ನಟ ರಕ್ಷಿತ್​ ಶೆಟ್ಟಿ ಕಡೆಯಿಂದ ಮಹತ್ವದ ಘೋಷಣೆ; ಅಭಿಮಾನಿಗಳಿಗೆ ಇದು ಖುಷಿ ಸುದ್ದಿ

ಚಿತ್ರದಲ್ಲಿ ರಾಜ್​ ಬಿ.ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ.

ನಟ ರಕ್ಷಿತ್​ ಶೆಟ್ಟಿ ಕಡೆಯಿಂದ ಮಹತ್ವದ ಘೋಷಣೆ; ಅಭಿಮಾನಿಗಳಿಗೆ ಇದು ಖುಷಿ ಸುದ್ದಿ
ರಕ್ಷಿತ್​ ಶೆಟ್ಟಿ
Follow us
| Updated By: ರಾಜೇಶ್ ದುಗ್ಗುಮನೆ

Updated on: Oct 04, 2021 | 5:08 PM

‘ಗರುಡ ಗಮನ ವೃಷಭ ವಾಹನ’ ಸಿನಿಮಾವನ್ನು ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ರಾಜ್​ ಬಿ. ಶೆಟ್ಟಿ ನಿರ್ದೇಶನ ಮಾಡಿ ನಟಿಸಿದ್ದಾರೆ. ಈಗ ಈ ಸಿನಿಮಾಗೆ ರಕ್ಷಿತ್​ ಶೆಟ್ಟಿ ಬೆಂಬಲ ನೀಡಿದ್ದಾರೆ. ಅವರು ಈ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ. ಇದರಿಂದ ಸಿನಿಮಾಗೆ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ರಿಷಬ್​ ಶೆಟ್ಟಿ ಕೂಡ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ.

‘ಒಂದು ಸಿನಿಮಾ ನಮ್ಮನ್ನು ಮೂರು ಘಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದು ಅದರ ಸಾಮರ್ಥ್ಯ. ಆದರೆ ಅದೇ ಸಿನಿಮಾ ದಿನಗಳಗಟ್ಟಲೆ ಕಾಡುತ್ತಿದೆ ಅಂದರೆ ಅದು ನಮ್ಮನ್ನು ಆವರಿಸಿಕೊಂಡಿದೆ ಎಂದರೆ ತಪ್ಪಾಗಲಾರದು. ಅದು ಬರಿ ಸಾಮರ್ಥ್ಯವಲ್ಲ, ಅದನ್ನೂ ಮೀರಿದ ಶಕ್ತಿ. ಈ ಕಲಾ ಕುಸುರಿಗೆ ನಾನು, ನನ್ನ ಮನಸಲ್ಲಿ ಗಟ್ಟಿಯಾದ ಜಾಗ ಮಾಡಿಕೊಟ್ಟಿರುವೆ. ಬಹುಶಃ ನಾನು ಅದೇ ಭಾಗದ ಕಂಪನ್ನು ಹಂಚಿಕೊಂಡಿರುವುದಕ್ಕಾ? ಅಥವಾ ಸಿನಿಮಾದ ಪಾತ್ರಗಳು ಮತ್ತು ಅವರು ಕಟ್ಟಿಕೊಟ್ಟಿರುವ ದೃಶ್ಯಾವಳಿ ಮನಸ್ಸಿನ ಉಸಿರಾಟವನ್ನು ಹಿಡಿದಿತ್ತಾ? ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕುವಂತೆ ಅನಿಸಿತ್ತು. ಇವೆ ಮುಖ್ಯ ಕಾರಣಗಳ? ಅಲ್ಲ. ಇದನ್ನು ಮೀರಿದ ಅವಿನಾಭಾವ ಸಿಲುಕುವಿಕೆ ಹಾಗೂ ಅಭಿನಯ ಮತ್ತು ಚಿತ್ರಕಥೆ’ ಎಂದು ಪತ್ರ ಆರಂಭಿಸಿದ್ದಾರೆ.

‘ರಾಜ್ ಶೆಟ್ಟಿ ಎಂಬ ಪ್ರತಿಭೆ ಯಾವ ದೇವರ ವರವೋ ಗೊತ್ತಿಲ್ಲ. ಕನ್ನಡ ಚಿತ್ರರಂಗಕ್ಕೆ, ಅವರ ತಪಸ್ಸು, ನಿಷ್ಠೆ, ಆತ್ಮ ಸಮರ್ಪಣೆ ಎಲ್ಲವೂ ಸೇರಿ ಅವರನ್ನು ಒಬ್ಬ ಉತ್ತಮ ಬಾರಹಗಾರನನ್ನಾಗಿ ಮಾಡಿದೆ. ಇದರಲ್ಲಿ ಅವರ ನಿರ್ದೇಶನ ಮತ್ತು ಅಭಿನಯ ಹೃದಯ ಕಣಿವೆಯಲ್ಲಿ ಚಪ್ಪಾಳೆ ಹರಿಸುತ್ತದೆ. ಇಂತಹ ಕಲಾ ಕನಸಿನೊಂದಿಗೆ ಕೈ ಜೋಡಿಸುವುದು, ನನ್ನ ಕನಸು ನನಸಾದಷ್ಟೇ ಸಂತೋಷ. Paramvah Pictures ಮೂಲಕ ಇದನ್ನು ನಿಮಗೆ ಅರ್ಪಿಸುತ್ತೇವೆ. ನಿಮ್ಮ ಪ್ರೀತಿಯ ಬೆಂಬಲಕ್ಕಿಂತ ಇನ್ನೇನು ಕೇಳಲಿ’  ಎಂದು ಪತ್ರ ಮುಗಿಸಿದ್ದಾರೆ ರಕ್ಷಿತ್​.

ಚಿತ್ರದಲ್ಲಿ ರಾಜ್​ ಬಿ.ಶೆಟ್ಟಿ ಮತ್ತು ರಿಷಬ್​ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ತೆರೆಯ ಮೇಲೆ ಯಾವ ರೀತಿಯ ಕಮಾಲ್ ಮಾಡಲಿದ್ದಾರೆ ಎಂದು ಕಾದುನೋಡಬೇಕಿದೆ. ಸಿನಿರಸಿಕರಲ್ಲಿ ‘ಗರುಡ ಗಮನ ವೃಷಭ ವಾಹನ’ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಇದ್ದು, ಚಿತ್ರ ಬಿಡುಗಡೆಯಾಗುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ಕಾಯುತ್ತಿದ್ದಾರೆ.

ಇದನ್ನೂ ಓದಿ: ಕಿರಿಕ್​ ಪಾರ್ಟಿ ರೀತಿ ಡಿಸೆಂಬರ್​ನಲ್ಲಿ ರಕ್ಷಿತ್​ ಶೆಟ್ಟಿ ಅದೃಷ್ಟ ಪರೀಕ್ಷೆ; ‘777 ಚಾರ್ಲಿ’ ಟಾರ್ಚರ್​ಗೆ ಧರ್ಮ ಸುಸ್ತೋ ಸುಸ್ತು​

SIIMA Awards: ಒಂದೇ ಕಾರ್ಯಕ್ರಮದಲ್ಲಿ ರಕ್ಷಿತ್​ ಶೆಟ್ಟಿ-ರಶ್ಮಿಕಾ; ಪ್ರತಿಷ್ಠಿತ ಅವಾರ್ಡ್​ ಬಾಚಿಕೊಂಡ ಕಿರಿಕ್​ ಜೋಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ