ಸಿಎಂ ಬೊಮ್ಮಾಯಿ ಬುಲೆಟ್ ಟ್ರೈನ್ ರೀತಿ ಕೆಲಸ ಮಾಡ್ತಿದ್ದಾರೆ; ಜನಾ ರೆಡ್ಡಿ ಆಗಮನ ಸಂತಸ ತಂದಿದೆ- ಸಾರಿಗೆ ಸಚಿವ ಶ್ರೀರಾಮುಲು
ಬೊಮ್ಮಾಯಿ ಅವರಿಗೆ ಶಾಸಕರು, ಸಚಿವರು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರದ ಅವಧಿ ಪೂರ್ಣಗೊಳಿಸುತ್ತೇವೆ. 2023 ರಲ್ಲಿ ಕೂಡ ನಮ್ಮದೇ ಸರ್ಕಾರ ಬರಲಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಬಳ್ಳಾರಿ: ಜನಪರ ಆಡಳಿತ ನೀಡುವ ದೃಷ್ಟಿಯಿಂದ ಸರ್ಕಾರ ಕೆಲಸ ಮಾಡುತ್ತಿದೆ. ಅಭಿವೃದ್ಧಿ ವಿಚಾರದಲ್ಲಿ ಬೊಮ್ಮಾಯಿ ಬುಲೆಟ್ ಟ್ರೈನ್ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಧಿಕಾರ ಇಲ್ಲದ ಕಾಂಗ್ರೆಸ್ ಪಕ್ಷ ವಿನಾಕಾರಣ ಟೀಕೆ ಮಾಡುತ್ತಿದೆ. ಬೊಮ್ಮಾಯಿ ಅವರಿಗೆ ಶಾಸಕರು, ಸಚಿವರು ಶಕ್ತಿ ತುಂಬುವ ಕೆಲಸ ಮಾಡುತ್ತೇವೆ. ನಮ್ಮ ಸರ್ಕಾರದ ಅವಧಿ ಪೂರ್ಣಗೊಳಿಸುತ್ತೇವೆ. 2023 ರಲ್ಲಿ ಕೂಡ ನಮ್ಮದೇ ಸರ್ಕಾರ ಬರಲಿದೆ ಎಂದು ಬಳ್ಳಾರಿಯಲ್ಲಿ ಸಾರಿಗೆ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.
ಬಳಿಕ ಸಾರಿಗೆ ನೌಕರರ ಸಂಬಳದ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಹೆಚ್ಚು ಕಡಿಮೆಯಾಗುತ್ತಿತ್ತು. 2 ತಿಂಗಳ ಬಾಕಿ ವೇತನ ಬಿಡುಗಡೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಐರಾವತ್, ಐಷಾರಾಮಿ ಬಸ್ಗಳು ಬೇರೆ ರಾಜ್ಯಗಳಿಗೆ ಹೋಗುತ್ತಿಲ್ಲ. ರಾತ್ರಿ ವೇಳೆ ಬಸ್ನಲ್ಲಿ ಇಬ್ಬರು ಪ್ರಯಾಣಿಕರಷ್ಟೇ ಹೋಗುತ್ತಿರುವುದನ್ನು ನೋಡಿದ್ದೇನೆ ಇದನ್ನು ಇಂತಹ ಬಸ್ಗಳನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. 800 ಎಲೆಕ್ಟ್ರಿಕ್ ಬಸ್ ಕೇಂದ್ರ ಸರ್ಕಾರದ ಸಹಕಾರದಿಂದ ಖರೀದಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಖಾತೆ ಬದಲಾವಣೆಗಾಗಿ ಆನಂದ್ ಸಿಂಗ್ ಮುನಿಸು ಹಿನ್ನಲೆ ಮಾತನಾಡಿದ ಸಾರಿಗೆ ಸಚಿವ ಶೀರಾಮುಲು, ಆನಂದ್ ಸಿಂಗ್ ಈ ಭಾಗದ ನಾಯಕರು. ಆನಂದ್ ಸಿಂಗ್ ಪಕ್ಷಕ್ಕೆ ಇರಿಸು ಮುರಿಸು ಮಾಡಲ್ಲ ಎಂದು ಹೇಳಿದ್ದಾರೆ. ಆನಂದ್ ಸಿಂಗ್ ನನ್ನ ಸ್ನೇಹಿತರು ಎಂದು ಹೇಳಿದ್ದಾರೆ.
ಬಳ್ಳಾರಿಗೆ ಮಾಜಿ ಸಚಿವ ಜನಾರ್ಧನರೆಡ್ಡಿ ಆಗಮನ ಹಿನ್ನಲೆ ಮಾತನಾಡಿದ ಅವರು ಜನಾರ್ಧನರೆಡ್ಡಿ ನನ್ನ ಅಪ್ತ ಸ್ನೇಹಿತರು ಬಳ್ಳಾರಿ ಬಂದಿರುವುದು ಸಂತಸ ತಂದಿದೆ. ಅವರ ಅಭಿಮಾನಿಗಳಿಗೆ ಖುಷಿಯಾಗಿದೆ. ಬೆಂಗಳೂರಿನಲ್ಲಿ ಜನಾರ್ಧನರೆಡ್ಡಿ ಅವರನ್ನು ಆಗಾಗ ಭೇಟಿ ಮಾಡಿರುವೆ. ಈಗ ಬಳ್ಳಾರಿಗೆ ಬಂದಿದ್ದಾರೆ, ಈಗ ಕೂಡ ಭೇಟಿ ಮಾಡುವೆ. ಅಲ್ಲದೆ ಇವತ್ತು ಉಪರಾಷ್ಟ್ರಪತಿ ಅವರನ್ನು ಭೇಟಿ ಮಾಡುತ್ತಿದ್ದೇನೆ ಎಂದು ಶ್ರೀರಾಮುಲು ಹೇಳಿದ್ದಾರೆ.
ಇದನ್ನೂ ಓದಿ: ಸಂಪೂರ್ಣ ಭರ್ತಿಯಾದ ಆಲಮಟ್ಟಿ ಸಾಗರಕ್ಕೆ ಗಂಗಾಪೂಜೆ ನೆರವೇರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
‘ಮಹಾನಾಯಕ ಡಾ. ಬಿ.ಆರ್. ಅಂಬೇಡ್ಕರ್’ ಧಾರಾವಾಹಿಗೆ ಸಿಎಂ ಬಸವರಾಜ ಬೊಮ್ಮಾಯಿ ಬೆಂಬಲ; ಹೊಸ ಯುಗ ಶುರು
Published On - 12:39 pm, Sat, 21 August 21