AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explained: ನಾಯಿ ಮಾಂಸ ನಿಷೇಧಿಸಲು ದಕ್ಷಿಣ ಕೊರಿಯಾ ಅಧ್ಯಕ್ಷ ಚಿಂತನೆ; ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ

South Korea: ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಪ್ರಮಾಣ ಕ್ರಮೇಣ ಕಡಿಮೆ ಆಗುತ್ತಿದೆ. ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೂಡ 2,000ನೇ ಇಸವಿ ಬಳಿಕ ನಾಯಿ ಮಾಂಸ ಸೇವನೆ ಇಳಿಕೆ ಆಗಿದೆ ಎಂದು ಅಕಾಡೆಮಿ ಆಫ್ ಕೊರಿಯನ್ ಸ್ಟಡೀಸ್​ನ ಪ್ರೊಫೆಸರ್ ಡಾ. ಜೂ ಯಂಗ್ ಹಾ ಹೇಳಿದ್ದಾರೆ.

Explained: ನಾಯಿ ಮಾಂಸ ನಿಷೇಧಿಸಲು ದಕ್ಷಿಣ ಕೊರಿಯಾ ಅಧ್ಯಕ್ಷ ಚಿಂತನೆ; ಕಾರಣವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ
ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾಇನ್
TV9 Web
| Updated By: ganapathi bhat|

Updated on:Oct 04, 2021 | 6:02 PM

Share

ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಜಾಇನ್ ದೇಶದಲ್ಲಿ ನಾಯಿ ಮಾಂಸ ಸೇವನೆ ನಿರ್ಬಂಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಪ್ರಾಣಿ ಸಂರಕ್ಷಣೆ ವಿಚಾರ ಜೋರಾಗಿ ಚರ್ಚೆಯಲ್ಲಿ ಇರುವ ವೇಳೆ ಈ ಚಿಂತನೆ ಕೇಳಿಬಂದಿದೆ. ಆಹಾರಕ್ಕಾಗಿ ನಾಯಿಗಳನ್ನು ಕೊಲ್ಲುವ ಕುರಿತಾಗಿ ಕೂಡ ದಕ್ಷಿಣ ಕೊರಿಯಾದಲ್ಲಿ ಚರ್ಚೆಗಳು ನಡೆದಿವೆ. ಆಗಸ್ಟ್ ತಿಂಗಳಲ್ಲಿ ದಕ್ಷಿಣ ಕೊರಿಯಾದ ನ್ಯಾಯಾಂಗ ಸಚಿವಾಲಯದ ಲೀಗಲ್ ಕೌನ್ಸೆಲ್​ನ ಮಹಾನಿರ್ದೇಶಕ ಚೌಂಗ್ ಜಾ ಮಿನ್, ಸಾಕುಪ್ರಾಣಿಗಳನ್ನು ಹಿಂಸಿಸುವವರ ವಿರುದ್ಧ ಸೂಕ್ತ ಕಾನೂನು ತರುವ ಬಗ್ಗೆ ಸಂದರ್ಶನ ಒಂದರಲ್ಲಿ ಹೇಳಿದ್ದರು. ಈ ವಾರ ಫೂಟ್​ಬಾಲ್ ಕ್ಲಬ್​ನ ಅಧಿಕೃತ ಪಾಡ್​ಕಾಸ್ಟ್​ನಲ್ಲಿ ಮಾಜಿ ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರ ಪಾರ್ಕ್ ಜಿ ಸಂಗ್, ಕೊರಿಯಾದವರು ನಾಯಿ ಮಾಂಸ ಸೇವಿಸುವ ಬಗ್ಗೆ ಉಲ್ಲೇಖ ಇರುವ ಹಾಡು ಹಾಡದಂತೆ ಕೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಕೊರಿಯಾ ಅಧ್ಯಕ್ಷರ ಚಿಂತನೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.

ದಕ್ಷಿಣ ಕೊರಿಯಾದಲ್ಲಿ ನಾಯಿ ಮಾಂಸ ಸೇವನೆ ಪ್ರಮಾಣ ಕ್ರಮೇಣ ಕಡಿಮೆ ಆಗುತ್ತಿದೆ. ಚೀನಾ ಹಾಗೂ ಇತರ ಕೆಲವು ದೇಶಗಳಲ್ಲಿ ಕೂಡ 2,000ನೇ ಇಸವಿ ಬಳಿಕ ನಾಯಿ ಮಾಂಸ ಸೇವನೆ ಇಳಿಕೆ ಆಗಿದೆ ಎಂದು ಅಕಾಡೆಮಿ ಆಫ್ ಕೊರಿಯನ್ ಸ್ಟಡೀಸ್​ನ ಪ್ರೊಫೆಸರ್ ಡಾ. ಜೂ ಯಂಗ್ ಹಾ ಹೇಳಿದ್ದಾರೆ. 1988 ರಲ್ಲಿ ದೇಶ ಒಲಿಂಪಿಕ್ ಕೂಟ ಆಯೋಜಿಸಿತ್ತು. ಆಗ ಹಲವು ವಿದೇಶಿಗರಿಂದ ಈ ಮಾಂಸ ವಿಚಾರವಾಗಿ ಟೀಕೆ ಎದುರಿಸಿತ್ತು. ಹಾಗೂ ದಕ್ಷಿಣ ಕೊರಿಯಾ ಜನರು ಪಾಶ್ಚಾತ್ಯ ಸಂಸ್ಕೃತಿಯಿಂದಲೂ ಪ್ರಭಾವಿತರಾಗಿದ್ದರು ಎಂದು ಅವರು ಆಹಾರ ಕ್ರಮದ ಬದಲಾವಣೆ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಯ್ಟರ್ಸ್ ಸುದ್ದಿ ಸಂಸ್ಥೆಯ ಮಾಹಿತಿ ಪ್ರಕಾರ ದಕ್ಷಿಣ ಕೊರಿಯಾದಲ್ಲಿ ವಾರ್ಷಿಕವಾಗಿ ಸುಮಾರು ಒಂದು ಮಿಲಿಯನ್ ನಾಯಿಗಳನ್ನು ಈಗಲೂ ಆಹಾರಕ್ಕಾಗಿ ಕೊಲ್ಲಲಾಗುತ್ತಿದೆ. ಇತಿಹಾಸ ಹೇಳುವಂತೆ ದಕ್ಷಿಣ ಕೊರಿಯಾದಲ್ಲಿ ಗೊರ್ಯೆಯೊ ಕಾಲ ಮತ್ತು ಜೊಸೆಯೊನ್ ಕಾಲದಲ್ಲಿ ನಾಯಿ ಮಾಂಸ ಬಳಕೆಯಲ್ಲಿತ್ತು ಎಂದು ಹೇಳಲಾಗಿದೆ. 20ನೇ ಶತಮಾನದಲ್ಲಿ ಜನರು ದನ, ಹಂದಿ ಹಾಗೂ ಕೋಳಿ ಮಾಂಸ ತಿನ್ನಲು ಆರಂಭಿಸಿದರೂ ನಾಯಿ ಮಾಂಸ ಸೇವನೆ ನಿಲ್ಲಿಸಿಲ್ಲ ಎಂದು ತಿಳಿದುಬಂದಿದೆ.

ನಾಯಿಯೊಂದಿಗೆ ಜನರ ಭಾವನಾತ್ಮಕ ನಂಟು ಅದರ ಮಾಂಸ ಬಳಕೆ ಇಳಿಕೆಯಾಗಲು ಕಾರಣವಾಗುತ್ತಿದೆ ಶೇಕಡಾ 60 ಕ್ಕಿಂತ ಅಧಿಕ ಮಂದಿ ನಾಯಿಯನ್ನು ಮನೆಯ ಸಾಕು ಪ್ರಾಣಿ, ಪ್ರೀತಿಯ ಪ್ರಾಣಿ ಆಗಿಯೇ ಕಾಣುತ್ತಾರೆ. ಅದನ್ನು ಆಹಾರ ಎಂದು ಪರಿಗಣಿಸುವುದಿಲ್ಲ. ಇದು ಕೊರಿಯನ್ ಸಮಾಜದ ಆಂತರಿಕ ವೈರುಧ್ಯವಾಗಿಯೂ ಕಂಡಿದೆ. ಅಂತಾರಾಷ್ಟ್ರೀಯವಾಗಿ ದೇಶದ ಇಮೇಜ್ ವಿಚಾರಕ್ಕಿಂತಲೂ ಪ್ರಾಣಿಯೊಂದಿಗಿನ ಭಾವನಾತ್ಮಕ ನಂಟು ನಾಯಿ ಮಾಂಸದ ಮೇಲೆ ನಿರ್ಬಂಧ ತರುವಂತೆ ಮಾಡಿದೆ ಎಂದು ತಿಳಿದುಬಂದಿದೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಸ್ವತಃ ಶ್ವಾನ ಪ್ರೇಮಿ ಆಗಿದ್ದಾರೆ. ಹೀಗಾಗಿ ಇದೀಗ ಅವರ ಅವಧಿಯಲ್ಲಿ ನಾಯಿ ಮಾಂಸ ಸೇವನೆ ಅಥವಾ ಮಾರಾಟ ಸಂಪೂರ್ಣ ನಿಷೇಧಿಸುವ ಬಗ್ಗೆ ಚರ್ಚೆ ಆಗುತ್ತಿದೆ. ದಕ್ಷಿಣ ಕೊರಿಯಾದಲ್ಲಿ ಹಿಂಸಾತ್ಮಕವಾಗಿ ನಾಯಿ ಅಥವಾ ಬೆಕ್ಕನ್ನು ಕೊಲ್ಲುವುದು ನಿಷೇಧ ಇದ್ದರೂ ಅದರ ಮಾಂಸ ಸೇವನೆ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲ.

ದಕ್ಷಿಣ ಕೊರಿಯಾದಲ್ಲಿ ಕೋಳಿ, ಹಂದಿ, ದನ ಇತ್ಯಾದಿಗಳ ಮಾಂಸ ಸಿಗುತ್ತಿದೆ. ಹಾಗೂ ವಿಶೇಷವಾಗಿ ಯುವಜನರು ನಾಯಿ ಮಾಂಸ ಬಳಕೆಯನ್ನು ಇಷ್ಟಪಡುತ್ತಿಲ್ಲ. ಹಾಗಾಗಿ ಆಹಾರ ಸಂಸ್ಕೃತಿಯೂ ಬದಲಾಗುಯತ್ತಿದೆ ಎಂದು ಹೇಳಲಾಗಿದೆ. ಪ್ರಾಣಿ ಸಂರಕ್ಷಣಾ ಗ್ರೂಪ್ ಒಂದು ನಡೆಸಿರುವ ಸಮೀಕ್ಷೆಯಂತೆ ಅಲ್ಲಿ ಶೇಕಡಾ 78 ರಷ್ಟು ಮಂದಿ ನಾಯಿ ಹಾಗೂ ಬೆಕ್ಕಿನ ಮಾಂಸ ಉತ್ಪಾದನೆ ಮತ್ತು ಮಾರಾಟವನ್ನು ನಿಷೇಧಿಸುವುದಕ್ಕೆ ಬೆಂಬಲ ಸೂಚಿಸಿದ್ದಾರೆ.

ನಾಯಿ ಮಾಂಸಕ್ಕೆ ಮೊದಲು ಸಾಂಪ್ರದಾಯಿಕ ತಳಿಯ ನಾಯಿಗಳನ್ನು ಬಳಸಲಾಗುತ್ತಿತ್ತು. ಆದರೆ, ಸುಮಾರು 2,000ನೇ ಇಸವಿ ಬಳಿಕ ಸಾಂಪ್ರದಾಯಿಕ ತಳಿಯ ನಾಯಿಗಳ ಸಂಖ್ಯೆ, ಪ್ರಮಾಣ ಕಡಿಮೆ ಆಗುತ್ತಿದೆ. ಹಾಗೂ ಇತ್ತೀಚೆಗೆ ವಿದೇಶಗಳಿಂದ ಆಮದು ಮಾಡಿಕೊಂಡಿರುವ ಹೊಸ ಬ್ರೀಡ್ ನಾಯಿಗಳೇ ಅಧಿಕ ಸಂಖ್ಯೆಯಲ್ಲಿ ಇವೆ. ಅವುಗಳನ್ನೇ ಮಾಂಸಕ್ಕೆ ಕೂಡ ಬಳಸಲಾಗುತ್ತಿದೆ ಎಂದು ಡಾ. ಜೂ ಹೇಳಿದ್ದಾರೆ.

ಚುನಾವಣೆ ಪ್ರಚಾರ/ ಆಶ್ವಾಸನೆ ಕಳೆದ ಕೆಲವು ವರ್ಷಗಳಿಂದ ದಕ್ಷಿಣ ಕೊರಿಯಾ ಸರ್ಕಾರದ ಮೇಲೆ ನಾಯಿ ಮಾಂಸಕ್ಕೆ ಸಂಬಂಧಿಸಿದ ಫಾರ್ಮ್​ಗಳು, ಮಾರ್ಕೆಟ್​ಗಳು, ರೆಸ್ಟೋರೆಂಟ್​ಗಳನ್ನು ಮುಚ್ಚಲು ಭಾರೀ ಒತ್ತಡ ಇದೆ. ಈ ನಡುವೆ, ದಕ್ಷಿಣ ಕೊರಿಯಾದಲ್ಲಿ ಮುಂದಿನ ಮಾರ್ಚ್​ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಯಿ ಮಾಂಸ ಬ್ಯಾನ್ ಬಗ್ಗೆ ಚರ್ಚೆ ಪ್ರಾಮುಖ್ಯತೆ ಪಡೆದಿವೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ಕೂಡ ಈ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: Drugs Case: ಮರಣ ದಂಡನೆ, ಜೀವಾವಧಿ ಶಿಕ್ಷೆ.. ಡ್ರಗ್ ಪ್ರಕರಣಗಳಿಗೆ ಈ ದೇಶಗಳಲ್ಲಿ ಇವೆ ಕಠಿಣ ಕಾನೂನು!

ಇದನ್ನೂ ಓದಿ: Spain Volcano: ಸ್ಪೇನ್​ನ​ ಲಾ ಪಲ್ಮಾದಲ್ಲಿ ಜ್ವಾಲಾಮುಖಿ; ಹರಿದು ಸಾಗರ ಸೇರಿದ ಲಾವಾರಸ!

Published On - 6:01 pm, Mon, 4 October 21

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ