ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ಚರ್ಚೆ
ಬಾಲಕಿಯರ ವಸತಿ ನಿಲಯಕ್ಕೆ ಸಿಸಿ ಕ್ಯಾಮರಾ ಅಳವಡಿಸುವ ಭರವಸೆ ನೀಡಿದ ಸಚಿವ ಬಿ.ಶ್ರೀರಾಮುಲು, ಹಾಸ್ಟೆಲ್ಗೆ ಸಿಟಿ ಬಸ್ ಬಿಡುವಂತೆ ಕೆಎಸ್ಆರ್ಟಿಸಿ ಡಿಸಿಗೆ ಸೂಚನೆ ನೀಡಿದ್ದಾರೆ.
ರಾಯಚೂರು: ಮೆಟ್ರಿಕ್ ನಂತರದ ಪರಿಶಿಷ್ಟ ವರ್ಗಗಳ ವಸತಿ ನಿಲಯವನ್ನು ಉದ್ಘಾಟಿಸಿದ ಬಳಿಕ ಸಾರಿಗೆ ಇಲಾಖೆ ಸಚಿವ ಬಿ.ಶ್ರೀರಾಮುಲು ವಿದ್ಯಾರ್ಥಿಗಳ ಜತೆ ಚರ್ಚೆ ನಡೆಸಿದ್ದಾರೆ. ರಾಯಚೂರು ಜಿಲ್ಲೆ ಸಿಂಧನೂರಿನ ಶಿವಜ್ಯೋತಿನಗರದ ಹಾಸ್ಟೆಲ್ ವಿದ್ಯಾರ್ಥಿನಿಯರ ಜತೆ ಸಚಿವ ಶ್ರೀರಾಮುಲು ಚರ್ಚೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಸ್, ಸಿಸಿಕ್ಯಾಮರಾ ಅಳವಡಿಸುವಂತೆ ವಿದ್ಯಾರ್ಥಿಗಳು ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿನಿಯರ ಮನವಿಗೆ ಸ್ಪಂಧಿಸಿದ್ದು, ಬಾಲಕಿಯರ ವಸತಿ ನಿಲಯಕ್ಕೆ ಸಿಸಿ ಕ್ಯಾಮರಾ ಅಳವಡಿಸುವ ಭರವಸೆ ನೀಡಿದ್ದಾರೆ. ಜತೆಗೆ ಸಚಿವ ಬಿ.ಶ್ರೀರಾಮುಲು, ಹಾಸ್ಟೆಲ್ಗೆ ಸಿಟಿ ಬಸ್ ಬಿಡುವಂತೆ ಕೆಎಸ್ಆರ್ಟಿಸಿ ಡಿಸಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ:
ಸಿಎಂ ಬೊಮ್ಮಾಯಿ ಬುಲೆಟ್ ಟ್ರೈನ್ ರೀತಿ ಕೆಲಸ ಮಾಡ್ತಿದ್ದಾರೆ; ಜನಾ ರೆಡ್ಡಿ ಆಗಮನ ಸಂತಸ ತಂದಿದೆ- ಸಾರಿಗೆ ಸಚಿವ ಶ್ರೀರಾಮುಲು
ಕೊರೊನಾದಿಂದ ಮೃತಪಟ್ಟ ಸಾರಿಗೆ ನಿಗಮ ಸಿಬ್ಬಂದಿಗೆ ಸಿಕ್ಕಿಲ್ಲ ಪರಿಹಾರ: ಕೇಳಿ ಬಂದಿದೆ ಲಂಚದ ಆರೋಪ
Latest Videos