Sign In

By signing in or creating an account, you agree with Associated Broadcasting Company's Terms & Conditions and Privacy Policy.

Lars Vilks: ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರ ರಚಿಸಿದ್ದ ಕಾರ್ಟೂನಿಸ್ಟ್​ ಕಾರು ಅಪಘಾತದಲ್ಲಿ ಸಾವು; ಇಬ್ಬರು ಪೊಲೀಸ್​ ಸಿಬ್ಬಂದಿಯ ದುರ್ಮರಣ

ವಿಲ್ಕ್ಸ್​ ಸಾವಿನ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಸ್ವೀಡಿಶ್​ ಪೊಲೀಸರು, ನಿಜಕ್ಕೂ ಇದು ದುರಂತ. ಈ ಪ್ರಕರಣವನ್ನು ಸುಲಭಕ್ಕೆ ಬಿಡುವುದಿಲ್ಲ ಎಂದಿದ್ದಾರೆ.

Lars Vilks: ಪ್ರವಾದಿ ಮೊಹಮ್ಮದರ ವ್ಯಂಗ್ಯಚಿತ್ರ ರಚಿಸಿದ್ದ ಕಾರ್ಟೂನಿಸ್ಟ್​ ಕಾರು ಅಪಘಾತದಲ್ಲಿ ಸಾವು; ಇಬ್ಬರು ಪೊಲೀಸ್​ ಸಿಬ್ಬಂದಿಯ ದುರ್ಮರಣ
ಲಾರ್ಸ್​ ವಿಲ್ಕ್ಸ್​
Follow us
TV9 Web
| Updated By: Lakshmi Hegde

Updated on: Oct 04, 2021 | 5:24 PM

2007ರಲ್ಲಿ ಪ್ರವಾದಿ ಮೊಹಮ್ಮದರ ಮುಖವನ್ನು ನಾಯಿಯ ದೇಹದೊಂದಿಗೆ ಚಿತ್ರಿಸಿ, ತೀವ್ರ ವಿವಾದ ಸೃಷ್ಟಿಸಿದ್ದ ಸ್ವೀಡಿಶ್​ ವ್ಯಂಗ್ಯಚಿತ್ರಕಾರ ಲಾರ್ಸ್​ ವಿಲ್ಕ್ಸ್​ ಭಾನುವಾರ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವೀಡನ್​​ ದೇಶದ ಮಾರ್ಕರಿಡ್‌ನ  ದಕ್ಷಿಣ ಪಟ್ಟಣದಲ್ಲಿ ಕಾರು ಅಪಘಾತವಾಗಿ ಕಾರ್ಟೂನಿಸ್ಟ್​ ಮೃತಪಟ್ಟಿದ್ದಾಗಿ ಮಾಹಿತಿ ನೀಡಿದ್ದಾರೆ.  

75ವರ್ಷದ ವಿಲ್ಕ್ಸ್​​ 2007ರಿಂದ ಈಚೆಗೆ ಪೊಲೀಸ್​ ರಕ್ಷಣೆಯಲ್ಲೇ ಇದ್ದರು. ಅವರು ಪ್ರವಾದಿ ಮೊಹಮ್ಮದರ ವಿವಾದಾತ್ಮಕ ಚಿತ್ರ ರಚನೆ ಮಾಡಿ, ಅದು ಪ್ರಕಟವಾದಾಗಿನಿಂದಲೂ ಜೀವ ಅಪಾಯದಲ್ಲೇ ಇತ್ತು. ಅನೇಕ ಕಡೆಗಳಿಂದ ಜೀವ ತೆಗೆಯುವುದಾಗಿ ಬೆದರಿಕೆಗಳು ಬಂದಿದ್ದವು. ಭಾನುವಾರವೂ ಕೂಡ ಅವರು ಪೊಲೀಸ್​ ವಾಹನದಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಅವರಿದ್ದ ಕಾರಿಗೆ ಟ್ರಕ್​ವೊಂದು ಡಿಕ್ಕಿಯಾಗಿದೆ. ಘಟನೆಯಲ್ಲಿ ಕಾರ್ಟೂನಿಸ್ಟ್​ ಜತೆ ಇನ್ನಿಬ್ಬರು ಪೊಲೀಸ್​ ಅಧಿಕಾರಿಗಳೂ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ವಿಲ್ಕ್ಸ್​ ಸಾವಿನ ಬಗ್ಗೆ ಸೋಮವಾರ ಹೇಳಿಕೆ ಬಿಡುಗಡೆ ಮಾಡಿರುವ ಸ್ವೀಡಿಶ್​ ಪೊಲೀಸರು, ನಿಜಕ್ಕೂ ಇದು ದುರಂತ. ಈ ಪ್ರಕರಣವನ್ನು ಸುಲಭಕ್ಕೆ ಬಿಡುವುದಿಲ್ಲ. ನಾವು ತನಿಖೆ ನಡೆಸುತ್ತೇವೆ. ಸದ್ಯದ ಮಟ್ಟಿಗೆ ಈ ಅಪಘಾತದಲ್ಲಿ ಬೇರೆ ಯಾರದ್ದೋ ಕೈವಾಡವಿದೆ ಎಂದು ಹೇಳಲು ಯಾವುದೇ ಸಾಕ್ಷಿಗಳೂ ಇಲ್ಲ ಎಂದಿದ್ದಾರೆ.

ಇನ್ನು ಪ್ರವಾದಿ ಮೊಹಮ್ಮದರ ಚಿತ್ರ ಬಿಡಿಸುವುದು, ಅವರ ವಿರುದ್ಧ ಏನೇ ಮಾತನಾಡಿದರೂ ಅದನ್ನು ಇಸ್ಲಾಂನಲ್ಲಿ ಬಹುಪಾಲು ಜನರು ಸಹಿಸುವುದಿಲ್ಲ. ಅಂಥವ ಹತ್ಯೆ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಅಂಥದ್ದರಲ್ಲಿ ಈ ವಿಲ್ಕ್ಸ್​ ಪ್ರವಾದಿಯವರನ್ನು ಕೆಟ್ಟದಾಗಿ ಚಿತ್ರಿಸಿದ್ದರು. ಅಂದಿನಿಂದಲೂ ಹಲವರು ವಿಲ್ಕ್ಸ್​ರನ್ನು ಟಾರ್ಗೆಟ್​ ಮಾಡಿದ್ದರು. ಅವರನ್ನು ಪತ್ತೆ ಹಚ್ಚಿದವರಿಗೆ, ಹತ್ಯೆ ಮಾಡಿದವರಿಗೆ ಬಹುಮಾನವನ್ನೂ ಘೋಷಿಸಲಾಗಿತ್ತು. 2015ರಲ್ಲಿ ವಿಲ್ಕ್ಸ್​ ಕೋಪನ್ ಹ್ಯಾಗನ್​​ನಲ್ಲಿ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಮಾರಂಭ ನಡೆದ ಬೆನ್ನಲ್ಲೇ  ಅದರಲ್ಲಿ ಪಾಲ್ಗೊಂಡವರೊಬ್ಬರನ್ನು ಹತ್ಯೆ ಮಾಡಲಾಗಿತ್ತು. ವಿಲ್ಕ್ಸ್​ ಮನೆ ಮೇಲೆ ಬಾಂಬ್​ ದಾಳಿ ಕೂಡ ಆಗಿತ್ತು. ಆದರೆ 2007ರಿಂದಲೂ ಇಲ್ಲಿಯವರೆಗೂ ಅವರು ಪೊಲೀಸ್​ ಭದ್ರತೆಯಲ್ಲೇ ಇದ್ದು, ಜೀವ ಕಾಪಾಡಿಕೊಂಡಿದ್ದರು.

ಇದನ್ನೂ ಓದಿ: ನಟ ರಕ್ಷಿತ್​ ಶೆಟ್ಟಿ ಕಡೆಯಿಂದ ಮಹತ್ವದ ಘೋಷಣೆ; ಅಭಿಮಾನಿಗಳಿಗೆ ಇದು ಖುಷಿ ಸುದ್ದಿ

2 ವರ್ಷದಿಂದ ವೇತನ ಸಿಕ್ಕಿಲ್ಲ ಎಂದು 104 ಆರೋಗ್ಯವಾಣಿ ಸಿಬ್ಬಂದಿಗಳಿಂದ ಪ್ರತಿಭಟನೆ, ಆರೋಗ್ಯ ಇಲಾಖೆ ಆಯುಕ್ತ ಹೇಳಿದ್ದೇನು?