Unfaithful Zodiac: ಪ್ರೀತಿಯಲ್ಲಿ ನಂಬಿಕೆಗೆ ಅರ್ಹರಲ್ಲದ 6 ರಾಶಿಗಳ ಪುರುಷರು ಇವರು
ಜ್ಯೋತಿಷ ಮಾತ್ರ ಈ 6 ರಾಶಿಯ ಪುರುಷರ ಜತೆಗೆ ಪ್ರೀತಿಯಲ್ಲಿ ಬೀಳುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎನ್ನುತ್ತದೆ. ಇವರು ಹೆಣ್ಣುಮಕ್ಕಳ ಜತೆಗೆ ಸೊಗಸಾಗಿ, ಬೆಣ್ಣೆ ಕರಗುವಂತೆ ಮಾತನಾಡುತ್ತಾರೆ. ಆದರೆ ನಂಬಿಕೆಗೆ ಅರ್ಹರಲ್ಲ ಎನ್ನುತ್ತದೆ.
ಪ್ರೀತಿ ವಿಚಾರದಲ್ಲಿ ನಂಬಿಕೆಗೆ ಅರ್ಹರಲ್ಲದ ವ್ಯಕ್ತಿಗಳು ಇವರು ಎಂದು 6 ರಾಶಿಗಳವರನ್ನು ತಿಳಿಸುತ್ತದೆ ಜ್ಯೋತಿಷ. ನಿಮಗೆ ಹೀಗೇನಾದರೂ ಅನಿಸಿದೆಯಾ? ಆದರೆ ಜ್ಯೋತಿಷ ಮಾತ್ರ ಈ 6 ರಾಶಿಯ ಪುರುಷರ ಜತೆಗೆ ಪ್ರೀತಿಯಲ್ಲಿ ಬೀಳುವ ಮುನ್ನ ಎಚ್ಚರಿಕೆಯಿಂದ ಇರಬೇಕು ಎನ್ನುತ್ತದೆ. ಇವರು ಹೆಣ್ಣುಮಕ್ಕಳ ಜತೆಗೆ ಸೊಗಸಾಗಿ, ಬೆಣ್ಣೆ ಕರಗುವಂತೆ ಮಾತನಾಡುತ್ತಾರೆ. ಆದರೆ ನಂಬಿಕೆಗೆ ಅರ್ಹರಲ್ಲ ಎನ್ನುತ್ತದೆ. ಆದರೆ ನೆನಪಿರಲಿ, ಈ ಕಾರಣಕ್ಕೆ ಇವರು ದುಷ್ಟರೋ ಮತ್ತೊಂದೋ ಅಂತಲ್ಲ. ಪ್ರೀತಿ- ಪ್ರೇಮ ಅಂತ ಬಂದಾಗ ಇವರು ಹೀಗೆ ಬದಲಾಗಿ ಬಿಡುತ್ತಾರೆ. ಆದ್ದರಿಂದ ಹೆಣ್ಣುಮಕ್ಕಳು ಈ ರಾಶಿಯ ಪುರುಷರ ಜತೆಗೆ ಪ್ರೀತಿಗೆ ಬೀಳುವ ಮುಂಚೆ ಎಲ್ಲ ರೀತಿಯಲ್ಲೂ ಜಾಗ್ರತೆಯಿಂದ ಇರಬೇಕು. ಇನ್ನು ತಡ ಮಾಡದೆ ಮುಂದಕ್ಕೆ ಓದಿ.
ಧನುಸ್ಸು ಜ್ಯೋತಿಷದ ಪ್ರಕಾರ ಇವರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ. ಆದ್ದರಿಂದ ನಂಬಿಕೆ ಅರ್ಹವಲ್ಲದ ಸಂಗಾತಿಗಳು ಇವರು ಎನ್ನಲಾಗುತ್ತದೆ. ಧನು ರಾಶಿ ಪುರುಷರು ವಿವಾಹಿತರಾಗಿದ್ದರೂ ತಮ್ಮ ಹೆಂಡತಿಗೆ ಮೋಸ ಮಾಡುವುದಲ್ಲದೆ, ವಿವಾಹೇತರ ಸಂಬಂಧಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹುಡುಗಿಯರು ಈ ರಾಶಿಯ ಹುಡುಗರ ಬಗ್ಗೆ ಜಾಗೃತರಾಗಿರಬೇಕು. ಏಕೆಂದರೆ ಇವರಿಗೆ ಯಾವುದೇ ವಿಷಯವನ್ನಾದರೂ ಹೇಗೆ ಮರೆ ಮಾಡಬೇಕೆಂದು ತಿಳಿದಿರುತ್ತದೆ ಮತ್ತು ಸುಳ್ಳು ಹೇಳುವುದರಲ್ಲಿ ಪರಿಣತರಾಗಿರುತ್ತಾರೆ. ನೆನಪಿಡಿ, ಇಲ್ಲಿರುವ ಅಂಶಗಳು ಸಾಮಾನ್ಯವಾಗಿ ಹೇಳುವಂಥದ್ದಾಗಿರುತ್ತದೆ. ಜಾತಕದ ಪ್ರಭಾವ ಸಹ ಇರುತ್ತದೆ.
ಕುಂಭ ಅಸ್ಥಿರ ಮನಸ್ಥಿತಿಯ ಇವರು, ದಿಢೀರ್ ಅಂತ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಿಷ್ಠೆ ಎಂಬ ಪದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡದ ಜನ ಇವರು. ತಮ್ಮ ನಡವಳಿಕೆಯಿಂದ ಏನು ಪರಿಣಾಮ ಆಗುತ್ತದೆ ಎಂಬ ಬಗ್ಗೆ ಯೋಚಿಸಿ, ಅವರು ವರ್ತಿಸುವುದಿಲ್ಲ. ಸಂಬಂಧದಲ್ಲಿ ಇರುವವರು ಬೇಸರ ಅನುಭವಿಸುತ್ತಿದ್ದರೆ, ಇವರು ಮಾತ್ರ ಮುಂದೆ ಸಾಗುತ್ತಾರೆ. ಇತರರೊಂದಿಗೆ ಚೆಲ್ಲಾಟವಾಡುತ್ತಾರೆ. ಪದೇಪದೇ ಪ್ರೇಮ ಸಂಬಂಧದಲ್ಲಿ ತೊಡಗುತ್ತಾರೆ. ಏನು ಮಾಡಬೇಕೆಂಬುದನ್ನು ಅದನ್ನು ನಿಖರವಾಗಿ ಮಾಡುತ್ತಾರೆ ಮತ್ತು ಕಡಿಮೆ ಕಾಳಜಿ ವಹಿಸುತ್ತಾರೆ. ಸಿಕ್ಕಿಹಾಕಿಕೊಳ್ಳುವ ಬಗ್ಗೆ ಹೆದರುವುದಿಲ್ಲ.
ಮೇಷ ಈ rಆಶಿಯ ಪುರುಷರು ಸಹ ವಿಶ್ವಾಸಾರ್ಹವಲ್ಲ ಮತ್ತು ಅವರು ಇದರಿಂದಲೇ ಗಾಸಿಪ್ಗೆ ಒಳಗಾಗಿರುತ್ತಾರೆ. ವೈವಿಧ್ಯ ಮತ್ತು ಆಸಕ್ತಿಯ ಕೊರತೆ ಇದ್ದರೆ ಹಾಗೂ ಅವರು ಬದಲಾವಣೆಗಳನ್ನು ಬಯಸಿದರೆ ಒಂದೇ ಜೀವನವನ್ನು ನಡೆಸಲು ಇಷ್ಟಪಡುವುದಿಲ್ಲ. ಯಾವುದರ ಬಗ್ಗೆಯಾದ ಪ್ರೊವೋಕ್ ಆಗಿದ್ದರೆ ಎರಡನೇ ಆಲೋಚನೆ ಮಾಡದೆ ಅನುಸರಿಸುತ್ತಾರೆ. ಮೇಷ ರಾಶಿಯ ಪುರುಷರು ತಮ್ಮ ಸುಳ್ಳಿನಿಂದ ಪಾರಾಗಲು ಕಥೆಗಳನ್ನು ಕಟ್ಟುವಲ್ಲಿ ಹೆಸರುವಾಸಿ.
ತುಲಾ ತುಲಾ ರಾಶಿಯ ಮನುಷ್ಯರ ಬಗ್ಗೆ ಪ್ರೀತಿ ತೋರದಿದ್ದರೆ ಅಥವಾ ಕಾಳಜಿ ವಹಿಸಲು ವಿಫಲವಾದರೆ, ಅವರು ವಿಶ್ವಾಸಾರ್ಹರಾಗಿ ಉಳಿಯಲ್ಲ. ಯಾವಾಗಲೂ ಪ್ರೀತಿ ಮತ್ತು ಸಂತೋಷದ ಬಯಕೆ ಹೊಂದಿರುತ್ತಾರೆ. ಅದು ಬಹಳ ಮುಖ್ಯವಾಗಿರುತ್ತದೆ. ಆದ್ದರಿಂದ ಅವರನ್ನು ಲಘುವಾಗಿ ಪರಿಗಣಿಸಿದರೆ ಅವರಿಗೆ ಎಲ್ಲಿ ಪ್ರೀತಿ ಸಿಗುತ್ತದೋ ಅಂಥ ವ್ಯಕ್ತಿಯ ಬಳಿಗೆ ಹೋಗುತ್ತಾರೆ. ಆದರೆ ಅವರು ಸ್ಥಿರವಾದ ಸಂಬಂಧವನ್ನು ಬಯಸುವುದರಿಂದ ಸರಿಪಡಿಸಲಾಗದ ಯಾವುದನ್ನಾದರೂ ಮಾಡುವ ಮೊದಲು ಚೆನ್ನಾಗಿ ನಿರ್ಣಯ ಕೈಗೊಳ್ಳುತ್ತಾರೆ.
ಮಿಥುನ ಲಲ್ಲೆಗರೆಯುವುದರಲ್ಲಿ ಇವರು ನಿಸ್ಸೀಮರು. ಪ್ರೀತಿ-ಉತ್ಸಾಹ-ಸ್ನೇಹ ಈ ಎಲ್ಲ ಸಂಬಂಧಗಳು ಇವರಿಗೆ ಆಟದಂತೆ ಕಾಣುತ್ತದೆ. ಈ ಆಟ ತುಂಬಾ ಸಂತೋಷವನ್ನು ನೀಡುತ್ತದೆ. ಮಿಥುನದವರು ಬದ್ಧತೆಯಿಂದ ಇರಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತಾರೆ. ಎದುರಿಗಿರುವ ವ್ಯಕ್ತಿಯ ಯಾವುದೇ ಸಮಸ್ಯೆಯನ್ನು ಬೇಕೆಂತಲೇ ನಿರ್ಲಕ್ಷಿಸುತ್ತಾರೆ. ಸಿಕ್ಕಾಪಟ್ಟೆ ತಮಾಷೆ ಮಾಡುತ್ತಾರೆ ಅಥವಾ ತಾವು ಪ್ರೀತಿಸುವವರನ್ನು ತಮಾಷೆಯಾಗಿ ಪ್ರಚೋದಿಸಲು ಪ್ರಯತ್ನಿಸುತ್ತಾರೆ. ಅದು ಕೆಲವೊಮ್ಮೆ ತುಂಬಾ ಅಪಾಯಕಾರಿಯಾಗಿ ಪರಿಣಮಿಸುತ್ತದೆ.
ವೃಶ್ಚಿಕ ವೃಶ್ಚಿಕ ರಾಶಿಯ ಪುರುಷರು ಅನೇಕ ವಿಷಯಗಳ ಬಗ್ಗೆ ಆಸಕ್ತಿ ಹೊಂದಿರುತ್ತಾರೆ ಮತ್ತು ಆ ಕಡೆಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ. ಸರಿಯಾಗಿ ಯೋಚಿಸದೆ ತಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ಮುಂದಾಗುತ್ತಾರೆ. ಇವರಿಗೆ ಲೈಂಗಿಕ ವಾಂಛೆ ಹೆಚ್ಚಾಗಿರುತ್ತದೆ. ಆದ್ದರಿಂದ ಪದೇಪದೇ ಸಂಗಾತಿಗಳನ್ನು ಬದಲಾಯಿಸುತ್ತಾರೆ, ಇದರಿಂದಾಗಿ ವಿಶ್ವಾಸದ್ರೋಹಿ ಸ್ಥಾನದಲ್ಲಿ ನಿಲ್ಲಿಸುತ್ತದೆ. ವೃಶ್ಚಿಕ ರಾಶಿಯವರು ಕೆಲವು ಸಲ ವಿವಾಹಕ್ಕೆ ಹೊರತಾದ ಸಂಬಂಧದಲ್ಲಿ ತೊಡಗಿರುವಾಗಲೇ ಸಿಕ್ಕಿಬೀಳುತ್ತಾರೆ. ಮೊದಲಿಗೆ ಇವರು ಆಸಕ್ತಿರಹಿತರಾಗಿ ಕಾಣಿಸಬಹುದು. ಆದರೆ ಕ್ರಮೇಣ ಯಾವುದೇ ಸಂಬಂಧದಲ್ಲಿ ವಿಪರೀತ ಉತ್ಸಾಹದಿಂದ ಮುಂದುವರಿಯುತ್ತಾರೆ.
ಇದನ್ನೂ ಓದಿ: Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು
ಇದನ್ನೂ ಓದಿ: Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?
(Sagittarius, Aquarius, Gemini, Aries, Libra, Scorpio zodiac sign men cannot rely in love relationship. Know why?)