Women Health: ತುಂಬಾ ತೆಳ್ಳಗಿದ್ದೇನೆ ಎಂಬ ಚಿಂತೆಯೇ? ದಪ್ಪಗಾಗಲು ಯುವತಿಯರಿಗಾಗಿ ಒಂದಿಷ್ಟು ಟಿಪ್ಸ್​

ಡೈರಿ ಪದಾರ್ಥಗಳಲ್ಲಿ ಮೊಸರು ಉತ್ತಮ. ಪ್ರತಿನಿತ್ಯ ಅನ್ನಕ್ಕೆ ಮೊಸರು ಮಿಶ್ರಣ ಮಾಡಿ ಊಟ ಮಾಡುವುದರಿಂದ ಬೇಗ ದಪ್ಪಗಾಗುತ್ತೀರಿ.

Women Health: ತುಂಬಾ ತೆಳ್ಳಗಿದ್ದೇನೆ ಎಂಬ ಚಿಂತೆಯೇ? ದಪ್ಪಗಾಗಲು ಯುವತಿಯರಿಗಾಗಿ ಒಂದಿಷ್ಟು ಟಿಪ್ಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on: Aug 18, 2021 | 7:49 AM

ಕೆಲವರು ದಪ್ಪಗಾಗಿಬಿಟ್ಟಿದ್ದೀನಿ ತೆಳ್ಳಗಾಗಲೇಬೇಕು ಎಂದು ಹರಸಾಹಸ ಪಡುತ್ತಿದ್ದರೆ, ಇನ್ನು ಕೆಲವರು ತೆಳ್ಳಗಿದ್ದೇನೆ ದಪ್ಪಗಾಗಬೇಕು ಎಂದು ಅದೆಷ್ಟೋ ಔಷಧಿಗಳನ್ನು ಒಂದಾದ ಮೇಲೊಂದು ನುಂಗುತ್ತಲೇ ಇರುತ್ತಾರೆ. ಇನ್ನು ಕೆಲವರು ನನ್ನ ದೇಹವೇ ಹೀಗೆ.. ಎಷ್ಟು ತಿಂದರೂ ದಪ್ಪಗಾಗುವುದಿಲ್ಲ ಎಂದು ಸುಮ್ಮನಾಗಿಬಿಟ್ಟಿದ್ದಾರೆ. ಕೆಲವರ ದೇಹ ನೋಡಲು ತೆಳ್ಳಗಿದ್ದರೂ ಸಹ ಆರೋಗ್ಯವಂತರಾಗಿರುತ್ತಾರೆ. ಹಾಗಿದ್ದರೆ ಅವರು ಸದೃಢರಾಗಿದ್ದಾರೆ ಎಂದೇ ಅರ್ಥ. ಇನ್ನು ಕೆಲವರು ತೆಳ್ಳಗಾಗಿ ಸುಸ್ತು, ಆಯಾಸವನ್ನು ಅನುಭವಿಸುತ್ತಿರುತ್ತಾರೆ. ಅಂತವರು ಪೌಷ್ಟಿಕ ಆಹಾರನ್ನು ಸೇವಿಸಬೇಕು. ತೆಳ್ಳಗಿರುವವರಿಗಾಗಿಯೇ ಕೆಲವೊಂದಿಷ್ಟು ಟಿಪ್ಸ್​ಗಳು ಇಲ್ಲಿದೆ. ಯುವತಿಯರು ಇವುಗಳನ್ನು ದಿನಚರಿಯಲ್ಲಿ ಅಳವಡಿಸಿಕೊಳ್ಳುವ ಮೂಲಕ ದಪ್ಪಗಾಗಬಹುದು.

ಹಾಲು, ಮೊಸರು, ಮೀನು, ಮೊಟ್ಟೆಯಂತಹ ಆಹಾರ ಪದಾರ್ಥಗಳನ್ನು ಸೇವಿಸುವುದರ ಮೂಲಕ ದೇಹವು ಸದೃಢವಾಗಿರುವದರ ಜತೆಗೆ ದಪ್ಪಗಾಗಬಹುದಾಗಿದೆ. ಪ್ರತಿನಿತ್ಯ ಸೇವಿಸುವ ಅಕ್ಕಿಯಲ್ಲಿ ಕೆಂಪಕ್ಕಿಯ ಅನ್ನ ಮಾಡಿ ಸೇವಿಸುವುದರ ಮೂಲಕ ದೇಹವನ್ನು ದಪ್ಪಗಾಗಿಸಬಹುದಾಗಿದೆ. ಅದರಲ್ಲಿಯೂ ಮುಖ್ಯವಾಗಿ ಹೆಣ್ಣು ಮಕ್ಕಳು ತುಂಬಾ ತೆಳ್ಳಗಾಗಿದ್ದರೆ ಕೆಂಪಕ್ಕಿಯ ಅನ್ನ ಆರೋಗ್ಯಕ್ಕೂ ಒಳ್ಳೆಯದು ಜತೆಗೆ ದಪ್ಪಗಾಗಲು ಸಹಾಯ ಮಾಡುತ್ತದೆ. ಇದರಿಂದ ಆರೋಗ್ಯಕ್ಕೆ ಯಾವುದೇ ಅಪಾಯ ಕೂಡ ಇಲ್ಲ.

ಡೈರಿ ಪದಾರ್ಥಗಳಲ್ಲಿ ಮೊಸರು ಉತ್ತಮ. ಪ್ರತಿನಿತ್ಯ ಅನ್ನಕ್ಕೆ ಮೊಸರು ಮಿಶ್ರಣ ಮಾಡಿ ಊಟ ಮಾಡುವುದರಿಂದ ಬೇಗ ದಪ್ಪಗಾಗುತ್ತೀರಿ. ಗೋಧಿ ಸೇವಿಸುವ ಮೂಲಕ ಫಿಟ್​ನೆಸ್​ ಕಾಪಾಡಿಕೊಳ್ಳಬಹುದಾಗಿದೆ. ಜತೆಗೆ ಬಾಳೆ ಹಣ್ಣಿನ ಸೇವನೆಯಿಂದ ದಪ್ಪಗಾಗಬಹುದಾಗಿದೆ. ಇದರಲ್ಲಿ ಕ್ಯಾಲೊರಿ ಅಂಶ ಹೆಚ್ಚಾಗಿರುವದರಿಂದ ಬಹುಬೇಗ ದೇಹ ದಪ್ಪಗಾಗುತ್ತದೆ.

ಯುವತಿಯರು ಫಿಟ್​ನೆಸ್​ ಕಾಪಾಡಿಕೊಳ್ಳಲು ಬಯಸುತ್ತಾರೆ. ಜತೆಗೆ ತುಂಬಾ ಸಣ್ಣಗಾಗಿದ್ದರೆ ಬೇಸರ ಹೊರಹಾಕುತ್ತಾರೆ. ನೋಡಲು ಸುಂದರವಾಗಿ ಕಾಣಿಸಬೇಕು ಎಂಬುದು ಎಲ್ಲಾ ಯುವತಿಯರ ಆಸೆ. ಹಾಗಿರುವಾಗ ತುಂಬಾ ತೆಳ್ಳಗಿದ್ದೇನೆ ಎಂಬ ಕೊರಗು ಕಾಡುತ್ತಿದ್ದರೆ ಈ ಕೆಲವು ಪದಾರ್ಥಗಳನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಂಡರೆ ದಪ್ಪಗಾಗಲು ಸಹಾಯ ಮಾಡುತ್ತದೆ. ಆದರೆ ಅತಿಯಾಗಿ ಸೇವಿಸುವುದರ ಬದಲಾಗಿ ಹಂತ ಹಂತವಾಗಿ ನಿಯಮಿತವಾಗಿ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.

ಶೇಂಗಾ (ಕಡಲೆ), ಒಣ ದ್ರಾಕ್ಷಿ, ಬಾದಾಮಿ, ಉತ್ತುತ್ತೆಯನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ. ಮರುದಿನ ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿದು ಬಳಿಕ ನೆನೆದ ದ್ರಾಕ್ಷಿ, ಬಾದಾಮಿಗಳನ್ನು ಸೇವಿಸುವುದರಿಂದ ದಪ್ಪಗಾಗಬಹುದಾಗಿದೆ.

ಮೊಳಕೆಯಾದ ಕಾಳುಗಳು, ದ್ವಿದಳ ಧಾನ್ಯಗಳು ದೇಹಕ್ಕೆ ಪೌಷ್ಟಿಕಾಂಶಗಳನ್ನು ನೀಡುವುದರ ಜತೆಗೆ ದೇಹ ಸದೃಢತೆಗೆ ಸಹಾಯ ಮಾಡುತ್ತದೆ. ಜತೆಗೆ ವ್ಯಾಯಾಮ ಮಾಡುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ದೇಹಕ್ಕೆ ಬೇಕಾದ ಕ್ಯಾಲೊರಿಗಳ ಹೊರತಾದ ಹೆಚ್ಚುವರಿ ಕ್ಯಾಲೊರಿಗಳನ್ನು ಕರಗಿಸಲು ವ್ಯಾಯಾಮ ಅತಿ ಮುಖ್ಯ. ಇದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು.

ಇದನ್ನೂ ಓದಿ:

Women Health: ಗರ್ಭಿಣಿ ಮಹಿಳೆಯರಿಗೆ ತಲೆತಿರುಗುವುದೇಕೆ? ಕಾರಣ ತಿಳಿಯಿರಿ

Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್