ಆನೆ, ಮಲಯಾಳಿಗಳ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ; ಕೇರಳದ ಆನೆ ನಂಟಿನ ಹೊರಳುನೋಟ

World Elephant Day 2021: ಆನೆಗಳ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಇಲ್ಲಿನ ದೇವಾಲಯಗಳ ಹಬ್ಬಗಳೂ ಅಪೂರ್ಣ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ತ್ರಿಶೂರ್ ಪೂರಂ ಮತ್ತು ಆರಾಟ್ಟುಪುಳ ಪೂರಂ. ಈ ದೇವಾಲಯದ ಉತ್ಸವಗಳಲ್ಲಿ ಆನೆಗಳು ಸಾಂಪ್ರದಾಯಿಕವಾಗಿ ಮಹತ್ವದ ಪಾತ್ರವನ್ನು ವಹಿಸಿವೆ.

ಆನೆ, ಮಲಯಾಳಿಗಳ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗ; ಕೇರಳದ ಆನೆ ನಂಟಿನ ಹೊರಳುನೋಟ
ತ್ರಿಶ್ಶೂರ್ ಪೂರಂನ ಚಿತ್ರ (ಸಂಗ್ರಹ ಚಿತ್ರ)
Follow us
ರಶ್ಮಿ ಕಲ್ಲಕಟ್ಟ
| Updated By: Skanda

Updated on: Aug 12, 2021 | 8:04 AM

ದೇವರ ಸ್ವಂತ ನಾಡು ಕೇರಳದ ಜನರ ಸಾಂಸ್ಕೃತಿಕ ಬದುಕಿನ ಅವಿಭಾಜ್ಯ ಅಂಗವಾಗಿದೆ ಆನೆ. ಕೇರಳದ ರಾಜ್ಯ ಪ್ರಾಣಿ ಆನೆ. ಇಲ್ಲಿನ ಮನೆಗಳಲ್ಲಿ ಆನೆಯ ಚಿಕ್ಕ ಪ್ರತಿಮೆಗಳನ್ನಿರಿಸುವುದು ಸಾಮಾನ್ಯ. ಮನೆಯ ಅಲಂಕಾರಿಕ ವಸ್ತುಗಳಲ್ಲಿ ಆನೆಯ  ನೆತ್ತಿಪಟ್ಟಂ (ಹಣೆಮೇಲಿನ ಆಭರಣ), ವೆಂಚಾಮರಂ(ಚಾಮರ)ಗಳ ಹೋಲುವ ವಸ್ತುಗಳನ್ನು ಕಾಣಬಹುದು.  ಆನೆಗಳು ಇಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಮಾತ್ರ ಅಲ್ಲ ಜನಸಾಮಾನ್ಯರ ಬದುಕಿನ ಜತೆ ಬೆಸೆದುಕೊಂಡಿದೆ.

ಹಿಂದೂ ದೇವಾಲಯಗಳ ಹಬ್ಬಗಳಲ್ಲಿ ಅವರ ಉಪಸ್ಥಿತಿಯನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ರಾಜಕೀಯ ಮತ್ತು ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸಂದರ್ಭಗಳಲ್ಲಿಯೂ ಇನ್ನಿತರ ಧಾರ್ಮಿಕ ಪ್ರಚಾರಗಳಲ್ಲಿಯೂ ಆನೆಯನ್ನು ಬಳಸುವುದುಂಟು. ಪಾರಂಪರಿಕ ವಾದ್ಯವೃಂದವಾದ ಪಂಚವಾದ್ಯದ ಜೊತೆ ಸಿಂಗರಿಸಿಕೊಂಡ ಆನೆಗಳು ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುತ್ತದೆ. ಕೇರಳದ ಆನೆ ನಂಟಿನ ಬಗ್ಗೆ ವಿವರಿಸಬೇಕಾದರೆ ಕೆಲವೊಂದು ಪದಗಳ ಬಗ್ಗೆ ಹೇಳಲೇಬೇಕು|

ಆನ ಪ್ರಾಂದ್: ಕನ್ನಡಕ್ಕೆ ಅನುವಾದ ಮಾಡಿದರೆ ಆನೆ ಬಗ್ಗೆ ಹುಚ್ಚು. ಅಂದರೆ ಆನೆ ಬಗ್ಗೆ ಅತಿಯಾದ ಆಸಕ್ತಿಹೊಂದಿರುವವರು. ಆನೆಗಳ ಬಗ್ಗೆ ವಿಪರೀತ ಪ್ರೀತಿ ಹೊಂದಿರುವವರು ಇವರು. ಮಧ್ಯ ಕೇರಳ ವಿಶೇಷವಾಗಿ ತ್ರಿಶ್ಶೂರ್ ಜಿಲ್ಲೆಯಲ್ಲಿ ಇವರ ಸಂಖ್ಯೆ ಜಾಸ್ತಿ ಇರುತ್ತದೆ. ಆನೆಗಳ ಆರೈಕೆ, ಉತ್ಸವ ಯಾವುದೇ ಇರಲಿ ಇವರು ಅತ್ಯುತ್ಸಾಹಿಗಾಗಿರುತ್ತಾರೆ.

ಆನ ಚಂದಂ: ಆನೆಗೆ ವಿಶಿಷ್ಟವಾದ ಸೌಂದರ್ಯವಿದೆ. ಕೇರಳದ ಧಾರ್ಮಿಕ ಉತ್ಸವಗಳಲ್ಲಿ ಆನೆಯನ್ನು ಸಿಂಗರಿಸಿ ನಿಲ್ಲಿಸಲಾಗುತ್ತದೆ. ಆ ಸೌಂದರ್ಯ ಮನಮೋಹಕ, ಅದನ್ನೇ ಆನ ಚಂದಂ ಎನ್ನುತ್ತಾರೆ.

ಧಾರ್ಮಿಕ ಚಟುವಟಿಕೆಗಳಲ್ಲಿ ಆನೆ ಕೇರಳದಾದ್ಯಂತ ಧಾರ್ಮಿಕ ಚಟುವಟಿಕೆಗಳಲ್ಲಿ ಆನೆಗಳು ಇದ್ದೇ ಇರುತ್ತದೆ. ಇದಕ್ಕೆ ಉದಾಹರಣೆಯೆಂದರೆ ತ್ರಿಶೂರಿನ ವಡಕ್ಕುನಾಥನ್ (ಶಿವ) ದೇವಸ್ಥಾನದಲ್ಲಿ ಆನೆ ದೇವರು ಅಥವಾ ವಿಘ್ನೇಶ್ವರನಾದ ಗಣೇಶನನ್ನು ಪ್ರತಿಷ್ಠಾಪಿಸಲು ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮಹಾಗಜ ಪೂಜೆಯನ್ನು ನಡೆಸಲಾಗುತ್ತದೆ. ಇದರೊಂದಿಗೆ ಆನೆಯೂಟ್ಟು (ಆನೆಗಳಿಗೆ ವಿಧ್ಯುಕ್ತ ಆಹಾರ) ಬೆಲ್ಲದೊಂದಿಗೆ ಬೆರೆಸಿ ಬೇಯಿಸಿದ ಅನ್ನದ ದೊಡ್ಡ ಚೆಂಡುಗಳು, ತುಪ್ಪ, ಬಾಳೆಹಣ್ಣು ಮತ್ತು ಇತರ ರುಚಿಕರವಾದ ಭಕ್ಷ್ಯಗಳ ಭವ್ಯವಾದ ಔತಣವನ್ನು ನೀಡಲಾಗುತ್ತದೆ. ಕೇವಲ ಆನೆಯನ್ನು ಮುಟ್ಟಿದರೆ ಅದೃಷ್ಟ ಬರುತ್ತದೆ ಎಂದು ಸ್ಥಳೀಯರು ನಂಬುತ್ತಾರೆ. ಎಲ್ಲಾ ಪ್ರಮುಖ ದೇವಸ್ಥಾನಗಳು ಕನಿಷ್ಠ ಒಂದು ಆನೆಯನ್ನು ಹೊಂದಿರುತ್ತವೆ, ಏಕೆಂದರೆ ಅವು ದೇವಾಲಯದ ಆಚರಣೆಗಳ ಅವಿಭಾಜ್ಯ ಅಂಗವಾಗಿದೆ. ಮಸೀದಿಗಳು ಮತ್ತು ಚರ್ಚ್ ಗಳಲ್ಲಿಯೂ ಆನೆಗಳನ್ನು ಕರೆತರುವ ಆಚರಣೆಗಳು ಇಲ್ಲಿವೆ.

ಪರೆಯೆಡುಕ್ಕಲ್ ಆಚರಣೆ ಇನ್ನೂ ಕೆಲವಡೆ ಉಳಿದುಕೊಂಡಿದೆ. ಕೆಲವು ಕುಟುಂಬಗಳು ಮಂಗಳಕರ ದಿನಗಳಲ್ಲಿ ದೇವಾಲಯದ ಆನೆಯನ್ನು ತಮ್ಮ ಮನೆಗೆ ಆಹ್ವಾನಿಸಲಾಗುತ್ತದೆ.ಆನೆಯ ಮುಂದೆ  ಭತ್ತದ ಒಂದು ದೊಡ್ಡ ಪರ (ಭತ್ತ ಅಳೆಯುವ ಅಗಲವಾದ ಪಾತ್ರೆ) ಯನ್ನಿಟ್ಟು ಆನೆ ಅದರಿಂದ ಭತ್ತ ಎತ್ತಿಕೊಂಡು  ಸೊಂಡಿಲನ್ನು ಮೇಲಕ್ಕೆತ್ತಿ ಮನೆಯವರನ್ನು ಆಶೀರ್ವದಿಸುತ್ತದೆ.

ಆನೆಗಳ ಸಕ್ರಿಯ ಭಾಗವಹಿಸುವಿಕೆ ಇಲ್ಲದೆ ಇಲ್ಲಿನ ದೇವಾಲಯಗಳ ಹಬ್ಬಗಳೂ ಅಪೂರ್ಣ. ಅವುಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ತ್ರಿಶೂರ್ ಪೂರಂ ಮತ್ತು ಆರಾಟ್ಟುಪುಳ ಪೂರಂ. ಈ ದೇವಾಲಯದ ಉತ್ಸವಗಳಲ್ಲಿ ಆನೆಗಳು ಸಾಂಪ್ರದಾಯಿಕವಾಗಿ ಮಹತ್ವದ ಪಾತ್ರವನ್ನು ವಹಿಸಿವೆ. ಗುರುವಾಯೂರು ಕೇಶವನ್, ಪೂಮುಲ್ಲಿ ಶೇಖರನ್, ಚೆಂಗಲ್ಲೂರು ರಂಗನಾಥನ್, ತಿರುವಂಬಾಡಿ ಚಂದ್ರ ಶೇಖರನ್, ಪದ್ಮನಾಭನ್, ಪರಮೆಕ್ಕಾವು ಶ್ರೀ ಪರಮೇಶ್ವರನ್ ಮುಂತಾದ ದೈತ್ಯ ಆನೆಗಳ ನೆನಪುಗಳು ಅವುಗಳ ಸಾವಿನ ನಂತರವೂ ಜನರ ಹೃದಯದಲ್ಲಿ ಜೀವಂತವಾಗಿವೆ.

ಆದಾಗ್ಯೂ, ಅರಣ್ಯ ಇಲಾಖೆಯ 2018 ರ ಆನೆ ಗಣತಿಯ ಪ್ರಕಾರ, ಕೇರಳದಲ್ಲಿ 521 ಆನೆಗಳಿವೆ. ನಂತರದ 31 ಸಾವುಗಳಿಗೆ ದೈಹಿಕ ಮತ್ತು ಮಾನಸಿಕ ಹಿಂಸೆ, ಆಹಾರದ ಕೊರತೆ ಮತ್ತು ಸರಿಯಾದ ಆರೈಕೆ ಕೊರತೆ ಕಾರಣವೆಂದು ಹೇಳಲಾಗಿದೆ. ದೇವಾಲಯದ ಉತ್ಸವಗಳಲ್ಲಿ ಸುಡುವ ಬಿಸಿಲಿನಲ್ಲಿ ಆನೆಗಳು ಹಲವಾರು ಗಂಟೆಗಳ ಕಾಲ ನಿಲ್ಲುವುದರಿಂದ ಅವು ಸಂಧಿವಾತ, ಅಜೀರ್ಣ ಮತ್ತು ಗಾಯದ ಸೋಂಕಿನಿಂದ ಬಳಲುತ್ತವೆ. ಅವುಗಳಿಗೆ ಸರಿಯಾದ ವಿಶ್ರಾಂತಿ ಮತ್ತು ವ್ಯಾಯಾಮದಿಂದ ಅಗತ್ಯವಿದೆ. ಅದೇ ವೇಳೆ ಅವುಗಳನ್ನು ಪಳಗಿಸುವ ಪ್ರಯತ್ನದಲ್ಲಿ, ಮಾವುತರು ಕಬ್ಬಿಣದ ರಾಡ್‌ಗಳಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಅವರನ್ನು ಹೊಡೆದು ಆನೆಗಳಿಗೆ ನೋವುಂಟು ಮಾಡುತ್ತಾರೆ. ಆನೆ ನಿರ್ವಹಣೆ ನಿಯಮಗಳ ಪ್ರಕಾರ, ಭಾಗಶಃ ಕುರುಡು ಮತ್ತು ಗಾಯಗೊಂಡ ಆನೆಗಳಿಗೆ ಧಾರ್ಮಿಕ ಹಬ್ಬಗಳು ಮತ್ತು ಮೆರವಣಿಗೆಗಳಲ್ಲಿ ಭಾಗವಹಿಸಲು ಅನುಮತಿ ಇಲ್ಲ.

ಇದನ್ನೂ ಓದಿ:  Viral Video: ತನ್ನ ಸೊಂಡಿಲಿನ ಕೌಶಲ ಪ್ರದರ್ಶಿಸುತ್ತಾ ತುಂಟಾಟ ಮಾಡುತ್ತಿದೆ ಈ ಆನೆ ಮರಿ

(World Elephant day 2021 how elephants are integral part of the Kerala culture)

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ