6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ

ಕಳೆದ ಒಂದು ವಾರದಲ್ಲಿ ಭಾರತದ ಕಲ್ಲಿದ್ದಲು ಘಟಕಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಿಂಗ್ ಹೇಳಿದ್ದಾರೆ. 40 ಗಿಗಾ ವ್ಯಾಟ್ ನಿಂದ 50 ಗಿಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಘಟಕಗಳು ಪ್ರಸ್ತುತ ಮೂರು ದಿನಗಳಿಗಿಂತ ಕಡಿಮೆ ಇಂಧನ ದಾಸ್ತಾನು ಹೊಂದಿವೆ

6 ತಿಂಗಳುಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು ಮುಂದುವರಿಯಬಹುದು: ಕೇಂದ್ರ ವಿದ್ಯುತ್ ಸಚಿವ
ಪ್ರಾತಿನಿಧಿಕ ಚಿತ್ರ

ದೆಹಲಿ: ದೇಶವು ಆರು ತಿಂಗಳವರೆಗೆ ಕಲ್ಲಿದ್ದಲು ಬಿಕ್ಕಟ್ಟು(Coal Crisis) ಎದುರಿಸಬೇಕಾಗಬಹುದು ಎಂದು ಕೇಂದ್ರ ವಿದ್ಯುತ್ ಸಚಿವ ರಾಜ್ ಕುಮಾರ್ ಸಿಂಗ್ (Raj Kumar Singh) ಹೇಳಿದ್ದಾರೆ. ವಿದ್ಯುತ್ ಬೇಡಿಕೆ ಹೆಚ್ಚಾದ ನಂತರ ಮತ್ತು ಸ್ಥಳೀಯ ಕಲ್ಲಿದ್ದಲು ಉತ್ಪಾದನೆಯಲ್ಲಿ ಕುಸಿತ ಉಂಟಾದ ನಂತರ ದೇಶದ ಅರ್ಧಕ್ಕಿಂತ ಹೆಚ್ಚು ಸ್ಥಾವರಗಳು ಸ್ಥಗಿತಗೊಳ್ಳುವ ಹಂತಕ್ಕೆ ಬಂದಿದೆ. ವಿದ್ಯುತ್ ಕೇಂದ್ರಗಳು ಕಳೆದ ತಿಂಗಳ ಕೊನೆಯಲ್ಲಿ ಸರಾಸರಿ ನಾಲ್ಕು ದಿನಗಳ ಕಲ್ಲಿದ್ದಲನ್ನು ಹೊಂದಿದ್ದವು, ಇದು ವರ್ಷದ ಕನಿಷ್ಠ ಮಟ್ಟವಾಗಿದೆ ಮತ್ತು ಆಗಸ್ಟ್ ಆರಂಭದ 13 ದಿನಗಳಿಂದ ಇದು ಕಡಿಮೆ ಆಗಿತ್ತು.

“ಮುಂದಿನ ಐದರಿಂದ ಆರು, ನಾಲ್ಕರಿಂದ ಐದು ತಿಂಗಳಲ್ಲಿ ನಾನು ಆರಾಮವಾಗಿರುತ್ತೇನೆಯೋ ಇಲ್ಲವೋ ಗೊತ್ತಿಲ್ಲ” ಎಂದು ವಿದ್ಯುತ್ ಸಚಿವ ರಾಜ್ ಕುಮಾರ್ ಸಿಂಗ್ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಅಕ್ಟೋಬರ್ ಮಧ್ಯದಿಂದ ತಂಪಾದ ವಾತಾವರಣದೊಂದಿಗೆ ಬೇಡಿಕೆ ಸಾಮಾನ್ಯವಾಗಿ ನಿಧಾನವಾಗುತ್ತದೆಯಾದರೂ ಇದರ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ಒಂದು ವಾರದಲ್ಲಿ ಭಾರತದ ಕಲ್ಲಿದ್ದಲು ಘಟಕಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಸಿಂಗ್ ಹೇಳಿದ್ದಾರೆ. 40 ಗಿಗಾ ವ್ಯಾಟ್ ನಿಂದ 50 ಗಿಗಾ ವ್ಯಾಟ್ ಸಾಮರ್ಥ್ಯದ ಕಲ್ಲಿದ್ದಲು ಘಟಕಗಳು ಪ್ರಸ್ತುತ ಮೂರು ದಿನಗಳಿಗಿಂತ ಕಡಿಮೆ ಇಂಧನ ದಾಸ್ತಾನು ಹೊಂದಿವೆ ಎಂದು ಸಿಂಗ್ ಹೇಳಿದ್ದಾರೆ. ಇದು ಒಟ್ಟು ರಾಷ್ಟ್ರೀಯ ಕಲ್ಲಿದ್ದಲು ಸಾಮರ್ಥ್ಯದ ಸುಮಾರು 203 ಗಿಗಾವಾಟ್ ಗಳನ್ನು ಇದು ಹೊಂದಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೀಕರಿಸಬಹುದಾದ ವಸ್ತುಗಳಿಗೆ ಪ್ರೋತ್ಸಾಹಿಸುತ್ತಿದ್ದರೂ ಕಲ್ಲಿದ್ದಲು ಭಾರತದ ವಿದ್ಯುತ್ ಉತ್ಪಾದನೆಯ ಶೇ70ರಷ್ಟು ಭಾಗವನ್ನು ಹೊಂದಿದೆ, ಮತ್ತು ಮುಂದಿನ ಕೆಲವು ವರ್ಷಗಳಲ್ಲಿ ಬಳಕೆ ಹೆಚ್ಚಾಗುವ ಮುನ್ಸೂಚನೆಯಿದೆ.ನೆರೆಯ ಚೀನಾದಂತೆಯೇ, ಭಾರತವು ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆ, ದೇಶೀಯ ಗಣಿ ಉತ್ಪಾದನೆಯ ಮೇಲೆ ಒತ್ತಡ ಮತ್ತು ಕಡಲ ಕಲ್ಲಿದ್ದಲಿನ ಬೆಲೆ ಏರಿಕೆಯ ಪರಿಣಾಮಗಳಿಂದ ಬಳಲುತ್ತಿದೆ.

ಗಣಿಗಳಿಂದ ಉತ್ಪಾದನೆಯನ್ನು ಹೆಚ್ಚಿಸಲು ಮತ್ತು ಬೇಡಿಕೆ ಈಡೇರುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಿ ಸಚಿವಾಲಯಗಳು ಕೋಲ್ ಇಂಡಿಯಾ ಲಿಮಿಟೆಡ್ ಮತ್ತು ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದಕ ಎನ್‌ಟಿಪಿಸಿ ಲಿಮಿಟೆಡ್‌ನೊಂದಿಗೆ ಕೆಲಸ ಮಾಡುತ್ತಿವೆ ಎಂದು ಸಿಂಗ್ ಹೇಳಿದರು. ಕಲ್ಲಿದ್ದಲು ಕಂಪನಿಗಳಿಗೆ ನಿಯಮಿತವಾಗಿ ಪಾವತಿ ಮಾಡಿದ, ಮತ್ತು ಇಂಧನ ಸ್ಟಾಕ್‌ಗಳ ಕಡ್ಡಾಯ ಮಟ್ಟವನ್ನು ನಿರ್ವಹಿಸುತ್ತಿರುವ ಘಟಕಗಳಿಗೆ ಕಲ್ಲಿದ್ದಲು ಪೂರೈಕೆಗೆ ಆದ್ಯತೆ ನೀಡಲಾಗುವುದು ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Video: ಲಖನೌಗೆ ಪ್ರಧಾನಿ ಮೋದಿ ಭೇಟಿ ಸುದ್ದಿ ಕೇಳಿ ವಿಡಿಯೋ ಬಿಡುಗಡೆ ಮಾಡಿ ‘ನೀವಿದನ್ನು ನೋಡಿದ್ದೀರಾ‘? ಎಂದ ಪ್ರಿಯಾಂಕಾ ಗಾಂಧಿ ವಾದ್ರಾ

ಇದನ್ನೂ ಓದಿ: ಮತಾಂತರ ಆರೋಪಿಸಿ ರೂರ್ಕಿ ಚರ್ಚ್ ಮೇಲೆ ದಾಳಿ: 200 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಉತ್ತರಾಖಂಡ್ ಪೊಲೀಸರು

Read Full Article

Click on your DTH Provider to Add TV9 Kannada