Relationship astrology: ಈ ನಾಲ್ಕು ರಾಶಿಯವರು ತಮ್ಮ ಸಂಬಂಧದ ವಿಚಾರದಲ್ಲಿ ಎಲ್ಲರನ್ನೂ ಸುಲಭವಾಗಿ ನಂಬಬಾರದು

ಜ್ಯೋತಿಷ ಪ್ರಕಾರ ಈ ನಾಲ್ಕು ರಾಶಿಯವರು ಯಾರನ್ನಾದರೂ ಹಚ್ಚಿಕೊಳ್ಳುವ ಮೊದಲಿಗೆ ಬಹಳ ಎಚ್ಚರಿಕೆಯಿಂದ ಇರಬೇಕು. ಪ್ರೀತಿಸುವ ಮುನ್ನ ಅಳೆದು- ತೂಗಿ ನೋಡಬೇಕು. ಯಾವುವು ಆ ನಾಲ್ಕು ರಾಶಿಗಳು ಎಂಬ ವಿವರ ಇಲ್ಲಿದೆ.

  • Publish Date - 6:56 am, Thu, 10 June 21 Edited By: Ayesha Banu
Relationship astrology: ಈ ನಾಲ್ಕು ರಾಶಿಯವರು ತಮ್ಮ ಸಂಬಂಧದ ವಿಚಾರದಲ್ಲಿ ಎಲ್ಲರನ್ನೂ ಸುಲಭವಾಗಿ ನಂಬಬಾರದು
ಸಾಂದರ್ಭಿಕ ಚಿತ್ರ

ಪ್ರೀತಿಯು ಎಂಥ ಬುದ್ಧಿವಂತರನ್ನೂ ಮೂರ್ಖರನ್ನಾಗಿ ಮಾಡುತ್ತದೆ ಅಥವಾ ಮೂರ್ಖ ಕೆಲಸಗಳನ್ನು ಸಹಿಸುವಂತೆ ಮಾಡುತ್ತದೆ. ಯಾರನ್ನಾದರೂ ಪ್ರೀತಿಸುವಾಗ ಎದುರಿನವರ ನ್ಯೂನತೆಗಳ ಕಡೆಗೆ ಗಮನ ಹರಿಸುವುದಿಲ್ಲ ಮತ್ತು ಎಲ್ಲಿ ದೂರ ಮಾಡಿಕೊಳ್ಳಬೇಕಾಗುತ್ತದೋ ಎಂಬ ಆತಂಕದಲ್ಲಿ ಅವರನ್ನೇ ಮೆಚ್ಚಿಕೊಳ್ಳಬೇಕಾಗುತ್ತದೆ. ಅವರ ಹೃದಯದಲ್ಲಿ ಸ್ಥಾನ ಇದೆಯೋ ಇಲ್ಲವೋ ಮತ್ತು ದೀರ್ಘಾವಧಿಯಲ್ಲಿ ಹೃದಯವನ್ನು ಮುರಿಯುವ ಮೂಲಕ ನೋಯಿಸಬಹುದು ಎಂಬ ಅಂಶಕ್ಕೂ ಗಮನ ಕೊಡುವುದಕ್ಕೆ ಹೋಗುವುದಿಲ್ಲ. ಇಷ್ಟೆಲ್ಲ ಯಾಕೆ ಹೇಳಬೇಕಾಗಿದೆ ಅಂದರೆ, ಜ್ಯೋತಿಷ ಪ್ರಕಾರ ಈ ನಾಲ್ಕು ರಾಶಿಯವರು ತಪ್ಪಾದ ವ್ಯಕ್ತಿಗಳಿಗೇ ಮನಸ್ಸು ನೀಡುವ ಸಾಧ್ಯತೆ ಹೆಚ್ಚಿರುತ್ತದೆ.

ಸಂಬಂಧದಲ್ಲಿ ಏನೋ ವ್ಯತ್ಯಾಸ ಆಗುತ್ತಿದೆ ಎಂಬುದನ್ನು ಗುರುತಿಸಲು ಸಾಧ್ಯವಾದರೂ ತಮ್ಮ ಅತಿಯಾದ ಪ್ರೀತಿಯ ಕಾರಣಕ್ಕೆ ಅದರಿಂದ ಹೊರಬರುವುದಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರೀತಿ- ಪ್ರೇಮದ ವಿಚಾರಕ್ಕೆ ಎಚ್ಚರಿಕೆಯಿಂದ ಇರಬೇಕಾದ ಆ ನಾಲ್ಕು ರಾಶಿಗಳು ಯಾವುವು ಎಂಬ ವಿವರಕ್ಕೆ ಮುಂದೆ ಓದಿ.

ಮೇಷ
ಮೇಷ ರಾಶಿಯ ಜನರು ಉನ್ನತ ಸ್ಥಾನದಲ್ಲಿರಲು ಇಷ್ಟಪಡುತ್ತಾರೆ. ಅದು ವೃತ್ತಿಪರ ವಿಚಾರವಾಗಿರಲಿ ಅಥವಾ ವೈಯಕ್ತಿಕವಾಗಿರಲಿ. ಯಾರಾದರೂ ಜನಪ್ರಿಯರು ಅನ್ನೋ ಕಾರಣಕ್ಕೆ ಪ್ರೀತಿಯಲ್ಲಿ ಬೀಳುತ್ತಾರೆ. ಜನಪ್ರಿಯರು, ಪ್ರಖ್ಯಾತರು ಅನ್ನೋ ಕಾರಣಕ್ಕೆ ಅವರಿಗೆ ಹತ್ತಿರವಾಗಿ, ಆ ನಂತರ ವ್ಯಕ್ತಿತ್ವದಿಂದ ನೋವನ್ನು ಪಡುತ್ತಾರೆ.

ಮಿಥುನ
ಮಿಥುನ ರಾಶಿಯವರಿಗೆ ಸುತ್ತಲೂ ಸದಾ ಜನರಿರಬೇಕು. ಒಬ್ಬಂಟಿಯಾಗಿರುವುದನ್ನು ಇಷ್ಟಪಡದ ಜನರಿವರು. ಈ ರೀತಿಯಾಗಿ ತಮ್ಮ ಒಂಟಿತನವನ್ನು ನೀಗಲು, ಅವರು ಕೆಲವೊಮ್ಮೆ ತಪ್ಪಾದ ವ್ಯಕ್ತಿಗಳ ಕೈಗೆ ಸಿಕ್ಕಿಬೀಳುತ್ತಾರೆ. ಭೇಟಿಯಾದ ಪ್ರತಿಯೊಬ್ಬರನ್ನೂ ಪ್ರೀತಿಸುತ್ತಾರೆ ಮತ್ತು ಒಂಟಿತನ ಹಾಗೂ ದುಃಖದಿಂದ ದೂರವಾಗಲು ಎಲ್ಲವನ್ನೂ ಸಹಿಸುತ್ತಾರೆ.

ಕರ್ಕಾಟಕ
ಕರ್ಕಾಟಕ ರಾಶಿಯವರು ಭಾವನಾ ಜೀವಿಗಳು. ಆ ಕಾರಣಕ್ಕೆ ಅವರ ಬಗ್ಗೆ ಯಾರಾದರೂ ಸ್ವಲ್ಪ ಗಮನ, ಪ್ರೀತಿ ನೀಡಿದರೂ ಅಂಥವರ ಪ್ರೀತಿಯಲ್ಲಿ ಬೀಳುತ್ತಾರೆ. ಅವರನ್ನು ಬಹಳ ಹಚ್ಚಿಕೊಂಡುಬಿಡುತ್ತಾರೆ. ಆದರೆ ಆ ವ್ಯಕ್ತಿಯು ಇವರ ಭಾವನೆಗಳೊಂದಿಗೆ ಆಟವಾಡಲು ಶುರು ಮಾಡಿದಾಗ ಹಾಗೂ ಉಸಿರು ಕಟ್ಟುವಷ್ಟು ಅಂಟಿಕೊಳ್ಳುತ್ತಿರುವುದಾಗಿ ಆರೋಪಿಸಿದಾಗ ಇವರ ಹೃದಯ ಒಡೆಯುತ್ತದೆ.

ಧನು ರಾಶಿ
ಯಾರು ತಮ್ಮ ಪರ್ಸನಲ್ ಸ್ಥಾನ ನೀಡುತ್ತಾರೋ ಹಾಗೂ ಧನು ರಾಶಿಯವರು ಹೇಗಿರುತ್ತಾರೋ ಹಾಗೇ ಇರುವುದನ್ನು ಒಪ್ಪಿಕೊಳ್ಳುತ್ತಾರೋ ಅಂಥವರನ್ನು ಬಹಳ ಪ್ರೀತಿಸುತ್ತಾರೆ. ಅವರಿಗೆ ಉಸಿರುಗಟ್ಟಿಸದಂತೆ ಇರಲು ಬಿಡುತ್ತಾರೋ ಅಂಥವರನ್ನು ಬಯಸುತ್ತಾರೆ. ಅಂಥವರ ಪ್ರೀತಿಯಲ್ಲಿ ಬೀಳುತ್ತಾರೆ. ಅದನ್ನು ಪಡೆಯಲು ಶ್ರಮಿಸುತ್ತಾರೆ. ಆದರೆ ನಂತರದಲ್ಲಿ ಆ ವ್ಯಕ್ತಿಗಳಿಗೆ ಧನುಸ್ಸು ರಾಶಿಯವರ ಬಗ್ಗೆ ಆಸಕ್ತಿ ಕಡಿಮೆ ಆಗುತ್ತದೆ.

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

(Aries, Gemini, Cancer and Sagittarius these 4 zodiac signs commit mistake in relationship is more according astrology)