Face Mask Tips: ಉಪಯೋಗಿಸಿ, ಕೊಳಕಾದ ಮಾಸ್ಕ್ ಅನ್ನೇ ಮತ್ತೆ ಹಾಕಿಕೊಳ್ಳುತ್ತೀರಾ?; ಅಪಾಯ ಖಂಡಿತ

Health Tips: ಸ್ವಚ್ಛವಾಗಿಲ್ಲದ ಮಾಸ್ಕ್ ಬಳಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

Face Mask Tips: ಉಪಯೋಗಿಸಿ, ಕೊಳಕಾದ ಮಾಸ್ಕ್ ಅನ್ನೇ ಮತ್ತೆ ಹಾಕಿಕೊಳ್ಳುತ್ತೀರಾ?; ಅಪಾಯ ಖಂಡಿತ
ಸಂಗ್ರಹ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Aug 12, 2021 | 1:28 PM

ಒಮ್ಮೆ ಬಳಸಿದ ಮಾಸ್ಕ್ ಅನ್ನೇ ಮತ್ತೆ ಮತ್ತೆ ಬಳಸುವ ಅಭ್ಯಾಸ ನಿಮಗಿದೆಯೇ? ಕಾಟನ್ ಮಾಸ್ಕ್ ಅನ್ನು ತೊಳೆಯದೆ ಪುನಃ ಪುನಃ ಬಳಸುತ್ತೀರಾ? ಹಾಗಾದರೆ ಇನ್ನು ಮುಂದೆ ಆ ರೀತಿಯ ಅಭ್ಯಾಸ ಇಟ್ಟುಕೊಳ್ಳಬೇಡಿ. ಸ್ವಚ್ಛವಾಗಿಲ್ಲದ, ತೊಳೆಯದ ಮಾಸ್ಕ್ ಬಳಸುವುದರಿಂದ ಇನ್ನಷ್ಟು ಅಪಾಯವನ್ನು ನೀವು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಯಿದೆ. ಹೀಗಾಗಿ, ಮಾಸ್ಕ್ ಕಡ್ಡಾಯವೆಂಬ ಕಾರಣಕ್ಕೆ ಕಾಟಾಚಾರಕ್ಕೆ ಮೂಗಿನ ಮೇಲೊಂದು ಮಾಸ್ಕ್ ಇಟ್ಟುಕೊಂಡು ಹೋಗುವ ಮುನ್ನ ಅದು ಎಷ್ಟು ಕ್ಲೀನ್ ಆಗಿದೆ ಎಂಬುದರತ್ತ ಗಮನಹರಿಸಿ.

ಸ್ವಚ್ಛವಾಗಿಲ್ಲದ ಮಾಸ್ಕ್ ಬಳಸುವುದರಿಂದ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಳಗ್ಗೆಯಿಂದ ಸಂಜೆಯವರೆಗೂ ಮಾಸ್ಕ್ ಧರಿಸಿದಾಗ ನಮ್ಮ ಉಸಿರಾಟದಿಂದ ಬೆವರು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಅದಕ್ಕೆ ಅಂಟಿಕೊಂಡಿರುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ, ಕಾಟನ್ ಮಾಸ್ಕ್ ಅನ್ನು ಸ್ವಚ್ಛವಾಗಿ ತೊಳೆದ ಬಳಿಕ ಮರುಬಳಕೆ ಮಾಡುವುದು ಬಹಳ ಮುಖ್ಯ. ಹಾಗೇ, ಒಂದೇ ಯೂಸ್​ ಆ್ಯಂಡ್ ಥ್ರೋ ಮಾಸ್ಕ್ ಅನ್ನು ಪದೇಪದೆ ಬಳಸುವುದು ಕೂಡ ಅಪಾಯಕಾರಿ. ಮಾಸ್ಕ್ ಶುಚಿಯಾಗಿರಲಿದ್ದರೆ ಕೆಲವು ಅಡ್ಡ ಪರಿಣಾಮಗಳು ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ.

ದೀರ್ಘಕಾಲದವರೆಗೆ ಮಾಸ್ಕ್ ಧರಿಸುವ ಕೆಲವರಿಗೆ ಚರ್ಮದ ಅಲರ್ಜಿ ಉಂಟಾಗುವ ಸಾಧ್ಯತೆಗಳಿರುತ್ತವೆ. ಬಾಯಿ, ಮೂಗಿನ ಸುತ್ತಮುತ್ತ ಮೊಡವೆಗಳು ಏಳುವ ಸಾಧ್ಯತೆಗಳೂ ಇವೆ. ಇಡೀ ದಿನ ಮಾಸ್ಕ್ ಧರಿಸುವುದರಿಂದ ಆ ಭಾಗದ ಚರ್ಮದಲ್ಲಿ ಬೆವರು ಉಂಟಾಗಿ, ಅಲರ್ಜಿ ಉಂಟಾಗುತ್ತದೆ. ಆ ಬೆವರಿರುವ ಮಾಸ್ಕ್ ಅನ್ನು ತೊಳೆಯದೆ ಪುನಃ ಬಳಸುವುದರಿಂದಲೂ ಚರ್ಮ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಒಂದೇ ಮಾಸ್ಕ್ ಅನ್ನು ಪುನಃ ಪುನಃ ಬಳಸುವುದರಿಂದ ಸೋಂಕು ಹೆಚ್ಚಾಗುವ ಸಾಧ್ಯತೆಯೂ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮಾಸ್ಕ್​ನಲ್ಲಿರುವ ಬ್ಯಾಕ್ಟೀರಿಯಾ, ವೈರಸ್​ಗಳು ಅದನ್ನು ತೊಳೆದಾಗ ಮಾತ್ರ ನಾಶವಾಗುತ್ತವೆ.

ಇದಕ್ಕಿಂತಲೂ ಮುಖ್ಯವಾಗಿ, ಸ್ವಚ್ಛವಾದ ಮಾಸ್ಕ್ ಧರಿಸದಿದ್ದರೆ ಬ್ಲಾಕ್ ಫಂಗಸ್ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಅಪೊಲೊ ಆಸ್ಪತ್ರೆಯ ವೈದ್ಯರು ಈ ಬಗ್ಗೆ ಎಚ್ಚರಿಕೆ ನೀಡಿದ್ದು, ಕೊಳಕಾದ ಅಥವಾ ಬಳಸಿದ ಮಾಸ್ಕ್ ಅನ್ನೇ ಮತ್ತೆ ಬಳಸುವುದರಿಂದ ಬ್ಲಾಕ್ ಫಂಗಸ್ ಹರಡುವ ಸಾಧ್ಯತೆಯಿದೆ ಎಂದಿದ್ದಾರೆ.

ಭಾರತದಲ್ಲಿ ಈಗ ಕೊರೊನಾ ರೂಪಾಂತರಿಯಾದ ಡೆಲ್ಟಾ ವೈರಸ್ ಕೇಸುಗಳು ಹೆಚ್ಚಾಗುತ್ತಿವೆ. ಇದಕ್ಕೆ ಕೊರೊನಾ ಮಾರ್ಗಸೂಚಿಗಳನ್ನು ಸರಿಯಾಗಿ ಅನುಸರಿಸದೆ ಇರುವುದು ಮುಖ್ಯ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮಾಸ್ಕ್ ಧರಿಸುವುದರಿಂದ ಕೊರೊನಾವನ್ನು ನಿಯಂತ್ರಿಸಬಹುದು ಎಂದು ಹೇಳಲಾಗದು. ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ರೋಗ ನಿಯಂತ್ರಣ ಮತ್ತು ಮುನ್ನೆಚ್ಚರಿಕಾ ಕೇಂದ್ರ)ದ ಅಧಿಕಾರಿಗಳ ಪ್ರಕಾರ ಮಾಸ್ಕ್ ಧರಿಸುವುದು ಕೊರೊನಾದಿಂದ ತಕ್ಕಮಟ್ಟಿಗೆ ನಮ್ಮನ್ನು ರಕ್ಷಿಸಿಕೊಳ್ಳುವ ಒಂದು ಮಾರ್ಗವಷ್ಟೆ.

ನಾನು ಈಗಾಗಲೇ ಎರಡು ಡೋಸ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೇನೆ ಎಂದು ಮಾಸ್ಕ್ ಇಲ್ಲದೆ ಓಡಾಡುವುದು ತಪ್ಪು. ಅವರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ ಎಂಬುದನ್ನು ಬಿಟ್ಟರೆ ಲಸಿಕೆ ಹಾಕಿಸಿಕೊಳ್ಳದಿರುವವರಷ್ಟೇ ಲಸಿಕೆ ಹಾಕಿಸಿಕೊಂಡವರಿಗೂ ಅಪಾಯಗಳಿರುತ್ತವೆ. ಹೀಗಾಗಿ, ಕೊರೊನಾ ಮೂರನೇ ಅಲೆಯ ಭೀತಿ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಹೆಚ್ಚಿನ ಎಚ್ಚರಿಕೆಯಿಂದಿರುವುದು ಅಗತ್ಯ.

ಇದನ್ನೂ ಓದಿ: Shocking Video: ಮಾಸ್ಕ್ ಧರಿಸದ್ದಕ್ಕೆ ದಂಡ ವಿಧಿಸಿದ ಅಧಿಕಾರಿಗೆ ಹಿಗ್ಗಾಮುಗ್ಗ ಥಳಿಸಿದ ಮಹಿಳೆ; ವಿಡಿಯೋ ವೈರಲ್

‘ಮಾಸ್ಕ್ ಎಲ್ಲಿ ಸ್ವಾಮಿ?’ ಮುಖಗವಸು ಇಲ್ಲದೆ ಸೈಕಲ್​ನಲ್ಲಿ ಬೆಂಗಳೂರು ಸುತ್ತಿದ ತೇಜಸ್ವಿ ಸೂರ್ಯಗೆ ಜನರ ಪ್ರಶ್ನೆ

(Health Tips Reusing Unwashed Face mask could cause Fungus Side Effects of Using Masks)

ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್