ಚಿರಾಗ್ ಪಾಸ್ವಾನ್​​ಗೆ ಹೆಲಿಕಾಪ್ಟರ್, ಪರಾಸ್​​ಗೆ ಹೊಲಿಗೆ ಯಂತ್ರ ಚಿಹ್ನೆ ನೀಡಿದ ಚುನಾವಣಾ ಆಯೋಗ

TV9 Digital Desk

| Edited By: Rashmi Kallakatta

Updated on: Oct 05, 2021 | 4:00 PM

LJP: ಬಿಹಾರದ ತಾರಾಪುರ ಮತ್ತು ಕುಶೇಶ್ವರ ಆಸ್ಥಾನ್​​ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ಮುನ್ನ ಪಾಸ್ವಾನ್ ನೇತೃತ್ವದ ಬಣವನ್ನು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಎಂದು ಗುರುತಿಸಲಾಗುತ್ತದೆ.

ಚಿರಾಗ್ ಪಾಸ್ವಾನ್​​ಗೆ ಹೆಲಿಕಾಪ್ಟರ್, ಪರಾಸ್​​ಗೆ ಹೊಲಿಗೆ ಯಂತ್ರ ಚಿಹ್ನೆ ನೀಡಿದ ಚುನಾವಣಾ ಆಯೋಗ
ಚಿರಾಗ್ ಪಾಸ್ವಾನ್- ಪಶುಪತಿ ಪಾರಸ್
Follow us

ದೆಹಲಿ: ಚುನಾವಣಾ ಆಯೋಗವು ಮಂಗಳವಾರ ಲೋಕ ಜನಶಕ್ತಿ ಪಕ್ಷದ (LJP) ಬಣಗಳಿಗೆ ಹೊಸ ಚಿಹ್ನೆಗಳನ್ನು ನೀಡಿದೆ. ದಿವಂಗತ ರಾಮ್ ವಿಲಾಸ್ ಪಾಸ್ವಾನ್ (Ram Vilas Paswan) ಅವರ ಮಗ ಚಿರಾಗ್ ಪಾಸ್ವಾನ್ (Chirag Paswan) ಮತ್ತು ಪಾಸ್ವಾನ್ ಅವರ ಸಹೋದರ ಪಶುಪತಿ ಕುಮಾರ್ ಪರಾಸ್ (Pashupati Kumar Paras) ಅವರಿಗೆ ಚುನಾವಣಾ ಆಯೋಗ ಪಕ್ಷದ ಚಿಹ್ನೆ ನೀಡಿದೆ. ಬಿಹಾರದ ತಾರಾಪುರ ಮತ್ತು ಕುಶೇಶ್ವರ ಆಸ್ಥಾನ್​​ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಗಳ ಮುನ್ನ ಪಾಸ್ವಾನ್ ನೇತೃತ್ವದ ಬಣವನ್ನು ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಎಂದು ಗುರುತಿಸಲಾಗುತ್ತದೆ. ಈ ಪಕ್ಷಕ್ಕೆ  ‘ಹೆಲಿಕಾಪ್ಟರ್’ ಚಿಹ್ನೆ ನೀಡಲಾಗಿದೆ. ಅದೇ ವೇಳೆ ಪರಾಸ್ ಬಣಕ್ಕೆ ‘ಹೊಲಿಗೆ ಯಂತ್ರ’ ಚಿಹ್ನೆ ನೀಡಿದ್ದು ಇದು ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ ಎಂದು ಗುರುತಿಸಲ್ಪಡುತ್ತದೆ.

ಎಲ್‌ಜೆಪಿಗೆ ‘ಬಂಗಲೆ’ ಚಿಹ್ನೆಯನ್ನು ಸ್ಥಗಿತಗೊಳಿಸಿದ ಮೂರು ದಿನಗಳ ನಂತರ ಚುನಾವಣಾ ಆಯೋಗದ ಈ ನಿರ್ಧಾರವು ಬಂದಿದ್ದು, ಮುಂಬರುವ ಉಪಚುನಾವಣೆಯಲ್ಲಿ ಪಾಸ್ವಾನ್ ಅಥವಾ ಪಾರಸ್ ಅವರಿಗೆ ಇದನ್ನು ಬಳಸಲು ಅವಕಾಶ ನೀಡುವುದಿಲ್ಲ.

ಈ ವರ್ಷದ ಆರಂಭದಲ್ಲಿ ಪಾಸ್ವಾನ್ ಮತ್ತು ಅವರ ಚಿಕ್ಕಪ್ಪ ಇಬ್ಬರೂ ಎಲ್‌ಜೆಪಿ ಮೇಲೆ ಹಕ್ಕು ಚಲಾಯಿಸಿದರು ಮತ್ತು ಪರಸ್ಪರ ‘ಹೊರಹಾಕುವ’ ಆದೇಶಗಳನ್ನು ಜಾರಿಗೊಳಿಸಿದ್ದರು. ಪರಾಸ್ (ಹಾಜಿಪುರ), ಚೌಧರಿ ಮೆಹಬೂಬ್ ಅಲಿ ಕೈಸರ್ (ಖಗರಿಯಾ), ವೀಣಾ ದೇವಿ (ವೈಶಾಲಿ), ರಾಜಕುಮಾರ ರಾಜ್ (ಸಮಸ್ತಿಪುರ) ಮತ್ತು ಚಂದನ್ ಸಿಂಗ್ (ನಾವಡಾ) – ಪಕ್ಷದ ಆರು ಸಂಸದರ ಪೈಕಿ ಐವರು ಎಂಪಿಗಳ ಉಚ್ಚಾಟನೆ ನಂತರ ಜೂನ್ ನಲ್ಲಿ ಪಕ್ಷವು ವಿಭಜನೆಯಾಯಿತು. ಚಿರಾಗ್ ಅವರ ಬದಲಿಗೆ ಪರಾಸ್‌ ಅವರನ್ನು ನಾಯಕರನ್ನಾಗಿ ಮಾಡಲಾಯಿತು.

ಮತ್ತೊಂದೆಡೆ, ಪಾಸ್ವಾನ್ ಜೂಮ್‌ನಲ್ಲಿ ಎಲ್‌ಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯನ್ನು ನಡೆಸಿದರು ಮತ್ತು ಐದು ‘ಬಂಡಾಯ’ ಸಂಸದರನ್ನು ಪಕ್ಷದಿಂದ ಹೊರಹಾಕುವುದಾಗಿ ಘೋಷಿಸಿದರು.

ಇದನ್ನೂ ಓದಿ: ಎಲ್​ಜೆಪಿ ಸಂಸದ ಪ್ರಿನ್ಸ್​ ರಾಜ್​ ಪಾಸ್ವಾನ್​ ವಿರುದ್ಧ ಅತ್ಯಾಚಾರ ಆರೋಪ; ಎಫ್​ಐಆರ್​ ದಾಖಲು

ತಾಜಾ ಸುದ್ದಿ

Related Stories

Click on your DTH Provider to Add TV9 Kannada