The Most Dangerous Zodiac Signs: ಈ ರಾಶಿಯ ಕ್ರಿಮಿನಲ್​ಗಳು ಬಹಳ ಅಪಾಯಕಾರಿ ಎನ್ನುತ್ತಿವೆ ಎಫ್​ಬಿಐ ಡೇಟಾ

ರಾಶಿಗಳ ಆಧಾರದಲ್ಲಿ ಅಪರಾಧಿಗಳ ಮನಸ್ಥಿತಿ ಹಾಗೂ ಕೈಗೊಳ್ಳುವ ಅಪರಾಧಗಳ ವಿಂಗಡಣೆ ಮಾಡಬಹುದೇ? ಅಮೆರಿಕದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ ಅವರು ಸಿದ್ಧಪಡಿಸಿದ ಈ ಪಟ್ಟಿಯನ್ನು ನೀವೇ ಓದಿದರೆ ಆಸಕ್ತಿ ಕೆರಳಿಸುತ್ತದೆ.

The Most Dangerous Zodiac Signs: ಈ ರಾಶಿಯ ಕ್ರಿಮಿನಲ್​ಗಳು ಬಹಳ ಅಪಾಯಕಾರಿ ಎನ್ನುತ್ತಿವೆ ಎಫ್​ಬಿಐ ಡೇಟಾ
ರಾಶಿ ಚಕ್ರ
TV9kannada Web Team

| Edited By: Ayesha Banu

Jun 13, 2021 | 7:18 AM

ಅಮೆರಿಕದ ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್​ನಿಂದ ರಾಶಿಗಳ ಆಧಾರದಲ್ಲಿ ಅಪರಾಧಿಗಳ ಸ್ವಭಾವದ ಪಟ್ಟಿಯೊಂದನ್ನು ಸಿದ್ಧಪಡಿಸಲಾಗಿತ್ತು. ಕ್ರಿಮಿನಲ್​ಗಳ ಮನಸ್ಥಿತಿಯನ್ನು ಅವರ ರಾಶಿಯ ಆಧಾರದಲ್ಲಿ ವಿಂಗಡಿಸುವ ಪ್ರಯತ್ನ ಅದಾಗಿತ್ತು. ನಿಮ್ಮ ಓದಿಗೆ ಆಸಕ್ತಿಕರವಾಗಿ ಇರಲಿದೆ ಎಂಬ ಕಾರಣಕ್ಕೆ ಇಲ್ಲಿ ನೀಡಲಾಗುತ್ತಿದೆ. ಅಂದಹಾಗೆ ಅವರು ಪಟ್ಟಿ ಮಾಡಿರುವಂತೆ ಅತ್ಯಂತ ಅಪಾಯಕಾರಿ ಅಪರಾಧಿಗಳು ಅಂದರೆ ಕರ್ಕಾಟಕ ರಾಶಿಯವರಂತೆ. ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಅಪರಾಧ ಮಾಡಿದವರು ಯಾರು ಅಂತ ನೋಡಿದಾಗ ತುಲಾ ರಾಶಿಯವರು ಕಂಡುಬಂದಿದ್ದಾರೆ. ಮಿಥುನ ರಾಶಿಯವರು ವಂಚನೆ ಪ್ರಕರಣಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇವೆಲ್ಲ ಓದುತ್ತಿದ್ದರೆ ಎಲ್ಲ ರಾಶಿಗಳ ಬಗ್ಗೆಯೂ ತಿಳಿದುಕೊಳ್ಳಬೇಕು ಅನ್ನಿಸುತ್ತದೆ ಅಲ್ಲವಾ? ನೆನಪಿರಲಿ, ಈ ಪಟ್ಟಿ ಎಫ್​ಬಿಐದು. ತಮ್ಮ ಬಳಿ ಇರುವ ಡೇಟಾಗಳನ್ನು ಒಗ್ಗೂಡಿಸಿಕೊಂಡು ಅವರು ಸಿದ್ಧಪಡಿಸಿದ ಪಟ್ಟಿ ಇದು. ಇನ್ನೊಂದು ವಿಚಾರ ಏನೆಂದರೆ, ಆ ವ್ಯಕ್ತಿ ಮಾಡುವ ಅಪರಾಧದ ಬಗೆ ಹಾಗೂ ವಿಧಾನಕ್ಕೂ ಮತ್ತು ರಾಶಿ ಚಿಹ್ನೆಗೂ ನೇರವಾದ ಸಂಬಂಧ ಇದೆಯಂತೆ. ಆ ರಾಶಿಗಳನ್ನು ಅಗ್ನಿ, ಪೃಥ್ವಿ, ವಾಯು, ಜಲ ತತ್ವಗಳೆಂದು ವಿಂಗಡಣೆ ಕೂಡ ಮಾಡಿಕೊಳ್ಳಲಾಗಿದೆ. ಇನ್ನೇಕ ತಡ, ಹನ್ನೆರಡು ರಾಶಿಗಳಲ್ಲಿನ ಅಪರಾಧಿಗಳ ಮನಸ್ಥಿತಿ ಬಗ್ಗೆ ತಿಳಿಯೋಣ ಬನ್ನಿ.

ಮೇಷ ನಿಮಗೆ ಅಚ್ಚರಿ ಎನಿಸಬಹುದು, ಸುಪಾರಿ ಕಿಲ್ಲರ್​ಗಳಲ್ಲಿ ಮೇಷ ರಾಶಿಯವರೇ ಹೆಚ್ಚಂತೆ ಅಂದರೆ ಬೇರೆಯವರು ಇವರಿಗೆ ಹಣ ಕೊಟ್ಟು, ಇತರರನ್ನು ಕೊಲ್ಲಿಸುತ್ತಾರೆ ಅಥವಾ ಅಪರಾಧಗಳನ್ನು ಮಾಡಿಸುತ್ತಾರೆ.

ವೃಷಭ ಈ ರಾಶಿಯವರು ಬಹಳ ಸಿಟ್ಟಿನ ವ್ಯಕ್ತಿಗಳಂತೆ. ಅಂದರೆ ಸಿಟ್ಟಿನ ಕೈಗೆ ಬುದ್ಧಿ ಕೊಡುವ ಜನರು ಇವರು. ಯಾವ ಕ್ಷಣದಲ್ಲಿ ಏನು- ಯಾವ ಕಡೆಯಿಂದ ಬರುತ್ತದೋ ಎಂದು ನೋಡುತ್ತಿರುವಷ್ಟರಲ್ಲಿ ಮೈ ಮೇಲೆ ಎರಗಿಬಿಡುತ್ತಾರೆ. ಆದ್ದರಿಂದ ಇವರೊಂದು ಬಗೆಯಲ್ಲಿ ಸಿಕ್ಕಾಪಟ್ಟೆ ಅಪಾಯಕಾರಿ.

ಮಿಥುನ ಈ ರಾಶಿಯವರು ವಂಚನೆ ಪ್ರಕರಣಗಳಲ್ಲಿ ಭಾಗಿ ಆಗುವುದು ಹೆಚ್ಚು. ಅಂದರೆ ಬುದ್ಧಿ ಉಪಯೋಗಿಸಿ, ವಂಚನೆ ಮಾಡುವುದರಲ್ಲಿ ನಿಸ್ಸೀಮರು. ಇವರು ಅಂಥ ಪ್ರಕರಣಗಳಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು.

ಕರ್ಕಾಟಕ ಹಿಂಸಾ ಕೃತ್ಯಗಳನ್ನು ಎಸಗುವುದರಲ್ಲಿ ಕರ್ಕಾಟಕ ರಾಶಿಯವರು ಬಹಳ ಮುಂದು. ಎಲ್ಲ ರಾಶಿಗಳ ಪೈಕಿ ಬಹಳ ಅಪಾಯಕಾರಿ ಎಂದು ಎಫ್​ಬಿಐನವರು ಪರಿಗಣಿಸಿರುವುದು ಕರ್ಕಾಟಕ ರಾಶಿಯವರನ್ನೇ. ಆದ್ದರಿಂದ ಇವರು ಹೇಗೆ ಅಂತ ನೀವೇ ಊಹಿಸಬಹುದು.

ಸಿಂಹ ಇವರೊಂಥರದ ಕೇಸು. ಹೆಸರಾಗಬೇಕು, ಕೀರ್ತಿ ಗಳಿಸಬೇಕು ಹಾಗೂ ತನ್ನನ್ನು ಹತ್ತಾರು ಮಂದಿ ಗುರುತುಸಬೇಕು ಅನ್ನೋ ಕಾರಣಕ್ಕೆ ಅಪರಾಧಿಗಳ ಜತೆಗೆ ಸೇರುವಂಥ ಜನರಿವರು.

ಕನ್ಯಾ ಶಸ್ತ್ರಾಸ್ತ್ರ ಬಳಕೆಯಲ್ಲಿ ಇವರು ಪ್ರಮಾಣ ಹೆಚ್ಚು. ಎದುರಿನ ವ್ಯಕ್ತಿಗೆ ಘಾಸಿ ಮಾಡುವ ವಿಚಾರಕ್ಕೆ ಬಂದರೆ ಅದೆಂಥ ಶಸ್ತ್ರವನ್ನು ಬಳಸುತ್ತಾರೋ ಹೇಳಲು ಸಾಧ್ಯವಿಲ್ಲ. ಆದ್ದರಿಂದ ಕನ್ಯಾ ರಾಶಿಯವರು ಮತ್ತೊಬ್ಬರಿಗೆ ಹಾನಿ ಮಾಡುವುದಕ್ಕೆ ಬಹುತೇಕ ಸಂದರ್ಭದಲ್ಲಿ ಬಳಸುವುದು ಶಸ್ತ್ರಗಳನ್ನೇ. ಇನ್ನು ಹ್ಯಾಕರ್​ಗಳು, ದರೋಡೆಕೋರರು ಸಹ ಇವರೇ ಹೆಚ್ಚು.

ತುಲಾ ಎಲ್ಲ ರಾಶಿಗಳ ಪೈಕಿ ಅತಿ ಹೆಚ್ಚು ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವವರು ತುಲಾ ರಾಶಿಯವರು. ಡೇಟಾಗಳು ಕೂಡ ಅದನ್ನೇ ಸೂಚಿಸುತ್ತವೆ. ಆಯುಧಗಳ ಜತೆಗೆ ಅಖಾಡಕ್ಕೆ ಇಳಿಯುವ ಇವರು ಬಹಳ ಅಪಾಯಕಾರಿ. ಭಷ್ಟಾಚಾರ, ಮಾದಕದ್ರವ್ಯಗಳಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಪಾಲ್ಗೊಳ್ಳುತ್ತಾರಂತೆ.

ವೃಶ್ಚಿಕ ಹನ್ನೆರಡು ರಾಶಿಗಳ ಪೈಕಿ ಸ್ಯಾಡಿಸ್ಟ್​ಗಳು, ಅಂದರೆ ಹಿಂಸೆಯನ್ನು ಎಂಜಾಯ್ ಮಾಡುವಂಥವರು ಹಾಗೂ ಕೊಲೆ ಪಾತಕರು ಅಂದರೆ ಅದು ವೃಶ್ಚಿಕ ರಾಶಿಯವರೇ. ಇವರು ಸಹ ಬಹಳ ಅಪಾಯಕಾರಿ ಎಂದಿದೆ ಎಫ್​ಬಿಐ.

ಧನುಸ್ಸು ಇವರು ಮೂಲತಃ ಹಿಂಸಾಚಾರ ಮಾಡುವಂಥವರಲ್ಲ. ತಮ್ಮ ಪಾಲಿಗೆ ಬಲಿಪಶುಗಳಾಗುವಂಥವರನ್ನು ಹಿಂಸಿಸುವುದಲ್ಲ. ಆದರೆ ಕಳ್ಳರು ಅಥವಾ ಕಪಟಿಗಳು. ತೀರಾ ತಮ್ಮ ಪ್ರಾಣಕ್ಕೇ ಕುತ್ತು ಬಂತು ಅನ್ನೋವಾಗ ಏನಾದರೂ ಮಾಡಬೇಕೇ ವಿನಾ ಇಲ್ಲದಿದ್ದಲ್ಲಿ ಇವರದೇನಿದ್ದರೂ ಕಪಟತನ ಹಾಗೂ ವಂಚನೆಯೇ.

ಮಕರ ಎಲ್ಲ ರೀತಿಯ ಅಪರಾಧ ಕೃತ್ಯಗಳಲ್ಲೂ ನೋಡಲು ಕಾಣಸಿಗುವವರು ಅಂದರೆ ಅದು ಮಕರ ರಾಶಿಯವರು. ಏಕೆಂದರೆ, ಯಾವುದೇ ಕೃತ್ಯಕ್ಕೆ ಬೇಕಾದ ಜನರು, ಸರಂಜಾಮನ್ನು ಒಗ್ಗೂಡಿಸುವುದರಲ್ಲಿ ತುಂಬ ಚೆನ್ನಾಗಿ ಕೆಲಸ ಮಾಡುತ್ತಾರೆ. ತಮ್ಮ ಬುದ್ಧಿವಂತಿಕೆ ಹಾಗೂ ಶ್ರಮವನ್ನು ಇಂಥದ್ದಕ್ಕೆ ಇಡುತ್ತಾರೆ.

ಕುಂಭ ಈ ರಾಶಿಯವರು ತಮ್ಮ ದ್ವೇಷ ತೀರಿಸಿಕೊಳ್ಳುವ ಸಲುವಾಗಿ ಅಪರಾಧ ಕೃತ್ಯಗಳಲ್ಲಿ ಭಾಗವಹಿಸುವುದು ಸಾಮಾನ್ಯ ಅಂತೆ. ಹಾಗಿದ್ದರೆ ಕುಂಭ ರಾಶಿಯವರ ಜತೆಗೆ ಶತ್ರುತ್ವ ಒಳ್ಳೆಯದಲ್ಲ ಎಂದಾಯಿತು, ಎಚ್ಚರದಿಂದ ಇರಬೇಕು.

ಮೀನ ಬಹಳ ಬೇಗ ಸಿಟ್ಟಿಗೇಳುವ ಸ್ವಭಾವದವರು. ಹಿಂಸಾ ಪ್ರವೃತ್ತಿಯವರು. ತಮ್ಮ ಸಿಟ್ಟು ಹಾಗೂ ಹಿಂಸೆಯ ಸ್ವಭಾವವನ್ನು ಎಸಗುವ ಅಪರಾಧ ಕೃತ್ಯಗಳಲ್ಲಿ ಬಿಟ್ಟುಕೊಡುತ್ತಾರೆ ಎಂಬುದನ್ನು ಎಫ್​ಬಿಐ ಕಂಡುಕೊಂಡಿದೆ.

ಇದನ್ನೂ ಓದಿ: Astrology: ಈ ನಾಲ್ಕು ರಾಶಿಯವರಿಗೆ ಜನರನ್ನು ಮೂರ್ಖರನ್ನಾಗಿ ಮಾಡುವುದು ನೀರು ಕುಡಿದಷ್ಟೇ ಸಲೀಸು

ಇದನ್ನೂ ಓದಿ: Relationship astrology: ಈ ನಾಲ್ಕು ರಾಶಿಯವರು ತಮ್ಮ ಸಂಬಂಧದ ವಿಚಾರದಲ್ಲಿ ಎಲ್ಲರನ್ನೂ ಸುಲಭವಾಗಿ ನಂಬಬಾರದು

( According to America’s Federal Bureau Of Investigation here is the list of most dangerous zodiac signs and their crime patterns explained

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada