Women Health: ಗರ್ಭಾವಸ್ಥೆಯಲ್ಲಿ ಒಣ ಕೆಮ್ಮಿನ ಸಮಸ್ಯೆ ತೊಂದರೆಗಳನ್ನು ಹೆಚ್ಚಿಸಬಹುದು; ಪರಿಹಾರ ಕ್ರಮಗಳನ್ನು ತಿಳಿಯಿರಿ

ಗರ್ಭಿಣಿ ಮಹಿಳೆಯರು ಆರೋಗ್ಯವನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು ಉತ್ತಮ. ಜತೆಗೆ ಗರ್ಭಾವಸ್ಥೆಯಲ್ಲಿ ಕೆಮ್ಮು ಕಾಣಿಸಿಕೊಳ್ಳುವುದರಿಂದ ಇದು ಆರೋಗ್ಯಕ್ಕೆ ಇನ್ನಷ್ಟು ತೊಂದರೆಗಳನ್ನು ಕೊಡಬಹುದು. ಹಾಗಿರುವಾಗ ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡಲು ಒಂದಿಷ್ಟು ಮನೆಮದ್ದುಗಳನ್ನು ಬಳಸಿ.

Women Health: ಗರ್ಭಾವಸ್ಥೆಯಲ್ಲಿ ಒಣ ಕೆಮ್ಮಿನ ಸಮಸ್ಯೆ ತೊಂದರೆಗಳನ್ನು ಹೆಚ್ಚಿಸಬಹುದು; ಪರಿಹಾರ ಕ್ರಮಗಳನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
Follow us
| Updated By: ಆಯೇಷಾ ಬಾನು

Updated on: Aug 16, 2021 | 7:49 AM

ಒಣ ಕೆಮ್ಮು ಸಾಮಾನ್ಯವಾಗಿ ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ಅಥವಾ ಧೂಳಿನಿಂದ, ವಾತಾವರಣ ಬದಲಾವಣೆಗಳಿಂದ ಬರುತ್ತವೆ. ಕೆಮ್ಮು ಜೋರಾದಾಗ ಪಕ್ಕೆಲುಬುಗಳು ನೋಯುವುದು ಸಾಮಾನ್ಯ. ಅದರಲ್ಲಿಯೂ ಮುಖ್ಯವಾಗಿ ಗರ್ಭಿಣಿ ಮಹಿಳೆಯರು ಆರೋಗ್ಯವನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳುವುದು ಉತ್ತಮ. ಜತೆಗೆ ಗರ್ಭಾವಸ್ಥೆಯಲ್ಲಿ ಕೆಮ್ಮು ಕಾಣಿಸಿಕೊಳ್ಳುವುದರಿಂದ ಇದು ಆರೋಗ್ಯಕ್ಕೆ ಇನ್ನಷ್ಟು ತೊಂದರೆಗಳನ್ನು ಕೊಡಬಹುದು. ಹಾಗಿರುವಾಗ ಕೆಮ್ಮಿನ ಸಮಸ್ಯೆಗೆ ಪರಿಹಾರ ನೀಡಲು ಒಂದಿಷ್ಟು ಮನೆಮದ್ದುಗಳನ್ನು ಬಳಸಿ.

ನಿರಂತರವಾಗಿ ಕಾಣಿಸಿಕೊಳ್ಳುವ ಕೆಮ್ಮಿನಿಂದಾಗಿ ಹೊಟ್ಟೆಗೆ ಹೆಚ್ಚು ಒತ್ತಡ ಬೀಳುವ ಸಾಧ್ಯತೆಗಳು ಇರುತ್ತವೆ. ಈ ಕಾರಣದಿಂದ ಮಗುವಿನ ಆರೋಗ್ಯಕ್ಕೆ ತೊಂದರೆಯಾಗಬಹುದು. ಅದರಲ್ಲಿಯೂ ಗರ್ಭಿಣಿಯರು ಅತಿಯಾಗಿ ಔಷಧಗಳನ್ನು ಸೇವಿಸುವುದು ಒಳ್ಳೆಯದಲ್ಲ. ಗರ್ಭಾವಸ್ಥೆಯಲ್ಲಿ ಸಮಸ್ಯೆ ಉಂಟಾದಾಗ ಹತ್ತಿರದ ವೈದ್ಯರಲ್ಲಿ ಸಲಹೆ ಪಡೆಯಿರಿ. ಇಲ್ಲವೇ ಮನೆಮದ್ದುಗಳನ್ನು ಬಳಸುವ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಬಹುದು.

ನೀರಿಗೆ ಶುಂಠಿಯನ್ನು ಹಾಕಿ ಚೆನ್ನಾಗಿ ಕುದಿಸಿ. ಬಳಿಕ ಫಿಲ್ಟರ್ ಮಾಡಿ ಆ ನೀರಿಗೆ ಒಂದು ಚಮಚ ಜೇನುತುಪ್ಪ ಸೇರಿಸಿ ಸೇವಿಸಬಹುದು. ಒಣಕೆಮ್ಮು ಅಲರ್ಜಿಗಳಿಂದ ಉಂಟಾಗುತ್ತವೆ. ಈ ನೀರನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಸೇವಿಸುವುದರಿಂದ ಕಫ, ಶೀತದಂತಹ ಸಮಸ್ಯೆಗಳಿಂದ ಪರಿಹಾರ ಕಂಡುಕೊಳ್ಳಬಹುದು.

ಒಣ ಕೆಮ್ಮಿನ ಸಮಸ್ಯೆಗೆ ಜೇನು ತುಪ್ಪ ಉತ್ತಮ ಪರಿಹಾರ. ಆದ್ದರಿಂದ ಒಣ ಕೆಮ್ಮು ಸಮಸ್ಯೆ ಇದ್ದರೆ ದಿನಕ್ಕೆ ಎರಡರಿಂದ ಮೂರು ಚಮಚ ಜೇನುತುಪ್ಪ ಸೇವಿಸಿ. ಮಲಗುವ ಮೊದಲು ಹಾಲಿಗೆ ಜೇನುತುಪ್ಪ ಸೇರಿಸಿ ಸೇವಿಸುವ ಅಭ್ಯಾಸ ಮಾಡಿಕೊಳ್ಳಿ.

ಉಗುರು ಬೆಚ್ಚಗಿನ ನೀರಿಗೆ ಕಲ್ಲು ಉಪ್ಪು ಸೇರಿಸಿ. ಆ ನೀರಿನಿಂದ ಗಂಟಲು ತೊಳೆಯಿರಿ. ಇದರಿಂದ ಕಫ, ಶೀತ ಜತೆಗೆ ಒಣ ಕೆಮ್ಮಿನ ಸಮಸ್ಯೆಯಿಂದ ಹೊರಬರಬಹುದು.

ತುಳಸಿಯಿಂದ ತಯಾರಿಸಿದ ಕಷಾಯ ಸೇವಿಸಬಹುದು. ಉಗು ಬೆಚ್ಚಗಿರುವಾಗಲೇ ಈ ಕಷಾಯವನ್ನು ಸೇವಿಸುವ ಮೂಲಕ ಒಣ ಕೆಮ್ಮಿ ನಿವಾರಿಸಿಕೊಳ್ಳಬಹುದು.

ಇದನ್ನೂ ಓದಿ:

Health Tips: ಮಳೆಗಾಲದಲ್ಲಿ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ದೂರವಿರಲು ಈ 6 ಕಷಾಯಗಳನ್ನು ಮಾಡಿ ಕುಡಿಯಿರಿ

Health Benefits: ಹೂವು ಕೇವಲ ಅಂದಕ್ಕಷ್ಟೇ ಅಲ್ಲ ಅನೇಕ ಆರೋಗ್ಯಕರ ಗುಣಗಳು ಇದರಲ್ಲಿ ಅಡಗಿದೆ

ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ದೆಹಲಿ: ಸಿಆರ್​ಪಿಎಫ್​ ಸ್ಕೂಲ್ ಎದುರು ನಿಗೂಢ ಸ್ಫೋಟ
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬೆಂಗಳೂರು ಮಳೆ: ಸಿಲ್ಕ್​ಬೋರ್ಡ್​ ಜಂಕ್ಷನ್​​ನಲ್ಲಿ ರಸ್ತೆಯಲ್ಲಿ ನಿಂತ ನೀರು
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಬಿಗ್​ಬಾಸ್ ವೇದಿಕೆ ಮೇಲೆ ಲಾಯರ್ ಜಗದೀಶ್, ಮನೆಗೆ ಮತ್ತೆ ಎಂಟ್ರಿ?
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ಸ್ತ್ರೀಯರು ಬೈತಲೆ ತೆಗೆದು ತಲೆ ಬಾಚಿದ್ರೆ ಏನಾಗುತ್ತೆ? ವಿಡಿಯೋ ನೋಡಿ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ಅಕ್ಟೋಬರ್ 21 ರಿಂದ 27 ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ರವಿವಾರ ಸಂಕಷ್ಟ ಚತುರ್ಥಿ ದಿನದ ರಾಶಿ ಭವಿಷ್ಯ ತಿಳಿಯಿರಿ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಯಾರೆಂದು ನಾಳೆ ಫೈನಲ್
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ರೈಲು ಅಪಘಾತದಿಂದ 60 ಆನೆಗಳ ರಕ್ಷಣೆ; ಲೋಕೋ ಪೈಲಟ್ ಕಾರ್ಯಕ್ಕೆ ಮೆಚ್ಚುಗೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ತೆಲಂಗಾಣದಲ್ಲಿ ಉತ್ಖನನದ ವೇಳೆ ಆಂಜನೇಯನ ಪ್ರತಿಮೆ ಪತ್ತೆ
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?
ಮನೆ ಸದಸ್ಯರಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್, ಎಲ್ಲರೂ ಎಲಿಮಿನೇಟ್?