AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಾಲ್ಮೀಕಿ ದಿನಾಚರಣೆ: ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆ- ಶ್ರೀರಾಮುಲು

B Sriramulu: ನಾಳೆ (ಅಕ್ಟೋಬರ್ 20) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 5 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಪ್ರದಾನ ಮಾಡುತ್ತಿದ್ದೇವೆ ಎಂದು ರಾಮುಲು ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ದಿನಾಚರಣೆ: ವಿವಿಧ ಕ್ಷೇತ್ರಗಳ ಆರು ಮಂದಿ ಸಾಧಕರು ಪ್ರಶಸ್ತಿಗೆ ಆಯ್ಕೆ- ಶ್ರೀರಾಮುಲು
ಸಚಿವ ಬಿ.ಶ್ರೀರಾಮುಲು
TV9 Web
| Edited By: |

Updated on:Oct 19, 2021 | 5:54 PM

Share

ಬೆಂಗಳೂರು: ವಾಲ್ಮೀಕಿ ದಿನಾಚರಣೆ ಅಂಗವಾಗಿ ಸಚಿವ ಶ್ರೀರಾಮುಲು ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ವಾಲ್ಮೀಕಿ ಸಮುದಾಯಕ್ಕೆ ಪ್ರತ್ಯೇಕ ಸಚಿವಾಲಯ ಬೇಕು ಎಂಬ ಬೇಡಿಕೆ ಬಹಳ ದಿನಗಳಿಂದ ಇತ್ತು. ಸಿಎಂ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಸಚಿವಾಲಯ ಮಾಡಿದ್ದಾರೆ. ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಸಾಧಕರನ್ನ ಗುರುತಿಸಿ ಪ್ರಶಸ್ತಿ ನೀಡುತ್ತಿದ್ದೇವೆ. ಆರು ಮಂದಿಯನ್ನು ಪ್ರಶಸ್ತಿಗೆ ಆಯ್ಕರ ಮಾಡಿದ್ದೇವೆ ಎಂದು ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಸಮಾಜಸೇವೆ ಕ್ಷೇತ್ರದಲ್ಲಿ ಕೆ.ಸಿ. ನಾಗರಾಜ್, ಉತ್ತರ ಕನ್ನಡ, ಅರಣ್ಯ ವಾಸಿಗಳ ಸೇವೆ, ನಾಟಿ ವೈದ್ಯರು ಲಕ್ಷ್ಮಿ ಗಣಪತಿ ಸಿದ್ದಿ, ಶಿಕ್ಷಣ ಕ್ಷೇತ್ರದಿಂದ ಪ್ರೊ.ಎಸ್ ಆರ್ ನಿರಂಜನ್, ಪರಿಸರ ಸಂರಕ್ಷಣೆ ಕ್ಷೇತ್ರ ಗೂಳೆಪ್ಪ, ಮಹರ್ಷಿ ವಾಲ್ಮೀಕಿ ಗುರು ಪೀಠ, ಪರಿಶಿಷ್ಟ ಮಕ್ಕಳ ಸೇವೆಗೆ ಪ್ರಶಸ್ತಿಗೆ ಅಶ್ವತ್ಥ ರಾಮಯ್ಯ, ಪರಿಶಿಷ್ಟ ಪಂಗಡಗಳ ಏಳ್ಗೆಗೆ ಸೇವೆ ವಿಭಾಗದಲ್ಲಿ ಜಂಬಯ್ಯ ನಾಯ್ಕ ಆಯ್ಕೆ ಮಾಡಲಾಗಿದೆ. ನಾಳೆ (ಅಕ್ಟೋಬರ್ 20) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ 5 ಲಕ್ಷ ರೂಪಾಯಿ ನಗದು, 20 ಗ್ರಾಂ ಚಿನ್ನದ ಪದಕ ಪ್ರದಾನ ಮಾಡುತ್ತಿದ್ದೇವೆ ಎಂದು ರಾಮುಲು ಮಾಹಿತಿ ನೀಡಿದ್ದಾರೆ.

ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಹೋರಾಟ ವಿಚಾರ ವಿಚಾರವಾಗಿ ರಾಮುಲು ಪ್ರತಿಕ್ರಿಯೆ ನೀಡಿದ್ದಾರೆ. ಮೀಸಲಾತಿ ಹೋರಾಟದಿಂದ ನಾನೂ ಬಂದವನು. ನಮ್ಮ ಸರ್ಕಾರದ ಮೇಲೆ ಜನ ವಿಶ್ವಾಸವಿಟ್ಟಿದ್ದಾರೆ. ಆದರೆ, ಉನ್ನತ ಮಟ್ಟದ ಸಮಿತಿ ವರದಿ ಬರಬೇಕಿದೆ. ನಮ್ಮ ಸರ್ಕಾರ ಇರುವಾಗಲೇ ಮೀಸಲಾತಿ ಹೆಚ್ಚಳ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಡ್ರೈವರ್ ಒಬ್ಬನಿಂದ ಕಿಡ್ನಿ ಮಾರಾಟಕ್ಕಿದೆ ಎಂಬ ಸ್ಟೇಟಸ್ ವಿಚಾರವಾಗಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. 2,500 ಕೋಟಿಯಷ್ಟು ಸರ್ಕಾರದಿಂದ ಸಹಾಯ ಸಿಗುವ ಕೆಲಸ ಆಗಿದೆ. ಹಬ್ಬದ ಸಂದರ್ಭದಲ್ಲಿ 171 ಕೋಟಿ ರೂ. ಸಿಎಂ ಸಂಬಳಕ್ಕಾಗಿಯೇ ಬಿಡುಗಡೆ ಮಾಡಿದ್ದಾರೆ. ಕಳೆದ ನಾಲ್ಕು ವಾರಗಳ ಹಿಂದೆ ಅರ್ಧ ಸಂಬಳ ನೀಡಲಾಗಿತ್ತು. ಈಗ ಮತ್ತೆ ಉಳಿದ ಸಂಬಳವನ್ನೂ ಬಿಡುಗಡೆ ಮಾಡಿದ್ದೇವೆ. ಪ್ರತಿಭಟನೆ ಸಂದರ್ಭದಲ್ಲಿ ಹಲವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಟ್ರಾನ್ಸಫರ್, ಸಸ್ಪೆಂಡ್ ಆದವರನ್ನು ವಾಪಸ್ ಸೇರಿಸಿಕೊಳ್ತಿದ್ದೇವೆ. ಕಿಡ್ನಿ ಮಾರಾಟಕ್ಕಿದೆ ಅಂತ ಒಬ್ಬ ಡ್ರೈವರ್ ಹಾಕಿಕೊಂಡಿದ್ದಾನೆ. ಅವರ ಮೇಲಧಿಕಾರಿಗಳ ಕಿರುಕುಳ ಬಗ್ಗೆ ಮಾಹಿತಿ ಕೇಳಿದ್ದೇನೆ. ಕಿರುಕುಳ ನೀಡುತ್ತಿರುವ ಅಧಿಕಾರಿಗೆ ಷೋಕಾಸ್ ನೊಟೀಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಚರ್ಚೆ

ಇದನ್ನೂ ಓದಿ: ಸಾರಿಗೆ ಸಚಿವ ಶ್ರೀರಾಮುಲು ಒಬ್ಬ ಪೆದ್ದ: ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

Published On - 3:10 pm, Tue, 19 October 21

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ