Nobel Prize 2021: ಪ್ರಸಕ್ತ ವರ್ಷದ ಭೌತಶಾಸ್ತ್ರ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಈ ಮೂವರು ವಿಜ್ಞಾನಿಗಳಿಗೆ

ಸಂಕೀರ್ಣ ಭೌತಿಕ ವ್ಯವಸ್ಥೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಲು ಈ ಮೂವರೂ ವಿಜ್ಞಾನಿಗಳು ನೀಡಿದ ಅಭೂತಪೂರ್ವ ಕೊಡುಗೆಯನ್ನು ಪರಿಗಣಿಸಿ ನೊಬೆಲ್​ ನೀಡಲಾಗುತ್ತಿದೆ ಎಂದು ನೊಬೆಲ್​ ಕಮಿಟಿ ತಿಳಿಸಿದೆ.

Nobel Prize 2021: ಪ್ರಸಕ್ತ ವರ್ಷದ ಭೌತಶಾಸ್ತ್ರ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಈ ಮೂವರು ವಿಜ್ಞಾನಿಗಳಿಗೆ
ಭೌತಶಾಸ್ತ್ರದಲ್ಲಿ ನೊಬೆಲ್​ ಪ್ರಶಸ್ತಿ ಪುರಸ್ಕೃತಗೊಂಡ ವಿಜ್ಞಾನಿಗಳು
Follow us
| Updated By: Lakshmi Hegde

Updated on:Oct 05, 2021 | 4:48 PM

ಭೌತಶಾಸ್ತ್ರ ಕ್ಷೇತ್ರದಲ್ಲಿ ನೀಡಲಾಗುವ ನೊಬೆಲ್​ ಪ್ರಶಸ್ತಿ(Nobel Prize In Physics)ಗೆ ಈ ಬಾರಿ (2021)ವಿಜ್ಞಾನಿಗಳಾದ ಸಿಯುಕುರೊ ಮನಾಬೆ(Syukuro Manabe), ಕ್ಲಾಸ್ ಹ್ಯಾಸೆಲ್ಮನ್ (Klaus Hasselmann) ಮತ್ತು ಜಾರ್ಜಿಯೊ ಪ್ಯಾರಿಸಿ(Giorgio Parisi) ಪಾತ್ರರಾಗಿದ್ದಾರೆ. ನಿನ್ನೆ ವೈದ್ಯಕೀಯ ಕ್ಷೇತ್ರದ ನೊಬೆಲ್​ ಪ್ರಶಸ್ತಿ ಘೋಷಿಸಿದ್ದ ನೊಬೆಲ್ ಅಸ್ಸೆಂಬ್ಲಿ ಇಂದು ಭೌತಶಾಸ್ತ್ರ ಕ್ಷೇತ್ರಕ್ಕೆ ನೊಬೆಲ್​ ಪ್ರಶಸ್ತಿ ಪ್ರಕಟಿಸಿದೆ. ಸಂಕೀರ್ಣ ಭೌತಿಕ ವ್ಯವಸ್ಥೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಲು ಈ ಮೂವರೂ ವಿಜ್ಞಾನಿಗಳು ನೀಡಿದ ಅಭೂತಪೂರ್ವ ಕೊಡುಗೆಯನ್ನು ಪರಿಗಣಿಸಿ ನೊಬೆಲ್​ ನೀಡಲಾಗುತ್ತಿದೆ ಎಂದು ನೊಬೆಲ್​ ಕಮಿಟಿ ತಿಳಿಸಿದೆ.

ಈ ಮೂವರಲ್ಲಿ ಸಿಯುಕುರೊ ಮನಾಬೆ ಪ್ರಿನ್ಸ್ಟನ್ ವಿಶ್ವವಿದ್ಯಾಲಯದಲ್ಲಿ ಹಿರಿಯ ಹವಾಮಾನ ತಜ್ಞ. ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್​ ಪ್ರಮಾಣ ಹೆಚ್ಚುವುದರಿಂದ ಭೂ ಮೇಲ್ಮೈ ಮೇಲೆ ಉಷ್ಣತೆ ಹೇಗೆ ಹೆಚ್ಚುತ್ತದೆ ಎಂಬುದನ್ನು ಅವರು ತೋರಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ಸಾಧನೆ ಗುರುತಿಸಿ ನೊಬೆಲ್​ ನೀಡಲಾಗಿದೆ. ಹಾಗೇ, ಕ್ಲಾಸ್ ಹ್ಯಾಸೆಲ್ಮನ್ ಜರ್ಮನಿಯ ಹವಾಮಾನಶಾಸ್ತ್ರ ಸಂಸ್ಥೆಯಾದ ಮ್ಯಾಕ್ಸ್​ ಪ್ಲ್ಯಾಂಕ್​​ನಲ್ಲಿ ಪ್ರೊಫೆಸರ್​ ಆಗಿದ್ದು, weather (ಹವಾಮಾನ) ಮತ್ತು climate (ವಾಯುಗುಣ)ವನ್ನು ಒಂದಕ್ಕೊಂದನ್ನು ಸಂಪರ್ಕಿಸಿ, ಜಂಟಿ ಮಾಡೆಲ್​ ರಚಿಸಿದ್ದರು. ಈ ಮೂಲಕ ವೆದರ್​ ಪದೇಪದೆ ಬದಲಾಗುತ್ತಿದ್ದರೂ, ಕ್ಲೈಮೇಟ್​ ಮಾಡೆಲ್​ಗಳು ಹೇಗೆ ವಿಶ್ವಾಸಾರ್ಹವಾಗಿರುತ್ತವೆ ಎಂಬುದಕ್ಕೆ ಉತ್ತರ ಕಂಡು ಹಿಡಿದಿದ್ದಾರೆ. ಇದೇ ಸಾಧನೆಗೆ ಈಗ ಅವರಿಗೆ ನೊಬೆಲ್​ ಒಲಿದಿದೆ.

ಇನ್ನು ಜಾರ್ಜಿಯೋ ಪ್ಯಾರಿಸಿಯವರು ರೋಮ್​​ನ ಸಪಿಯಾನ್ಜಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿದ್ದಾರೆ. ಅಸ್ತವ್ಯಸ್ತಗೊಂಡ ಸಂಕೀರ್ಣ ಅಂಶಗಳಲ್ಲಿ ಅಡಗಿರುವ ಗುಪ್ತ ಮಾದರಿಯನ್ನು ಅನ್ವೇಷಿಸುವ ಮೂಲಕ, ಇವರು ಭೌತಶಾಸ್ತ್ರದ ಸಂಕೀರ್ಣ ವ್ಯವಸ್ಥೆಯ ಥೇರಿಯನ್ನು ಅರ್ಥ ಮಾಡಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅದ್ಭುತ ಕೊಡುಗೆ ನೀಡಿದ್ದನ್ನು ಪರಿಗಣಿಸಿ ನೊಬೆಲ್​ ನೀಡಲಾಗುತ್ತಿದೆ.

ಇದನ್ನೂ ಓದಿ: Nobel Prize 2021 ಅಮೆರಿಕದ ಡೇವಿಡ್ ಜೂಲಿಯಸ್ ಮತ್ತು ಆರ್ಡೆಮ್ ಪಟಪೌಟಿಯನ್​​ಗೆ 2021ರ ವೈದ್ಯಕೀಯ ನೊಬೆಲ್ ಪ್ರಶಸ್ತಿ

ಚಿರಾಗ್ ಪಾಸ್ವಾನ್​​ಗೆ ಹೆಲಿಕಾಪ್ಟರ್, ಪರಾಸ್​​ಗೆ ಹೊಲಿಗೆ ಯಂತ್ರ ಚಿಹ್ನೆ ನೀಡಿದ ಚುನಾವಣಾ ಆಯೋಗ

Published On - 4:24 pm, Tue, 5 October 21

Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ವಾರದ ಪಂಚಾಯಿತಿ ನಡೆಸಲು ಬಂದ ಸುದೀಪ್, ಮಂಜುಗೆ ಕಾದಿದೆ ಮಾತಿನ ಚಾಟಿ?
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ
ಇಬ್ಬಗೆ ನೀತಿ ತೋರುತ್ತಿರುವ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ: ಅಶೋಕ