AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಲ್ಲುಗಳ ನಡುವೆ ಅಂತರವಿದೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಈ ಸುದ್ದಿ ಓದಿ

Face Reading: ಯಾರ ಹಲ್ಲಿನ ನಡುವೆ ಅಂತರವಿರುತ್ತದೋ ಅವರು ಜೀವನದಲ್ಲಿ ಅದೃಷ್ಟವಂತರಾಗಿರುತ್ತಾರಂತೆ. ಜತೆಗೆ, ಶ್ರೀಮಂತಿಕೆಯೂ ಅವರನ್ನು ಅರಸಿ ಬರುತ್ತದಯಂತೆ. ಬದುಕಿನಲ್ಲಿ ಅತ್ಯುನ್ನತ ಮಟ್ಟದ ಸಾಧನೆಗಳನ್ನು ಮಾಡುವ ಅವರು ಸದಾ ಗೆಲ್ಲುವ ಕುದುರೆಯಾಗಿರುತ್ತಾರೆ ಎಂಬ ನಂಬಿಕೆಯಿದೆ.

ಹಲ್ಲುಗಳ ನಡುವೆ ಅಂತರವಿದೆ ಎಂದು ತಲೆ ಕೆಡಿಸಿಕೊಂಡಿದ್ದೀರಾ? ಈ ಸುದ್ದಿ ಓದಿ
ಸಾಂಕೇತಿಕ ಚಿತ್ರ
TV9 Web
| Updated By: Skanda|

Updated on: Jul 26, 2021 | 6:50 AM

Share

ಮುಖ ನೋಡಿ ಭವಿಷ್ಯ ಹೇಳುವುದು ಎಂಬ ಮಾತನ್ನು ನೀವು ಯಾವಾಗಲಾದರೂ ಕೇಳಿರಬಹುದು. ಮುಖದ ಮೇಲಿರುವ ಮಚ್ಚೆಯಿಂದಲೋ, ಹುಬ್ಬುಗಳ ನಡುವಿನ ಅಂತರದಿಂದಲೋ, ಕಿವಿಯ ಆಕಾರದಿಂದಲೋ, ಹಲ್ಲುಗಳ ನಡುವಿನ ವ್ಯತ್ಯಾಸದಿಂದಲೋ ಕೆಲವರು ಭವಿಷ್ಯದ ಬಗ್ಗೆ ಊಹಿಸಿ ಹೇಳುತ್ತಾರೆ. ಇವು ಎಲ್ಲಾ ಬಾರಿಯೂ ನೂರಕ್ಕೆ ನೂರರಷ್ಟು ನಿಜವಾಗಲೇಬೇಕು ಎಂಬ ನಿಯಮ ಇಲ್ಲವಾದರೂ ಹೆಚ್ಚಿನವರಿಗೆ ಅದು ಸತ್ಯಕ್ಕೆ ಹತ್ತಿರವಾಗಿದೆ ಎಂಬ ಅನುಭವವನ್ನು (Experience) ನೀಡುವುದು ಸುಳ್ಳಲ್ಲ. ಅದನ್ನು ವೈಜ್ಞಾನಿಕವಾಗಿ (Scientific) ಪರಾಮರ್ಶಿಸಿದರೆ ಅಥವಾ ವಾದಕ್ಕೆ ವಾದ ಮಾಡುತ್ತಾ ಹೋದರೆ ಕಾಕತಾಳೀಯ (Coincidence) ಎಂದು ಹೇಳಬಹುದೇನು. ಆದರೆ, ಇವೆಲ್ಲಾ ನಂಬಿಕೆಯ (Belief) ಮೇಲೆ ನಿಂತ ವಿಚಾರಗಳಾದ್ದರಿಂದ ಕೆಲವರ ಅನುಭವಗಳನ್ನು ಅಲ್ಲಗಳೆಯುವುದು ಸಾಧುವಲ್ಲ.

ಅಂದಹಾಗೆ, ಕೆಲವರ ನಂಬಿಕೆ ಪ್ರಕಾರ ಬಾಯಿಯ ಮುಂಬದಿಯ ಹಲ್ಲುಗಳ ನಡುವೆ ಅಂತರವಿದ್ದಲ್ಲಿ ಅದು ಅದೃಷ್ಟದ ಸಂಕೇತವಂತೆ. ಎಷ್ಟೋ ಮಂದಿ ಹಲ್ಲುಗಳ ನಡುವೆ ಅಂತರವಿದೆ ಎಂಬುದನ್ನೇ ಸೌಂದರ್ಯಕ್ಕೆ ಕಪ್ಪುಚುಕ್ಕೆ ಎಂದು ಭಾವಿಸಿ ದಂತ ವೈದ್ಯರಿಗೆ ಹಣ ಸುರಿದು ಹಲ್ಲುಗಳನ್ನು ಸರಿಪಡಿಸಿಕೊಳ್ಳುತ್ತಾರೆ. ಆದರೆ, ಈ ವಿಚಾರವನ್ನು ನಂಬಿಕೆಯ ನೆಲೆಯಲ್ಲಿ ನೋಡಿದರೆ ಹಲ್ಲುಗಳ ನಡುವಿನ ಅಂತರ ಆ ವ್ಯಕ್ತಿಗೆ ಒಳಿತನ್ನೇ ಉಂಟು ಮಾಡುತ್ತದೆ. ಅದು ಶುಭ ಸೂಚನೆ ಎಂದೆನ್ನಲಾಗುತ್ತದೆ.

ಯಾರ ಹಲ್ಲಿನ ನಡುವೆ ಅಂತರವಿರುತ್ತದೋ ಅವರು ಜೀವನದಲ್ಲಿ ಅದೃಷ್ಟವಂತರಾಗಿರುತ್ತಾರಂತೆ. ಜತೆಗೆ, ಶ್ರೀಮಂತಿಕೆಯೂ ಅವರನ್ನು ಅರಸಿ ಬರುತ್ತದಯಂತೆ. ಬದುಕಿನಲ್ಲಿ ಅತ್ಯುನ್ನತ ಮಟ್ಟದ ಸಾಧನೆಗಳನ್ನು ಮಾಡುವ ಅವರು ಸದಾ ಗೆಲ್ಲುವ ಕುದುರೆಯಾಗಿರುತ್ತಾರೆ ಎಂಬ ನಂಬಿಕೆಯಿದೆ. ಹಾಗೆ ಹಲ್ಲುಗಳ ನಡುವೆ ಅಂತರವಿದ್ದವರು ಬುದ್ಧಿವಂತರೂ, ವಿವೇಕಿಗಳೂ ಆಗಿರಲಿದ್ದು ಎಂತಹ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೂ ದಾರಿ ಹುಡುಕಬಲ್ಲವರಾಗಿರುತ್ತಾರಂತೆ. ಅಂದರೆ ಹತ್ತಾರು ಮಂದಿ ಒಟ್ಟಿಗೆ ಸೇರಿದರೂ ಬಗೆಹರಿಯದ ಬಿಕ್ಕಟ್ಟುಗಳನ್ನು ಇವರು ನಿರಾಯಾಸವಾಗಿ ಪರಿಹರಿಸುತ್ತಾರಂತೆ.

ಜೀವನದಲ್ಲಿ ಸಮಸ್ಯೆಗಳು ಎದುರು ಬಂದು ನಿಂತರೂ ಈ ವ್ಯಕ್ತಿಗಳು ಬದುಕಿನ ಸುಖವನ್ನು ಅನುಭವಿಸುವುದರಿಂದ ವಿಮುಖರಾಗುವುದಿಲ್ಲವಂತೆ. ಅತ್ಯಂತ ವಿಶಾಲ ಮನಸ್ಸಿನವರೂ, ಮುಕ್ತ ಆಲೋಚನೆ ಹೊಂದಿದವರೂ ಆಗಿರುವ ಈ ಜನರು, ಸಮಯಕ್ಕಿಂತ ಮುಂದಿನ ವಿಚಾರಗಳ ಬಗ್ಗೆ ಯೋಚಿಸುತ್ತಾ ತಮ್ಮ ಭವಿಷ್ಯವನ್ನು ತಮಗೆ ಬೇಕಾದಂತೆ ರೂಪಿಸಿಕೊಳ್ಳಬಲ್ಲ ಶಕ್ತಿ ಹೊಂದಿರುತ್ತಾರೆ ಎಂದು ನಂಬಲಾಗಿದೆ.

ಅಂತಹ ವ್ಯಕ್ತಿಗಳು ತಾವು ಮಾತ್ರ ಅದೃಷ್ಟವಂತರಾಗಿರುವುದಲ್ಲದೇ ಅವರು ಯಾರನ್ನು ವರಿಸುತ್ತಾರೋ ಅವರಿಗೂ ಅದೃಷ್ಟದ ಫಲಗಳನ್ನು ವರ್ಗಾಯಿಸುತ್ತಾರಂತೆ. ಸಂಗಾತಿಯನ್ನು ಯಾವುದೇ ಕಲ್ಮಶವಿಲ್ಲದೇ, ಪರಿಶುದ್ಧವಾಗಿ ಪ್ರೀತಿಸುವ ಅವರು ಬದುಕಿನುದ್ದಕ್ಕೂ ಖುಷಿಯಾಗಿರಲು, ಇನ್ನೊಬ್ಬರನ್ನು ಖುಷಿಯಾಗಿರಿಸಲು ಪ್ರಯತ್ನಿಸುತ್ತಾರಂತೆ.

ಹಲ್ಲುಗಳ ಮಧ್ಯೆ ಇರುವ ಅಂತರ ಸೌಂದರ್ಯಕ್ಕೆ ಚ್ಯುತಿ ಎಂದು ಕೆಲವರು ಭಾವಿಸಬಹುದಾದರೂ ಅದೇ ಅವರ ಶಕ್ತಿಯಾಗಿರುತ್ತದೆ ಎನ್ನಲಾಗಿದೆ. ಅಂತಹ ವ್ಯಕ್ತಿಗಳು ಮನೆಗೂ ಧನಾತ್ಮಕ ಶಕ್ತಿಯನ್ನು ತುಂಬಬಲ್ಲವರಾಗಿದ್ದು, ಅವರು ನೆಲೆಸಿದ ಮನೆಯಲ್ಲಿ ಯಾವುದಕ್ಕೂ ಕೊರತೆಯಾಗುವುದಿಲ್ಲವಂತೆ. ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರು, ಬಂಧುಮಿತ್ರರು ಎಲ್ಲರಿಗೂ ಬೇಕಾದ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಬದುಕುವ ಈ ಜನರು ಊಟ, ತಿಂಡಿ, ಸುತ್ತಾಟ, ಅಡುಗೆ ವಿಚಾರದಲ್ಲೂ ವಿಭಿನ್ನ ಅಭಿರುಚಿ ಹೊಂದಿದವರಾಗಿರುತ್ತಾರೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಇದನ್ನೂ ಓದಿ: Chanakya Niti: ಈ ಕೆಲವು ವಿಷಯಗಳು ನಿಮಗೆ ಲಭಿಸುತ್ತಿದ್ದರೆ ನೀವು ನಿಜವಾಗಿಯೂ ಅದೃಷ್ಟವಂತರು- ಚಾಣಕ್ಯ ನೀತಿ 

ಸಂಗಾತಿ ಮೋಸ ಮಾಡುತ್ತಿದ್ದಾರೆ ಎಂಬ ಅನುಮಾನವೇ? ಸಂಬಂಧ ಸರಿಪಡಿಸಿಕೊಳ್ಳಲು ಸರಳ ಸಲಹೆಗಳು ಇಲ್ಲಿವೆ

(What does the Gap between your front teeth indicates know the secret)

ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಸಚಿವ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಸದನದಲ್ಲಿ ​ರಾಜಣ್ಣ ಹೇಳಿದ್ದಿಷ್ಟು
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಬೆಳಗ್ಗೆಯಿಂದ ಬ್ಯೂಸಿ, ಮೊಗಸಾಲೆಗೆ ಬಂದಾಗಲೇ ವಿಷಯ ಗೊತ್ತಾಗಿದ್ದು: ಸಚಿವೆ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಮತಗಳ್ಳತನ, ಕಾಲ್ತುಳಿತ ಪ್ರಕರಣಗಳನ್ನೂ ಸದನದಲ್ಲಿ ಚರ್ಚಿಸುತ್ತೇವೆ: ಬಿವೈವಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ಇವತ್ತು ರಾಯರ ದರ್ಶನ ಮಾಡುವ ಭಕ್ತರಿಗೆ ವಿಶೇಷ ಅನುಗ್ರಹ ಪ್ರಾಪ್ತಿ
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆದ ಪೊಲೀಸರು
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?