ಕಿರಿಕ್ ಪಾರ್ಟಿ ರೀತಿ ಡಿಸೆಂಬರ್ನಲ್ಲಿ ರಕ್ಷಿತ್ ಶೆಟ್ಟಿ ಅದೃಷ್ಟ ಪರೀಕ್ಷೆ; ‘777 ಚಾರ್ಲಿ’ ಟಾರ್ಚರ್ಗೆ ಧರ್ಮ ಸುಸ್ತೋ ಸುಸ್ತು
Rakshit Shetty | 777 Charlie: ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲೂ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಗಳಲ್ಲೂ ‘ಟಾರ್ಚರ್ ಸಾಂಗ್’ ರಿಲೀಸ್ ಆಗಿದೆ.
‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಸಿನಿಮಾ ಮೇಲೆ ಅವರ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಮೊದಲೇ ಬಿಡುಗಡೆ ಆಗಿದ್ದ ಟೀಸರ್ ಮತ್ತು ಪೋಸ್ಟರ್ಗಳಿಂದ ಅಭಿಮಾನಿಗಳಿಗೆ ಕೌತುಕ ಹೆಚ್ಚಿತ್ತು. ಅದನ್ನು ದುಪ್ಪಟ್ಟು ಮಾಡುವ ರೀತಿಯಲ್ಲಿ ಈಗ ಮೊದಲ ಸಾಂಗ್ ಬಿಡುಗಡೆ ಆಗಿದೆ. ‘ಟಾರ್ಚರ್..’ ಹಾಡು ಸೆ.9ರಂದು ಬಿಡುಗಡೆ ಆಗಲಿದೆ ಎಂದು ಹೇಳುವ ಮೂಲಕ ಚಿತ್ರತಂಡ ನಿರೀಕ್ಷೆ ಹುಟ್ಟುಹಾಕಿತ್ತು. ಇದೀಗ ಸಾಂಗ್ ರಿಲೀಸ್ ಆಗಿದ್ದು, ಶ್ವಾನಪ್ರಿಯರಿಂದ ಮೆಚ್ಚುಗೆ ಗಳಿಸಿಕೊಳ್ಳುತ್ತಿದೆ.
ಈಗಾಗಲೇ ಗೊತ್ತಾಗಿರುವಂತೆ ಇದು ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಕಥೆ ಹೇಳುವ ಸಿನಿಮಾ. ಆದರೆ ಈ ಸಾಂಗ್ನಲ್ಲಿ ಕಥಾನಾಯಕ ಧರ್ಮ ಮತ್ತು ಆತನ ನಾಯಿ ಚಾರ್ಲಿ ನಡುವಿನ ಕಿತ್ತಾಟವೇ ಹೈಲೈಟ್ ಆಗಿದೆ. ಚಾರ್ಲಿ ಕೊಟ್ಟ ಟಾರ್ಚರ್ಗೆ ಧರ್ಮ ಹೈರಾಣಾಗಿ ಹೋಗಿದ್ದಾನೆ. ಹಾಗಾದರೆ ಸಿನಿಮಾದ ಕಥೆ ಮುಂದೇನಾಗುತ್ತದೆ ಎಂಬ ಕೌತುಕ ಸಿನಿಪ್ರಿಯರಲ್ಲಿ ಮೂಡುವಂತಾಗಿದೆ. ಈ ಚಿತ್ರಕ್ಕೆ ಕಿರಣ್ರಾಜ್ ನಿರ್ದೇಶನ ಮಾಡಿದ್ದು, ನೋಬಿನ್ ಪೌಲ್ ಸಂಗೀತ ನಿರ್ದೇಶನ ಮಾಡಿದ್ದಾರೆ.
Presenting two special news of our film today. 777 Charlie in theatres from 31st December 2021. And Torture Song, our first video song is now out on #ParamvahMusic.
Your every gesture of love and support matters!❤#777Charlie #TortureSong pic.twitter.com/k9ve8WT0UZ
— Kiranraj K (@Kiranraj61) September 9, 2021
ಕನ್ನಡ ಮಾತ್ರವಲ್ಲದೆ ತೆಲುಗು, ಮಲಯಾಳಂ, ಹಿಂದಿ ಮತ್ತು ತಮಿಳಿನಲ್ಲೂ ‘777 ಚಾರ್ಲಿ’ ಬಿಡುಗಡೆ ಆಗಲಿದೆ. ಈ ಎಲ್ಲ ಭಾಷೆಗಳಲ್ಲೂ ‘ಟಾರ್ಚರ್ ಸಾಂಗ್’ ರಿಲೀಸ್ ಆಗಿದೆ. ಕನ್ನಡ ವರ್ಷನ್ಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದಿದ್ದಾರೆ. ಈ ಹಾಡಿನ ಜೊತೆಗೆ ಇನ್ನೊಂದು ಬ್ರೇಕಿಂಗ್ ನ್ಯೂಸ್ ನೀಡಿದೆ ಚಿತ್ರತಂಡ. ‘777 ಚಾರ್ಲಿ’ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಇದೇ ವರ್ಷ ಡಿ.31ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ನಮ್ಮ “777 ಚಾರ್ಲಿ” ಚಿತ್ರದ ಮೊದಲ ಹಾಡು “ಟಾರ್ಚರ್ ಸಾಂಗ್” ಇದೀಗ ನಿಮ್ಮ ಮುಂದೆ ✨
https://t.co/2JpEkDiMfC#777Charlie ಚಿತ್ರ ಇದೇ ಡಿಸೆಂಬರ್ 31ಕ್ಕೆ ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲರ ಪ್ರೀತಿ, ಪ್ರೋತ್ಸಾಹ, ಆಶೀರ್ವಾದ ಸದಾ ಇರಲಿ ?#TortureSongOutNow #777CharlieOnDec31 pic.twitter.com/0RqTyJ6NPI
— Rakshit Shetty (@rakshitshetty) September 9, 2021
ರಕ್ಷಿತ್ ಶೆಟ್ಟಿ ವೃತ್ತಿಜೀವನಕ್ಕೆ ಬಹುದೊಡ್ಡ ಬ್ರೇಕ್ ನೀಡಿದ ಸಿನಿಮಾ ಕಿರಿಕ್ ಪಾರ್ಟಿ. ಆ ಚಿತ್ರ ಕೂಡ ಡಿಸೆಂಬರ್ ಅಂತ್ಯಕ್ಕೆ (ಡಿ.30) ತೆರೆಕಂಡು ಧೂಳೆಬ್ಬಿಸಿತ್ತು. ಈಗ ಅದೇ ಸಮಯಕ್ಕೆ ‘777 ಚಾರ್ಲಿ’ ಮೂಲಕ ರಕ್ಷಿತ್ ಶೆಟ್ಟಿ ಅದೃಷ್ಟ ಪರೀಕ್ಷೆಗೆ ಮುಂದಾಗುತ್ತಿರುವುದು ವಿಶೇಷ.
ಇದನ್ನೂ ಓದಿ:
ಉಡುಪಿಯಲ್ಲಿ ರಕ್ಷಿತ್ ಶೆಟ್ಟಿ ಹುಲಿಕುಣಿತ; ಲೋಬಾನ ಹಾಕುವ ಸಂಪ್ರದಾಯದಲ್ಲಿ ‘ಸಿಂಪಲ್ ಸ್ಟಾರ್’ ಭಾಗಿ
‘ನಾನಿರೋದೇ ಹೀಗೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ’; ರಕ್ಷಿತ್ ಶೆಟ್ಟಿ ಮನವಿ