ಬೆಂಗಳೂರಿನಲ್ಲಿ ರಸ್ತೆ ತೆರಿಗೆ ವಂಚಿಸಿ ಅನಧಿಕೃತವಾಗಿ ಸಂಚರಿಸುತ್ತಿರುವ ಐಶಾರಾಮಿ ಕಾರುಗಳಿಗೆ ಸಿಸಿಬಿ ಗಾಳ!

ರೋಸ್ ಮಾರ್ಟ್ ಕಂಪನಿ ರಾಜ್ಯಾದ್ಯಂತ ಆರ್​ಸಿ ಸ್ಮಾರ್ಟ್ ಕಾರ್ಡ್​ನ ಆರ್​ಟಿಓಗೆ ಪೂರೈಕೆ ಮಾಡುತ್ತಿದೆ. ಸಿಸಿಬಿ ತನಿಖೆ ವೇಳೆ ಈ ಔಟ್ ಸೋರ್ಸ್ ಕಂಪನಿಯ ಅಸಲಿಯತ್ತು ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ರಸ್ತೆ ತೆರಿಗೆ ವಂಚಿಸಿ ಅನಧಿಕೃತವಾಗಿ ಸಂಚರಿಸುತ್ತಿರುವ ಐಶಾರಾಮಿ ಕಾರುಗಳಿಗೆ ಸಿಸಿಬಿ ಗಾಳ!
ಬೆಂಗಳೂರು ರಸ್ತೆ
Follow us
TV9 Web
| Updated By: sandhya thejappa

Updated on: Oct 19, 2021 | 11:47 AM

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರಸ್ತೆ ತೆರಿಗೆ ಪಾವತಿಸದೆ ಕೋಟ್ಯಂತರ ಮೌಲ್ಯದ ಐಶಾರಾಮಿ ಕಾರುಗಳು ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಲಭ್ಯವಾಗಿದೆ. ಮರ್ಸಿಡೀಸ್ ಬೆನ್ಜ್, ಪೋರ್ಶೆ, ಜಾಗ್ವಾರ್, ಲ್ಯಾಂಬೋರ್ಗಿನಿ, ಬಿಎಂಡಬ್ಲ್ಯೂ, ಇನ್ನೋವಾ ಕ್ರಿಸ್ಟಾ ಸೇರಿದಂತೆ ಐಶಾರಾಮಿ ಕಾರುಗಳು ರೋಡ್ ಟ್ಯಾಕ್ಸ್ ಪಾವತಿಸದೆ ಸಂಚರಿಸುತ್ತಿರುವ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿದೆ. ರಸ್ತೆ ತೆರಿಗೆ ವಂಚನೆ ಜಾಲಾದಲ್ಲಿ ಭಾಗಿಯಾಗಿದ್ದ ಸ್ಮಾರ್ಟ್ ಕಾರ್ಡ್ ಕಂಪನಿ ಮ್ಯಾನೇಜರ್ ಅರೆಸ್ಟ್ ಆಗಿದ್ದು, ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ರೋಸ್ ಮಾರ್ಟ್ ಕಂಪನಿ ರಾಜ್ಯಾದ್ಯಂತ ಆರ್​ಸಿ ಸ್ಮಾರ್ಟ್ ಕಾರ್ಡ್​ನ ಆರ್​ಟಿಓಗೆ ಪೂರೈಕೆ ಮಾಡುತ್ತಿದೆ. ಸಿಸಿಬಿ ತನಿಖೆ ವೇಳೆ ಈ ಔಟ್ ಸೋರ್ಸ್ ಕಂಪನಿಯ ಅಸಲಿಯತ್ತು ಬೆಳಕಿಗೆ ಬಂದಿದೆ. ರೋಸ್ ಮಾರ್ಟ್ ಕಂಪನಿ ಆರ್​ಟಿಓ ಅಧಿಕಾರಿಗಳಿಗೆ ಯಾಮಾರಿಸಿ ನಕಲಿ ನಂಬರ್ ಪ್ಲೇಟ್​ಗಳನ್ನು ನೀಡಿದೆ. ಇದೇ ರೀತಿ 27 ಕಾರುಗಳು ನಕಲಿ ನಂಬರ್ ಪ್ಲೇಟ್​ಗಳನ್ನ ಅಳವಡಿಸಿ ರಸ್ತೆಯಲ್ಲಿ ಓಡಾಡುತ್ತಿವೆ. ಓಡಾಡುತ್ತಿರುವ ಕಾರುಗಳೆಲ್ಲವೂ ಕೋಟ್ಯಾಂತರ ರೂಪಾಯಿ ಮೌಲ್ಯದ್ದು ಎಂದು ತಿಳಿದುಬಂದಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ರೋಚಕ ಸಂಗತಿ ಆನಂದ್ ರಾಮ್ ಎಂಬ ವ್ಯಕ್ತಿ ತಮ್ಮ ಜಾಗ್ವಾರ್ ಕಾರಿಗೆ ಎನ್ಓಸಿ ಪಡೆದು ಕಾರನ್ನು ಕರ್ನಾಟಕ ರಿಜಿಸ್ಟ್ರೇಷನ್​ಗೆ ವರ್ಗಾವಣೆ ಮಾಡಲು ಬಂದಿದ್ದಾರೆ. ಆಗ ಕಾರನ್ನು ನಕಲಿ ನಂಬರ್​ನಲ್ಲಿ ರಿಜಿಸ್ಟರ್ ಮಾಡಿದ್ದಾರೆ ಅನ್ನೋದು ಗೊತ್ತಾಗಿದೆ. ದೂರು ಕೊಟ್ಟ ಬಳಿಕ ತನಿಖೆಗೆ ಇಳಿದ ಸಿಸಿಬಿಗೆ ಮತ್ತೊಂದು ಶಾಕ್ ಕಾದಿತ್ತು. ಪಶ್ಚಿಮ ಬಂಗಾಳದ WB01 ಸೀರಿಸ್ ಅಲ್ಲಿ ಜಾಗ್ವಾರ್ ಕಾರನ್ನು ಇಲ್ಲಿ ರಿಜಿಸ್ಟರ್ ಮಾಡಿದ್ರು. ಆದರೆ ಪಶ್ಚಿಮ ಬಂಗಾಳದಲ್ಲಿ WB01 ಸೀರಿಸ್ ದ್ವಿಚಕ್ರ ವಾಹನಗಳಿಗೆ ನೀಡಿರುವುದಾಗಿ ಮಾಹಿತಿ ಇದೆ. ಬೆಂಗಳೂರಿನಲ್ಲಿ WB01 ಅಡಿಯಲ್ಲಿ ಜಾಗ್ವಾರ್ ಕಾರು ಚಲಾಯಿಸಿದೆ. ಇದೇ ರೀತಿ 27 ಐಷಾರಾಮಿ ಕಾರುಗಳನ್ನು ನಕಲಿ ನಂಬರ್ ಪ್ಲೇಟ್​ನಲ್ಲಿ ಚಲಾಯಿಸುತ್ತಿರುವ ಬಗ್ಗೆ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

ರಸ್ತೆ ತೆರಿಗೆ ವಂಚಿಸಿ ಅನಧಿಕೃತವಾಗಿ ಸಂಚರಿಸುತ್ತಿರುವ ಐಶಾರಾಮಿ ಕಾರುಗಳಿಗೆ ಸಿಸಿಬಿ ಗಾಳ ಹಾಕಿದೆ. ಗಿರೀಶ್ ಅನ್ನ ವಶಕ್ಕೆ ಪಡೆದಿರುವ ಸಿಸಿಬಿ ಇನ್ನಷ್ಟು ಮಾಹಿತಿ ಕೆದಕುತ್ತಾ ಇದೆ. WB, PY, RJ ರಿಜಿಸ್ಟ್ರೇಷನ್ ಅಲ್ಲಿ ಈ ಕಾರುಗಳು ಇವೆ ಎನ್ನುವುದು ಗೊತ್ತಾಗಿದೆ. ವಂಚನೆಯಲ್ಲಿ ಆರ್​ಟಿಓ ಅಧಿಕಾರಿಗಳ ಪಾಲುದಾರಿಕೆ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಸಿಸಿಬಿ ತನಿಖೆ ಚುರುಕುಗೊಂಡಿದೆ.

ಇದನ್ನೂ ಓದಿ

ಮಂಗಳೂರು: ‘ದೌರ್ಜನ್ಯದ ಆರೋಪ ನನ್ನ ವಿರುದ್ಧ ನಡೆದ ದೊಡ್ಡ ಷಡ್ಯಂತ್ರ’; ವಕೀಲ ರಾಜೇಶ್ ಭಟ್ ಹೇಳಿಕೆ

ನಾನೇ ಮಾತನಾಡಿದ್ರು ಉಲ್ಟಾ ಹಾಕ್ತೀರಾ! ಮಾಧ್ಯಮದವ್ರು ಕರೆಕ್ಟ್ ಇದ್ರೆ ನಮ್ ಬಾಳ್ ಹಿಂಗೇ ಯಾಕೆ ಆಗ್ತಿತ್ತು: ರಮೇಶ್ ಜಾರಕಿಹೊಳಿ ವ್ಯಥೆ