ಎಲ್​ಜೆಪಿ ಸಂಸದ ಪ್ರಿನ್ಸ್​ ರಾಜ್​ ಪಾಸ್ವಾನ್​ ವಿರುದ್ಧ ಅತ್ಯಾಚಾರ ಆರೋಪ; ಎಫ್​ಐಆರ್​ ದಾಖಲು

TV9 Digital Desk

| Edited By: Lakshmi Hegde

Updated on:Sep 14, 2021 | 12:54 PM

ಇನ್ನು ತನ್ನ ವಿರುದ್ಧ ಆರೋಪ ಸುಳ್ಳು ಎಂದು ಬಲವಾಗಿ ಪ್ರತಿಪಾದಿಸಿರುವ ಪ್ರಿನ್ಸ್​ ರಾಜ್​ ಪಾಸ್ವಾನ್​, ದೂರುದಾರ ಯುವತಿಯ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ಎಲ್​ಜೆಪಿ ಸಂಸದ ಪ್ರಿನ್ಸ್​ ರಾಜ್​ ಪಾಸ್ವಾನ್​ ವಿರುದ್ಧ ಅತ್ಯಾಚಾರ ಆರೋಪ; ಎಫ್​ಐಆರ್​ ದಾಖಲು
ಪ್ರಿನ್ಸ್​ ರಾಜ್​ ಪಾಸ್ವಾನ್​

Follow us on

ಮೃತ ಸಚಿವ ರಾಮ್​ ವಿಲಾಸ್​ ಪಾಸ್ವಾನ್​ ಪುತ್ರ ಚಿರಾಗ್​ ಪಾಸ್ವಾನ್​​ರ ಕಸಿನ್​,  ಲೋಕ ಜನಶಕ್ತಿ ಪಕ್ಷ (LJP)ದ ಸಂಸದ ಪ್ರಿನ್ಸ್​ ರಾಜ್ ಪಾಸ್ವಾನ್​ ವಿರುದ್ಧ ಅತ್ಯಾಚಾರ ಆರೋಪದಡಿ ದೆಹಲಿ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಮೂರು ತಿಂಗಳ ಹಿಂದೆಯೇ ಯುವತಿಯೊಬ್ಬಳು ದೆಹಲಿಯ ಕನಾಟ್​​​ ಪ್ರದೇಶದಲ್ಲಿರುವ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಳು. ಈ ಕೇಸ್​ ದೆಹಲಿ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದ ನಿರ್ದೇಶನದ ಅನ್ವಯ ಪೊಲೀಸರು ಇದೀಗ ಸಂಸದ ಪ್ರಿನ್ಸ್ ರಾಜ್​ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ. 

ಯುವತಿಯ ದೂರಿನಲ್ಲಿ ಏನಿದೆ? ಯುವತಿ ಮೂರು ತಿಂಗಳ ಹಿಂದೆಯೇ ದೂರು ನೀಡಿದ್ದಾಳೆ. ‘ನಾನು ಎಲ್​ಜೆಪಿ ಕಾರ್ಯಕರ್ತೆ. ಮೊದಲು ಪ್ರಿನ್ಸ್​ ರಾಜ್​ರನ್ನು ಕಳೆದ ವರ್ಷ ಪಕ್ಷದ ಕಚೇರಿಯಲ್ಲಿ ಭೇಟಿಯಾಗಿದ್ದೆ. ಅದಾದ ಮೇಲೆ ನಾವು ಸಂಪರ್ಕದಲ್ಲಿ ಇದ್ದೆವು. ಅದಾದ ಬಳಿಕ ಹಲವು ಸಭೆಗಳಲ್ಲಿ ಭೇಟಿಯಾದೆವು. ಅಂಥದ್ದೇ ಒಂದು ಸಭೆಯಲ್ಲಿ ಇಬ್ಬರೂ ಭೇಟಿಯಾದಾಗ, ನಾನು ಒಂದು ಟೇಬಲ್​ ಮೇಲಿದ್ದ ನೀರಿನ ಬಾಟಲ್​ ತೆಗೆದುಕೊಂಡೆ. ಅಲ್ಲೇ ಇದ್ದ, ಪ್ರಿನ್ಸ್​ ರಾಜ್​ ಪಾಸ್ವಾನ್​..ಆ ನೀರು ಬೇಡ. ನಾನು ಕೊಡುತ್ತೇನೆ ಎಂದು ಹೇಳಿ ಗ್ಲಾಸ್​​ನಲ್ಲಿ ನೀರು ಕೊಟ್ಟರು. ಅದನ್ನು ಕುಡಿಯುತ್ತಿದ್ದಂತೆ ಎಚ್ಚರ ತಪ್ಪಿ ಬಿದ್ದೆ.  ನನಗೆ ಮರಳಿ ಎಚ್ಚರ ಆಗುವಷ್ಟರಲ್ಲಿ ನನ್ನ ತಲೆ ಪ್ರಿನ್ಸ್​ ರಾಜ್​ ಭುಜದ ಮೇಲೆ ಇತ್ತು. ನೀನೀಗ ಅಸ್ವಸ್ಥಳಾಗಿರುವೆ, ಮನೆಗೆ ಹೋಗು ಎಂದರು. ನನಗೆ ಅನುಮಾನ ಬಂದು ಮತ್ತೆ ಕೇಳಿದೆ..ಎಚ್ಚರ ತಪ್ಪಿದಾಗ ಏನಾಯಿತು ಎಂದು ಕೇಳಿದ್ದಕ್ಕೆ ಒಂದು ವಿಡಿಯೋ ತೋರಿಸಿದರು.  ನನಗೆ ಪ್ರಜ್ಞೆ ಇಲ್ಲದಾಗ ಅವರು ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಡಿಯೋದಲ್ಲಿ ಅವರ ಮುಖ ಕಾಣಿಸುತ್ತಿಲ್ಲ. ಅದೇ ವಿಡಿಯೋ ಇಟ್ಟುಕೊಂಡು, ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದಾರೆ, ವಿಡಿಯೋ ಲೀಕ್ ಮಾಡುವ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.

ಆರೋಪ ನಿರಾಕರಿಸಿದ ಪ್ರಿನ್ಸ್​ ರಾಜ್​ ಇನ್ನು ತನ್ನ ವಿರುದ್ಧ ಆರೋಪ ಸುಳ್ಳು ಎಂದು ಬಲವಾಗಿ ಪ್ರತಿಪಾದಿಸಿರುವ ಪ್ರಿನ್ಸ್​ ರಾಜ್​ ಪಾಸ್ವಾನ್​, ದೂರುದಾರ ಯುವತಿಯ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವ ಮೂಲಕ ಮಾನ ಹಾನಿ ಮಾಡಲಾಗಿದೆ ಎಂದೂ ಹೇಳಿದ್ದಾರೆ.  ತಮ್ಮ ಮೇಲಿನ ಆರೋಪಗಳೆಲ್ಲ ಸುಳ್ಳು ಎಂದು ಹೇಳಿ, ಜೂನ್​ 17ರಂದೇ ಒಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ: Face Mask: ಸದ್ಯಕ್ಕಂತೂ ಮಾಸ್ಕ್​ನಿಂದ ಮುಕ್ತಿಯಿಲ್ಲ; ಮುಂದಿನ ವರ್ಷವೂ ಮಾಸ್ಕ್ ಧರಿಸುವುದು ಅನಿವಾರ್ಯ

Narendra Modi in Aligarh ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ನರೇಂದ್ರ ಮೋದಿ

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada