AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದವರು ಯಾರು ಗೊತ್ತಾ?

Guinness World Record: ಸ್ಪೇನ್​ನ ಸ್ಯಾಟರ್ನಿನೊ ಅವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡಿದ್ದಾರೆ. 112 ವರ್ಷಗಳ ಕಾಲ ಬದುಕಿರುವ ಇವರು ಗಿನ್ನಿಸ್​ ವರ್ಡ್​ ರೆಕಾರ್ಡ್​ನಲ್ಲಿ ಹೆಸರು ಪಡೆದಿದ್ದಾರೆ.

ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದವರು ಯಾರು ಗೊತ್ತಾ?
ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ಗೆ ಹೆಸರಾದ ವ್ಯಕ್ತಿ
Follow us
TV9 Web
| Updated By: shruti hegde

Updated on:Oct 04, 2021 | 12:41 PM

112 ವರ್ಷಗಳ ಕಾಲ ಬದುಕಿರುವ ಈ ವ್ಯಕ್ತಿ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಿಕೊಂಡು ಗಿನ್ನಿಸ್ ವರ್ಡ್ ರೆಕಾರ್ಡ್​ನಲ್ಲಿ ಹೆಸರು ಪಡೆದಿದ್ದಾರೆ. ಗಿನ್ನಿಸ್ ವರ್ಡ್ ರೆಕಾರ್ಡ್ ಪ್ರಕಾರ, ಸ್ಪೇನ್​ನಲ್ಲಿ 1019 ಫೆಬ್ರವರಿ 11ರಂದು ಸ್ಯಾಟರ್ನಿನೊ ಅವರು ಜನಿಸಿದರು. ಆದರೆ ಪ್ರತೀ ಬಾರಿ ಅವರು ತಮ್ಮ ಜನ್ಮ ದಿನವನ್ನು ಫೆಬ್ರವರಿ 8ರಂದು ಆಚರಿಸಿಕೊಳ್ಳುತ್ತಾರೆ. ಇದೀಗ ಸ್ಯಾಟರ್ನಿನೊ ಅವರಿಗೆ 112 ವರ್ಷ. ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಖ್ಯಾತಿಗೆ ಹೆಸರಾಗಿದ್ದಾರೆ.

ದೀರ್ಘಾಯುಷ್ಯದ ರಹಸ್ಯದ ಬಗ್ಗೆ ಅವರಲ್ಲಿ ಅಭಿಪ್ರಾಯ ಕೇಳಿದಾಗ ಉತ್ತರಿಸಿದ ಸ್ಯಾಟರ್ನಿನೊ, ಶಾಂತಿಯಿಂದ ಜೀವನ ನಡೆಸಿಕೊಂಡು ಬಂದೆ ಎಂದು ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. 4.92 ಅಡಿ ಎತ್ತರವಿರುವ ಅವರು ಶೂ ತಯಾರಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಅತ್ಯಂತ ಪ್ರೀತಿಯಿಂದ ಶಾಂತಿಯಿಂದ ತಮ್ಮ ಪತ್ನಿಯೊಡನೆ ಜೀವನ ಸಾಗಿಸಿದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಈ ಕುರಿತಂತೆ ಟೈಮ್ಸ್​ ನೌ ನ್ಯೂಸ್​ನಿಂದ ಮಾಹಿತಿ ಪಡೆಯಲಾಗಿದೆ.

ಫೂಟ್ಬಾಲ್ ಕ್ರೀಡೆಯ ಅಭಿಮಾನಿಯಾಗಿದ್ದು, ಯಾವಾಗಲೂ ಫೂಟ್ಬಾಲ್ ಆಟವನ್ನು ಆಡುತ್ತಿದ್ದೆ. ತಮ್ಮ ತಂಡವನ್ನೇ ರಚಿಸಿ ಆ ತಂಡದೊಡನೆ ಫೂಟ್ಬಾಲ್ ಆಟದಲ್ಲಿ ಸ್ಪರ್ಧಿಸತ್ತಿದ್ದ ಸಂತೋಷದ ದಿನಗಳನ್ನು ಹಂಚಿಕೊಂಡಿದ್ದಾರೆ. ಜತೆಗೆ ಪ್ಯೂಂಟೆ ಕ್ಯಾಸ್ಟ್ರೋ ಕ್ಲಬ್ ಕೂಡಾ ಪ್ರಾರಂಭಿಸಿರುವ ಕುರಿತಾಗಿ ಹೇಳಿಕೊಂಡಿದ್ದಾರೆ.

ಎರಡು ವರ್ಷಗಳ ಹಿಂದೆ ಪ್ಯೂಂಟೆ ಕ್ಯಾಸ್ಟ್ರೋದಲ್ಲಿ ಕ್ಲಬ್​ನ ಹಿರಿಯ ಸದಸ್ಯ ಎಂದು ಗೌರವಿಸಲಾಗಿದೆ. ಸ್ಯಾಟರ್ನಿನೊ ಮತ್ತು ಪತ್ನಿ ಆ್ಯಂಟೋನಿನಾ ದಂಪತಿಗೆ ಏಳು ಜನ ಹೆಣ್ಣು ಮಕ್ಕಳು ಮತ್ತು ಓರ್ವ ಮಗನಿದ್ದಾನೆ. 14 ಮೊಮ್ಮಕ್ಕಳು ಜತೆಗೆ ಒಟ್ಟು 22 ಸದಸ್ಯರಿಂದ ತುಂಬಿದ ದೊಡ್ಡ ಕುಟುಂಬದ ಹಿರಿಯ ವ್ಯಕ್ತಿಯಾಗಿ ಮನೆಯನ್ನು ನಡೆಸಿಕೊಂಡು ಹೋಗುತ್ತಿದ್ದಾರೆ.

ಇದನ್ನೂ ಓದಿ:

Viral News: ಲೇಹ್​ನಿಂದ ಮನಾಲಿಗೆ ಸೊಲೊ ಸೈಕ್ಲಿಂಗ್ ಮಾಡಿದ ಭಾರತೀಯ ಸೇನಾಧಿಕಾರಿ; ಗಿನ್ನಿಸ್ ದಾಖಲೆ

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

Published On - 12:34 pm, Mon, 4 October 21

ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿದ್ದಾನೆ: ಮಡೆನೂರು ಮನು ಮೇಲೆ ಆರೋಪ
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಕೆಣಕ್ಕಿದ ಸಿರಾಜ್​ಗೆ ಪೂರನ್ ನೀಡಿದ ಉತ್ತರ ಹೇಗಿತ್ತು ಗೊತ್ತಾ?
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಗುಜರಾತ್ ವಿರುದ್ಧ ಸಿಡಿಲಬ್ಬರದ ಶತಕ ಸಿಡಿಸಿದ ಮಿಚೆಲ್ ಮಾರ್ಷ್
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಬಿಜೆಪಿ ನಾಯಕರೆಲ್ಲ ಜೊತೆಗಿದ್ದೇವೆ, ನಮ್ಮ ಹೋರಾಟ ನಿಲ್ಲಲ್ಲ: ಚಲವಾದಿ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
ಗುತ್ತಿಗೆದಾರರಿಗೆ ಹಣ ಪಾವತಿಯಾಗದ ಕಾರಣ ಸಾಯಿ ಲೇಔಟ್​ನಲ್ಲಿ ಸಮಸ್ಯೆ: ನಿಖಿಲ್
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ