AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Soil Day 2025: ಮಣ್ಣಿನ ಸಂರಕ್ಷಣೆ ಎಲ್ಲರ ಹೊಣೆ

ಪರಿಸರ ವ್ಯವಸ್ಥೆ ಮತ್ತು ಸಕಲ ಜೀವರಾಶಿಗಳ ಯೋಗಕ್ಷೇಮಕ್ಕೆ ಮಣ್ಣು ಪ್ರಮುಖ ಅಡಿಪಾಯವಾಗಿದೆ. ಹೀಗೆ ಈ ಮಣ್ಣಿನ ಅಮೂಲ್ಯವಾದ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ಮಣ್ಣಿನ ಮಾಲಿನ್ಯವನ್ನು ತಡೆಗಟ್ಟಲು, ಮಣ್ಣು ಹಾಗೂ ಮಣ್ಣಿನ ಆರೋಗ್ಯವನ್ನು ಸಂರಕ್ಷಿಸಲು ಡಿಸೆಂಬರ್‌ 05 ರಂದು ವಿಶ್ವ ಮಣ್ಣು ದಿನವನ್ನು ಆಚರಿಸಲಾಗುತ್ತದೆ.

World Soil Day 2025: ಮಣ್ಣಿನ  ಸಂರಕ್ಷಣೆ ಎಲ್ಲರ ಹೊಣೆ
ವಿಶ್ವ ಮಣ್ಣು ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on: Dec 05, 2025 | 9:51 AM

Share

ನೀರು, ಶುದ್ಧ ಗಾಳಿಯಂತೆ ಭೂಮಿ ಮೇಲಿನ ಜೀವ ಸಂಕುಲದ ಉಳಿವಿಗೆ ಮಣ್ಣು (Soil) ಅತೀ ಅವಶ್ಯಕ. ಹೌದು ಮಣ್ಣಿಲ್ಲದೆ ಬದುಕಿಲ್ಲ ಭವಿಷ್ಯವೂ ಇಲ್ಲ. ಆದರೆ ಇಂದು ರಾಸಾಯನಿಕ ಕೀಟನಾಶಕಗಳ ಅತಿಯಾದ ಬಳಕೆ, ಮಾಲಿನ್ಯ, ಕಾಡುಗಳ ನಾಶದಿಂದಾಗಿ ಮಣ್ಣಿನ ಫಲವತ್ತತೆಯು ದಿನದಿಂದ ದಿನಕ್ಕೆ ಕುಸಿದು ಹೋಗುತ್ತಿದೆ.  ಹಾಗಾಗಿ  ಆಹಾರ ಭದ್ರತೆ ಮತ್ತು ನಮ್ಮ ಸುಸ್ಥಿರ ಭವಿಷ್ಯವನ್ನು ಕಾಪಾಡಿಕೊಳ್ಳಲು ಮಣ್ಣು ಹಾಗೂ ಮಣ್ಣಿನ ಆರೋಗ್ಯ ಸಂರಕ್ಷಣೆ ಮಾಡುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಮಣ್ಣಿನ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು  ಪ್ರತಿ ವರ್ಷ ಡಿಸೆಂಬರ್ 05 ರಂದು ವಿಶ್ವ ಮಣ್ಣಿನ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಮಣ್ಣು ದಿನದ ಇತಿಹಾಸವೇನು?

2002 ನೇ ಇಸವಿಯಲ್ಲಿ ಇಂಟರ್ನ್ಯಾಷನಲ್ ಯೂನಿಯನ್ ಆಫ್ ಸಾಯಿಲ್ ಸೈನ್ಸ್ (IUSS) ಒಕ್ಕೂಟವು  ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಮತ್ತು ಮಣ್ಣಿನ ಸವೆತವನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸಲು ಡಿಸೆಂಬರ್ 05 ರಂದು ವಿಶ್ವ  ಮಣ್ಣಿನ ದಿನವನ್ನು ಆಚರಿಸುವ ಪ್ರಸ್ತಾಪವನ್ನು ಮಾಡಿತು. ಇದರ ನಂತರ 2013 ರಲ್ಲಿ, ಆಹಾರ ಮತ್ತು ಕೃಷಿ ಸಂಸ್ಥೆ (FAO) ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 68 ನೇ  ಸಮ್ಮೇಳನದಲ್ಲಿ ವಿಶ್ವ ಮಟ್ಟದಲ್ಲಿ ಮಣ್ಣಿನ ದಿನವನ್ನು ಆಚರಿಸಬೇಕೆನ್ನುವ ಪ್ರಸ್ತಾಪವನ್ನು ಸಲ್ಲಿಸಿತು.  ಮತ್ತು ಈ ಸಭೆಯಲ್ಲಿ ಸರ್ವಾನುಮತದಿಂದ ಈ ವಿಶೇಷ ದಿನವನ್ನು ಆಚರಿಸಲು ಒಪ್ಪಿಗೆಯನ್ನು ಸೂಚಿಸಲಾಯಿತು. ಇದರ ಫಲವಾಗಿ 2014, ಡಿಸೆಂಬರ್ 05 ರಂದು ಮೊದಲ ಬಾರಿಗೆ  ಮಣ್ಣು ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು.

ಇದನ್ನೂ ಓದಿ: ಡಿಸೆಂಬರ್‌ 4 ರಂದೇ ಏಕೆ ಭಾರತೀಯ ನೌಕಾಪಡೆ ದಿನವನ್ನು ಆಚರಿಸಲಾಗುವುದು ಗೊತ್ತಾ?

ವಿಶ್ವ ಮಣ್ಣು ದಿನದ ಮಹತ್ವವೇನು?

  • ಈ ದಿನವನ್ನು ಆಚರಿಸುವ ಉದ್ದೇಶವು ಮಣ್ಣಿನ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ.
  • ಇಂದು ರಾಸಯನಿಕ ಗೊಬ್ಬರಗಳ ಅತಿಯಾದ ಬಳಕೆ, ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇತ್ಯಾದಿ ಮಾಲಿನ್ಯದ  ಕಾರಣದಿಂದಾಗಿ ಮಣ್ಣಿನ ಫಲವತ್ತತೆಯು ಕ್ಷೀಣಿಸುತ್ತಿದೆ.  ಅಷ್ಟು ಮಾತ್ರವಲ್ಲದೆ ಕಾಡುಗಳ ನಾಶದಿಂದಾಗಿ ಪ್ರವಾಹ, ಭಾರಿ ಮಳೆಯ ಸಂದರ್ಭದಲ್ಲಿ ಮಣ್ಣಿನ ಸವೆತವೂ ಹೆಚ್ಚಾಗುತ್ತಿದೆ. ಹೀಗಾಗಿ ಸುಸ್ಥಿರ ಭವಿಷ್ಯಕ್ಕಾಗಿ ಮಣ್ಣಿನ ಸಂರಕ್ಷಣೆ ಎಷ್ಟು ಮುಖ್ಯ ಎಂಬ ಬಗ್ಗೆ  ಜಾಗೃತಿ ಮೂಡಿಸುವುದು  ಈ ವಿಶೇಷ ಆಚರಣೆಯ ಮುಖ್ಯ ಉದ್ದೇಶವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ