AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Zodiac Signs: ಈ ರಾಶಿಯ ಹುಡುಗಿಯರು ಉತ್ತಮ ಸಂಗಾತಿ ಆಗಬಲ್ಲರು; ಇಲ್ಲಿದೆ ವಿವರ

ನಾವು ನಮ್ಮ ಜೀವನದ ಬಹುಪಾಲು ಕಾಲವನ್ನು ಜತೆಯಾಗಿ ಕಳೆಯುವ ನಮ್ಮ ಬಾಳಸಂಗಾತಿಯ ಆಯ್ಕೆಯಲ್ಲಿಯೂ ಅಷ್ಟೆ. ಬಹಳಷ್ಟು ಯೋಚನೆಯನ್ನು ಮಾಡುತ್ತೇವೆ. ಜೀವನಪೂರ್ತಿ ಜತೆಯಾಗಿರಬೇಕಾದ ಹುಡುಗಿಯ ಆಯ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವೇನೂ ಅಲ್ಲ.

Zodiac Signs: ಈ ರಾಶಿಯ ಹುಡುಗಿಯರು ಉತ್ತಮ ಸಂಗಾತಿ ಆಗಬಲ್ಲರು; ಇಲ್ಲಿದೆ ವಿವರ
ರಾಶಿ ಚಕ್ರ
TV9 Web
| Edited By: |

Updated on: Jun 14, 2021 | 6:50 AM

Share

ನಮ್ಮ ರಾಶಿ ಮತ್ತು ಜನ್ಮ ನಕ್ಷತ್ರಗಳು ನಮ್ಮ ವ್ಯಕ್ತಿತ್ವದ ಬಗ್ಗೆ ಹಲವು ಮಾಹಿತಿಗಳನ್ನು ನೀಡುತ್ತದೆ. ರಾಶಿಯ ಮೂಲಕವೂ ಒಬ್ಬ ವ್ಯಕ್ತಿಯ ಗುಣಲಕ್ಷಣ ಹೀಗಿರಬಹುದು ಎಂದು ಕೆಲವರು ಹೇಳುತ್ತಾರೆ. ಅಂದರೆ, ರಾಶಿಯ ಆಧಾರದಲ್ಲಿ ವ್ಯಕ್ತಿಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಅದರ ಆಧಾರದ ಮೇಲೆ ನಮ್ಮ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ. ಜೋತಿಷ್ಯ ಶಾಸ್ತ್ರದ ಸಹಾಯ ಪಡೆದು ಇಂತಹ ವಿವರಗಳನ್ನು ನಾವು ತಿಳಿದುಕೊಳ್ಳಬಹುದಾಗಿದೆ. ಮತ್ತೊಬ್ಬರನ್ನು ಇನ್ನಷ್ಟು ಚೆನ್ನಾಗಿ ತಿಳಿಯಬಹುದು.

ನಾವು ನಮ್ಮ ಜೀವನದ ಬಹುಪಾಲು ಕಾಲವನ್ನು ಜತೆಯಾಗಿ ಕಳೆಯುವ ನಮ್ಮ ಬಾಳಸಂಗಾತಿಯ ಆಯ್ಕೆಯಲ್ಲಿಯೂ ಅಷ್ಟೆ. ಬಹಳಷ್ಟು ಯೋಚನೆಯನ್ನು ಮಾಡುತ್ತೇವೆ. ಜೀವನಪೂರ್ತಿ ಜತೆಯಾಗಿರಬೇಕಾದ ಹುಡುಗಿಯ ಆಯ್ಕೆ ನಿರ್ಧಾರ ಕೈಗೊಳ್ಳುವುದು ಸುಲಭವೇನೂ ಅಲ್ಲ. ಮದುವೆ ಒಂದು ಬಹುಮುಖ್ಯ ಘಟ್ಟ. ಹೀಗಾಗಿ ಬಾಳಸಂಗಾತಿ ಹುಡುಕುವಾಗ ರಾಶಿ ಚಿಹ್ನೆಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕವೂ ಸರಿಯಾದ ಜೋಡಿ ಹೊಂದಿಸಿಕೊಳ್ಳಬಹುದು.

ಮೀನಾ: ಈ ರಾಶಿಯ ಹುಡುಗಿಯರು ಹೆಚ್ಚಾಗಿ ಸೂಕ್ಷ್ಮ ಮನಸಿನವರಾಗಿರುತ್ತಾರೆ. ಬಹಳ ಕಾಳಜಿ ಉಳ್ಳವರಾಗಿರುತ್ತಾರೆ. ಅವರಿಗೆ ಮತ್ತೊಬ್ಬರ ಬಗ್ಗೆ ಹೆಚ್ಚು ಕಾಳಜಿ ಇರುತ್ತದೆ. ಕಷ್ಟದ ಸಂದರ್ಭದಲ್ಲಿ ಅವರು ಜತೆಗಾರರ ಕೈಬಿಡುವುದಿಲ್ಲ. ಈ ರಾಶಿಯವರು ತಮ್ಮ ಬಾಳಸಂಗಾತಿಗೆ ಸಂತೋಷವನ್ನೇ ನೀಡಲು ಪ್ರಯತ್ನಿಸುತ್ತಾರೆ. ಮತ್ತು ಖುಷಿಯನ್ನೇ ನೀಡುತ್ತಿರುತ್ತಾರೆ. ಅರ್ಥಮಾಡಿಕೊಳ್ಳುತ್ತಾರೆ. ಭಾವನಾತ್ಮಕವಾಗಿ ಗಟ್ಟಿ ನಂಟು, ಪ್ರೀತಿ ಹೊಂದಿರುತ್ತಾರೆ.

ಕಟಕ: ಈ ರಾಶಿಯ ಯುವತಿಯರಿಗೆ ತಮ್ಮ ಬಾಳಸಂಗಾತಿಯ ಬಗ್ಗೆ ಖಂಡಿತಾ ಕಾಳಜಿ ಇರುತ್ತದೆ. ಆದರೆ, ಅವರು ತಮ್ಮ ಜೀವನವನ್ನು ಹೇಗೆ ನೋಡಿಕೊಳ್ಳಬೇಕು ಎಂಬುದೂ ಚೆನ್ನಾಗಿ ತಿಳಿದಿರುತ್ತದೆ. ತಮ್ಮ ಜತೆಗಾರನ ಬಗ್ಗೆ ಪ್ರೀತಿ ಮತ್ತು ಸದಾ ಜತೆಗಿರಬೇಕು ಎನ್ನುವ ಭಾವ ಅವರಲ್ಲಿರುತ್ತದೆ. ಅವರು ಪ್ರಾಮಾಣಿಕರು ಮತ್ತು ಸಮರ್ಪಕ ಪ್ರೀತಿಯ ಹುಡುಕಾಟದಲ್ಲಿ ಇರುತ್ತಾರೆ. ಈ ರಾಶಿಯವರು ಏನೇ ಆದರೂ ತಮ್ಮ ಜತೆಗಾರನ ಪರವಾಗಿ ಇರುತ್ತಾರೆ.

ತುಲಾ: ಈ ರಾಶಿಯವರು ದಾಂಪತ್ಯ ಜೀವನಕ್ಕೆ ಸಮತೋಲನ ಹಾಗೂ ಸ್ಥಿರತೆ ತಂದುಕೊಡುತ್ತಾರೆ. ಬಹಳ ಪ್ರಬುದ್ಧರಾಗಿ ವರ್ತಿಸುತ್ತಾರೆ. ಕಷ್ಟದ ಸನ್ನಿವೇಶಗಳನ್ನು ಸಮರ್ಥವಾಗಿ ಎದುರಿಸುತ್ತಾರೆ. ಯಾವುದೇ ದೂರು ಹೇಳಿ ಸುಮ್ಮನೇ ಜತೆಗಾರರನ್ನು ಬಿಟ್ಟು ಹೋಗುವುದಿಲ್ಲ. ಪ್ರಾಮಾಣಿಕ ಆದರೆ ಗಟ್ಟಿ ಮನಸಿನವರೂ ಆಗಿರುತ್ತಾರೆ. ಚಿಂತಿಸುವುದರ ಬದಲಾಗಿ ಪರಿಹಾರ ಮಾರ್ಗಗಳನ್ನು ಹೆಚ್ಚು ಆಲೋಚಿಸುತ್ತಾರೆ.

ಕುಂಭ: ಈ ರಾಶಿಯ ಹುಡುಗಿಯರು ಬಹಳ ಗಟ್ಟಿಮನಸ್ಸಿನವರು ಆಗಿರುತ್ತಾರೆ. ತಮ್ಮ ಬಗ್ಗೆ ತುಂಬಾ ಆತ್ಮವಿಶ್ವಾಸ ಹೊಂದಿರುತ್ತಾರೆ. ಮಾನಸಿಕವಾಗಿ ಸದೃಢರಾಗಿ ಇರುತ್ತಾರೆ. ನೀರಿನಂತೆ ಯಾವುದೇ ಸನ್ನಿವೇಶಗಳಿಗೂ ಹೊಂದಿಕೊಳ್ಳಬಲ್ಲ ಮನಸಿರುತ್ತದೆ. ಆದರೆ, ಅವರಲ್ಲಿಯೂ ಬಹಳ ಹಾಸ್ಯಪ್ರಜ್ಞೆ ಇರುತ್ತದೆ. ಅಂದರೆ, ಪ್ರೀತಿ, ಪರಸ್ಪರ ಅರ್ಥ ಮಾಡಿಕೊಂಡು ಜೊತೆಗೆ ಹಾಸ್ಯದ ಲೇಪನವೂ ಇರುತ್ತದೆ.

ಗಮನಿಸಿ: ಇಲ್ಲಿ ನೀಡಿರುವ ಅಂಶಗಳು ಧಾರ್ಮಿಕ ಮತ್ತು ಸಾಂಪ್ರದಾಯಿಕ ನಂಬಿಕೆಯ ಮೇಲಿನವು. ಇದಕ್ಕೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿರುವುದಿಲ್ಲ.

ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು ನೀರು ಕುಡಿದಷ್ಟೇ ಸಲೀಸು

The Most Dangerous Zodiac Signs: ಈ ರಾಶಿಯ ಕ್ರಿಮಿನಲ್​ಗಳು ಬಹಳ ಅಪಾಯಕಾರಿ ಎನ್ನುತ್ತಿವೆ ಎಫ್​ಬಿಐ ಡೇಟಾ

ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಹುಲಿಗೆಮ್ಮ ದೇವಿ ಹುಂಡಿಲಿ ಅಪಾರ ಆಭರಣ! 44 ದಿನಗಳಲ್ಲಿ 1.09 ಕೋಟಿ ಸಂಗ್ರಹ!
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ಗಿಲ್ಲಿ ಕಂಡ್ರೆ ರಕ್ಷಿತಾಗೆ ಅದೆಷ್ಟು ಪ್ರೀತಿ ನೋಡಿ; ಈ ವಿಡಿಯೋನೆ ಸಾಕ್ಷಿ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ರೈಲಿನ ಮೇಲೆ ಹತ್ತಿ ಪವರ್​ ಲೈನ್ ಕೆಳಗೆ ಕುಳಿತ ಯುವಕ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲ ಇರಲಿದೆ
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ದಾರಿ ತಪ್ಪಿ ಊರೊಳಗೆ ಬಂದ ಜಿಂಕೆಯ ಬೆನ್ನಟ್ಟಿದ ನಾಯಿಗಳು; ಆಮೇಲೇನಾಯ್ತು?
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ