Nobel Prize in Literature 2021: ತಾಂಜಾನಿಯಾ ಕಾದಂಬರಿಕಾರ ಅಬ್ದುಲ್ರಜಾಕ್ ಗುರ್ನಾಹ್ಗೆ ಸಾಹಿತ್ಯ ನೊಬೆಲ್ ಘೋಷಣೆ
Tanzanian novelist Abdulrazak Gurnah: ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ಮಹತ್ವದ ಈ ಪ್ರಶಸ್ತಿಗೆ ಅಬ್ದುಲ್ರಜಾಕ್ ಗುರ್ನಾಹ್ ಅವರ ಹೆಸರನ್ನು ಘೋಷಿಸಿದೆ.
Nobel Prize in Chemistry 2021: ತಾಂಜಾನಿಯಾ ದೇಶದ ಕಾದಂಬರಿಕಾರ ಅಬ್ದುಲ್ರಜಾಕ್ ಗುರ್ನಾಹ್ ಅವರಿಗೆ 2021ನೇ ಸಾಲಿನ ಸಾಹಿತ್ಯ ನೊಬೆಲ್ ಪ್ರಶಸ್ತಿ ದೊರೆತಿದೆ. ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಬುಧವಾರ ಮಹತ್ವದ ಈ ಪ್ರಶಸ್ತಿಗೆ ಅಬ್ದುಲ್ರಜಾಕ್ ಗುರ್ನಾಹ್ ಅವರ ಹೆಸರನ್ನು ಘೋಷಿಸಿದೆ.ಗಲ್ಫ್ ದೇಶಗಳಲ್ಲಿನ ನಿರಾಶ್ರಿತರ ಮೇಲೆ ವಸಾಹತುಶಾಹಿಯ ಪರಿಣಾಮ ಮತ್ತು ಅವರ ಸಂಸ್ಕೃತಿಯಲ್ಲಿ ಒಳನುಸುಳುವಿಕೆಯ ಕುರಿತು ರಾಜಿಯಿಲ್ಲದ ಮತ್ತು ಉದಾತ್ತವಾದ ಸಾಹಿತ್ಯ ಸೃಷ್ಟಿಯನ್ನು ಪರಿಗಣಿಸಿ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
ಅಬ್ದುಲ್ರಜಾಕ್ ಗುರ್ನಾಹ್ ಅವರು 1948ರಲ್ಲಿ ಜನಿಸಿದ್ದು, ಜಾಂಜಿಬಾರ್ನ ದ್ವೀಪವೊಂದರಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಆದರೆ 1960ರ ದಶಕದ ಉತ್ತರಾರ್ಧದಲ್ಲಿ ನಿರಾಶ್ರಿತರಾತಿ ಇಂಗ್ಲೆಂಡ್ಗೆ ವಲಸೆ ಬಂದರು. ಕಳೆದ ಕೆಲ ವರ್ಷಗಳವರೆಗೂ ಅವರು ಕೆಂಟ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಮತ್ತು ವಸಾಹತು ನಂತರದ ಸಾಹಿತ್ಯದ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರ ಸಾಹಿತ್ಯದಲ್ಲಿ ನಿರಾಶ್ರಿತ ಜೀವನದ ಸಮಸ್ಯೆಗಳು ಹೇರಳವಾಗಿ ಕಂಡುಬರುತ್ತವೆ. ತಮ್ಮ 21ನೇ ವರ್ಷದಲ್ಲಿ ಇಂಗ್ಲೀಷ್ನಲ್ಲಿ ಬರವಣಿಗೆಯನ್ನು ಆರಂಭಿಸಿದ ಅಬ್ದುಲ್ರಜಾಕ್ ಗುರ್ನಾಹ್ ಅದಕ್ಕೂ ಮುನ್ನ ಸ್ವಾಹಿಲಿ ಎಂಬ ಭಾಷೆಯಲ್ಲಿ ಬರೆಯುತ್ತಿದ್ದರು.
ನಿನ್ನೆ ಅಕ್ಟೋಬರ್ 6ರಂದಷ್ಟೇ ರಸಾಯನ ಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಿಸಲಾಗಿದ್ದು, ಜರ್ಮನಿಯ ಬೆಂಜಮಿನ್ ಲಿಸ್ಟ್ ಹಾಗೂ ಇಂಗ್ಲೆಂಡ್ನ ಡೇವಿಡ್ ಡಬ್ಲುಸಿ ಮ್ಯಾಕ್ಮಿಲನ್ ಕೆಮಿಸ್ಟ್ರಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಅಸಿಮ್ಮೆಟ್ರಿಕ್ ಆರ್ಗನೊಕಟಲಿಸಿಸ್ ಅಭಿವೃದ್ಧಿ ಪಡಿಸಿದ್ದಕ್ಕಾಗಿ ಈ ಇಬ್ಬರಿಗೆ ಈ ಬಾರಿಯ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.
BREAKING NEWS: The 2021 #NobelPrize in Literature is awarded to the novelist Abdulrazak Gurnah “for his uncompromising and compassionate penetration of the effects of colonialism and the fate of the refugee in the gulf between cultures and continents.” pic.twitter.com/zw2LBQSJ4j
— The Nobel Prize (@NobelPrize) October 7, 2021
ಇದನ್ನೂ ಓದಿ:
Nobel Prize 2021: ಪ್ರಸಕ್ತ ವರ್ಷದ ಭೌತಶಾಸ್ತ್ರ ಕ್ಷೇತ್ರದ ನೊಬೆಲ್ ಪ್ರಶಸ್ತಿ ಈ ಮೂವರು ವಿಜ್ಞಾನಿಗಳಿಗೆ
Published On - 5:11 pm, Thu, 7 October 21