Types of Walking: ವಾಕಿಂಗ್​ನಲ್ಲಿ ಹಲವು ವಿಧಗಳಿವೆ; ನಿಮ್ಮ ಆರೋಗ್ಯಕ್ಕೆ ಯಾವ ನಡಿಗೆ ಸೂಕ್ತ ತಿಳಿಯಿರಿ

Health Benefits: ದೈಹಿಕ ಚಟುವಟಿಕೆ ಎಂದ ಕೂಡಲೇ ಮೊದಲು ನೆನಪಾಗುವುದು ನಡಿಗೆ ಅಥವಾ ವಾಕಿಂಗ್. ನಡಿಗೆಗೆ ಮೊದಲು ಶಾಂತ ಮನಸ್ಥಿತಿ ಇರಬೇಕು ಮತ್ತು ತಮ್ಮ ನೆಚ್ಚಿನ ಹಾಡುಗಳನ್ನು ಕೇಳಬೇಕು ಎನ್ನುವುದು ಹಲವರ ಅಭಿಪ್ರಾಯ.

Types of Walking: ವಾಕಿಂಗ್​ನಲ್ಲಿ ಹಲವು ವಿಧಗಳಿವೆ; ನಿಮ್ಮ ಆರೋಗ್ಯಕ್ಕೆ ಯಾವ ನಡಿಗೆ ಸೂಕ್ತ ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 11, 2021 | 7:56 AM

ಜಗತ್ತಿನಾದ್ಯಂತ ಗಮನಿಸಿದರೆ ಮನುಷ್ಯನ ಜೀವನದಲ್ಲಿ ಹಲವು ಬದಲಾವಣೆಗಳಾಗಿವೆ. ಪರಿಣಾಮವಾಗಿ, ಅನೇಕರು ಜೀವನಶೈಲಿ ಮತ್ತು ವಿವಿಧ ಅಭ್ಯಾಸಗಳಿಂದ ತಮ್ಮನ್ನು ತಾವು ಕಷ್ಟದ ದಾರಿಗೆ ಸಿಲುಕಿಸುತ್ತಿದ್ದಾರೆ. ಹೀಗಾಗಿ ತಜ್ಞರು ಆರೋಗ್ಯದ ಹಿತದೃಷ್ಟಿಯಿಂದ ಅನೇಕ ಸಲಹೆಗಳನ್ನು ನೀಡಿದ್ದಾರೆ. ಆದರೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ದೀರ್ಘಕಾಲದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವಿಧಾನವನ್ನು ವೈದ್ಯರು ಸದ್ಯ ಬದಲಾಯಿಸಿದ್ದಾರೆ. ಇದಕ್ಕೆ ಕಾರಣ ಆಹಾರ ಪದ್ಧತಿಗೆ ಸಂಬಂಧಿಸಿದಂತೆ ಅನೇಕ ಸಲಹೆಗಳನ್ನು ನೀಡಿದರೂ, ಅದನ್ನು ಜನರು ಅಷ್ಟಾಗಿ ಅನುಸರಿಸುವುದಿಲ್ಲ. ಹೀಗಾಗಿ ದೈಹಿಕ ಚಟುವಟಿಕೆಗೆ ಹೆಚ್ಚು ಒತ್ತು ನೀಡಿದ್ದಾರೆ.

ದೈಹಿಕ ಚಟುವಟಿಕೆ ಎಂದ ಕೂಡಲೇ ಮೊದಲು ನೆನಪಾಗುವುದು ನಡಿಗೆ ಅಥವಾ ವಾಕಿಂಗ್. ನಡಿಗೆಗೆ ಮೊದಲು ಶಾಂತ ಮನಸ್ಥಿತಿ ಇರಬೇಕು ಮತ್ತು ತಮ್ಮ ನೆಚ್ಚಿನ ಹಾಡುಗಳನ್ನು ಕೇಳಬೇಕು ಎನ್ನುವುದು ಹಲವರ ಅಭಿಪ್ರಾಯ. ಕೆಲವರಿಗೆ ವಾಕಿಂಗ್ ಇಷ್ಟವಾದರೆ ಇನ್ನು ಕೆಲವರು ಜಿಮ್‌ಗೆ ಹೋಗಲು ಬಯಸುತ್ತಾರೆ. ಆದರೆ ನಾವು ಮಾಡುವ ವಾಕಿಂಗ್ ಹೆಚ್ಚು ಸೂಕ್ತ. ವಾಕಿಂಗ್​ನಲ್ಲಿ ಅನೇಕ ವಿಧಗಳಿವೆ. ಅವುಗಳು ಯಾವುದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ವೇಗವಾದ ನಡಿಗೆ ಸಾಮಾನ್ಯವಾಗಿ ನಡೆಯುವುದಕ್ಕಿಂತ ಸ್ವಲ್ಪ ವೇಗವಾಗಿ ನಡೆಯುವುದನ್ನು ಇದು ಸೂಚಿಸುತ್ತದೆ. ವೇಗವಾದ ನಡಿಗೆ ಎಂದರೆ ಗಂಟೆಗೆ 5 ಕಿಲೋಮೀಟರ್. ನಾವು ನಿತ್ಯ ವಾಕಿಂಗ್ ಮಾಡಬೇಕು ಎನ್ನುವವರು ಈ ವಿಧಾನವನ್ನು ಅನುಸರಿಸುವುದು ಸೂಕ್ತ.

ಶಕ್ತಿಯುತವಾದ ನಡಿಗೆ ವೇಗವಾದ ನಡಿಗೆ ಗಂಟೆಗೆ 5 ಕಿಲೋಮೀಟರ್ ಆದರೆ ಶಕ್ತಿಯುತ ನಡಿಗೆ ಗಂಟೆಗೆ 7 ರಿಂದ 9 ಕಿಲೋಮೀಟರ್ ನಡಿಗೆಯನ್ನು ಸೂಚಿಸುತ್ತದೆ. ಹೆಚ್ಚು ತೂಕ ಇರುವವರು ಈ ವಿಧಾನ ಅನುಸರಿಸಿ.

ಓಟದ ನಡಿಗೆ ಓಟದ ನಡಿಗೆ ಕ್ರೀಡಾಪಟುಗಳಿಗೆ ಹೆಚ್ಚು ಸೂಕ್ತ. ದೇಹದ ಮೇಲೆ ತೀವ್ರ ಒತ್ತಡವಿರುವವರು, ತೂಕ ಇಳಿಕೆಯ ಪ್ರಯತ್ನದಲ್ಲಿರುವವರು ಈ ವಿಧಾನದ ಮೊರೆ ಹೋಗಬಹುದು.

ಮ್ಯಾರಥಾನ್ ನಡಿಗೆ ಈ ವಿಧಾನ ದಿನದಿಂದ ದಿನಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಪ್ರಪಂಚದಾದ್ಯಂತ ಅನೇಕ ಮ್ಯಾರಥಾನ್​ಗಳು ಜನರಿಗಾಗಿ ತೆರೆದುಕೊಳ್ಳುತ್ತಿವೆ. ಕೆಲವು ಮ್ಯಾರಥಾನ್​ಗಳನ್ನು ನಿರ್ದಿಷ್ಟವಾಗಿ ಉತ್ತಮ ಆರೋಗ್ಯಕ್ಕಾಗಿ ವಿನ್ಯಾಸಗೊಳಿಸಲಾಗಿರುತ್ತದೆ

ಚಿ ನಡಿಗೆ ಚಿ ಒಂದು ಚೀನಿ ಪದ. ಇದು ದೇಹಕ್ಕೆ ಹೆಚ್ಚು ಚೈತನ್ಯ ನೀಡುತ್ತದೆ. ಕೈ ಬೀಸಿ ನಡಿಗೆ ಶುರು ಮಾಡುವುದನ್ನು ಇದು ಸೂಚಿಸುತ್ತದೆ.

ನಾರ್ಡಿಕ್ ನಡಿಗೆ ಇದನ್ನು ತರಬೇತಿ ರೂಪದಲ್ಲಿ ನೀಡಲಾಗುತ್ತದೆ. ಬರಿಕಾಲಿನಲ್ಲಿ ಈ ವಾಕಿಂಗ್ ಮಾಡಲಾಗುತ್ತದೆ. ಕೆಲವರು ವಾಕಿಂಗ್ ಸ್ಟಿಕ್ ಹಿಡಿದು ಇದನ್ನು ಮಾಡುತ್ತಾರೆ. ಮನುಷ್ಯನ ಜೀವನಶೈಲಿಯಲ್ಲಿನ ಬದಲಾವಣೆಯ ಜತೆಗೆ ದೈಹಿಕ ಸಾಮರ್ಥ್ಯದ ಬೆಳವಣಿಗೆಗೆ ಸಹಕಾರಿಯಾಗಿದೆ. ಒಟ್ಟಾರೆ ಮುನುಷ್ಯ ಸೋಮಾರಿತನವನ್ನು ಬಿಟ್ಟು ಆರೋಗ್ಯಯುತವಾಗಿರಬೇಕು ಎನ್ನುವುದು ನಡಿಗೆಯ ಮೂಲ ಉದ್ದೇಶ.

ಇದನ್ನೂ ಓದಿ: Health Benefits: ದಿನಕ್ಕೆ ಒಂದು ಬಾರಿಯಾದರೂ ಬರಿಗಾಲಿನಲ್ಲಿ ನಡೆಯಿರಿ; ಕಾಲಿಗೆ ತಾಗುವ ಮಣ್ಣು ಸ್ನಾಯುವನ್ನು ಬಲಪಡಿಸುತ್ತದೆ

Walking Benefits: ಮನೆಯಂಗಳದಲ್ಲೇ ವಾಕಿಂಗ್​ ಮಾಡಿ; ಅನಗತ್ಯ ಚಿಂತೆಯಿಂದ ದೂರವಿರಿ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಒಡೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ