನ್ನು ನಾವು ಮಾಡುತ್ತೇವೆ. ಕೈಲಾಸ ತಂದು ಇಟ್ಟರೂ ಅವನ ತಂಗಿಗೆ ಖುಷಿ ಆಗೋದಿಲ್ಲ. ಅಣ್ಣ ಇಲ್ಲ ಎಂಬ ನೋವು ಸದಾ ಇರುತ್ತದೆ. ಆದರೆ, ನಮ್ಮ ಕೈಲಾದದ್ದನ್ನು ಮಾಡುತ್ತೇವೆ. ಅವನು ಅಲ್ಲಿಂದ ಹರಸಲಿ ಎಂಬ ನಿಟ್ಟಲ್ಲಿ ಮಾಡಬೇಕು’ ಎಂದಿದ್ದಾರೆ ಆನಂದ್. ಮಾಸ್ಟರ್ ಆನಂದ್ ಅವರು ಈ ಮೊದಲು ‘ಕಾಮಿಡಿ ಕಿಲಾಡಿಗಳು’ ಶೋಗೆ ನಿರೂಪಕರಾಗಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

