ಜಪಾನ್​ನ ನೂತನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರ; ಪ್ರಧಾನಿ ಮೋದಿಯಿಂದ ಅಭಿನಂದನೆ

ಜಪಾನ್​ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ​ ಫುಮಿಯೋ ಕಿಶಿಡಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಜಪಾನ್​ನ ನೂತನ ಪ್ರಧಾನಿಯಾಗಿ ಫುಮಿಯೋ ಕಿಶಿಡಾ ಅಧಿಕಾರ ಸ್ವೀಕಾರ; ಪ್ರಧಾನಿ ಮೋದಿಯಿಂದ ಅಭಿನಂದನೆ
ಫುಮಿಯೋ ಕಿಶಿಡಾ

ಜಪಾನ್​ನ 100ನೇ ಪ್ರಧಾನಮಂತ್ರಿಯಾಗಿ ಫುಮಿಯೋ ಕಿಶಿಡಾ ( ಇಂದು ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪ್ರಧಾನಿ ಯೋಶಿಹಿದೆ ಸುಗಾ ರಾಜೀನಾಮೆ ಬೆನ್ನಲ್ಲೇ ಫುಮಿಯೋ ಅಧಿಕಾರಕ್ಕೆ ಏರಿದ್ದಾರೆ. ಇವರ ಕ್ಯಾಬಿನೆಟ್​ ಕೂಡ ಶೀಘ್ರದಲ್ಲೇ ಪ್ರಮಾಣವಚನ ಸ್ವೀಕಾರ ಮಾಡಲಿದೆ. 64 ವರ್ಷದ ಕಿಶಿಡಾ ಜಪಾನ್​ ಆಡಳಿತ ಪಕ್ಷ ಲಿಬರಲ್ ಡೆಮಾಕ್ರಟಿಕ್​ ಪಾರ್ಟಿಯ ನಾಯಕರಾಗಿದ್ದು, ಕಳೆದ ವಾರ ಇವರನ್ನು ಪಕ್ಷದ ಶಾಸಕರು ಬಹುಮತದಿಂದ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಮಾಡಿದ್ದರು.  

ವಿದೇಶಾಂಗ ವ್ಯವಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಕಿಶಿಡಾ, ಪ್ರಧಾನಿ ಹುದ್ದೆಗೆ ಆಯ್ಕೆಯಾಗುತ್ತಿದ್ದಂತೆ ತಮ್ಮ ನೂತನ ಕ್ಯಾಬಿನೆಟ್​ನ್ನು ಘೋಷಿಸಿದ್ದಾರೆ. 20 ಜನರ ಹೆಸರನ್ನು ಹೇಳಿದ್ದು, ಅದರಲ್ಲಿ 13 ಮಂದಿ ಹೊಸಬರಾಗಿದ್ದಾರೆ. ಮೂವರು ಮಹಿಳೆಯರು ಇದ್ದಾರೆ. ಉಳಿದಷ್ಟು ಮಂದಿ ಹಿಂದಿನ ಕ್ಯಾಬಿನೆಟ್​​ನಲ್ಲಿ ಇದ್ದ ಅನುಭವಿಗಳಾಗಿದ್ದಾರೆ. ಪ್ರಧಾನಿ ಕಿಶಿಡಾ ಇಂದು ಪ್ರಧಾನಿಯಾಗುತ್ತಿದ್ದಂತೆ ಒಂದು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅವರು ಇಂದು ರಾತ್ರಿ 9ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದು, ಅದರಲ್ಲಿ ಚುನಾವಣೆ ದಿನಾಂಕ ಘೋಷಣೆ ಮಾಡಲಿದ್ದಾರೆ ಎಂದು ಜಪಾನ್ ಪ್ರಧಾನಿ ಕಚೇರಿ ಮಾಹಿತಿ ನೀಡಿದೆ. ಜಪಾನ್ ಸಂಸತ್ತಿನ ಅವಧಿ ಅಕ್ಟೋಬರ್​ 21ಕ್ಕೆ ಮುಕ್ತಾಯಗೊಳ್ಳಲಿದ್ದು, ನವೆಂಬರ್ 28ರೊಳಗೆ ಚುನಾವಣೆ ನಡೆಯಬೇಕು. ಆದರೆ ಕಿಶಿಡಾ ಪ್ರಧಾನಿ ಹುದ್ದೆಗೆ ಏರುತ್ತಿದ್ದಂತೆ ಚುನಾವಣೆ ದಿನಾಂಕ ನಿಗದಿ ಮಾಡುತ್ತಿರುವುದು ಅಚ್ಚರಿ ಎನ್ನಲಾಗಿದೆ.

ಪ್ರಧಾನಿ ಮೋದಿ ಅಭಿನಂದನೆ ಜಪಾನ್​ ನೂತನ ಪ್ರಧಾನಿ​ ಫುಮಿಯೋ ಕಿಶಿಡಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ. ವಿಶೇಷ ಕಾರ್ಯತಂತ್ರ, ಜಾಗತಿಕ ಪಾಲುದಾರಿಕೆ, ಶಾಂತಿ ಬಲಪಡಿಸುವ ನಿಟ್ಟಿನಲ್ಲಿ ಫುಮಿಯೋ ಕಿಶಿಡಾ ಅವರೊಟ್ಟಿಗೆ ಸೇರಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: IPL 2021: ಚೊಚ್ಚಲ ಪಂದ್ಯದಲ್ಲೇ ತನ್ನ ಬಾಹುಬಲ ಪ್ರದರ್ಶಿಸಿದ ಕಾಶ್ಮೀರಿ ಯುವ ಬೌಲರ್; ದಿಗ್ಭ್ರಮೆಗೊಂಡ ಎದುರಾಳಿ ಬ್ಯಾಟರ್

Bengaluru Crime: ಮಾರಕಾಸ್ತ್ರಗಳಿಂದ ಹೊಡೆದು ಬೈಕ್​ನಲ್ಲಿ ತೆರಳುತ್ತಿದ್ದ ರೌಡಿ ಶೀಟರ್​​ ಹತ್ಯೆ

Click on your DTH Provider to Add TV9 Kannada