AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dental Care: ದಂತ ಆರೈಕೆಗಾಗಿ ಇಲ್ಲಿವೆ ಮನೆ ಮದ್ದುಗಳು; ಹಲ್ಲುಗಳು ಹಳದಿಗಟ್ಟುವುದನ್ನು ತಡೆಯಲೂ ಸಹಾಯಕ

ದಂತ ಕೆಂಪಾಗುವುದು, ವಸಡು ಸವೆಯುವುದು ಜತೆಗೆ ಹಲ್ಲುಗಳು ಹಾಳಾಗುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಪರಿಹಾರ ಕ್ರಮಗಳು ಈ ಕೆಳಗಿನಂತಿವೆ. ಮನೆ ಮದ್ದುಗಳನ್ನು ಬಳಸುವ ಮೂಲಕ ನಿಮ್ಮ ಬಾಯಿಯ ಆರೋಗ್ಯವನ್ನು ಸುರಕ್ಷಿತವಾಗಿರಿಸಿ.

Dental Care: ದಂತ ಆರೈಕೆಗಾಗಿ ಇಲ್ಲಿವೆ ಮನೆ ಮದ್ದುಗಳು; ಹಲ್ಲುಗಳು ಹಳದಿಗಟ್ಟುವುದನ್ನು ತಡೆಯಲೂ ಸಹಾಯಕ
ಸಾಂದರ್ಭಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on: Aug 20, 2021 | 9:02 AM

Share

ಸಾಮಾನ್ಯವಾಗಿ ಸಮಸ್ಯೆ ದೊಡ್ಡದಾಗುವವರೆಗೂ ಬಾಯಿಯ ಕೆಲವು ಸಮಸ್ಯೆಗಳಿಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಜೀವನ ಶೈಲಿ ಮತ್ತು ಅನಿಯಮಿತ ಆಹಾರ ಸೇವನೆಯ ಸಮಯದಿಂದಾಗಿ ದಂತ, ವಸಡು ಮತ್ತು ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ಎದುರಿಸಲೇ ಬೇಕಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಆಹಾರ ಸೇವನೆಯ ಬಳಿಕ ಬಾಯಿ ತೊಳೆಯದೇ ಇರುವುದು ಮತ್ತು ರಾತ್ರಿಯಲ್ಲಿ ಬ್ರಶ್ ಮಾಡದೇ ಇರುವುದು. ಇದರಿಂದ ದಂತ ಕೆಂಪಾಗುವುದು, ವಸಡು ಸವೆಯುವುದು ಜತೆಗೆ ಹಲ್ಲುಗಳು ಹಾಳಾಗುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಪರಿಹಾರ ಕ್ರಮಗಳು ಈ ಕೆಳಗಿನಂತಿವೆ. ಮನೆ ಮದ್ದುಗಳನ್ನು ಬಳಸುವ ಮೂಲಕ ನಿಮ್ಮ ಬಾಯಿಯ ಆರೋಗ್ಯವನ್ನು ಸುರಕ್ಷಿತವಾಗಿರಿಸಿ.

ತೆಂಗಿನ ಎಣ್ಣೆ ಹಲ್ಲಿನಲ್ಲಿ ರಂಧ್ರ ಅಥವಾ ವಸಡಿನ ಸಮಸ್ಯೆಗೆ ಎಂಗಿನ ಎಣ್ಣೆ ಉತ್ತಮ ಔಷಧ. ಒಂದು ಚಮಚ ಶುದ್ಧ ತೆಂಗಿನ ಎಣ್ಣೆಯನ್ನು ಬಳಸಿ ಬಾಯಿ ತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ. ಬಾಯಿಯ ನಾಲಿಗೆ, ವಸಡಿಗೆ ಎಣ್ಣೆಯನ್ನು ಹಚ್ಚಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಇರಿ. ಬಳಿಕ ಬಾಯಿ ಮುಕ್ಕಳಿಸಿ. ಇದರಿಂದ ಬಾಯಿಯ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಬೇವಿನ ಕಡ್ಡಿ ಮೊದಲಲ್ಲಾ ಬೇವಿನ ಕಡ್ಡಿಗಳನ್ನೇ ಬಳಸಿ ಹಲ್ಲುಜ್ಜುತ್ತಿದ್ದರು. ಇದರಿಂದ ಹಲ್ಲು ಗಟ್ಟಿಮುಟ್ಟಾಗಿರುತ್ತಿತ್ತು. ಜತೆಗೆ ಬೇವಿನ ಕಡ್ಡಿಯಿಂದ ಹಲ್ಲುಜ್ಜುವ ಮೂಲಕ ಹಳದಿ ಬಣ್ಣದಿಂದ ಮುಕ್ತಿ ಪಡೆಯಬಹುದಾಗಿದೆ. ಇಂದಿಗೂ ಸಹ ಹಳ್ಳಿಗಳಲ್ಲಿ ಬೇವಿನ ಕಡ್ಡಿಗಳನ್ನು ಬಳಸಿ ಹಲ್ಲುಜ್ಜುವವರಿದ್ದಾರೆ.

ಲವಂಗದ ಎಣ್ಣೆ ಲವಂಗದ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹತ್ತಿಯನ್ನು ಬಳಸಿ 2-3 ಚಮಚ ಲವಂಗ ಎಣ್ಣೆಯಿಂದ ವಸಡಿಗೆ ಮತ್ತು ದವಡೆಗೆ ಹಚ್ಚಿಕೊಳ್ಳಿ. ಲವಂಗದ ಎಣ್ಣೆಯಿಂದ ಕುರದ ಸಮಸ್ಯೆಗೂ ಪರಿಹಾರ ಪಡೆಯಬಹುದಾಗಿದೆ.

ಬೆಳ್ಳುಳ್ಳಿ ಹಲ್ಲಿನಲ್ಲಿ ರಂಧ್ರವಾಗುವುದು ಜತೆಗೆ ಹಲ್ಲು ನೋವಿನ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ಬೆಳ್ಲಿಳ್ಳಿ ಎಣ್ಣೆ. ಇದರಿಂದ ದಂತದಲ್ಲಿ ಏಳುವ ಕುರದ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಬಹುದಾಗಿದೆ. 10 ರಿಂದ 15 ನಿಮಿಷಗಳ ಕಾಲ ಬೆಳ್ಳುಳ್ಳಿ ಎಣ್ಣೆಯನ್ನು ಕುರದ ಭಾಗದಲ್ಲಿ ಹಚ್ಚಿ. ಬಳಿಕ ಅದನ್ನು ತೊಳೆಯಿರಿ.

ಇದನ್ನೂ ಓದಿ:

ಮಧುಮೇಹ, ಕ್ಯಾನ್ಸರ್​ ಮತ್ತು ಮೂತ್ರಪಿಂಡದ ಸಮಸ್ಯೆ ಇರುವವರು ಬ್ಲ್ಯಾಕ್​ ಫಂಗಸ್​ ಸೋಂಕಿನ ಕುರಿತು ಎಚ್ಚರಿಕೆಯಿಂದಿರಿ

Kidney Stone: ಮೂತ್ರಪಿಂಡದಲ್ಲಿ ಕಲ್ಲು ಇದೆ ಎಂದು ತಿಳಿಯುವುದು ಹೇಗೆ? ಈ ಲಕ್ಷಣಗಳೇ ಸಮಸ್ಯೆಗೆ ಮುನ್ನೆಚ್ಚರಿಕೆ