ಮದುವೆಯ ವಯಸ್ಸು ಮೀರುತ್ತಿದ್ದರೂ ಅಡೆತಡೆ ನಿಂತಿಲ್ಲವೇ; ಸಮಸ್ಯೆ ನಿವಾರಣೆಗೆ ಸರಳ ಮಾರ್ಗಗಳು ಇಲ್ಲಿವೆ
Remedies for quick marriage: ಅನಾವಶ್ಯಕವಾಗಿ ಲಕ್ಷಾಂತರ ರೂಪಾಯಿ ಸುರಿದು ಖರ್ಚಿನ ದಾರಿಹಿಡಿಯದೇ ಕೆಲ ಸರಳ ಮಾರ್ಗಗಳನ್ನು ಪಾಲಿಸಿ ಸಮಸ್ಯೆ ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಅದೃಷ್ಟ ಚೆನ್ನಾಗಿದ್ದರೆ ಇವು ನಿಮ್ಮ ಕೈಹಿಡಿಯಲೂಬಹುದು.
ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ವಿಶೇಷ ಸ್ಥಾನಮಾನವಿದೆ. ಮದುವೆ ಕೇವಲ ಗಂಡು, ಹೆಣ್ಣನ್ನು ಬೆಸೆಯುವುದಕ್ಕೆ ಸೀಮಿತವಾಗದೇ ಎರಡು ಕುಟುಂಬಗಳನ್ನು ಒಗ್ಗೂಡಿಸುವ ಆಚರಣೆಯಾಗಿದೆ. ಸಾಧಾರಣವಾಗಿ ಎಲ್ಲಾ ತಂದೆ, ತಾಯಂದಿರೂ ತಮ್ಮ ಮಕ್ಕಳಿಗೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡಬೇಕೆಂದು ಇಚ್ಛಿಸುತ್ತಾರೆ. ಸರಿಯಾದ ಸಮಯದಲ್ಲಿ, ಸರಿಯಾದ ವಯಸ್ಸಿನಲ್ಲಿ ಮದುವೆಯಾಗುವುದು ಜೀವನದ ಬಹುಮುಖ್ಯ ಹಂತವೆಂದು ಹಿರಿಯರು ಹೇಳುತ್ತಾರೆ. ಆದರೆ, ಕೆಲವರಿಗೆ ಮದುವೆಯಾಗಬೇಕೆಂದು ಹೊರಟಾಗಲೇ ಸಾಕಷ್ಟು ಅಡೆತಡೆಗಳು ಎದುರಾಗಿಬಿಡುತ್ತವೆ. ಪ್ರೀತಿಯಲ್ಲಿ ಬಿದ್ದವರಿಗೂ ಕಡಏ ಕ್ಷಣದಲ್ಲಿ ಅನಿರೀಕ್ಷಿತ ತೊಡಕುಗಳು ಉಂಟಾಗಿ ಮದುವೆಯ ಹಂತ ತಲುಪುವುದೇ ಕಷ್ಟವಾಗುತ್ತದೆ. ಒಂದು ವೇಳೆ ನಿಮಗೆ ಅಥವಾ ನಿಮ್ಮ ಹತ್ತಿರದವರಿಗೆ ಈ ಅನುಭವ ಆಗಿದ್ದರೆ ಅನಾವಶ್ಯಕವಾಗಿ ಲಕ್ಷಾಂತರ ರೂಪಾಯಿ ಸುರಿದು ಖರ್ಚಿನ ದಾರಿಹಿಡಿಯದೇ ಕೆಲ ಸರಳ ಮಾರ್ಗಗಳನ್ನು ಪಾಲಿಸಿ ಸಮಸ್ಯೆ ನಿವಾರಿಸಿಕೊಳ್ಳಲು ಪ್ರಯತ್ನಿಸಿ. ಅದೃಷ್ಟ ಚೆನ್ನಾಗಿದ್ದರೆ ಇವು ನಿಮ್ಮ ಕೈಹಿಡಿಯಲೂಬಹುದು.
ಶ್ರಾವಣ ಮಾಸವನ್ನು ಶುಭವೆಂದು ಪರಿಗಣಿಸಲಾಗುತ್ತದೆ. ದೇಶದ ಒಂದೊಂದು ಕಡೆ ಒಂದೊಂದು ಆಚರಣೆ, ಪ್ರತೀತಿ ಚಾಲ್ತಿಯಲ್ಲಿದೆಯಾದರೂ ಶ್ರಾವಣದಲ್ಲಿ ಶಿವ ಹಾಗೂ ಪಾರ್ವತಿಯನ್ನು ಆರಾಧಿಸುವ ಬಗ್ಗೆ ಹಲವರಿಗೆ ನಂಬಿಕೆ ಇದೆ. ಹೀಗಾಗಿ ಅವಿವಾಹಿತರು ಸತಿಪತಿಯಾದ ಶಿವ, ಪಾರ್ವತಿಯರನ್ನು ಆರಾಧಿಸುವ ಮೂಲಕ ಮದುವೆಗೆ ಉಂಟಾದ ಅಡತಡೆ ನಿವಾರಣೆ ಮಾಡಿಕೊಳ್ಳಬಹುದು. ಅವಿವಾಹಿತ ಪುರುಷರು ಶಿವ ಸ್ತೋತ್ರವನ್ನೂ, ಅವಿವಾಹಿತ ಸ್ತ್ರೀಯರು ಪಾರ್ವತಿಗೆ ಸಂಬಂಧಪಟ್ಟ ಶ್ಲೋಕಗಳನ್ನೂ ಹೇಳುವುದರಿಂದ ಒಳಿತಾಗುತ್ತದೆ ಎಂಬ ನಂಬಿಕೆಯಿದೆ.
ಅವಿವಾಹಿತರು ಪ್ರತಿ ಗುರುವಾರ ಸ್ನಾನ ಮಾಡುವ ಮೊದಲು ಆ ನೀರಿಗೆ ಸ್ವಲ್ಪ ಅರಿಶಿಣ ಪುಡಿಯನ್ನು ಹಾಕಿಕೊಂಡು ಸ್ನಾನ ಮಾಡಿದರೆ ಒಳಿತಾಗುತ್ತದೆ ಎನ್ನುವುದು ನಂಬಿಕೆ. ಆಹಾರದ ಜತೆಗೆ ಕೇಸರಿಯನ್ನು ನಿಯಮಿತವಾಗಿ ಬಳಸುವುದು ಕೂಡಾ ಒಳ್ಳೆಯದು ಮಾಡುತ್ತದೆ ಎಂದು ಹೇಳುತ್ತಾರೆ.
ಆಲದ ಮರವನ್ನು ಪೂಜಿಸುವ ರೀತಿಯಲ್ಲೇ ಅವಿವಾಹಿತರು ಬಾಳೆ ಗಿಡವನ್ನು ಪೂಜಿಸಬೇಕಂತೆ. ಪ್ರತಿ ಗುರುವಾರ ಬಾಳೆ ಗಿಡಕ್ಕೆ ಪೂಜೆ ಸಲ್ಲಿಸಿ, ಹಸುವಿನ ಶುದ್ಧ ತುಪ್ಪದಿಂದ ದೀಪ ಬೆಳಗಿ, 108 ಗುರುಗಳನ್ನು ಸ್ಮರಿಸುವುದರಿಂದ ಮದುವೆಯ ಹಾದಿ ಸುಗಮವಾಗುತ್ತದೆಯಂತೆ. ಜತೆಗೆ, ಗುರುವಾರದ ದಿನ ಆಲದ ಮರಕ್ಕೆ ಪೂಜೆ ಸಲ್ಲಿಸುವುದು, ಹುಣ್ಣಿಮೆಯ ದಿನ ವಿಶೇಷ ಪೂಜೆ ಮಾಡುವುದು ಕೂಡಾ ಸಹಕಾರಿಯಾಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.
ವಾಸ್ತುಶಾಸ್ತ್ರದ ಪ್ರಕಾರ ಅವಿವಾಹಿತರು ಮಲಗುವ ಮಂಚದ ಕೆಳಗೆ ಕಸ ಶೇಖರಣೆಯಾಗುತ್ತಿದ್ದರೆ ಅದು ಮದುವೆಗೆ ಬಹಳ ತೊಡಕು ಮಾಡುತ್ತದೆಯಂತೆ. ಹೀಗಾಗಿ ನಿರುಪಯುಕ್ತ ವಸ್ತು ಅಥವಾ ಕಸವನ್ನು ಮಂಚದ ಕೆಳಗೆ, ತಲೆದಿಂಬಿನ ಕೆಳಗೆ, ಕೋಣೆಯಲ್ಲಿ ಇಟ್ಟುಕೊಳ್ಳಬಾರದು ಎನ್ನುತ್ತಾರೆ.
ಮದುವೆ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಶೀಘ್ರ ಮದುವೆಗಾಗಿ ಓಂ ಕಾತ್ಯಾಯಿನಿ ಮಹಾಭಾಗೆ ಮಹಾಯೋಗಿನ್ಯೇ ಆದೀಶ್ವರೀಂ ನಂದ ಗೋಪ ಸುತಂ ದೇವಿ ಪತೀಯಂ ಮೇ ಕುರುತೇ ನಮಃ.. ಈ ಮಂತ್ರವನ್ನು ಪಠಿಸಬೇಕು. ಅಂತೆಯೇ ಹೇ ಗೌರೀ ಶಂಕರ ಅರ್ಧಾಂಗಿನೀ ಯಥ ತವಂ ಶಂಕರ ಪ್ರಿಯ ತಥ ಮಾ ಕುರು ಕಲ್ಯಾಣಿ ಕಾಂತಾ ಕಾಂತಂ ಸುದುರ್ಲಭಂ ಈ ಗೌರಿ ಶಂಕರ ಮಂತ್ರವನ್ನು ಪಠಿಸಿದರೆ ಬೇಗನೆ ಮದುವೆ ಭಾಗ್ಯ ಒದಗಿ ಬರುವುದು ಎನ್ನುವ ನಂಬಿಕೆ ಇದೆ.
ಇದನ್ನೂ ಓದಿ: Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು
Unfaithful Zodiac: ಪ್ರೀತಿಯಲ್ಲಿ ನಂಬಿಕೆಗೆ ಅರ್ಹರಲ್ಲದ 6 ರಾಶಿಗಳ ಪುರುಷರು ಇವರು