ಕೊವಿಡ್ -19 ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಗಳು ಕಡಿಮೆ ಪರಿಣಾಮಕಾರಿ: ಬ್ರಿಟನ್ ಅಧ್ಯಯನ ವರದಿ

Delta variant: ಲಸಿಕೆ ಹಾಕಿದ ಜನರು ಡೆಲ್ಟಾದಿಂದ ಸೋಂಕಿಗೆ ಒಳಗಾದಾಗ ಅವರ ದೇಹದಲ್ಲಿರುವ ವೈರಸ್ ಗಳು ಲಸಿಕೆ ಹಾರದೇ ಇರುವವರ ದೇಹದಲ್ಲಿರುವ ವೈರಸ್​ಗಳಂತೆಯೇ ಇತ್ತು.

ಕೊವಿಡ್ -19 ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಗಳು ಕಡಿಮೆ ಪರಿಣಾಮಕಾರಿ: ಬ್ರಿಟನ್ ಅಧ್ಯಯನ ವರದಿ
ಕೊವಿಡ್ ಲಸಿಕೆ ಪಡೆಯುತ್ತಿರುವ ಮಹಿಳೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Aug 19, 2021 | 11:51 AM

ಲಂಡನ್: ಕೊವಿಡ್ -19 ವಿರುದ್ಧದ ಲಸಿಕೆಗಳು ಡೆಲ್ಟಾ ರೂಪಾಂತರದ ವಿರುದ್ಧ ಕಡಿಮೆ ಪರಿಣಾಮಕಾರಿ ಎಂದು ಬ್ರಿಟನ್​​ನ ಅಧ್ಯಯನ ವರದಿಯೊಂದು ಹೇಳಿದ್ದು,ಇದು ಪೂರ್ಣ ಲಸಿಕೆ ಪಡೆದ ವ್ಯಕ್ತಿಗಳಿಗೆ ಬೂಸ್ಟರ್ ಡೋಸ್ ಬೇಕು ಎಂಬ ವಾದವನ್ನು ಮತ್ತಷ್ಟು ಗಟ್ಟಿಗೊಳಿಸಿದೆ. ಫೈಜರ್ ಇಂಕ್ ಮತ್ತು ಬಯೋಟೆಕ್ ಎಸ್‌ಇ ಮೆಸೆಂಜರ್ ಆರ್‌ಎನ್‌ಎ ಲಸಿಕೆ ಸಂಪೂರ್ಣ ವ್ಯಾಕ್ಸಿನೇಷನ್ ನಂತರ ಮೊದಲ 90 ದಿನಗಳಲ್ಲಿ ಪರಿಣಾಮಕಾರಿತ್ವವನ್ನು ಕಳೆದುಕೊಂಡಿತು. ಆದರೂ ಆ ಲಸಿಕೆ ಮತ್ತು ಆಸ್ಟ್ರಾಜೆನೆಕಾ ಪಿಎಲ್‌ಸಿ ಕೊವಿಡ್ ಸೋಂಕಿನ ವಿರುದ್ಧ ಪರಿಣಾಮಕಾರಿತ್ವ ತೋರಿಸಿತು. ಲಸಿಕೆ ಹಾಕಿದ ಜನರು ಡೆಲ್ಟಾದಿಂದ ಸೋಂಕಿಗೆ ಒಳಗಾದಾಗ ಅವರ ದೇಹದಲ್ಲಿರುವ ವೈರಸ್ ಗಳು ಲಸಿಕೆ ಹಾರದೇ ಇರುವವರ ದೇಹದಲ್ಲಿರುವ ವೈರಸ್​ಗಳಂತೆಯೇ ಇತ್ತು. ಇದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಇತ್ತೀಚಿನ ಮೌಲ್ಯಮಾಪನವನ್ನು ಬೆಂಬಲಿಸುತ್ತದೆ.

ಫಲಿತಾಂಶಗಳು ಸಂಪೂರ್ಣವಾಗಿ ಲಸಿಕೆ ಹಾಕಿದವರಿಗೆ ಬೂಸ್ಟರ್ ಶಾಟ್‌ಗಳನ್ನು ನೀಡಲು ಕರೆಗಳನ್ನು ಉತ್ತೇಜಿಸುವ ಸಾಧ್ಯತೆಯಿದೆ. ಆದರೂ ಪ್ರಪಂಚದಾದ್ಯಂತದ ದೇಶಗಳು ಇನ್ನೂ ಮೊದಲ ಲಸಿಕೆಗಳಿಗೆ ಸಾಕಷ್ಟು ಪೂರೈಕೆಯನ್ನು ಹೊಂದಿರುವುದಿಲ್ಲ. ಫೈಜರ್-ಬಯೋಎನ್ಟೆಕ್ ಅಥವಾ ಮಾಡರ್ನಾ ಇಂಕ್ ಎಂಆರ್‌ಎನ್‌ಎ ಲಸಿಕೆ ಎರಡು ಡೋಸ್‌ಗಳನ್ನು ಪಡೆದ ಅಮೆರಿಕನ್ನರು ಎಂಟು ತಿಂಗಳ ನಂತರ ಮೂರನೆಯದನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಅಮೆರಿಕ ಬುಧವಾರ ಹೇಳಿದೆ. ಬ್ರಿಟನ್ ಅಧಿಕಾರಿಗಳು ಇನ್ನೂ ವ್ಯಾಪಕವಾಗಿ ಬೂಸ್ಟರ್‌ಗಳನ್ನು ನೀಡಬೇಕು ಎಂಬುದನ್ನು ನಿರ್ಧರಿಸುತ್ತಿದ್ದಾರೆ. ಈ ತಿಂಗಳು ಫೈಜರ್-ಬಯೋಟೆಕ್‌ನ ಮೂರನೇ ಡೋಸ್‌ಗಳನ್ನು ನೀಡಲು ಆರಂಭಿಸಿದ ಇಸ್ರೇಲ್‌ನಲ್ಲಿ ಆರಂಭಿಕ ಫಲಿತಾಂಶಗಳು 60 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಶೇ 86 ಪರಿಣಾಮಕಾರಿ ಎಂದು ತೋರಿಸುತ್ತದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ರಾಷ್ಟ್ರೀಯ ಅಂಕಿಅಂಶಗಳ ಕಚೇರಿಯಿಂದ ನಡೆಸಿದ ಬ್ರಿಟನ್ ಸಮೀಕ್ಷೆ ಗುರುವಾರ ಪ್ರಿಪ್ರಿಂಟ್‌ನಲ್ಲಿ ಪ್ರಕಟವಾಗಿದೆ.ಇದರ ಪ್ರಕಾರ ಡೆಲ್ಟಾ ಪ್ರಮುಖ ರೂಪಾಂತರವಾಗಿರುವುದರಿಂದ ಸೋಂಕಿನ ಮಾದರಿಗಳ ವಿವರವಾದ ಚಿತ್ರಕ್ಕಾಗಿ ಈ ವರ್ಷ ಜನರ ಯಾದೃಚ್ಛಿಕ ಮಾದರಿಯಿಂದ 3 ದಶಲಕ್ಷಕ್ಕೂ ಹೆಚ್ಚು ಪಿಸಿಆರ್ ಪರೀಕ್ಷೆಗಳನ್ನು ವಿಶ್ಲೇಷಿಸಲಾಗಿದೆ.

ಕ್ಲಿನಿಕಲ್ ಟ್ರಯಲ್ ಡೇಟಾಗೆ ಬದಲಾಗಿ ಎರಡು ಲಸಿಕೆಗಳು ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದರ ವಾಸ್ತವಿಕ ಡೇಟಾವನ್ನು ನಾವು ಇಲ್ಲಿ ನೋಡುತ್ತಿದ್ದೇವೆ. ಡೇಟಾ ಸೆಟ್ ಗಳು ಡೆಲ್ಟಾ ರೂಪಾಂತರವು ಫೈಜರ್ ಮತ್ತು ಅಸ್ಟ್ರಾಜೆನೆಕಾ ಲಸಿಕೆಗಳ ಪರಿಣಾಮಕಾರಿತ್ವವನ್ನು ಹೇಗೆ ಮೊಂಡಾಗಿಸಿದೆ ಎಂಬುದನ್ನು ತೋರಿಸುತ್ತದೆ ಎಂದು ಸೈಮನ್ ಕ್ಲಾರ್ಕ್ ಹೇಳಿದರು. ಇವರು ಯುನವರ್ಸಿಟಿ ಆಫ್ ರೀಡಿಂಗ್ ನಲ್ಲಿ ಸೆಲ್ಯುಲಾರ್  ಮೈಕ್ರೋಬಯಾಲಜಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.

ಎರಡನೇ ಡೋಸ್ ನಂತರ ಸರಿಸುಮಾರು ನಾಲ್ಕೂವರೆ ತಿಂಗಳುಗಳ ಹೊತ್ತಿಗೆ, ಫೈಜರ್ ಲಸಿಕೆ ಬಹುಶಃ ಹೆಚ್ಚಿನ ವೈರಲ್ ಹೊರೆಯಿಂದ ಸೋಂಕನ್ನು ತಡೆಗಟ್ಟುವಲ್ಲಿ ಅಸ್ಟ್ರಾಜೆನಿಕಾಕ್ಕೆ ಸಮಾನವಾಗಿರುತ್ತದೆ ಎಂದು ಅಧ್ಯಯನದ ನೇತೃತ್ವಕ್ಕೆ ಸಹಾಯ ಮಾಡಿದ ಆಕ್ಸ್‌ಫರ್ಡ್ ಹಿರಿಯ ಸಂಶೋಧಕ ಕೋಯೆನ್ ಪೌವೆಲ್ಸ್ ಹೇಳಿದರು. ಅಂದಹಾಗೆ ಕೆಲವು ಕಾಲದ ಬಳಿಕ ಅಸ್ಟ್ರಾ ಲಸಿಕೆ ಪರಿಣಾಮಕಾರಿತ್ವದಲ್ಲಿ ಮಹತ್ವದ ವ್ಯತ್ಯಾಸವಿರಲಿಲ್ಲ.

ವ್ಯಾಕ್ಸಿನೇಷನ್ ಮೂಲಕ ಹರ್ಡ್ ಇಮ್ಯುನಿಟಿಯನ್ನು ಸಾಧಿಸುವ ಸಾಧ್ಯತೆಯ ಮೇಲೆ ಫಲಿತಾಂಶಗಳು ಮತ್ತಷ್ಟು ಅನುಮಾನವನ್ನು ಉಂಟುಮಾಡುತ್ತವೆ ಎಂದು ಅಧ್ಯಯನವನ್ನು ಮುನ್ನಡೆಸಲು ಸಹಾಯ ಮಾಡಿದ ಆಕ್ಸ್‌ಫರ್ಡ್‌ನ ವೈದ್ಯಕೀಯ ಅಂಕಿಅಂಶ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರದ ಪ್ರಾಧ್ಯಾಪಕಿ ಸಾರಾ ವಾಕರ್ ಹೇಳಿದರು.

“ಲಸಿಕೆ ಹಾಕದ ಜನರನ್ನು ಬಹಳಷ್ಟು ಜನರಿಗೆ ಲಸಿಕೆ ಹಾಕುವ ಮೂಲಕ ರಕ್ಷಿಸಬಹುದು ಎಂಬ ಭರವಸೆ ಇತ್ತು” ಎಂದು ವಾಕರ್ ಹೇಳಿದರು. “ಲಸಿಕೆ ಹಾಕಿದ ಜನರಲ್ಲಿ ಈ ಸೋಂಕುಗಳಲ್ಲಿ ನಾವು ನೋಡುತ್ತಿರುವ ಉನ್ನತ ಮಟ್ಟದ ವೈರಸ್ ಲಸಿಕೆ ಹಾಕದ ಜನರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಾರೆ ಎಂಬ ಅಂಶಕ್ಕೆ ಅನುಗುಣವಾಗಿರುತ್ತವೆ, ಈ ಬಗ್ಗೆ ನನಗೆ ಭಯವಿದೆ ಎಂದು ವಾಕರ್ ಹೇಳಿದ್ದಾರೆ.

ಲಸಿಕೆಗಳು ಆಸ್ಪತ್ರೆಯಲ್ಲಿ ಮತ್ತು ಕಾಲಾನಂತರದಲ್ಲಿ ಕೊವಿಡ್‌ನ ಗಂಭೀರ ಪ್ರಕರಣಗಳ ವಿರುದ್ಧ ಎಷ್ಟು ರಕ್ಷಣೆ ನೀಡುತ್ತವೆಯೆಂಬುದನ್ನು ತೋರಿಸುವ ಡೇಟಾ ಇಲ್ಲಿ ಕಾಣೆಯಾಗಿದೆ ಎಂದು ಲಂಡನ್‌ನ ಕಿಂಗ್ಸ್ ಕಾಲೇಜಿನ ಫಾರ್ಮಸ್ಯುಡಿಕಲ್ ಮೆಡಿಸಿನ್‌ನ ಸಂದರ್ಶಕ ಪ್ರಾಧ್ಯಾಪಕ ಪೆನ್ನಿ ವಾರ್ಡ್ ಹೇಳಿದರು. ಅಧ್ಯಯನ ವಿಭಿನ್ನ ತಂತ್ರಜ್ಞಾನವನ್ನು ಬಳಸುವ ಅಸ್ಟ್ರಾ ಲಸಿಕೆ ಪಡೆದ ಜನರಿಗೆ ಎಮ್‌ಆರ್‌ಎನ್‌ಎ ಲಸಿಕೆಯ ಬೂಸ್ಟರ್ ಡೋಸ್ ನೀಡುವುದನ್ನು ಸಹ ಸಂಶೋಧನೆಗಳು ಬೆಂಬಲಿಸಬಹುದು ಎಂದು ವಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ. ಉತ್ತಮ ಕೊವಿಡ್ ಚಿಕಿತ್ಸೆಯ ಅಗತ್ಯವನ್ನು ವಾರ್ಡ್ ಒತ್ತಿ ಹೇಳಿದ್ದಾರೆ.

ಡೆಲ್ಟಾ ರೂಪಾಂತರದ ಸೋಂಕಿನಿಂದ ಯಾವುದೇ ಲಸಿಕೆ ಸಂಪೂರ್ಣವಾಗಿ ರಕ್ಷಿಸುವುದಿಲ್ಲ ಎಂದು ವಾರ್ಡ್ ಹೇಳಿದ್ದಾರೆ. ಇಲ್ಲಿಯವರೆಗೆ ಕಂಡುಬರುವ ಕಡಿಮೆ ಆಸ್ಪತ್ರೆಗೆ ದಾಖಲಾಗುವಿಕೆಯು ಈ ವಿಷಯದಲ್ಲಿ ಕನಿಷ್ಠ, ಲಸಿಕೆಗಳು ತೀವ್ರವಾದ ಕೊರೊನಾ ಸೋಂಕನ್ನು ಅಭಿವೃದ್ಧಿಪಡಿಸದಂತೆ ವ್ಯಕ್ತಿಗಳನ್ನು ರಕ್ಷಿಸುತ್ತಿವೆ ಎಂದು ಇದು ಸೂಚಿಸುತ್ತಿದೆ ಎಂದಿದ್ದಾರೆ ವಾರ್ಡ್.

ಇದನ್ನೂ ಓದಿ: Coronavirus cases in India: ದೇಶದಲ್ಲಿ 36,401 ಹೊಸ ಕೊವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಮುಖ

ಇದನ್ನೂ ಓದಿ:  ‘ಸೆಪ್ಟೆಂಬರ್​​ನಿಂದ ಮಕ್ಕಳಿಗೂ ಕೊವಿಡ್​ 19 ಲಸಿಕೆ ನೀಡಬಹುದು‘: ಐಸಿಎಂಆರ್​ -ಎನ್​​ಐವಿ ನಿರ್ದೇಶಕಿ

(Vaccines against Covid-19 are less effective against the delta variant shows UK study)

Published On - 11:49 am, Thu, 19 August 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ