Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು

ಪ್ರೀತಿಸಿದ ಎಲ್ಲರಿಗೂ ಪ್ರೀತಿಸಿದವರು ಸಿಗುತ್ತಾರಾ? ಅಂದರೆ ಆ ಸಂಬಂಧ ಮದುವೆಯಲ್ಲಿ ಅಂತ್ಯ ಕಾಣುತ್ತದಾ ಎಂಬುದು ಗೊತ್ತಿರುವುದಿಲ್ಲ. ಆದರೆ ಜ್ಯೋತಿಷದ ಪ್ರಕಾರ ಲವ್ ಬ್ರೇಕ್​ ಅಪ್​ನಲ್ಲಿ ಅತಿ ಹೆಚ್ಚು ಸಂಕಟ ಪಡುವವರು ಈ 4 ರಾಶಿಯವರೇ ಎನ್ನಲಾಗುತ್ತದೆ.

Astrology: ಪ್ರೀತಿಯ ಸಂಬಂಧ ಕಳೆದುಕೊಂಡು ಸಂಕಟ ಪಡುವವರಲ್ಲಿ ಈ 4 ರಾಶಿಯವರೇ ಹೆಚ್ಚು
ಪ್ರಾತಿನಿಧಿಕ ಚಿತ್ರ
TV9kannada Web Team

| Edited By: Skanda

Jul 17, 2021 | 6:46 AM

ಬಹಳ ಗಾಢವಾದ ಪ್ರೀತಿ ಸಹ ಸುಖಾಂತ್ಯವನ್ನೇ ಕಾಣುತ್ತದೆ ಅಂತ ಹೇಳೋದು ಕಷ್ಟ. ಕೆಲವರಿಗೆ ಪ್ರೀತಿಯನ್ನು ಕಳೆದುಕೊಂಡ ದುಃಖದಿಂದ ಹೊರಬರುವುದು ಸಾಧ್ಯವೇ ಆಗುವುದಿಲ್ಲ. ಒಂದಲ್ಲಾ ಒಂದು ಬಗೆಯಲ್ಲಿ ಅವೇ ನೆನಪುಗಳು ಕಾಡುತ್ತಲೇ ಇರುತ್ತವೆ. ಜ್ಯೋತಿಷದ ಪ್ರಕಾರ, ಹನ್ನೆರಡು ರಾಶಿಗಳ ಪೈಕಿ ಈ ನಾಲ್ಕು ರಾಶಿಯವರು ಪ್ರೇಮ ವೈಫಲ್ಯದಿಂದ ಹೊರಬರುವುದು ಬಹಳ ಕಷ್ಟ. ಕೆಲ ರಾಶಿಯವರಂತೂ ಪ್ರೀತಿ ಅಂತ ಬೀಳುವುದೇ ಇಲ್ಲ. ಅಂಥದ್ದರಲ್ಲೂ ಒಂದು ವೇಳೆ ಪ್ರೀತಿಸಿದರೂ ಅಂತಿಟ್ಟುಕೊಳ್ಳಿ, ಆ ನಂತರ ಅದು ಅವರಿಗೆ ಕೈ ಕೊಟ್ಟಿತೋ ಅಲ್ಲಿಗೆ ಅವರು ಮೆತ್ತಗಾಗಿ ಹೋಗುತ್ತಾರೆ. ಉತ್ಸಾಹ, ಚೈತನ್ಯ ಏನೇನೂ ಕಾಣಿಸುವುದಿಲ್ಲ. ಇಂದಿನ ಈ ಲೇಖನದಲ್ಲಿ ಹೇಳಲು ಹೊರಟಿರುವುದು ಆ ನಾಲ್ಕು ರಾಶಿಗಳ ಬಗ್ಗೆ. ಇವರು ಪ್ರೇಮ ವೈಫಲ್ಯದಿಂದ ಹೊರಬರುವುದಕ್ಕೆ ಬಹಳ ಕಷ್ಟ ಪಡುತ್ತಾರೆ.

ಕರ್ಕಾಟಕ ಹನ್ನೆರಡು ರಾಶಿಗಳ ಪೈಕಿ ಅತ್ಯಂತ ಭಾವನಾ ಜೀವಿಗಳು ಅಂದರೆ ಅದು ಕರ್ಕಾಟಕ ರಾಶಿಯವರು. ಪ್ರೀತಿ ವಿಷಯದಲ್ಲಷ್ಟೇ ಅಲ್ಲ, ಅದ್ಯಾವುದೇ ಸಂಬಂಧದಲ್ಲಾದರೂ ಸರಿ, ಬಹಳ ಬೇಗ ಹಾಗೂ ಜಾಸ್ತಿ ಹಚ್ಚಿಕೊಂಡು ಬಿಡುತ್ತಾರೆ. ಆದ್ದರಿಂದ ಇವರಿಗೆ ನಿರೀಕ್ಷೆಗಳು ಹೆಚ್ಚು. ಅದರ ಬೆನ್ನಿಗೇ ನೋವು ಸಹ ಜಾಸ್ತಿ ಆಗುತ್ತದೆ. ಸಂಬಂಧದಿಂದ ಬೇರ್ಪಟ್ಟಾಗ ಅತಿ ಹೆಚ್ಚು ಸಂಕಟಕ್ಕೆ ಗುರಿ ಆಗುತ್ತಾರೆ. ತುಂಬ ಸೂಕ್ಷ್ಮ ಸ್ವಭಾವದ ಇವರು, ತಮ್ಮ ಆತ್ಮಗೌರವವನ್ನೂ ಮೀರಿ, ಪ್ರೀತಿಸುತ್ತಾರೆ. ಯಾವಾಗ ಆ ವ್ಯಕ್ತಿ ತನ್ನಿಂದ ದೂರ ಆಗುತ್ತಿದ್ದಾರೆ ಎಂಬುದು ಅರಿವಿಗೆ ಬರುತ್ತದೋ ಅದನ್ನು ಸಹಿಸುವುದಕ್ಕೆ ಸಾಧ್ಯವಾಗುವುದಿಲ್ಲ.

ವೃಷಭ ಸುಲಭಕ್ಕೆ ಒಬ್ಬ ವ್ಯಕ್ತಿ ಜತೆಗೆ ಹೊಂದಾಣಿಕೆ ಆಗಲು ಸಾಧ್ಯವಿಲ್ಲದ ಜನ ಇವರು. ಇವರ ಸುತ್ತ ಇರುವ ಸ್ನೇಹಿತರು, ಆಪ್ತರ ಸಂಖ್ಯೆಯೇ ಬಹಳ ಕಡಿಮೆ ಇರುತ್ತದೆ. ಇವರು ಯಾರನ್ನಾದರೂ ಪ್ರೀತಿಸುತ್ತಿದ್ದಾರೆ ಅಂದರೆ ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದಾರೆ ಅಂತಲೇ ಅರ್ಥ. ಅವರ ಮೇಲೆ ನಂಬಿಕೆ ಇರಿಸಿದ್ದಾರೆ ಅಂತಲೇ ಅರ್ಥ. ಒಂದು ವೇಳೆ ಅಂಥವರಿಂದ ದೂರ ಆಗುವ ಸಂದರ್ಭ ಎದುರಾದಾಗ ಆ ಸನ್ನಿವೇಶವನ್ನು ಎದುರಿಸುವುದಕ್ಕೆ ಇವರಿಂದ ಸಾಧ್ಯವಾಗುವುದೇ ಇಲ್ಲ. ಮಾನಸಿಕವಾಗಿ ಕುಗ್ಗಿಹೋಗುತ್ತಾರೆ. ತಮ್ಮಿಂದ ದೂರ ಆದ ವ್ಯಕ್ತಿಗೆ ಪ್ರೀತಿಯೂ ಬೇಡವಾಗಿದೆ ಎಂಬ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದೇ ಇಲ್ಲ.

ಸಿಂಹ ಈ ರಾಶಿಯವರ ಸಮಸ್ಯೆ ಏನೆಂದರೆ, ನನಗೆ ಇಲ್ಲ ಅಥವಾ ನನ್ನನ್ನು ಬೇಡ ಅಂದುಬಿಟ್ಟರಲ್ಲ ಅಂತ ವಿಪರೀತ ಸಿಟ್ಟಾಗ್ತಾರೆ. ಬೇರೆ ಯಾರನ್ನಾದರೂ ಇವರು ಬೇಡ ಅಂತ ಹೇಳಬಹುದು. ತಿರಸ್ಕರಿಸಬಹುದು ಅಥವಾ ನಿರ್ಲಕ್ಷಿಸಬಹುದು. ಆದರೆ ಇವರು, “ಇಲ್ಲ” ಎಂಬ ಉತ್ತರವನ್ನು ಕೇಳಿಸಿಕೊಳ್ಳಲು ಇಷ್ಟಪಡುವುದಿಲ್ಲ. ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು, ಸಿಂಹ ರಾಶಿಯವರಿಂದ ಲವ್ ಬ್ರೇಕ್ ಅಪ್ ಮಾಡಿಕೊಳ್ಳುವುದು ಸುಲಭದ ಮಾತು ಅಲ್ಲವೇ ಅಲ್ಲ. ಅಂಥದ್ದರಲ್ಲೂ ಒಂದು ವೇಳೆ ಪ್ರೀತಿ ಬಿಟ್ಟುಕೊಡಬೇಕಾದ ಪರಿಸ್ಥಿತಿ ಬಂದಲ್ಲಿ ಸರಾಗವಾಗಿ ಹಾಗೂ ಸ್ನೇಹ- ಸೌಹಾರ್ದಯುತವಾಗಿಯಂತೂ ದೂರವಾಗಲು ಸಾಧ್ಯವಿಲ್ಲ.

ಮಕರ ವಿಚಿತ್ರ ಏನು ಗೊತ್ತಾ? ಲವ್ ಬ್ರೇಕ್​ ಅಪ್​ಗಳನ್ನು ಈ ರಾಶಿಯವರು ನಿರ್ವಹಿಸಬಲ್ಲರು. ಆದರೆ ಈ ಪ್ರಕ್ರಿಯೆಯಲ್ಲಿ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಬಿಡ್ತಾರೆ. ಇತರರನ್ನು ನಂಬುವುದನ್ನೇ ಬಿಟ್ಟು ಬಿಡ್ತಾರೆ. ಮೇಲ್ನೋಟಕ್ಕೆ ಬಹಳ ಪ್ರಾಕ್ಟಿಕಲ್ ಮತ್ತು ಎಲ್ಲವನ್ನೂ ತಾರ್ಕಿಕವಾಗಿ ಆಲೋಚನೆ ಮಾಡುವಂತೆ ಕಂಡುಬರುವ ಮಕರ ರಾಶಿಯವರು ಕಾಣಿಸಿಕೊಳ್ಳುವುದಕ್ಕಿಂತ ಹೆಚ್ಚು ಸೂಕ್ಷ್ಮ ಮನಸ್ಸು ಇರುವವರು. ಅದರಲ್ಲೂ ಸಂಬಂಧದ ವಿಚಾರ ಬಂದಾಗ ಮತ್ತೂ ಸೂಕ್ಷ್ಮ ಸ್ವಭಾವದವರಾಗುತ್ತಾರೆ. ಸಂಬಂಧ ಕಡಿದುಕೊಳ್ಳುವುದು ಅಂದರೆ ಬೇರು ಸಹಿತ, ಅಲ್ಲೊಂದು ಗುರುತು ಸಹ ಉಳಿಸದಂತೆ ಒಟ್ಟಾರೆ ಕಡಿದುಕೊಂಡಂತೆ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ಆ ಸಂಬಂಧದಲ್ಲೇ ಉಳಿದುಬಿಟ್ಟಿರುತ್ತಾರೆ.

ಇದನ್ನೂ ಓದಿ: Zodiac Signs: ಈ ರಾಶಿಯ ಹುಡುಗಿಯರು ಉತ್ತಮ ಸಂಗಾತಿ ಆಗಬಲ್ಲರು; ಇಲ್ಲಿದೆ ವಿವರ

ಇದನ್ನೂ ಓದಿ: Relationship astrology: ಈ ನಾಲ್ಕು ರಾಶಿಯವರು ತಮ್ಮ ಸಂಬಂಧದ ವಿಚಾರದಲ್ಲಿ ಎಲ್ಲರನ್ನೂ ಸುಲಭವಾಗಿ ನಂಬಬಾರದು

(Cancer, Leo, Capricorn and Taurus these 4 zodiac signs hurt more after love break up according to astrology)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada