ದಿಢೀರನೆ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿದ ಬಿಜೆಪಿ ನಾಯಕ ಜಿಎಂ ಸಿದ್ದೇಶ್ವರ
ಸಿದ್ದೇಶ್ವರ ಅವರು 72-ವರ್ಷ ವಯಸ್ಸಿನ ಹಿರಿಯ ರಾಜಕಾರಣಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿ ಅವರ ಪತ್ನಿ ಜಿಎಸ್ ಗಾಯತ್ರಿ ಅವರಿಗೆ ನೀಡಿತ್ತು. ಆದರೆ ಗಾಯತ್ರಿ ಕಾಂಗ್ರೆಸ್ ಪಕ್ಷದ ಪ್ರಭಾ ಮಲ್ಲಿಕಾರ್ಜುನ ವಿರುದ್ಧ ಸೋತರು. ಪ್ರಾಯಶಃ ತಮಗೆ ಟಿಕೆಟ್ ಸಿಗದಂತೆ ಮಾಡಿದ್ದಕ್ಕೆ ಸಿದ್ದೇಶ್ವರ ಅವರಿಗೆ ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರ ಮೇಲೆ ಕೋಪವಿರಬಹುದು.
ಬೆಂಗಳೂರು, ಮೇ 13: ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕಡೆ ಕಳೆದ ಮೂರು ವಾರಗಳಿಂದ ಯಾರ ಗಮನವೂ ಇರಲಿಲ್ಲ. ಎಲ್ಲರ ಗಮನ ಉಗ್ರರ ದಾಳಿ, ಪಾಕಿಸ್ತಾನದ ಮೇಲೆ ಆಕ್ರಮಣ ಮತ್ತು ಕದನವಿರಾಮ ಘೋಷಣೆ ಮೇಲಿತ್ತು. ಬಿಜೆಪಿ ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಜಿಎಂ ಸಿದ್ದೇಶ್ವರ ಇಂದು ದಿಢೀರನೆ ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಭೇಟಿಗೆ ಆಗಮಿಸಿದರು. ಅವರು ಕಾರಿಂದ ಇಳಿದು ಶಿವಕುಮಾರ್ ಮನೆ ಪ್ರವೇಶಿಸುವುದನ್ನು ದೃಶ್ಯಗಳಲ್ಲಿ ನೋಡಬಹುದು. ಅವರ ಭೇಟಿಯ ಉದ್ದೇಶ ಏನು ಅಂತ ಗೊತ್ತಾಗಿಲ್ಲ, ಅವರು ಇಲ್ಲವೇ ಶಿವಕುಮಾರ್ ಬೆಳಕು ಚೆಲ್ಲಬೇಕು.
ಇದನ್ನೂ ಓದಿ: ಡಿಕೆ ಶಿವಕುಮಾರ್ ಛತ್ರಿ ಹೇಳಿಕೆ ವಿರುದ್ಧ ಮಂಡ್ಯದಲ್ಲಿ ವಿವಿಧ ಸಂಘಟನೆಗಳಿಂದ ಛತ್ರಿ ಹಿಡಿದು ಪ್ರತಿಭಟನೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos

ಕುಮಾರಸ್ವಾಮಿಯವರು ಚೆನ್ನಾಗಿರಲಿ, ಆರೋಗ್ಯವಾಗಿರಲಿ: ಶಿವಕುಮಾರ್

6,6,6,6,6:: ಬಿರುಗಾಳಿ ಬ್ಯಾಟಿಂಗ್ನೊಂದಿಗೆ ಪಂದ್ಯ ಗೆಲ್ಲಿಸಿದ ಬೌಲರ್..!

‘ಎಸ್ಪಿಬಿ ರೀತಿಯೇ ಮತ್ತೋರ್ವ ಗಾಯಕನಿದ್ದಾನೆ ಎಂದರು..’; ಜಗ್ಗೇಶ್

ವೆಸ್ಟ್ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
