AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hypersonic Missile: ರಷ್ಯಾದಲ್ಲಿ ಮಹತ್ವದ ಬೆಳವಣಿಗೆ: ಜಲಾಂತರ್ಗಾಮಿಯಿಂದ ಶಬ್ದಾತೀತ ವೇಗದ ಹೈಪರ್​ಸಾನಿಕ್ ಕ್ಷಿಪಣಿ ಉಡಾವಣೆ

1,000 ಕಿಲೋಮೀಟರ್​ಗೂ (620 ಮೈಲಿ) ಹೆಚ್ಚು ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವಿರುವ ಝಿರ್​ಕೊನ್ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 9 ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲದು

Hypersonic Missile: ರಷ್ಯಾದಲ್ಲಿ ಮಹತ್ವದ ಬೆಳವಣಿಗೆ: ಜಲಾಂತರ್ಗಾಮಿಯಿಂದ ಶಬ್ದಾತೀತ ವೇಗದ ಹೈಪರ್​ಸಾನಿಕ್ ಕ್ಷಿಪಣಿ ಉಡಾವಣೆ
ರಷ್ಯಾ ಜಲಾಂತರ್ಗಾಮಿಯಿಂದ ಉಡಾವಣೆಯಾದ ಝಿರ್​ಕೊನ್ ಕ್ಷಿಪಣಿ (ಎಡಚಿತ್ರ). ನೌಕಾಪಡೆಯ ಯುದ್ಧನೌಕೆಯಿಂದ ಉಡಾವಣೆಯಾದ ಝಿರ್​ಕೊನ್ ಕ್ಷಿಪಣಿ (ಬಲಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 04, 2021 | 6:46 PM

ಮಾಸ್ಕೊ: ಶಬ್ದದ ವೇಗಕ್ಕಿಂತಲೂ ಹಲವು ಪಟ್ಟು ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿರುವ ಅತ್ಯಾಧುನಿಕ ಹೈಪರ್​ಸಾನಿಕ್ ಕ್ಷಿಪಣಿಯೊಂದನ್ನು ರಷ್ಯಾ ನೌಕಾಪಡೆ ಸೋಮವಾರ ಅಣುಶಕ್ತಿ ಚಾಲಿತ ಜಲಾಂತರ್ಗಾಮಿಯಿಂದ ಪರೀಕ್ಷಾರ್ಥ ಉಡಾವಣೆ ಮಾಡಿದೆ. ಪರೀಕ್ಷೆಯು ಯಶಸ್ವಿಯಾಗಿದ್ದು, ನಿಗದಿಪಡಿಸಿದ್ದ ಅಣಕು ಗುರಿಯನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ರಷ್ಯಾದ ರಕ್ಷಣಾ ಇಲಾಖೆ ತಿಳಿಸಿದೆ. ಬರೆಂಟ್ಸ್​ ಸಾಗರದಲ್ಲಿದ್ದ ಅಣಕು ಗುರಿಯನ್ನು ಸೆವೆರೊಡ್ವಿನ್​ಸ್ಕ್​ ಜಲಾಂತರ್ಗಾಮಿಯಿಂದ ಹಾರಿಬಿಟ್ಟ ಝಿರ್​ಕೊನ್ ಕ್ಷಿಪಣಿಯು ಯಶಸ್ವಿಯಾಗಿ ತಲುಪಿತು ಎಂದು ರಷ್ಯಾ ಸರ್ಕಾರ ಹೇಳಿದೆ. ಕಳೆದ ಜುಲೈನಲ್ಲಿ ಇದೇ ಕ್ಷಿಪಣಿಯು ರಷ್ಯಾ ದಾಳಿಗೆ ಬಳಸುವ ಯುದ್ಧನೌಕೆಯಿಂದ (ಪ್ರಿಗೇಟ್) ಉಡಾಯಿಸಿ ಪರೀಕ್ಷೆ ಮಾಡಿತ್ತು. ಅದಕ್ಕೂ ಮೊದಲು ಹಲವು ಬಾರಿ ಪರೀಕ್ಷಾರ್ಥ ಉಡಾವಣೆಗಳು ನಡೆದಿದ್ದವು.

1,000 ಕಿಲೋಮೀಟರ್​ಗೂ (620 ಮೈಲಿ) ಹೆಚ್ಚು ದೂರದ ಗುರಿಗಳನ್ನು ಧ್ವಂಸ ಮಾಡುವ ಸಾಮರ್ಥ್ಯವಿರುವ ಝಿರ್​ಕೊನ್ ಕ್ಷಿಪಣಿಯು ಶಬ್ದದ ವೇಗಕ್ಕಿಂತಲೂ 9 ಪಟ್ಟು ಹೆಚ್ಚು ವೇಗವಾಗಿ ಚಲಿಸಬಲ್ಲದು. ರಷ್ಯಾ ಸೇನಾಪಡೆಯ ಬತ್ತಳಿಕೆಗೆ ಈ ಕ್ಷಿಪಣಿ ಸೇರಿದರೆ, ಸೇನೆಯ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದರು. ಆದರೆ ಸೇನೆಯ ಬಳಕೆಗೆ ಈ ಕ್ಷಿಪಣಿ ಸೇರ್ಪಡೆಯಾಗಲು ಇನ್ನೂ ಕೆಲ ಪರೀಕ್ಷೆಗಳು ನಡೆಯಬೇಕಿದೆ. ಇವು ಪೂರ್ಣಗೊಳ್ಳಲು ಇನ್ನೂ ಒಂದು ವರ್ಷ ಬೇಕಾಗಬಹುದು. ಅನಂತರವಷ್ಟೇ, ಅಂದರೆ 2022ರಲ್ಲಿ ಈ ಕ್ಷಿಪಣಿಯು ರಷ್ಯಾ ನೌಕಾಪಡೆಯ ಶಸ್ತ್ರಾಗಾರ ಸೇರಬಹುದು ಎಂದು ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

ರಷ್ಯಾ ಪ್ರಸ್ತುತ ಅಭಿವೃದ್ಧಿಪಡಿಸುತ್ತಿರುವ ಹೊಸ ತಲೆಮಾರಿನ ಹಲವು ಕ್ಷಿಪಣಿಗಳ ಪೈಕಿ ಝಿರ್​ಕೊನ್ ಮುಂಚೂಣಿಯಲ್ಲಿದೆ. ಮುಂದಿನ ವರ್ಷಗಳಲ್ಲಿ ರಷ್ಯಾದ ಬಹುತೇಕ ಯುದ್ಧನೌಕೆಗಳು ಮತ್ತು ಜಲಾಂತರ್ಗಾಮಿಗಳಲ್ಲಿ ಈ ಕ್ಷಿಪಣಿ ಅಳವಡಿಸಲು ಅಲ್ಲಿನ ಸರ್ಕಾರ ಉದ್ದೇಶಿಸಿದೆ. ಉಕ್ರೇನ್​ನ ಕ್ರಿಮಿಯನ್ ಪ್ರಸ್ತಭೂಮಿಯನ್ನು ರಷ್ಯಾ ವಶಪಡಿಸಿಕೊಂಡ ನಂತರ ಅಮೆರಿಕ ಸೇರಿದಂತೆ ಹಲವು ನ್ಯಾಟೊ ಸದಸ್ಯ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧಗಳು ಹದಗೆಟ್ಟಿವೆ. ಈ ಬೆಳವಣಿಗೆಯ ನಂತರ ತನ್ನ ನೌಕಾಪಡೆಗೆ ಅತ್ಯಾಧುನಿಕ ಶಸ್ತ್ರಗಳನ್ನು ಸೇರಿಸಿಕೊಳ್ಳಲು ರಷ್ಯಾ ಕಾರ್ಯತಂತ್ರ ರೂಪಿಸಿದೆ.

(Russian Navy test fires new hypersonic missile Zircon from Nuclear Submarine)

ಇದನ್ನೂ ಓದಿ: ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ತುಂಬಿದ ಐಎನ್​ಎಸ್​ ವಿಕ್ರಾಂತ್: ಸ್ವಾವಲಂಬನೆಯತ್ತ ಭಾರತೀಯ ನೌಕಾಪಡೆ ದಿಟ್ಟ ಹೆಜ್ಜೆ

ಇದನ್ನೂ ಓದಿ: ಹಂಟರ್​ ಕಿಲ್ಲರ್: ಅರ್ಜುನ್ ಮಾರ್ಕ್​-1ಎ ಯುದ್ಧಟ್ಯಾಂಕ್​ನಲ್ಲಿ ಏನಿದೆ ಹೊಸತು, ಸೇನೆಗೆ ಹೊಸ ಟ್ಯಾಂಕ್ ಸೇರ್ಪಡೆಗೆ ಏಕಿಷ್ಟು ಮಹತ್ವ

ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ರಾಜ್ಯ ಬಿಜೆಪಿ ನಾಯಕತ್ವದಿಂದ ಅಂತರ ಕಾಯ್ದುಕೊಂಡಿರುವ ಸಿದ್ದೇಶ್ವರ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ
ಹಿಂದೂಗಳು ದುರ್ಬಲರು, ಆತ್ಮಹತ್ಯಾ ಬಾಂಬರ್​ಗಳನ್ನು ಕಳುಹಿಸುತ್ತೇನೆ